Veerakesari 22:06
veerakesari.in
​RSS ಕಾರ್ಯಕರ್ತ ರುದ್ರೇಶ್ ಹತ್ಯೆ ಸಂಬಂಧ ಎನ್ ಐ ಎ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿದ್ದು  ಜೆಹಾದಿ ಉಗ್ರರ ಅಟ್ಟಹಾಸ ಬಯಲಾಗಿದೆ.ಈ ಸಂಬಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (pfi) ಬೆಂಗಳೂರು ನಗರ ಜಿಲ್ಲಾದ್ಯಕ್ಷನ ಸಹಿತ ಐವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
RSS​ ಮುಖಂಡ ರುದ್ರೇಶ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಎನ್ ಐ ಎ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಆಜಿಮ್​ ಷರೀಫ್​, ಮೊಹಮದ್​ ಮುಜೀಬುಲ್ಲಾ​, ಮೊಹಮದ್​ ಮಜರ್​, ವಾಸಿಮ್​ ಅಹಮದ್ ಮತ್ತು ಇರ್ಫಾನ್​ ಪಾಷ ವಿರುದ್ಧ ಚಾರ್ಜ್​ಶೀಟ್​ ಅನ್ನು ಶಕ್ರವಾರ ಎನ್ ಐ ಎ  ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ .ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಚಾರ್ಜ್ ಶೀಟ್ ನಲ್ಲಿ ಏನಿದೆ.?
ತನಿಖೆಯ ಪ್ರಕಾರ ಇದೊಂದು ಭಯೋತ್ಪಾದನಾ ಕೃತ್ಯ. ಹಿಂದೂಗಳಲ್ಲಿ  ಭಯ ಬಿತ್ತಲು ಈ ಕೃತ್ಯ ಎಸಗಲಾಗಿದೆ. ಕೊಲೆಗೂ ಮುನ್ನ ಬೆಂಗಳೂರಿನ ಚೋಟಾ ಚಾರ್ ಮಿನಾರ್ ಪಕ್ಕದ ಅಕ್ಸಾ ಮಸೀದಿಯಲ್ಲಿ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಎನ್ಐಎ ಹೇಳಿದೆ. ಆರ್.ಎಸ್.ಎಸ್ ಯೂನಿಫಾರ್ಮ್ ನಲ್ಲಿರುವ ಕನಿಷ್ಠ ಇಬ್ಬರನ್ನು ಕೊಲ್ಲಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಈ ಮೂಲಕ ಇಸ್ಲಾಂ ಮತ್ತು ಜಿಹಾದ್ ನ ಗುರಿಯನ್ನು ನಾವು ಸಾಧಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ನಾವು ಈ ಕೃತ್ಯ ಎಸಗಿದ್ದಾಗಿ ಆರೋಪಿಗಳುಹೇಳಿದ್ದಾರೆ ಎಂದೂ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಆರೋಪಿತರು ಎಸ್ ಡಿ ಪಿ ಐ /ಪಿ ಎಫ್ ಐ ಸಂಘಟನೆಗೆ ಸೇರಿದ ಕಾರ್ಯಕರ್ತರಾಗಿದ್ದು ,ಹೊಸದಾಗಿ rssಗೆ  ಸೇರಲು ಬಯಸುವವರಲ್ಲಿ ಭಯ ಹುಟ್ಟಿಸಲು ರುದ್ರೇಶ್ ರನ್ನು ಹತ್ಯೆ ಮಾಡಿದ್ದಾರೆಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ಶಿವಾಜಿನಗರದಲ್ಲಿ ರುದ್ರೇಶ್ ಹತ್ಯೆ ಮಾಡಿದ್ದ ಆರೋಪಿಗಳು, ಜೆಸಿ ನಗರದಲ್ಲಿ ಫಣೀಂದ್ರ, ಸಂಜಯನಗರದ ವೆಂಕಟೇಶ್​ ಬಾಬು, ಸೇರಿದಂತೆ ಒಟ್ಟು 17 ಕಡೆ ಇಂಥಾ ದಾಳಿ ಮಾಡಿದ್ದಾಗಿ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.ಅದೇನೇ ಇರಲಿ ರುದ್ರೇಶ್ ಹತ್ಯೆಗೆ ನೈಜ ಕಾರಣವೇನು ಎನ್ನುವುದು ಚಾರ್ಜ್ ಶೀಟ್'ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದ್ದು ಆರೋಪಿಗಳಿಗೆ ಯಾವ ಶಿಕ್ಷೆ ಕಾದಿದೆ ಎನ್ನುವುದೇ ಸದ್ಯಕ್ಕೆ ಉಳಿದಿರುವ ಪ್ರಶ್ನೆಯಾಗಿದೆ.
Source - TNWnews
loading...

Post a Comment

Powered by Blogger.