Veerakesari 23:29
loading...
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿ ಮೇಲೆ ನಡೆಯುತ್ತದೆ ಎನ್ನುವ ಮಾತಿದೆ. ಕೆಲವೊಂದು ಘಟನಾವಳಿಗಳನ್ನು ಗಮನಿಸಿದಾಗ ಇದು ನಿಜವೆಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಸಾವಿರ ವರ್ಷಗಳಿಂದ ಭಾರತೀಯ ಮದುವೆಗಳು ತುಂಬಾ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬರುತ್ತಾ ಇದೆ.
ಇಂದಿನ ದಿನಗಳಲ್ಲಿ ಇದರಲ್ಲಿ ಕೆಲವು ಬದಲಾವಣೆ ಕಂಡುಬರುತ್ತಿದೆಯಾದರೂ ಮದುವೆಯ ಶಾಸ್ತ್ರಗಳು ಹೆಚ್ಚಾಗಿ ಹಾಗೆಯೇ ಉಳಿದುಕೊಂಡಿದೆ. ಮದುಮಗ ಮತ್ತು ಮದುಮಗಳಿಗೆ ಕೆಲವೊಂದು ಶಾಸ್ತ್ರಗಳು ತುಂಬಾ ಆಯಾಸವನ್ನು ಉಂಟು ಮಾಡುತ್ತದೆಯಾದರೂ ಮದುವೆಯ ಖುಷಿಯಲ್ಲಿ ಎಲ್ಲವನ್ನು ಮರೆತು ನಗುತ್ತಾ ಇರುತ್ತಾರೆ. 
ಭಾರತೀಯ ಸಂಪ್ರದಾಯದ ಪ್ರತಿಯೊಂದು ಶಾಸ್ತ್ರಗಳು ವಧು-ವರನನ್ನು ಹತ್ತಿರಕ್ಕೆ ತರುತ್ತದೆ ಮತ್ತು ಜೀವಮಾನವಿಡಿ ಅವರು ಜತೆಯಾಗಿರಬೇಕೆಂಬ ಪಾಠವನ್ನು ಕಲಿಸುತ್ತದೆ. ಬನ್ನಿ ಹಿಂದೂ ಧರ್ಮದ ಮದುವೆಯ ಶಾಸ್ತ್ರದ ಹಿಂದಿರುವ ಕೆಲವೊಂದು ವೈಜ್ಞಾನಿಕ ಕಾರಣಗಳಿವೆ ಎಂದು ನಿಮಗೆ ತಿಳಿದಿದೆಯಾ? ಹಾಗಿದ್ದರೆ ಈ ಲೇಖವನ್ನು ಓದುತ್ತಾ ತಿಳಿದುಕೊಳ್ಳಿ. 
ಮದುಮಗಳ ಅಂಗೈಗೆ ಮೆಹಂದಿ ಹಾಕುವುದು :
ಮದುವೆಯ ಶಾಸ್ತ್ರಗಳು ಆರಂಭವಾಗುವುದೇ ಮೆಹಂದಿಯ ಕಾರ್ಯಕ್ರಮದಿಂದ. ಇದರಲ್ಲಿ ವಧು ಹಾಗೂ ವರ ಇಬ್ಬರು ಭಾಗವಹಿಸುತ್ತಾರೆ. ಇಂದಿನ ದಿನಗಳಲ್ಲಿ ವಿಶೇಷ ವಿನ್ಯಾಸದ ಮೆಹೆಂದಿಯನ್ನು ವಧು ಮತ್ತು ವರನ ಕೈಯಲ್ಲಿ ಬಿಡಿಸಲಾಗುತ್ತದೆ.
ಇದು ಕೇವಲ ಸೌಂದರ್ಯಕ್ಕೆ ಅಂಗ್ಯಕ್ಕೆ ವಿನ್ಯಾಸ ಮಾಡಿಕೊಳ್ಳುವುದು ಮಾತ್ರವಲ್ಲದೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಡಗಿವೆ. ಇದು ನಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮದುವೆ ಸಮಯದಲ್ಲಿ ವರ ಮತ್ತು ವಧು ಎದುರಿಸುವ ಒತ್ತಡ ನಿವಾರಣೆಗೆ ಮೆಹೆಂದಿ ಇಡಲಾಗುತ್ತದೆ. ದೇಹಕ್ಕೆ ತಾಗುವ ಹಲವಾರು ರೀತಿಯ ಸೋಂಕುಗಳನ್ನು ಇದು ನಿವಾರಿಸುತ್ತದೆ.
ಅರಿಶಿನ ಕಾರ್ಯಕ್ರಮ : 
ಮೆಹಂದಿ ಬಳಿಕ ನಡೆಯುವ ಮುಂದಿನ ಕಾರ್ಯಕ್ರಮವೇ ಅರಿಶಿನ ಹಚ್ಚುವುದು. ಇದರಲ್ಲಿ ವರ ಹಾಗೂ ವಧುವಿನ ದೇಹಕ್ಕೆ ಅರಿಶಿನದ ಪೇಸ್ಟ್ ನ್ನು ಹಚ್ಚಲಾಗುತ್ತದೆ. ಇದು ಅವರ ತ್ವಚೆಗೆ ಕಾಂತಿಯನ್ನು ತರುವುದು.
ವೈಜ್ಞಾನಿಕ ಪ್ರಕಾರ ಅರಿಶಿನದಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ದೇಹದಲ್ಲಿ ಸೂಕ್ಷ್ಮ ಜೀವಿಗಳಿಂದ ಆಗುವ ರೋಗಗಳನ್ನು ಗುಣಪಡಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಇದು ಹೊರಹಾಕುತ್ತದೆ. ಮದುವೆಗೆ ಒಂದು ದಿನ ಮೊದಲು ವಧು ಹಾಗೂ ವರನಿಗೆ ಅರಿಶಿನದ ಪೇಸ್ಟ್ ಹಚ್ಚಿ ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ.
ಮಧುವಿನ ಕೈಗಳಿಗೆ ಬಳೆಗಳು :
ಮದುವೆಗೆ ಮೊದಲು ಮದುಮಗಳಿಗೆ ಕೈಗೆ ಬಳೆಗಳನ್ನು ಹಾಕಿಕೊಳ್ಳಲು ಸೂಚಿಸಲಾಗುತ್ತದೆ. ಮಣಿಕಟ್ಟಿನಲ್ಲಿ ಕೆಲವೊಂದು ಆಕ್ಯೂಪ್ರೆಷರ್ ಕೇಂದ್ರಗಳಿವೆ. ಬಳೆಗಳು ಈ ಕೇಂದ್ರದಲ್ಲಿ ಉಂಟುಮಾಡುವ ಒತ್ತಡವು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಷ್ಟು ಮಾತ್ರವಲ್ಲದೆ ಚರ್ಮ ಮತ್ತು ಬಳೆಗಳ ನಡುವಿನ ತಿಕ್ಕಾಟವು ರಕ್ತ ಪರಿಚಲನೆಯನ್ನು ಉತ್ತಮಪಡಿಸುವುದು. 
ಹಣೆಗೆ ಕುಂಕುಮ ಇಡುವುದು : 
ಮದುಮಗಳ ಹಣಿಗೆ ಸಿಂಧೂರವನ್ನು ಇಟ್ಟರೆ ವಧು ಮತ್ತು ವರ ಪತಿ-ಪತ್ನಿಯಾದರು ಎನ್ನುವ ಅರ್ಥವಿದೆ. ಇದು ಹುಡುಗ ಹಾಗೂ ಹುಡುಗನ್ನು ಜವಾಬ್ದಾರಿಯನ್ನು ಹೆಚ್ಚಿಸುವುದು. 
ಆದರೆ ಇದು ಕೇವಲ ಮದುವೆಯ ಸಂಕೇತ ಮಾತ್ರವಲ್ಲ. ಸಿಂಧೂರದಲ್ಲಿ ಅರಿಶಿನ ಮತ್ತು ಲಿಂಬೆ ಇದೆ. ಇದು ವಧುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮನಸ್ಸನ್ನು ಶಾಂತವಾಗಿರಿಸಿ ಆಕೆಯಲ್ಲಿ ಲೈಂಗಿಕ ಆಸಕ್ತಿ ಮೂಡಿಸುವುದು. 
ಕಾಲುಂಗುರ :
ಭಾರತೀಯ ಸಂಪ್ರದಾಯಂತೆ ಮಧುಮಗಳು ಕಾಲಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳುವುದನ್ನು ನಾವು ನೋಡುತ್ತೇವೆ. ಕಾಲಿಗೆ ಉಂಗುರ ಹಾಕಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಎರಡನೇ ಬೆರಳಿಗೆ ಹಾಕಿಕೊಳ್ಳಲಾಗುತ್ತದೆ. 
ಈ ಬೆರಳಿನ ನರಗಳು ನೇರವಾಗಿ ಗರ್ಭಕೋಶ ಮತ್ತು ಹೃದಯಕ್ಕೆ ಸಂಪರ್ಕವನ್ನು ಹೊಂದಿದೆ. ಕಾಲುಂಗರವು ಮಹಿಳೆಯಲ್ಲಿನ ಮುಟ್ಟನ್ನು ನಿಯಂತ್ರಿಸುತ್ತದೆ. ಕಾಲಿನಲ್ಲಿನ ಉಂಗುರವು ಭೂಮಿಯ ಧ್ರುವನ್ನು ವಿಕಿರಣಗೊಳಿಸಿ ದೇಹದೊಳಗೆ ಪ್ರವೇಶಿಸುವಂತೆ ಮಾಡುತ್ತದೆ.
ಅಗ್ನಿಗೆ ಸುತ್ತು ಬರುವುದು :
ಭಾರತೀಯ ಸಂಪ್ರದಾಯದಲ್ಲಿ ಅಗ್ನಿಯನ್ನು ಪವಿತ್ರವೆನ್ನಲಾಗುತ್ತದೆ. ಅಗ್ನಿಯ ಮುಂದೆ ವಧು ಮತ್ತು ವರ ಮದುವೆಯ ಶಾಸ್ತ್ರ ನಿರ್ವಹಿಸುತ್ತಾರೆ. ಭಾರತೀಯ ಸಂಪ್ರದಾಯದ ಪ್ರಕಾರ ಏಳು ಶಾಸ್ತ್ರಗಳಿವೆ. ಮಂಟಪದ ಸುತ್ತಲಿನ ಗಾಳಿಯನ್ನು ಅಗ್ನಿಯು ಶುದ್ದೀಕರಿಸುತ್ತದೆ. ಇದನ್ನು ಹೊರತುಪಡಿಸಿ ಅಗ್ನಿಕುಂಡಕ್ಕೆ ಹಾಕುವ ಸಾಮಗ್ರಿಗಳು ಸುತ್ತಲು ಇರುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತದೆ.
Kannada Bold Sky
loading...

Post a Comment

Powered by Blogger.