loading...
ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಪರಕೀಯರ ವಿರುದ್ಧ ತೊಡೆ ತಟ್ಟಿ ನಿಂತು ಭಾರತ ಮಾತೆಯನ್ನು ದಾಸ್ಯದಿಂದ ಪಾರು ಮಾಡುವ ಸಂಕಲ್ಪ ಗೈದು ಅದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಭಾರತದ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ರವರು.
ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು 23, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದು ಭಾರತದ ಸ್ವಾತಂತ್ಯ್ರ ಹೋರಾಟಕ್ಕೆ ಧುಮುಕಿ ಮುಂದಿನ 25 ವರ್ಷಗಳಲ್ಲಿ, 4೦೦೦೦ -45೦೦೦ ಜನರ ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಕಟ್ಟಿ “ ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’.
ಸುಭಾಷರು ಜನಿಸಿದ್ದು 1897 ರ ಜನೇವರಿ – 23 ರಂದು ಈಗಿನ ಓರಿಸ್ಸಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್ ಮತ್ತು ತಾಯಿ ಪ್ರಭಾವತಿದೇವಿ. ಓದಿನಲ್ಲಿ ಪ್ರತಿಭಾವಂತರಾಗಿದ್ದ ಸುಭಾಷ್ 1913 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿ 1919 ರಲ್ಲಿ ಕಲ್ಕತ್ತಾದ ಪ್ರೇಸಿಡೆನ್ಸಿ ಕಾಲೇಜಿನಿಂದ ಬಿಎ(ತತ್ವಶಾಸ್ತ್ರ) ಪಾಸು ಮಾಡಿದರು.
ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ 4 ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.ನಂತರ 1939 ರಲ್ಲಿ ಕಾಂಗ್ರೆಸ್ಸನೊಂದಿಗಿನ ಭಿನ್ನಾಬಿಪ್ರಾಯದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಲ್ಲಿ ‘ಪಾರ್ವಡರ್್ ಬ್ಲಾಕ್’ ಸ್ಥಾಪಿಸಿದರು.ಕಾಂಗ್ರೆಸ್ಸಿನ ನಿಧಾನಗತಿಯ ಚಿಂತನೆಯನ್ನು ಮತ್ತು ಗಾಂಧಿಜೀಯ ಕ್ರಮಗಳನ್ನು ನೇರವಾಗಿ ಖಂಡಿಸಿದರು.
ಆಂಗ್ಲರ ವಿರುದ್ಧದ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದರು.1940 ರಲ್ಲಿ ಬ್ರಿಟಿಷ್ ಸಕರ್ಾರ ಸುಭಾಷರನ್ನು 11 ನೇಯ ಬಾರಿ ಬಂಧಿಸಿ ಜೈಲಿಗೆ ತಳ್ಳಿತು. ಇದೇ ಸುಭಾಷರ ಕೊನೆಯ ಬಂಧನ. ತಮ್ಮನ್ನು ಬಿಡುಗಡೆಗೊಳಿಸುವಂತೆ ಸುಭಾಷರು ಜೈಲಿನಲ್ಲಿ ಉಪವಾಸ ಆರಂಭಿಸಿದರು. ಉಪವಾಸ ಮುಂದುವರೆದಂತೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಜೈಲಿನಲ್ಲಿ ಅಕಸ್ಮಾತ್ ಸುಭಾಷರಿಗೆ ಏನಾದರೂ ಆದರೆ ಭಾರತದಾದ್ಯಂತ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂಬುದರ ಸ್ಪಷ್ಟ ಅರಿವು ಬ್ರಿಟಿಷರಿಗಿತ್ತು. ಆದ್ದರಿಂದ 1940 ರ ಡಿಸೆಂಬರ್ ನಲ್ಲಿ ಅವರನ್ನು ಬಿಡುಗಡೆಗೊಳಿಸಿ ಗೃಹ ಬಂಧನದಲ್ಲಿ ಇರಿಸಲಾಯಿತು.

ಸ್ವಾತಂತ್ರ್ಯ ವೀರ ಸಾವರ್ಕರ್ ಮಾರ್ಗದರ್ಶನದಂತೆ ಗೃಹ ಬಂಧನದಿಂದ ತಪ್ಪಿಸಿಕೊಂಡ ಸುಭಾಷರು ಹೋಗಿ ತಲುಪಿದ್ದು ಜರ್ಮನಿ!.( ಸುಭಾಷರ ನಿವಾಸದಲ್ಲಿಯೇ ಅವರ ಗೃಹಬಂಧನ. ಅವರ ಮನೆಯ ಸುತ್ತ 20-30 ಜನ ಬ್ರಿಟಿಷ್ ಪೋಲಿಸರ ಸರ್ಪಗಾವಲು. ಆದರೆ 1941, ಜನವರಿ 17 ರಂದು ಸುಭಾಷರು ನಿಗೂಢವಾಗಿ ತಮ್ಮ ಮನೆಯಿಂದ ತಪ್ಪಿಸಿಕೊಂಡರು. ಆದರೆ ಇವರು ತಪ್ಪಿಸಿಕೊಂಡ ವಿಷಯ ಹೊರಗಡೆ ಗೊತ್ತಾದದ್ದು 10 ದಿನಗಳ ನಂತರ. ಸುಭಾಷರು ಗಡ್ಡ ಬಿಟ್ಟು ಸನ್ಯಾಸಿಯಂತೆ ಹೆಸರು ಬದಲಿಸಿಕೊಂಡು ಭಾರತದಿಂದ ಕಾಬೂಲ್ ಮಾರ್ಗವಾಗಿ ಜರ್ಮನಿ ಸೇರಿಕೊಂಡರು. ಇವರು ಭಾರತದಿಂದ ತಪ್ಪಿಸಿಕೊಳ್ಳಲು ಇವರು ಸ್ಥಾಪಿಸಿದ ಪಾರ್ವರ್ಡ್ ಬ್ಲಾಕ್ನ ಸದಸ್ಯರು ಸಹಾಯ ಮಾಡಿದರು.)
ಜರ್ಮನ್ ತಲುಪಿದ ಕೂಡಲೆ ಸುಭಾಷರು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಭಾರತದ ಸ್ವಾತಂತ್ರ ಹೋರಾಟಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡರು. ಸುಭಾಷರ ವ್ಯಕ್ತಿತ್ವಕ್ಕೆ ಮಾರು ಹೋದ ಅಲ್ಲಿನ ಸಕರ್ಾರ ಸಹಾಯ ಮಾಡಲು ಒಪ್ಪಿತು. ಬೇಕಾದ ಎಲ್ಲ ನೆರವನ್ನು ನೀಡುವ ಭರವಸೆ ಜರ್ಮನ್ನಿಂದ ಸಿಕ್ಕ ನಂತರ ಸುಭಾಷರು ತಮ್ಮ ಕಾರ್ಯ ಚಟುವಟಿಕೆಗಳನ್ನು ವೇಗಗೊಳಿಸಿದರು.
ಅಲ್ಲಿ ಸುಭಾಷರು ಪ್ರೀ ಇಂಡಿಯಾ ರೇಡಿಯೊ ಎಂಬ ರೇಡಿಯೊ ಕೇಂದ್ರವನ್ನು ಸ್ಥಾಪಿಸಿ ಅಲ್ಲಿಂದಲೇ ಭಾರತೀಯರನ್ನು ಉದ್ಧೇಶಿಸಿ ಭಾಷಣ ಮಾಡತೊಡಗಿದರು.ಜರ್ಮನಿ ಸರ್ಕಾರದ ಸಹಾಯದಿಂದ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ “ನಾನು ಸುಭಾಷ್ ಮಾತಾಡುತಿದ್ದೇನೆ , ಇನ್ನು ಬದುಕಿದ್ದೇನೆ!”ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಕ್ರಾಂತಿಕಾರಿಗಳಲ್ಲಿ ಹೋರಾಟ ಉತ್ಸಾಹ ನೂರ್ಮಡಿಯಾಗಿತ್ತು.
ವಿದೇಶಗಳಲ್ಲಿರುವ ಭಾರತೀಯರನ್ನು ಒಂದುಗೂಡಿಸಿ ಸೇನೆಯನ್ನು ಹುಟ್ಟುಹಾಕಬೇಕೆಂದು ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರು. ಜರ್ಮನಿಯಲ್ಲಿದ್ದ ಸುಮಾರು 300 ಜನ ಇವರ ಕರೆಗೆ ಓಗೊಟ್ಟು ಸೇನೆ ಸೇರಿದರು. ಇದಕ್ಕೆ ಇಂಡಿಯನ್ ನ್ಯಾಶನಲ್ ಆರ್ಮಿ(ಐಎನ್ಎ) ಎಂದು ಹೆಸರಿಸಲಾಯಿತು. ಉತ್ತರ ಅಮೇರಿಕಾದಲ್ಲಿ ಸುಮಾರು 3000 ಜನ ಭಾರತಿಯ ಯುದ್ದ ಕೈದಿಗಳಿರುವ ವಿಷಯ ತಿಳಿದ ಸುಭಾಷರು ಅವರ ಮನವೊಲಿಸಿ ಐಎನ್ಎ ಸೇರುವಂತೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಜಗತ್ತನ್ನೇ ಗೆಲ್ಲಲು ಹೊರಟಿದ್ದ ಅಡಾಲ್ಪ ಹಿಟ್ಲರ್ನನ್ನು ಬೇಟಿ ಮಾಡಿ ಭಾರತದ ಸ್ವಾತಂತ್ರ ಹೋರಾಟದ ರೂಪು ರೇಷೆಗಳನ್ನು ತಿಳಿಸಿ ಈ ಹೋರಾಟಕ್ಕೆ ಸಹಾಯವನ್ನು ಅಪೇಕ್ಷಿಸಿದರು. ಸುಭಾಷರ ವ್ಯಕ್ತಿತ್ವ ಮತ್ತು ವಿಚಾರಧಾರೆಯನ್ನು ಮೆಚ್ಚಿದ ಹಿಟ್ಲರ್, ಐಎನ್ಎ ಶಿಭಿರಕ್ಕೆ ಬಂದು ಅಲ್ಲಿನ ಚಟುವಟಿಕೆಗಳನ್ನು ಸ್ವತಃ ವೀಕ್ಷಿಸಿ ಸೈನಿಕರನ್ನು ಉದ್ಧೇಶಿಸಿ ಮಾತನಾಡುತ್ತ ಸುಭಾಷರ ನೇತೃತ್ವದಲ್ಲಿ ಹೋರಾಟ ನಡೆಸಿದ್ದೆ ಆದರೆ ಭಾರತಕ್ಕೆ ಸ್ವಲ್ಪ ಸಮಯದಲ್ಲಿಯೇ ಸ್ವಾತಂತ್ರ ದೊರೆಯುತ್ತದೆ ಎಂದು ಹೇಳಿದ.

ಹೀಗೆ ಭಾರತದ ಬ್ರಿಟಿಷ್ ಸರ್ಕಾರದ ಮೇಲೆ ಯುದ್ದ ಮಾಡಲು ಐಎನ್ಎ ಸ್ಥಾಪಿಸಿದ ಸುಭಾಷರು ನಂತರ ಹೆಚ್ಚಿನ ಸಹಾಯ ಪಡೆಯಲು ಜಪಾನ್ ದೇಶಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿನ ಸರ್ಕಾರ ಸುಭಾಷರಿಗೆ ಸಂಪೂರ್ಣ ಸಹಕಾರ ನೀಡಲು ಒಪ್ಪಿತು. ನಂತರ ಐಎನ್ಎ ಮತ್ತು ಜಪಾನ್ ಸೇನೆ ಜಂಟಿಯಾಗಿ ಸಿಂಗಾಪೂರ್ನಲ್ಲಿ ಇಂಗ್ಲೆಂಡ್ ಸೇನೆಯ ವಿರುದ್ಧ ಹೋರಾಟ ನಡೆಸಿ ವಿಜಯಿಯಾದವು. ಈ ಯುದ್ದದಲ್ಲಿ ಬ್ರಿಟಿಷ್ ಸೇನೆಯಲ್ಲಿ ಸುಮಾರು 20 ಸಾವಿರ ಭಾರತೀಯ ಯೋಧರಿದ್ದರು. ಅವರನ್ನು ಆ ಯುದ್ದದಲ್ಲಿ ಸೆರೆ ಹಿಡಿಯಲಾಗಿತ್ತು. ಸುಭಾಷರು ಸೆರೆ ಸಿಕ್ಕ ಭಾರತೀಯ ಯೋದರನ್ನು ಭೇಟಿ ಮಾಡಿ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಲು ಐಎನ್ಎ ಸೇರುವಂತೆ ಮನವೊಲಿಸಿದರು. ಹೀಗೆ ಐಎನ್ಎ ಶಕ್ತಿ 30 ಸಾವಿರಕ್ಕಿಂತ ಅಧಿಕವಾಯಿತು.
ಹೀಗೆ ಶಕ್ತಿ ಹೆಚ್ಚಿಸಿಕೊಂಡ ಐಎನ್ಎ ಭಾರತದ ಕಡೆಗೆ ಧಾವಿಸಿತು. ಮೊದಲಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡಿತು. ಭಾರತದ ನೆಲ ಸ್ವಾತಂತ್ರ್ಯದ ಸವಿಯುಂಡ ಪ್ರಥಮ ಅನುಭವ ಅದು! ಸುಭಾಷರು ಆ ದ್ವೀಪಗಳಿಗೆ ‘ಸ್ವರಾಜ್’ ಮತ್ತು ‘ಶಹೀದ್’ ಎಂದು ನಾಮಕರಣ ಮಾಡಿದರು. ನಂತರ ಇಂಫಾಲ್ನತ್ತ ಮುನ್ನಡೆದ ಐಎನ್ಎ ಭಾರತದ ಗಡಿ ಪ್ರವೇಶಿಸಿ ಕೋಹಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದಕ್ಕಾಗಿ ನಡೆದ ಯುದ್ಧವನ್ನು ವಿಶ್ವದ ಮಿಲಿಟರಿ ಇತಿಹಾಸದಲ್ಲೇ ಅದ್ಭುತ ಶೌರ್ಯ, ಸಾಹಸಗಳನ್ನು ಪ್ರದರ್ಶಿಸಿದ ಪ್ರಯತ್ನಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ನಂತರ ಐಎನ್ಎ ಬರ್ಮಾ ಮೂಲಕ ಸಾಗಿ ಭಾರತದ ಗಡಿ ಭಾಗದಲ್ಲಿರುವ ಕಾಕ್ಸ್ಟೌನ್ ವಶಪಡಿಸಿಕೊಂಡಿತು. ಈಗ ಐಎನ್ಎ ಭಾರತದ ಒಳಕ್ಕೆ ಬಹು ದೂರ ಸಾಗಿ ಬಂದಿತ್ತು. ‘ದಿಲ್ಲಿ ಚಲೋ’ ಘೋಷಣೆ ಮಾಡಿದ ಸುಭಾಷರು ದೆಹಲಿಯನ್ನು ವಶಪಡಿಸಿಕೊಂಡು ಅದನ್ನು ಸ್ವತಂತ್ರ ಎಂದು ಘೋಷಿಸಿ, ಬ್ರಿಟಿಷರನ್ನು ಒದ್ದೋಡಿಸುವ ಸಂಕಲ್ಪ ತೊಟ್ಟಿದ್ದರು. 1944 ರ ಫೆಬ್ರವರಿಯಲ್ಲಿ ಭಾರತದ ಹಲವಾರು ಪ್ರದೇಶಗಳನ್ನು ಐಎನ್ಎ ವಶಪಡಿಸಿಕೊಂಡಿತು.

ಆದರೆ ಮಹಾ ಯುದ್ಧದಲ್ಲಿ ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ‘ಐ.ಎನ್.ಎ’ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು 1945 ರ ಆಗಸ್ಟ್ನಲ್ಲಿ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು ಅನ್ನುವ ಸುದ್ದಿಗಳು ಬಂದವು. ಬಹಳಷ್ಟು ಐ.ಎನ್ ಎ ಸೈನಿಕರನ್ನು ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ ‘ಕೋರ್ಟ್ ಮಾರ್ಷಲ್’ ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನೇತಾಜಿ ಯವರ ಐ.ಎನ್.ಎ ಮತ್ತು ಸಾವರ್ಕರ್ ರವರು ಭಾರತೀಯ ಯುವಕರನ್ನು ಪ್ರೇರೇಪಿಸಿ ಸೈನ್ಯಕ್ಕೆ ಸೇರಿಸಿದರ ಪರಿಣಾಮವಾಗಿ ಉಂಟಾದ ‘ನೌಕ ದಳದ’ ಬಂಡಾಯ ಬ್ರಿಟಿಷರಿಗೆ ಚರಮ ಗೀತೆಯಾಯಿತು. ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ 1947 ರ ಆಗಸ್ಟ್ನಲ್ಲಿ ಇಲ್ಲಿಂದ ತೊಲಗಿದರು. ಆದರೆ ಇದರ ಸಂಪೂರ್ಣ ಕ್ರೆಡಿಟನ್ನು ಅಹಿಂಸಾವಾದಿಗಳಿಗೆ ನೀಡಲಾಯಿತು. ಸದಾ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ನೇತಾಜಿಯವರಿಗೆ ಅವಮಾನ ಮಾಡಲಾಯಿತು. ಈ ವ್ಯವಸ್ಥಿತ ಪಿತೂರಿಯ ರೂವಾರಿ ಬೇರಾರು ಅಲ್ಲ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು.
ಅವತ್ತಿನ ನೆಹರು ಮತ್ತು ಆತನ ನಂತರದ ಕಾಂಗ್ರೆಸ್ ಸರ್ಕಾರ ಸುಭಾಷರ ಸಾವಿನ ತನಿಖೆ ಮಾಡಲು ನಿಧಾನಗತಿಯ ಕ್ರಮ ಅನುಸರಿಸಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ. ಅಗಷ್ಟ್ – 18, 1945 ರಂದು ಯಾವುದೇ ವಿಮಾನ ಅಪಘಾತ ನಡೆದಿಲ್ಲ ಎಂದು ಜಪಾನ್ ಸರ್ಕಾರ ಹೇಳಿದೆ. 1985 ರ ವರೆಗೆ ಸುಭಾಷರು ಒಬ್ಬ ಸನ್ಯಾಸಿಯ ರೂಪದಲ್ಲಿ ಭಾರತದಲ್ಲಿಯೇ ನೆಲೆಸಿದ್ದರು ಮತ್ತು ಅವರನ್ನು ಭಾರತದಲ್ಲಿ ನೋಡಿದ್ದಾಗಿ ಅನೇಕರು ಹೇಳಿದ್ದಾರೆ. ಇವರ ಸಾವಿನ ತನಿಖೆ ನಡೆಸಲು ಹಲವಾರು ಆಯೋಗಗಳನ್ನು ರಚಿಸಿದ್ದರೂ ಯಾವುದೇ ಸ್ಪಷ್ಟ ಉತ್ತರ ಸಿಗುತ್ತಿಲ್ಲ.)
ಒಂದು ಸಂದರ್ಭದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೇಳ್ತಾನೆ.
ಒಂದು ವೇಳೆ ಗಾಂಧೀಜಿ ಸ್ಥಾನದಲ್ಲಿ “ನೇತಾಜಿ” ಸುಭಾಷ್ ಚಂದ್ರ ಬೋಸ್ ಇದ್ದಿದ್ದರೆ ನನಗೆ ದೇಶ ವಿಭಜನೆ ಮಾಡಿ ಎಂದು ಕೇಳುವ ಧೈರ್ಯವೇ ಬರುತ್ತಿರಲಿಲ್ಲ. ಅಂದರೆ ನೇತಾಜಿಯ ತಾಕತ್ತು ಎಷ್ಟಿರಿರಬಹುದು ನೀವೇ ಊಹಿಸಿ.
ಕಾಂಗ್ರೇಸೇತರ ಪುಸ್ತಕಗಳನ್ನು ಓದಿಕೊಂಡು ನಿಜವಾದ ಹೋರಾಟಗಾರರನ್ನು ಮರೆತಿದ್ದೇವೆ. ನಿಜವಾದ ಕ್ರಾಂತಿಕಾರಗಳನ್ನು ನೆನೆಯಲು, ಈ ಲೇಖನ ನೇತಾಜಿಯವರಿಗೆ ಅರ್ಪಣೆ. ನೇತಾಜಿಯ ಬದುಕಿನ ರೀತಿಯನ್ನು ಕಂಡು ಹೆಮ್ಮೆಯೆನಿಸುತ್ತದೆ.ನಿನ್ನನ್ನು ಹೆತ್ತ ತಾಯಿ ಹೊತ್ತ ಭಾರತ ಮಾತೆ ಧನ್ಯಳು.
“ಈ ಸ್ವಾತಂತ್ರ್ಯ ಸಂಘರ್ಷದ ಬಳಿಕ ಯಾರು ಉಳಿಯುತ್ತಾರೆ ,ಯಾರು ಇಲ್ಲ ಎಂಬುದನ್ನು ನಾನರಿಯೆ. ಆದರೆ ಅಂತಿಮ ವಿಜಯ ನಮ್ಮದು ಎಂಬುದು ನಿಶ್ಚಿತ. ನಮ್ಮ ವಿಜಯೀ ಸೈನಿಕರು ಆಂಗ್ಲಪ್ರಭುತ್ವದ ಸಮಾಧಿಗೈದು ಕೆಂಪುಕೋಟೆಯ ಎದುರು ಸಂಚಲನ ಮಾಡುವಾಗಲೇ ನಮ್ಮ ಧ್ಯೇಯ ಪೂರ್ಣವಾಗುವುದು.”-ನೇತಾಜಿ ಸುಭಾಷ್ ಚಂದ್ರ ಬೋಸ್
loading...
Post a Comment