loading...
ಜಮ್ಮುಕಾಶ್ಮೀರದಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ ಹೆಮ್ಮೆಯ ಭಾರತೀಯ ಸೇನೆಯ ಸೈನಿಕರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬೆಟ್ಟಗುಡ್ಡಗಳು ಹಾಗೂ ಅರಣ್ಯಪ್ರದೇಶಗಳಲ್ಲಿ ಉಗ್ರರು ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಾಗಳನ್ನು ವಶಪಡಿಸಿಕೊಳ್ಳೋ ಮೂಲಕ ಸೇನೆ ಮುಂದೆ ಈ ಶಸ್ತ್ರಾಸ್ತ್ರಗಳಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಸೇನೆ ಜಮ್ಮು ಮತ್ತು ಕಾಶ್ಮೀರದ ರಜೌರಿ, ಸುರಾನ್ಕೋಟ್, ಮಂಧಾನ್, ಮಂಡಿ ಮತ್ತು ಠಾಣಾ ಮಂಡಿ ಸೇರಿದಂತೆ ಇತರ ಕಡೆ ಶೋಧ ಕಾರ್ಯ ನಡೆಸುತ್ತಿದ್ದರು ಈ ಸಂದರ್ಭದಲ್ಲಿ ಪೂಂಚ್ ಜಿಲ್ಲೆಯ ಸುರಾನ್ಕೋಟ್ ನ ಛಾರ್ಮಾರ್ ಪ್ರದೇಶದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಸೇನೆ ವಶಪಡಿಸಿಕೊಂಡಿದೆ.
ಸೇನೆಯ ಈ ಕಾರ್ಯಾಚರಣೆ ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಜಿಹಾದಿ ಹಂದಿಗಳಿಗೆ ಭಾರೀ ಪ್ರಮಾಣದಲ್ಲಿ ಹೊಡೆತ ನೀಡಿದ್ದು ಸೇನೆ ಶೋಧ ಕಾರ್ಯಾಚರಣೆ ಮುಂದುವರೆಸಿದೆ. ಭಾರತೀಯ ಸೇನೆಗೆ ಶುಭವಾಗಲಿ. ಜೈ ಹಿಂದ್ ಜೈ ಭಾರತೀಯ ಸೇನೆ.
loading...
Post a Comment