Veerakesari 19:54
loading...
'ಬಾಳ್ ಠಾಕ್ರೆ.' ಅಪ್ಪಟ ಹಿಂದುತ್ವವಾದಿ, ಅವರ ಪ್ರಮುಖ ಅಜೆಂಡ, ಹಿಂದೂ ತತ್ತ್ವ ಮೌಲ್ಯಗಳು. ಹಿಂದೂಗಳಿಗೆ ಅನ್ಯಾಯವಾದಾಗ ಅದರ ವಿರುದ್ಧ ಪ್ರಪ್ರಥಮವಾಗಿ ದನಿಯೆತ್ತಿ ಹೋರಾಡುವವರಲ್ಲಿ ಅವರು ಮೊದಲಿಗರು. ಹಿಂದೂಗಳನ್ನು ಗುರಿಯಾಗಿರಿಸಿ, ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದಕ ದಾಳಿ ನಡೆಸಿದಾಗ ಠಾಕ್ರೆಯವರು ಸಿಡಿಮಿಡಿಗೊಳ್ಳುತ್ತಿದ್ದರು. ಇದರ ವಿರುದ್ಧ ತಕ್ಷಣ ಹೋರಾಡಲು ಭಾರತ ಸರ್ಕಾರವನ್ನು ಆಗ್ರಹಿಸಿದ ಸನ್ನಿವೇಶಗಳೂ ಹಲವಾರು ಇವೆ.
ಲೇಖಕ, ಕೇಶವ ಸೀತಾರಾಂ ಠಾಕ್ರೆ ಯವರ ೪ ಮಕ್ಕಳಲ್ಲಿ ಎರಡನೆಯ ಮಗನಾಗಿ, ಸನ್. ೧೯೨೭ ರ ಜನವರಿ, ೨೩ ರಂದು, ಜನಿಸಿದ, ಬಾಳಾ ಸಾಹೇಬ್ ಕೇಶವ ಸೀತಾರಾಂ ಠಾಕ್ರೆ,' ಯವರು, ಬೊಂಬಾಯಿಯನ್ನು ರಾಜಧಾನಿಯನ್ನಾಗಿರಿಸಿ, ಮರಾಠಿ ಭಾಷಾ ಜನರಿಗೆ ಪ್ರತ್ಯೇಕ ರಾಜ್ಯವೊಂದರ ನಿರ್ಮಾಣಕ್ಕಾಗಿ ನಡೆದ 'ಸಂಯುಕ್ತ ಮಹಾರಾಷ್ಟ್ರ ಆಂದೋಳನ'ದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 'ಹಿಟ್ಲರ್' ನ ಸರ್ವಾಧಿಕಾರವನ್ನು ಒಪ್ಪಿಕೊಂಡಿದ್ದ ಅವರು, ಜವಳಿ ಮತ್ತು ಇನ್ನಿತರ ಕೈಗಾರಿಕಾ ಘಟಕಗಳಲ್ಲಿ 'ಮರಾಠಿ ಮಣ್ಣಿನ ಮಕ್ಕಳಿಗೆ ಉದ್ಯೋಗ' ಕೊಡಿಸಲು ಬೀದಿಗಿಳಿದು ಹೋರಾಡಿದರು. ಈ ತರಹದ ಹೋರಾಟಗಳಿಂದ ಅವರು ಬಹಳ ಜನಪ್ರಿಯತೆಯನ್ನು ಸಂಪಾದಿಸಿದರು. 'ಹಿಂದು ಹೃದಯ ಸಾಮ್ರಾಟ ಎಂಬ ಹೆಸರು ಬಂದಿತು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದರೂ. ಅವರ ಪ್ರೀತಿ, ಮರಾಠಿ ಭಾಷೆ ಮತ್ತು ಮಹಾರಾಷ್ಟ್ರೆಕ್ಕೆ ಸೀಮಿತವಾಗಿತ್ತು. ಪಾಕೀಸ್ತಾನದ ಬಗ್ಗೆ ಕಠಿಣ ನಿಲವನ್ನು ಹೊಂದಿದ್ದರು. ಸನ್. ೨೦೦೯ ರ ಚುನಾವಣೆಯಲ್ಲಿ 'ಬಿಜೆಪಿ'ಯನ್ನು ಹಿಂದಕ್ಕೆ ಹಾಕಿ ಶಿವಸೇನೆ ಮುಂದೆ ಸಾಗಿತು. ಬಾಳ್ ಠಾಕರೆಯವರು ಮೇರು ವ್ಯಕ್ತಿತ್ವದ ಅತಿ ತೀಕ್ಷ್ಣ ಮತ್ತು ಪ್ರಭಾವೀ ಭಾಷಣಕಾರರಾಗಿದ್ದರು. ಮುಂಬಯಿನಲ್ಲಿ ದೊಡ್ಡರೀತಿಯಲ್ಲಿ ಚಾಲ್ತಿಯಲ್ಲಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಕಡಿಮೆಮಾಡಲು, ಮತ್ತು ಶಿವಸೇನೆಯನ್ನು ಒಂದು ಸಧೃಢ ಪಕ್ಷವನ್ನಾಗಿಸಲು ಅವರ ’ಅಮ್ಚಿ ಮುಂಬಯಿ,’ ಹಾಗೂ ಮರಾಠಿ ಮಾಣೂಸ್’ ವಾದ ಯಶಸ್ವಿಯಾಗಿತ್ತು.
'ಶಿವಸೇನೆ,' ಛತ್ರಪತಿ ಶಿವಾಜಿಮಹಾರಾಜ್ ಹೆಸರಿನಲ್ಲಿ ಹುಟ್ಟಿಕೊಂಡ ಮಹಾರಾಷ್ಟ್ರದ ಪ್ರಭಾವಿ ಸಂಘಟನೆ. ಮಹಾರಾಷ್ಟ್ರೀಯನ್ನರ ಬೆಂಬಲದೊಂದಿಗೆ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆದ ಶಿವಸೇನಾ ಸಂಸ್ಥೆಗೆ, ಬಾಳಾ ಸಾಹೇಬ್ ಠಾಕ್ರೆಯವರು ಪರಮೋಚ್ಚ ನಾಯಕರು. ಹೀಗೆ ಹುಟ್ಟು ಹಾಕಿದ ಶಿವಸೇನೆಯನ್ನು ಅವರು ಶಿವಸೈನಿಕರ ಪ್ರಬಲ ಶಕ್ತಿಯಾಗಿ ಬೆಳೆಸಿ, ಮುಂದೆತರುವಲ್ಲಿ ತಮ್ಮ ಪರಿಶ್ರಮವನ್ನೆಲ್ಲಾ ಧಾರೆಯೆರೆದರು. ಹೀಗೆ ಠಾಕರೆಯವರು ಒಮ್ಮೆ ಗುಡುಗಿದರೆ, ಅವರ ಮಾತಿಗೆ ಎದುರುತ್ತರ ಕೊಡುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ.
ಸಾರ್ವಜನಿಕ ಸಮಾರಂಭಗಳಿಗೆ ಹೋದಾಗ ಅವರು ಬಿಳಿ ಕುರ್ತಾ, ಬಿಗಿ ಪೈಜಾಮ ಧರಿಸಿ ಶಾಲು ಹೊದೆಯುತ್ತಿದ್ದರು. ರುದ್ರಾಕ್ಷಿ ಮಾಲೆಯ ಸಹಿತ ಹಲವು ಮಣಿಸರಗಳನ್ನು ಧರಿಸುತ್ತಾರೆ. ಸಾಕಷ್ಟು ಹಾವ-ಭಾವಗಳಿಂದ ಮಾತನಾಡಿ ಜನರನ್ನು ಮಂತ್ರಮುಘ್ದರನ್ನಾಗಿ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಮನೆಯಲ್ಲಿ ಸಿಲ್ಕ್ ಕುರ್ತ, ಲುಂಗಿ, ಅವರ ಸಮವಸ್ತ್ರ,ಥರ ಥರದ ಬಣ್ಣಗಳ ಉಡುಗೆ ಧರಿಸಿದರೂ 'ಕೇಸರಿ ಬಣ್ಣ' ಅವರಿಗೆ ಬಲು ಪ್ರಿಯ. ಕಂಚಿ ಕಾಮಕೋಟಿ ಸ್ವಾಮಿಗಳು ನೀಡಿದ ಸ್ಪಟಿಕವಿರುವ ರುದ್ರಾಕ್ಷಿಮಾಲೆ ಹೆಚ್ಚು ಪ್ರಿಯ. ಕೈಯಲ್ಲಿ ಯಾವಾಗಲೂ 'ಸಿಗಾರ್' ಇರುತ್ತಿತ್ತು.
ಸಾಧಾರಣ ಎತ್ತರ. ಕೋಲುಮುಖ, ಅಗಲ ಹಣೆ,ನೀಳ ನಾಸಿಕ, ತೆಳ್ಳಗಿನ ದೇಹ, ಮೊದಲನೋಟಕ್ಕೆ ಆಕರ್ಶಿಸುವಂತಹ ವ್ಯಕ್ತಿತ್ವವಲ್ಲ. ಠಾಕ್ರೆಯವರು ಬರುತ್ತಾರೆ, ಮಾತಾಡುತ್ತಾರೆ ಎಂದರೆ ಶಿವಾಜಿಪಾರ್ಕ್ ಕಿಕ್ಕಿರಿದು ತುಂಬುತ್ತಿತ್ತು. ಆದೇಶನೀಡಿದರೆ ಮುಂಬಯಿ ಸ್ತಭ್ದವಾಗುತ್ತಿತ್ತು.ಮುಂಬಯಿನ ಇತಿಹಾಸದಲ್ಲಿ ಇಂತಹ ಪ್ರಭಾವಶಾಲಿ ಜನನಾಯಕ ಹುಟ್ಟಿರಲಿಲ್ಲ. ವಿಚಾರಧಾರೆ ಜನರಿಗೆ ಹಿಡಿಸಲಿ ಬಿಡಲಿ ಜನಸಾಮಾನ್ಯರಿಗೆ ಹಿಡಿತತ ಬಗ್ಗೆ ಎರಡುಮಾತಿಲ್ಲ. ಕಾರ್ಟೂನ್ ಗಳನ್ನು ರಚಿಸುವುದರಿಂದ ಹಿಡಿದು ಪ್ರಬಲ ಹಾಗೂ ತೀಕ್ಷ್ಣ ಸಂದೇಶಗಳನ್ನು ನೀಡುವ ಮೂಲಕ ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಕರಿಷ್ಮ, ವರ್ಚಸ್ಸನ್ನು ಸ್ಥಾಪಿಸಿಕೊಂಡಿದ್ದರು. ಬಾಳಾ ಸಾಹೇಬ್ ಠಾಕ್ರೆಯವರು ಮರಾಠಿ ಹಾಗೂ ಹಿಂದುತ್ವದ ಹೆಮ್ಮೆಗಾಗಿ ಗುರುತಿಸಲ್ಪಟ್ಟರು. ಸನ್ ೧೯೫೦ ರಲ್ಲಿ ವ್ಯಂಗ್ಯ ಚಿತ್ರಕಾರ, ಠಾಕ್ರೆಯವರು, ಆಗಿನ ಇಂಗ್ಲೀಷ್ ದೈನಿಕ, ಫ್ರೀಪ್ರೆಸ್ ಜರ್ನಲ್ ನಲ್ಲಿ ವೃತ್ತಿಯನ್ನು ಆರಂಭಿಸಿದರು. ’ಡೇವಿಡ್ ಲೊ’ ಮತ್ತು ’ವಾಲ್ಟ್ ಡಿಸ್ನೆ’, ಅವರ ಪ್ರಿಯ ವ್ಯಂಗ್ಯ ಚಿತ್ರಕಾರರು. ಬಾಲಾಸಾಹೇಬ್ ರವರ, ಚಿತ್ರಗಳು, ಜಪಾನಿನ ಅಸಾಹಿ ಶಿಂಬುನ್, ಹಾಗೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಗಳಲ್ಲಿ ಪ್ರಕಟವಾಗಿತ್ತು. ಸನ್. ೧೯೬೦ ರಲ್ಲಿ ತಮ್ಮದೆ ಆದ 'ಮಾರ್ಮಿಕ್' ಎಂಬ ವ್ಯಂಗ್ಯ ಚಿತ್ರ ಮಾಸಿಕವನ್ನು ಆರಂಭಿಸಿ, ಹೊಸ ದಾರಿಯೊಂದನ್ನು ಕಂಡುಕೊಂಡರು. ವಲಸಿಗರ ಸಂಖ್ಯೆ ಅತಿ ಹೆಚ್ಚಾಗುತ್ತಿರುವ ಬೊಂಬಾಯಿನಗರದಲ್ಲಿ ಸ್ಥಾನೀಯರು, ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಪ್ರೇರೇಪಣೆ ಮಾಡಿ ಹಲವಾರು ತೀಕ್ಷ್ಣ ಅಂಶಗಳನ್ನು ತಮ್ಮ ಮಾಸಿಕ ಪತ್ರಿಕೆ, 'ಮಾರ್ಮಿಕ್' ನಲ್ಲಿ ಪ್ರಕಟಿಸುತ್ತಿದ್ದರು. ಮಾರ್ಮಿಕ್ ಪತ್ರಿಕೆಯ ಮೂಲಕ ಮಹಾರಾಷ್ಟ್ರದವರಿಗೆ ಅವರ ರಾಜ್ಯದಲ್ಲಿ ಹಕ್ಕುಗಳನ್ನು ಕೊಡಿಸಿ ಜನಜಾಗೃತಿ ಹುಟ್ಟಿಸುವುದು ಅವರ ಪ್ರಯತ್ನವಾಗಿತ್ತು. 'ವಾಚಾ ಆಣಿ ಗಪ್ಪ ಬಸ', ಎಂಬ ಕಾಲಂ, ಮಹಾರಾಷ್ಟ್ರೀಯನ್ನರ ಆತ್ಮಾಭಿಮಾನವನ್ನು ಕೆರಳಿಸುವ ಕಾರ್ಯವನ್ನು ಸಮರ್ಥವಾಗಿ ನೆರೆವೇರಿಸಿತು. ಅವರು, ಅಧಿಕಾರದಲ್ಲಿರಲಿ, ಇಲ್ಲದಿರಲಿ ಒಮ್ಮೆ ಗರ್ಜಿಸಿದರೆಂದರೆ, ಮುಂಬಯಿಮಹಾನಗರ ಸ್ತಭ್ದವಾಗುತ್ತಿತ್ತು.
ಹಲವಾರು ವಾರಗಳಿಂದ ಅನಾರೋಗ್ಯ , ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಠಾಕ್ರೆಯವರು, ನವೆಂಬರ್ ೧೭ ಶನಿವಾರ, ಮಧ್ಯಾನ್ಹ, ೩-೩೦ ಕ್ಕೆ 'ಮಾತೋಶ್ರೀ'ಯಲ್ಲೇ ಹೃದಯಾಘಾತದಿಂದ ಮರಣಹೊಂದಿದರು. ಮುಂಬಯಿನ ಶಿವಾಜಿಪಾರ್ಕ್ ನಲ್ಲಿ ನವೆಂಬರ್, ೧೮, ರವಿವಾರದ ಸಂಜೆ, ೬-೩೦ ಕ್ಕೆ, ಬಾಳಾಸಾಹೇಬ್ ರವರ ಅಂತಿಮ ಯಾತ್ರೆ, ಮತ್ತು ಅಂತಿಮ ಸಂಸ್ಕಾರ ವಿಧಿಯಲ್ಲಿ ಮುಂಬಯಿನಗರದ ಇತಿಹಾಸದಲ್ಲಿ ಈ ತರಹದ ಅಂತಿಮ ಸಂಸ್ಕಾರ ವಿಧಿಯಲ್ಲಿ, ಹಿಂದೆಂದೂ ಸೇರದಷ್ಟು ಜನಸಮೂಹ, ಲಕ್ಷಾಂತರ ಜನ ಆಗಮಿಸಿ, ತಮ್ಮ ಗೌರವ ಹಾಗೂ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
loading...

Post a Comment

Powered by Blogger.