loading...
ಅಮೆಜಾನ್ ಕಂಪನಿ ತನ್ನ ಮೊಂಡುತನ ಬಿಡುವಂತೆ ಕಾಣುತ್ತಿಲ್ಲ. ನಿನ್ನೆಯಷ್ಟೇ ಅಮೆಜಾನ್ ಕಂಪನಿ ಕೆನಡಾದಲ್ಲಿ ಭಾರತೀಯ ರಾಷ್ಟ್ರ ಧ್ವಜವನ್ನು ಹೋಲುವ ಡೋರ್ ಮ್ಯಾಟ್ ಮಾರಾಟ ಮಾಡಿದ್ದರ ವಿರುದ್ಧ ಸುಷ್ಮಾ ಸ್ವರಾಜ್ ಅಮೆಜಾನ್ ಕಂಪನಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ಭಾರತೀಯರಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಕೇಳಬೇಕು ಹಾಗೂ ಅಂತಹ ವಸ್ತುಗಳ ಮಾರಾಟವನ್ನು ನಿಶೇಧಿಸಬೇಕು ಎಂದು ತಾಕೀತು ಮಾಡಿದ್ದರು.
ಸುಷ್ಮಾ ಅವರ ಎಚ್ಚರಿಕೆಗೆ ಮಣಿದ ಅಮೆಜಾನ್ ತನ್ನ ಕೆನಡಾ ವೆಬ್ಸೈಟ್'ನಿಂದ ರಾಷ್ಟ್ರ ಧ್ವಜಕ್ಕೆ ಅಪಮಾನವಾಗುವಂತಹ ವಸ್ತುಗಳನ್ನು ತೆರವುಗೊಳಿಸಿತ್ತು. ಆದರೆ ಇಂದು ಅಮೇರಿಕಾದ ಮಾರುಕಟ್ಟೆಯಲ್ಲಿ ಭಾರತೀಯ ರಾಷ್ಟ್ರ ಧ್ವಜ ಹೋಲುವ ಶೂಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
ತಕ್ಷಣ ಅಮೆಜಾನ್'ನಿಂದ ಸಾಮಗ್ರಿಗಳನ್ನು ಖರೀದಿಸುದನ್ನು ನಿಲ್ಲಿಸಿ ಅಮೆಜಾನ್ ಕಂಪನಿಗೆ ಭಾರತೀಯರೆಲ್ಲರು ಸೇರಿ ಬುದ್ದಿಕಲಿಸಬೇಕಾದ ಅವಶ್ಯಕತೆ ಇದೆ. ನಮ್ಮ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಅಮೆಜಾನ್ ಕಂಪನಿಯಿಂದ ನಾನು ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಶಪತ ಮಾಡುತ್ತೇನೆ.
#BoycottAmazon
loading...
Post a Comment