veerakesari.in
ದೇಶದಾದ್ಯಂತವಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಗವದ್ಗೀತೆ ಬೋಧನೆ ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿ ಲೋಕಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಲಾಗಿದೆ.
ಶುಕ್ರವಾರ ಲೋಕಸಭೆಯಲ್ಲಿ 103 ಖಾಸಗಿ ಮಸೂದೆಗಳು ಮಂಡನೆಯಾಗಿವೆ. ಭಗವದ್ಗೀತೆ ಕಡ್ಡಾಯ ಮಾಡಬೇಕು ಎಂದ ಮಸೂದೆಯನ್ನು ಬಿಜೆಪಿ ಸದಸ್ಯ ರಮೇಶ್ ಬಿಧುರಿ ಮುಂದಿಟ್ಟಿದ್ದಾರೆ.
ಧಾರ್ಮಿಕ ಶಿಕ್ಷಣ ಎಂಬ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಮಾಡಬೇಕು ಎಂದು ಬಿಧುರಿ ಹೇಳಿದ್ದಾರೆ.
ಅದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರ ಮಾಡುವುದು, ಕಸ ಬಿಸಾಡುವುದು ಮೊದಲಾದ ಕೃತ್ಯಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯ ಮಹೇಶ್ ಗಿರಿ ಸ್ವಚ್ಛತೆ ಕಾಪಾಡುವ ಮಸೂದೆಯೊಂದನ್ನು ಮಂಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯಕರ ವಾತಾವರಣ ಮತ್ತು ಸ್ವಚ್ಛತೆ ಕಾಪಾಡುವುದಕ್ಕಾಗಿ ಈ ಮಸೂದೆಯ ಅಗತ್ಯವಿದೆ ಎಂದು ಮಹೇಶ್ ಗಿರಿ ಹೇಳಿದ್ದಾರೆ.
Source : Prajavani
loading...
Post a Comment