Veerakesari 06:00
loading...
ಇರಾಕ್ ನ ಈಶಾನ್ಯ ಕಿರ್ಕುಕ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ತಾಯಿ ಮತ್ತು ನಾಲ್ವರು ಮಕ್ಕಳನ್ನು ಬೆಂಕಿ ಹಚ್ಚಿ ಸುಟ್ಟು ಹತ್ಯೆ ಮಾಡಿದ ಘಟನೆ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ಆಡಳಿತವಿರುವ ಈಶಾನ್ಯ ಕಿರ್ಕುಕ್ ನ ಅಲ್ಸುಮರಿಯಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಇಸ್ಲಾಮಿಕ್ ಸ್ಟೇಟ್ ಕಾಲೀಫಗಿರಿಯಾ ಆಡಳಿತವಿರುವ ಈಶಾನ್ಯ ಕಿರ್ಕುಕ್ ಪ್ರಾಂತ್ಯ ತ್ಯಜಿಸಿ ಬೇರೆಡೆ ಪಲಾಯನ ಮಾಡುತ್ತಿದ್ದ ತಾಯಿ ಹಾಗೂ ನಾಲ್ವರು ಮಕ್ಕಳನ್ನು (ಮೂರು ಹೆಣ್ಣು ಮಕ್ಕಳು ಹಾಗೂ 9ತಿಂಗಳ ಗಂಡು ಮಗು) ಬಂಧಿಸಿದ ಉಗ್ರರು, ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಅಮಾನುಷವಾಗಿ ಸುಟ್ಟು ಹತ್ಯೆ ಮಾಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ಜಿಹಾದಿ ಆಡಳಿತದಿಂದ ಬೇಸತ್ತು ತಾಯಿ ಮಕ್ಕಳು ಬೇರೆಡೆ ತೆರಳುತ್ತಿದ್ದರು. ಹತ್ಯೆಯಾದ ಮಕ್ಕಳಲ್ಲಿ 9ತಿಂಗಳ ಪುಟ್ಟ ಕಂದಮ್ಮವೂ 
ಇಷ್ಟೆಲ್ಲ ನರಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಪೇಟಾ, ಮಾನವ ಹಕ್ಕುಗಳ ಆಯೋಗ, ಬುದ್ಧಿಜೀವಿಗಳು ಒಂದು ಶಬ್ದವನ್ನು ಮಾತನಾಡುತ್ತಿಲ್ಲ. ಅವರಿಗೆ ತೊಂದರೆ ಇರೋದು ಕೇವಲ ಕಂಬಳ, ಜಲ್ಲಿಕಟ್ಟುವಿನಂತಹ ಸಾಂಪ್ರದಾಯಿಕ ಹಬ್ಬಗಳಲ್ಲಿ. ಪೇಟಾಗೆ ಅಷ್ಟೊಂದು ತಾಕತ್ತು ಇದ್ದರೆ ಇರಾಕ್ ಸಿರಿಯಾ ತೆರಳಿ ನರಹತ್ಯೆಗಳನ್ನು ನಿಲ್ಲಿಸಲಿ.
loading...

Post a Comment

Powered by Blogger.