Veerakesari 22:02
ಕೊಲೆ ನಡೆದ ಜಾಗ
ಮುಂಬೈ: ಒಂಬತ್ತು ತಿಂಗಳ ತುಂಬು ಗರ್ಭಿಣಿ ಸರ್ಫಿಯಾ ಅರ್ಬಾರ್ ಮನ್ಸೂರಿ ಅಲಿಯಾಸ್ ಪ್ರಿಯಾ ವಿಜಯ್ ಯಾದವ್(22)ರ ಹೊಟ್ಟೆಗೆ ಚಾಕುವಿನಿಂದ ಇರಿದು ಹಾಗೂ ಆಕೆಯ ಪತಿ 30 ವರ್ಷದ ವಿಜಯ್ ಯಾದವ್ ರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. 
ಮುಂಬೈನ ಮುಂಬ್ರಾದ ಸಮೀಪವಿರುವ ದೈಘರ್ ಎಂಬಲ್ಲಿರುವ ಅಪಾರ್ಟ್‍ವೊಂದರಲ್ಲಿ ದಂಪತಿಗಳನ್ನು ಬರ್ಜರವಾಗಿ ಹತ್ಯೆ ಮಾಡಲಾಗಿದ್ದು, ಮರ್ಯಾದಾಗಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. 
2015ರ ಏಪ್ರಿಲ್ 9ರಂದು ಉತ್ತರ ಪ್ರದೇಶದ ಮೂಲದವರಾದ ವಿಜಯ್ ಶಂಕರ್ ಯಾದವ್ ಎಂಬುವರನ್ನು ಪ್ರಿಯಾ ವಿವಾಹವಾಗಿ ಮುಂಬೈನಲ್ಲಿ ಬಂದು ನೆಲೆಸಿದ್ದರು. 
ಕೊಲೆಯಾಗಿ ಸುಮಾರು 48 ಗಂಟೆಯ ಬಳಿಕ ಇಬ್ಬರು ಶವಗಳು ಪತ್ತೆಯಾಗಿದೆ. ಸರ್ಫಿಯಾ ಹೊಟ್ಟೆಗೆ ಮೂರು ಬಾರಿ ಇರಿಯಲಾಗಿದ್ದು ವಿಜಯ್ ಶಂಕರ್ ಕತ್ತು ಸೀಳಲಾಗಿದೆ. ಅಪಾರ್ಟ್‍ಮೆಂಟ್ ನಿವಾಸಿಗಳ ಪ್ರಕಾರ ಈದ್ ಗೆಂದು ಸರ್ಫಿಯಾ ಸಂಬಂಧಿಗಳು ಮನೆಗೆ ಬಂದಿದ್ದು ಅವರೇ ಈ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Post a Comment

Powered by Blogger.