Veerakesari 20:09
ಹಿಂದೂ ಸಂಪ್ರದಾಯದಲ್ಲಿ ವಿಘ್ನೇಶ್ವರನಿಗೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಯಾಕೆಂದರೆ ಆತ ಸಕಲ ಗಣಗಳಿಗೆ ಅಧಿಪತಿ. ನಾವು ಮಾಡುವ ಕೆಲಸಕ್ಕೆ ಯಾವುದೇ ವಿಘ್ನ(ತೊಂದರೆ) ಆಗದಂತೆ ನೇರವೇರಲು ಮೊದಲು ಆತನ ಬಳಿ ಪ್ರಾರ್ಥಿಸುತ್ತೇವೆ. ಎಲ್ಲಿ ಯಾವುದೇ ಶುಭಕಾರ್ಯ ನಡೆದರೂ ಮೊದಲ ಪೂಜೆ ಆ ಗಣಪನಿಗೆ ತಲುಪುತ್ತದೆ. ಹಾಗೆ ಹಿಂದೂಗಳು ತಮ್ಮ ವಿವಾಹದ ಕಾರ್ಯದ ಭಾಗವಾಗಿ ತಮ್ಮ ಲಗ್ನಪತ್ರಿಕೆ (ವೆಡಿಂಗ್ ಇನ್ವಿಟೇಷನ್)ಗಳ ಮೇಲೆ ಗಣೇಶನ ಪೋಟೋವನ್ನು ಕಡ್ಡಾಯವಾಗಿ ಮುದ್ರಿಸಿರುತ್ತಾರೆ‌ ಹಾಗೆ ಯಾಕೆ ಮಾಡುತ್ತಾರೆ ಎಂದು ಈಗ ತಿಳಿದುಕೊಳ್ಳೋಣ.
ಮನುಷ್ಯರಿಗೆ ಜ್ಞಾನ, ಬುದ್ಧಿವಂತಿಕೆ, ನೈಪುಣ್ಯತೆಯನ್ನು ನೀಡುವಂತಹ ದೇವರಾಗಿ ವಿಘ್ನೇಶ್ವರ ಪ್ರಸಿದ್ಧಿ ಪಡೆದಿದ್ದಾನೆ. ಅದಕ್ಕೆ ವಿದ್ಯಾ ದೇವತೆ ಸರಸ್ವತಿಯ ಜೊತೆಗೆ ಆತನನ್ನು ವಿದ್ಯೆ, ಕೆಲೆಗಳ ಅಧಿಪತಿಯಾಗಿ ಭಾವಿಸುತ್ತಾರೆ.
ಅಷ್ಟೇ ಅಲ್ಲ ಹೊಸ ಜೀವನವನ್ನು ಪ್ರಾರಂಭಿಸುವ ಮೊದಲು ವಿನಾಯಕನ ಆಶಿರ್ವಾದ ತಪ್ಪದೇ ಪಡೆಯಬೇಕು ಎಂದು ಹೇಳುತ್ತಾರೆ. ಸಣ್ಣದಾದರೂ, ದೊಡ್ಡದಾದರೂ ಪ್ರತಿ ವಿಷಯದಲ್ಲಿ ಸೂಕ್ಷ್ಮ ದೃಷ್ಟಿಯನ್ನು, ವಿಶ್ಲೇಷಣಾತ್ಮಕ ಶಕ್ತಿ ಹೊಂದಿರಬೇಕು ಎಂದು ವಿನಾಯಕನ ಕಣ್ಣುಗಳು ಹೇಳುತ್ತೇವೆ. ಸೃಷ್ಟಿಯಲ್ಲಿ ಜೀವಿಸುವ ಪ್ರತಿಯೊಂದು ಪ್ರಾಣಿಯನ್ನು ಸಮ ದೃಷ್ಟಿಯಿಂದ ನೋಡಬೇಕೆಂದು, ಎಲ್ಲರಿಗೂ ನ್ಯಾಯಸಮ್ಮತ ನಡೆದುಕೊಳ್ಳಬೇಕು ಎಂದು ಸೂಚಿಸುತ್ತದೆ. 
ವಿನಾಯಕನಿಗೆ ಇರುವ ಎರಡು ದಂತಗಳಲ್ಲಿ ಒಂದು ಸಣ್ಣದಾಗಿ ಮತ್ತೊಂದು ದೊಡ್ಡದಾಗಿ ಇರುತ್ತದೆ. ದೊಡ್ಡದಾಗಿ ಇರುವ ದಂತ ನಂಬಿಕೆಯ ಪ್ರತಿಕವಾಗಿದ್ದರೆ, ಸಣ್ಣ ದಂತ ಪ್ರತಿಭೆಯನ್ನು, ನೈಪುಣ್ಯತೆಯನ್ನು, ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವ ದೇವರಾಗಿ ವಿಘ್ನೇಶ್ವರನಿಗೆ ಹೆಸರಿದೆ. ಅದಕ್ಕೆ ಯಾವುದೇ ವ್ಯಕ್ತಿಯ ಜೀವನದಲ್ಲಿ ನಡೆಯುವ ಅತಿಮುಖ್ಯವಾದ ಸಂಭ್ರಮದ ಕಾರ್ಯವಾದ ವಿವಾಹ ಯಾವುದೇ ತೊಂದರೆಗಳಾಗದಂತೆ ನೇರವೇರಲಿ ಎಂಬ ಆಶಯದೊಂದಿಗೆ ವಿವಾಹದ ಆಹ್ವಾನ ಪತ್ರಿಕೆಯ ಮೇಲೆ ಆತನ ಚಿತ್ರವನ್ನು ಮುದ್ರಿಸುತ್ತಾರೆ.

Kannada AP2TG

Post a Comment

Powered by Blogger.