veerakesari.in
ಒಂದೆಡೆ ಜೆಎನ್ಯು ವಿವಿಯಲ್ಲಿ ದೇಶದ್ರೋಹಿ ಘೋಷಣೆ ವಿಚಾರದಲ್ಲಿ ಕನ್ಹಯ್ಯಾ ಕುಮಾರ್ಗೆ ಕ್ಲೀನ್ಚಿಟ್ ಅಂತೆ ಎಂಬ ವರದಿ ಕೋಲಾಹಲ ಸೃಷ್ಟಿಸುತ್ತಿರುವಾಗಲೇ, ಯೋಧನೊಬ್ಬ ಜೆಎನ್ಯು ವಿವಿಯಲ್ಲಿ ನಡೆದ ಅಫ್ಜಲ್ ಗುರು ಶ್ರದ್ಧಾಂಜಲಿಯನ್ನು ಖಂಡಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಪಾಕ್ ಸೈನಿಕರು ನಮ್ಮ ದೇಶದ ಮೇಲೆ ನುಗ್ಗಿ ಬಂದಾಗ, ನಾವು ಸುಮ್ಮನಿದ್ದರೆ, ದೇಶ ಏನಾಗುತ್ತಿತ್ತು..? ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಾವು ಹೋರಾಡದೇ ಇದ್ದರೆ, ದೇಶ ಮತ್ತು ದೇಶದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿತ್ತೇ.. ಎಂದು ಯೋಧರೊಬ್ಬರು ಬಹಿರಂಗ ವೇದಿಕೆಯಲ್ಲಿ ಪ್ರಶ್ನಿಸಿದ್ದಾರೆ. ದೇಶದ ಶತ್ರುಗಳು ಉಗ್ರರಲ್ಲ, ಮಾವೋವಾದಿಗಳಲ್ಲ, ನಕ್ಸಲರೂ ಅಲ್ಲ. ನಿಜವಾದ ಆತಂಕವಾದಿಗಳು ದೇಶದೊಳಗೇ ಇದ್ದಾರೆ ಎಂದಿದ್ದಾರೆ. ಯೋಧನ ಹೆಸರು, ವಿವರ ಇನ್ನೂ ಗೊತ್ತಾಗಿಲ್ಲ. ಜೆಎನ್ಯು ವಿವಿಯಲ್ಲಿ ಸಂಸತ್ ದಾಳಿಯ ರೂವಾರಿ ಉಗ್ರ ಅಫ್ಜಲ್ ಗುರುಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದರ ಬಗ್ಗೆ ಆ ಯೋಧ ಆತಂಕ ವ್ಯಕ್ತಪಡಿಸಿದ್ದಾರೆ.
ಸಂವಿಧಾನದಲ್ಲಿ ಭಾರತ್ ಮಾತಾಕಿ ಜೈ ಎಂದು ಹೇಳಬೇಕು ಎಂದು ಹೇಳಿಲ್ಲ. ವಂದೇ ಮಾತರಂ ಹಾಡಿ ಎಂದೂ ಕೂಡಾ ಹೇಳಿಲ್ಲ ಎಂದು ವಾದ ಮಾಡುವವರು, ಸಂವಿಧಾನದಲ್ಲಿ ಯಾರಿಗೂ ಚಡ್ಡಿ ಹಾಕಿಕೊಂಡು ಮಾನ ಕಾಪಾಡಿಕೊಳ್ಳಿ ಎಂದು ಹೇಳಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಜೆಎನ್ಯು ವಿವಿಯಲ್ಲಿ ಭಾರತೀಯ ಸೈನಿಕರ ವಿರುದ್ಧ, ಅಫ್ಜಲ್ ಗುರು ಪರ ಘೋಷಣೆ ಮೊಳಗಿತು ಎಂದು ಕೇಳಿದಾಗ ತಳಮಳವಾಯಿತು. ನಾವು ಯಾರಿಗಾಗಿ ಹೋರಾಡುತ್ತಿದ್ದೇವೆ ಎಂದು ಆತಂಕವಾಯಿತು ಎಂದು ಆ ಯೋಧ ಹೇಳಿದ್ಧಾರೆ. ಭಾರತದಲ್ಲಿದ್ದೀರಿ, ಭಾರತದಲ್ಲಿರುವವರೆಗೆ ಭಾರತಕ್ಕೆ ನಿಷ್ಠರಾಗಿರಿ ಎಂದು ಹೇಳಿದ್ದಾರೆ.
loading...
Post a Comment