Veerakesari 22:37
​ಹಿಂದಿಯಲ್ಲಿ ಕಿಶ್ಮಿಶ್ ಎಂದು ಕರೆಯಲ್ಪಡುವ ಒಣದ್ರಾಕ್ಷಿ ಹಲವು ಪೋಷಕಾಂಶಗಳ ಆಗರವಾಗಿದೆ. ಒಣಫಲಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯೂ ಇದೆ. ಆದರೆ ಬಾದಾಮಿ, ಅಕ್ರೋಟು ಮೊದಲಾದ ದುಬಾರಿ ಫಲಗಳ ಎದುರು ಈ ಒಣದ್ರಾಕ್ಷಿ ಕೊಂಚ ಅಗ್ಗವಾಗಿರುವ ಕಾರಣಕ್ಕೆ ಹೆಚ್ಚಿನವರು ಈ ಅದ್ಭುತ ಫಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ.
ಆದರೆ ಇದರ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಒಮ್ಮೆ ಗೊತ್ತಾಯಿತೋ, ಆಗ ನಿತ್ಯವೂ ಇದನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಲು ನೀವೇ ಮನಸಾರೆ ತಯಾರಾಗುತ್ತೀರಿ. ಆದರೆ ಈ ದ್ರಾಕ್ಷಿಯನ್ನು ಹೀಗೇ ತಿನ್ನುವುದರಿಂದ ಇದರಲ್ಲಿ ಸಾಂದ್ರೀಕೃತವಾಗಿರುವ ಪೋಷಕಾಂಶಗಳು ಲಭ್ಯವಾಗುವುದಿಲ್ಲ. 
ಬದಲಿಗೆ ಇವನ್ನು ಕೊಂಚಕಾಲ ನೀರಿನಲ್ಲಿ ನೆನೆಸಿಡುವ ಮೂಲಕ ಈ ಪೋಷಕಾಂಶಗಳ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ನಿತ್ಯವೂ ಸೇವಿಸಲು ಸುಮಾರು ಎಂಟು ಹತ್ತು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ಒಂದು ಲೋಟ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ನೆನೆಸಿಟ್ಟ ದ್ರಾಕ್ಷಿಗಳನ್ನು ತಿಂದು ಅದರ ನೀರನ್ನು ಕುಡಿಯುವುದರಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆಯಬಹುದು.
ಬಿಸಿಲಿನಲ್ಲಿ ಒಣಗಿಸಿದ ದ್ರಾಕ್ಷಿ ಒಣದ್ರಾಕ್ಷಿ ಎಂದರೆ ಹೆಸರೇ ಹೇಳುವಂತೆ ಬಿಸಿಲಿನಲ್ಲಿ ಒಣಗಿಸಿದ ದ್ರಾಕ್ಷಿ. ಸಾಮಾನ್ಯವಾಗಿ ಬಿಳಿದ್ರಾಕ್ಷಿಯನ್ನೇ ಒಣದ್ರಾಕ್ಷಿಯನ್ನಾಗಿಸುತ್ತದೆ. ಆದರೆ ಇಂದು ಕಪ್ಪು ದ್ರಾಕ್ಷಿಯ ಒಣದ್ರಾಕ್ಷಿಯೂ ದೊರಕುತ್ತಿದೆ. ದ್ರಾಕ್ಷಿಗಳ ತಳಿಯನ್ನು ಅನುಸರಿಸಿ ಕಪ್ಪು, ಹಸಿರು, ಕಪ್ಪು, ಕಂದು, ಚಿನ್ನದ ಹಳದಿ ಮೊದಲಾದ ಬಣ್ಣಗಳಲ್ಲಿ ಇವು ಲಭ್ಯವಿವೆ. ನಾವೆಲ್ಲರೂ ದ್ರಾಕ್ಷಿಯನ್ನು ಸಿಹಿತಿಂಡಿಯ ಸೊಗಡು ಹೆಚ್ಚಿಸುವ ಪದಾರ್ಥವೆಂದೇ ಪರಿಗಣಿಸಿದ್ದೇವೆ. ಆದರೆ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರು ಮಾತ್ರ ಆರೋಗ್ಯಕ್ಕೆ ತುಂಬಾ ಉತ್ತಮ.
ದೇಹದ ಲಿವರ್‌ನ ಆರೋಗ್ಯಕ್ಕೆ ಒಹಳ ಒಳ್ಳೆಯದು : ಅದರಲ್ಲೂ ವಿಶೇಷವಾಗಿ ಯಕೃತ್‌ನ (ಲಿವರ್‌) ಆರೋಗ್ಯ ಈ ನೀರಿನ ನಿಯಮಿತ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಇದೇ ಕಾರಣಕ್ಕೆ ಈ ನೀರನ್ನು ಕೆಲವಾರು ಟಾನಿಕ್ ಮತ್ತು ಔಷಧಿಗಳಲ್ಲಿ ಬಳಸಲಾಗುತ್ತಿದೆ. ಒಣದ್ರಾಕ್ಷಿ ನೆನೆಸಿದ ನೀರು- ದೇಹದ ಲಿವರ್‌‌ನ ಆಯಸ್ಸು ನೂರು.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ : ಸುಮಾರು ಹತ್ತು ಹನ್ನೆರಡು ಒಣದ್ರಾಕ್ಷಿಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. 
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಈ ಪುಟ್ಟ ಒಣಫಲದಲ್ಲಿ ಹಲವಾರು ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಪ್ರತಿದಿನ ಒಂದು ಲೋಟ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಬಹುದು. 
ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ : ಒಣದ್ರಾಕ್ಷಿಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ವಿಶೇಷವಾಗಿ ಬಾಯಿ, ಒಸಡು ಹಲ್ಲುಗಳಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಇದರಿಂದ ಎದುರಾಗುವ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ. 
ಮೂಳೆಗಳು ದೃಢಗೊಳ್ಳುತ್ತವೆ :  ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಇದರೊಂದಿಗೆ ಇರುವ ಇನ್ನೂ ಹಲವು ಸೂಕ್ಷ್ಮ ಪೋಷಕಾಂಶಗಳು ಈ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುವ ಮೂಲಕ ಮೂಳೆಗಳು ಆರೋಗ್ಯಕರ ಮತ್ತು ದೃಢವಾಗುತ್ತವೆ. 
ರಕ್ತಹೀನತೆ :  ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣವೂ ಇದೆ. ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚುತ್ತದೆ ಹಾಗೂ ರಕ್ತಹೀನತೆಯ ತೊಂದರೆಯಿಂದ ರಕ್ಷಿಸುತ್ತದೆ. 
ಯಕೃತ್‌ಗೆ ಉತ್ತಮ : ಯಕೃತ್‌ಗೆ (ದೇಹದ ಲಿವರ್) ಅತ್ಯುತ್ತಮವಾದ ಒಣಫಲವೆಂದರೆ ಒಣದ್ರಾಕ್ಷಿ. ಇದು ಯಕೃತ್ ನಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. 
ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ : ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಇದರೊಂದಿಗೆ ಹಲವು ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. 
ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ :  ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ಒಣದ್ರಾಕ್ಷಿ ನೆನೆಸಿದ ನೀರು ಉತ್ತಮವಾಗಿದ್ದು ಇದರಿಂದ ಮೂತ್ರಪಿಂಡಗಳ ಒಳಗೆ ಕಲ್ಲು ಉಂಟಾಗುವುದು,ಸೋಂಕು ಉಂಟಾಗುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. 
ದೃಷ್ಟಿಹೀನತೆಯಿಂದ ರಕ್ಷಿಸುತ್ತದೆ :  ಒಣದ್ರಾಕ್ಷಿಯಲ್ಲಿ ವಿಟಮಿನ್ ಎ, ಬೀಟಾ ಕ್ಯಾರೋಟೀನ್ ಸಹಿತ ಉತ್ತಮ ಪೋಷಕಾಂಶಗಳಿದ್ದು ಇವು ಕಣ್ಣಿಗೆ ಅತ್ಯುತ್ತಮ ಪೋಷಣೆಯನ್ನು ನೀಡುತ್ತವೆ. ಪರಿಣಾಮವಾಗಿ ದೃಷ್ಟಿ ಉತ್ತಮಗೊಳ್ಳುತ್ತದೆ ಹಾಗೂ ದೃಷ್ಟಿಹೀನತೆಯಿಂದ ರಕ್ಷಿಸುತ್ತದೆ.
Kannada Bold Sky

Post a Comment

Powered by Blogger.