Veerakesari 01:04
loading...
ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಕಾಸಗೋಡು ಮೂಲದ ವ್ಯಕ್ತಿಯೊಬ್ಬನನ್ನು ಕೊಲ್ಲಿ ರಾಷ್ಟ್ರದಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಮೊಯ್ದೀನ್ ಎಂದು ಗುರುತಿಸಲಾಗಿದ್ದು ಕೆಳೆದ ವರ್ಷ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬೇಧಿಸಲ್ಪಟ್ಟಿದ್ದ ಐಸಿಸ್ ಉಗ್ರ ಜಾಲದ 13ನೇ ಆರೋಪಿಯಾಗಿದ್ದಾನೆ. ಭಾರತೀಯ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಆದರಿಸಿ ಸಂಯುಕ್ತ ಅರಬ್ ಸಂಸ್ಥಾನದ ಪೋಲೀಸರು ಜಿಹಾದಿಯನ್ನು ಬಂದಿಸಿದ್ದಾರೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಜಿಹಾದಿ ಐಸಿಸ್ ಉಗ್ರ ಜಾಲವನ್ನು ವಿಸ್ತರಿಸುವ ಸಲುವಾಗಿ ಮೊಯ್ದಿನ್ ಆರ್ಥಿಕ ಸಹಾಯ ಮಾಡುತ್ತಿದ್ದ. ಉಗ್ರರಿಗೆ ಹಣ ಸಂದಾಯವಾಗುತ್ತಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾಗ ತನಿಖಾಧಿಕಾರಿಗಳಿಗೆ ಮೊಯ್ದೀನ್ ಶಾಮೀಲಾತಿ ಬಗ್ಗೆ ತಿಳಿದಿದೆ. ಈ ಬಗ್ಗೆ ಅಧಿಕಾರಿಗಳು ಅರಬ್ ಸಂಯುಕ್ತ ಸಂಸ್ಥಾನದ ಪೋಲೀಸರಿಗೆ ಮಾಹಿತಿ ನೀಡಿದ್ದರು. 
ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಸಂಯುಕ್ತ ಅರಬ್ ಸಂಸ್ಥಾನದ ಪೋಲೀಸರು ಜಿಹಾದಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜಿಹಾದಿ ಮುಸಲ್ಮಾನ ಮೊಯ್ದೀನ್ ನನ್ನು ಗಡಿಪಾರು ಮಾಡಿ ಭಾರತಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಕೆಲ ವಾರಗಳಲ್ಲಿ ಆತನನ್ನು ತನಿಖಾದಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.
ಕೇರಳದ ಕಣ್ಣೂರಿನಲ್ಲಿನ ಕನಕಮಲದಲ್ಲಿ ಜಿಹಾದಿ ಮುಸಲ್ಮಾನ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಕೆಲ ಸದಸ್ಯರು ಭಾರತದಾದ್ಯಂತ ಧಾರ್ಮಿಕ ಸ್ಥಳಗಳು ಹಾಗೂ ಇಸ್ರೇಲಿ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಧಾಳಿ ನಡೆಸುವ ಬಗ್ಗೆ ಸಭೆ ನಡೆಸುತ್ತಿದ್ದಾಗ ಗುಪ್ತಚರ ಇಲಾಖೆ ಮಾಹಿತಿ ಆದರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆಸಿದ್ದರು.ಅನೇಕ ಹಿಂದೂ ಸಂಘಟನೆ ಮುಖಂಡರು, ಹೈಕೋರ್ಟು ನ್ಯಾಯಾಧೀಶರು, ಬಿಜೆಪಿ ಮುಖಂಡರುಗಳು ಈ ಉಗ್ರ ಟಾರ್ಗೆಟ್ ಲಿಸ್ಟ್ನಲ್ಲಿದ್ದರು ಎಂದು ತನಿಖೆಯಿಂದ ತಿಳಿದು ಬಂದಿತ್ತು.
loading...

Post a Comment

Powered by Blogger.