​ನಿನ್ನ ಕತ್ತಿ ಶತ್ರುವಿನ ಕತ್ತಿಗಿಂತ ಕಿರಿದಾಗಿದ್ದರೆ, ನೀನು ಒಂದು ಹೆಜ್ಜೆ ಮುಂದೆ ಹೋಗಿ ನಿಲ್ಲಬೇಕು  ,ಆಗ ನಿನ್ನ ಕತ್ತಿ ಶತ್ರುವಿನ ರುಂಡ ಹಾರಿಸಬಲ್ಲದು.
ನಾನು ಉಸಿರಾಡುವ ಒಂದೊಂದು ಕ್ಷಣವೂ ಮಾತೃಭೂಮಿಯ ಶ್ರೇಯಸ್ಸಿಗಾಗಿಯೇ ಮುಡಿಪು. ಧ್ಯೇಯವಿಲ್ಲದ, ತ್ಯಾಗವಿಲ್ಲದ, ಬಲಿದಾನವಿಲ್ಲದ ರೋಗಕೂಪದಿಂದ ದೊರಕುವ ಯಕಃಶ್ಚಿತ್ ಸಾವು ನನಗೆ ಬೇಡ.”
ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ ‘ಸ್ವಾತಂತ್ರ್ಯ ಹೋರಾಟ’ ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದೇಶದ ಬಗ್ಗೆ ನಾವಿಷ್ಟು ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆಗಳ ಆರಾಧಕರೂ ಆಗಿರುತ್ತಿರಲಿಲ್ಲವೇನೋ.
ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯ ಬಂದ ಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್.
ಅಪ್ರತಿಮ ಸ್ವಾತಂತ್ರ್ಯ ಯೋಧರಾದ ‘ವೀರ ಸಾವರಕರ್’ ಎಂದೇ ಖ್ಯಾತರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರು ಮೇ 28, 1883ರ ವರ್ಷದಲ್ಲಿ ಮಹಾರಾಷ್ಟ್ರದ ನಾಸಿಕ್ ಬಳಿಯ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಯಿಂದ ‘ವೀರ’ ಎಂಬ ಬಿರುದಿಗೆ ಪಾತ್ರರಾಗಿದ್ದರು.
ಭಾರತ ಮತ್ತು ಇಂಗ್ಲೆಂಡಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗಲೇ ಬ್ರಿಟಿಷರ ವಿರುದ್ಧ ಸಾವರಕರ್ ಸಿಡಿದೆದ್ದಿದ್ದರು. ಬಾಲ್ಯದಿಂದಲೂ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸುತ್ತ ಬಂದಿದ್ದ ಅವರು ಉತ್ತಮ ಬರಹಗಾರ, ಬ್ಯಾರಿಸ್ಟರ್‌,ಸಂಸ್ಕೃತ ಪಂಡಿತ, ಕವಿ, ಸಮಾಜ ಸುಧಾರಕ ಹಾಗೂ ದಾರ್ಶನಿಕರು.
ಸಾವರಕರ್ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ 1857ರ ಸಿಪಾಯಿ ದಂಗೆ ಬಗ್ಗೆ ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಪುಸ್ತಕ ಬರೆದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಆ ಪುಸ್ತಕವನ್ನು ಆಂಗ್ಲ ಆಡಳಿತ ನಿಷೇಧಿಸಿತ್ತು. ಕ್ರಾಂತಿಕಾರಿ ಸಂಘಟನೆ ಇಂಡಿಯಾ ಹೌಸ್ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ಬ್ರಿಟಿಷರು ಅವರನ್ನು 1910ರಲ್ಲಿ ಬಂಧಿಸಿದ್ದರು. ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಅವರಿಗೆ 50 ವರ್ಷ ಕಠಿಣ ಶಿಕ್ಷೆಯಾಗಿ ‘ಕಾಲಾಪಾನಿ’ ಶಿಕ್ಷೆಗೆ ಪ್ರಸಿದ್ಧಿ ಪಡೆದಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಿಡಲಾಯಿತು.
ನಿಲ್ಲಲು ಹೊತ್ತಿಲ್ಲದಂತೆ ಎಲ್ಲೆಲ್ಲಿಯೂ ಸದಾಕಾಲವೂ ಅಲೆಯಾಗುವ ಸಮುದ್ರದ ನಟ್ಟನಡುವೆ ವೃತ್ತಾಕಾರದಲ್ಲಿ 7 ಕಕ್ಷೆಗಳಲ್ಲಿ ಕಟ್ಟಲಾಗಿದ್ದ ಸೆಲ್ಯುಲಾರ್ ಬಂಧಿಖಾನೆಗೆ ಅಂದಿದ್ದ ಹೆಸರು “ಕಾಲಾಪಾನಿ”. 222 ಕೋಣೆಗಳಿದ್ದ ಇಲ್ಲಿ 600ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳು ಕಣ್ಣೀರಾಗಿದ್ದಾರೆ. ಕಾಲು ಚಾಚಿ ಮಲಗುವುದಿರಲಿ ತಲೆ ಎತ್ತಿ ಕುಳಿತುಕೊಳ್ಳಲೂ ಆಗದ ಕೋಣೆಗಳಲ್ಲಿ ಮಿಣುಕು ಬೆಳಕು ಬೀರುವ ಗವಾಕ್ಷಿಗಳಿವೆ. ಕಣ್ಣು ತೆರೆದಿರುವಾಗಲೆಲ್ಲಾ ಅಲ್ಲಿದ್ದವರಿಗೆ ಕಾಣುತ್ತಿದ್ದದ್ದು ಸಮುದ್ರ ಮತ್ತು ಸಮುದ್ರ ಮಾತ್ರ. ನೆತ್ತಿ ಕುದಿಸುವ ಬಿಸಿಲಿನಲ್ಲಿ ಬ್ರಿಟೀಷ್ ಅಧಿಕಾರಿಗಳು ಕೊಟ್ಟಾಗ ಕೊಡುವಷ್ಟು ನೀರನ್ನು ಕುಡಿದು ದಿನಕ್ಕೆ 18 ಗಂಟೆಗಳ ಕಾಲ ಮರದ ದಿಮ್ಮಿಗಳನ್ನು ಬೆನ್ನ ಮೇಲೆ ಹೊತ್ತು ತಂದು ಕತ್ತರಿಸಿ ಸಾಗಿಸಬೇಕಾದ ಕೆಲಸ ಸೇನಾನಿಗಳಿಗೆ. ಅಕ್ಕಪಕ್ಕದವರೊಡನೆ ಮಾತನಾಡುವುದು ನಿಷಿದ್ಧ. ಅಧಿಕಾರಿಗಳ ಮನೋಯಿಚ್ಛೆಯಂತೆ ಛಡಿ ಏಟುಗಳು, ಕಾದ ಮರಳಿನಲ್ಲಿ ಬೆತ್ತಲೆ ಮೈನ ಉಜ್ಜಾಟ. ಇವು ಸೌಮ್ಯ ಸ್ವರೂಪದ ಶಿಕ್ಷೆಗಳೆನಿಸಿದ್ದರೆ, ಕೈಕಾಲುಗಳನ್ನು ಕಟ್ಟಿ ನಳಿಕೆಯ ಮೂಲಕ ಶ್ವಾಸಕೋಶಗಳಿಗೆ ಬಿಸಿ ಹಾಲನ್ನು ಹುಯ್ಯುವುದು ತೀವ್ರ ರೂಪದ ಶಿಕ್ಷೆಯಾಗಿತ್ತು.ಇಂತಹ ಭಯಾನಕ ವಾತಾವರಣದಲ್ಲಿ ಜುಲೈ 4, 1911ರಿಂದ 1924ರವರೆಗೂ ಬಂಧಿಯಾಗಿದ್ದದ್ದು ವೀರ ಸಾವರ್ಕರ್.
ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ ‘ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ’ ಎಂದಾಗ ಸಾವರ್ಕರ್ ಜೋರಾಗಿ ನಕ್ಕು ’50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?’ ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು.
ಅದೇ ಸಮಯದಲ್ಲಿ ಸೆಗಾರ್ ಖಾನ್‍ನೊಡನೆ ನಿಕಟ ಸ್ನೇಹ ಬೆಳೆಯಿತು. ಆದರೆ ಅಲ್ಲೇ ಹತ್ತಿರದ ವೈಪರ್ ದ್ವೀಪದಲ್ಲಿ ಸೆಗಾರ್ ಖಾನ್‍ನನ್ನು ನೇಣಿಗೇರಿಸಿದ್ದನ್ನು ಕಣ್ಣಾರೆ ಕಂಡ ಸಾವರ್ಕರ್ ಹೆಚ್ಚು ಹೆಚ್ಚು ಅಂತರ್ಮುಖಿಯಾಗಿದ್ದು. 1913ರಲ್ಲಿ ಕಾಲಾಪಾನಿಗೆ ಭೇಟಿಯಿತ್ತ ಮಹಾತ್ಮ ಗಾಂಧಿಯವರನ್ನು ಸಾವರ್ಕರ್ ಕೇಳಿದ ಒಂದೇ ಮಾತು “ಇಲ್ಲಿನ ಬಂಧಿಗಳಿಗೆ ಅಕ್ಷರ ಕಲಿಸಿಕೊಡಲು ಅನುವು ಮಾಡಿಸಿಕೊಡಿ”.ಅಂತೂ ಅನುಮತಿ ಸಿಕ್ಕಿತ್ತು. ಸಾವರ್ಕರ್ ಜೊತೆಯವರನ್ನು ಸಾಕ್ಷರರನ್ನಾಗಿ ಮಾಡಿದ್ದಲ್ಲದೆ, ಈಗ ಜಗತ್ತಿನ 17 ಭಾಷೆಗಳಿಗೆ ಭಾಷಾಂತರಗೊಂಡಿರುವ “ಕಾಲಾಪಾನಿ” ಎನ್ನುವ ಕಥನವನ್ನೂ ರಚಿಸಿದ್ದು ಇಲ್ಲಿನ ಕೋಣೆಯಲ್ಲೇ. ಕವಿ, ನಾಟಕಕಾರ, ವಿಮರ್ಶಕ, ಚಿಂತಕ ಎಂದೆಲ್ಲಾ ಹೆಸರು ಮಾಡಿದ್ದ ಸಾವರ್ಕರ್ ಇಂಗ್ಲಿಷ್ ಕಲಿತು “Transportation of my Life” ಎನ್ನುವ ಕೃತಿಯನ್ನು ರಚಿಸಿದ್ದು ಹಾಗು ಹಲವಾರು ಕವನಗಳನ್ನು ಭಾಷಾಂತರಗೊಳಿಸಿದ್ದು ಈ ಜೇಲಿನಲ್ಲಿದ್ದಾಗಲೇ. ಲಂಡನ್‍ನಿಂದ ಪ್ರಕಟವಾಗುತ್ತಿದ್ದ ಮರಾಠಿ ಪಾಕ್ಷಿಕಕ್ಕೆ ಅಂಡಮಾನಿನ ಜೇಲಿನಿಂದ ಬರೆಯುತ್ತಿದ್ದ ಏಕೈಕ ಪತ್ರಕರ್ತ ವೀರ ಸಾವರ್ಕರ್.ಗಾಂಧಿ ಮತ್ತು ಪಟೇಲರ ಮನವಿಯಂತೆ 1924ರಲ್ಲಿ ಸಾವರ್ಕರ್‌ನನ್ನು ಪುಣೆಯ ಬಂಧಿಖಾನೆಗೆ ವರ್ಗಾಯಿಸಲಾಯಿತು. ಗಾಂಧಿ ಹತ್ಯೆಯಲ್ಲಿ ಒಂದೊಮ್ಮೆ ಹಿಂದೂ ಮಹಾಸಭೆಯ ಅಧ್ಯಕ್ಷನಾಗಿದ್ದ ಸಾವರ್ಕರ್‌ನ ಪಾತ್ರವೂ ಇದೆ ಎನ್ನುವ ಆಪಾದನೆಯಿಂದ ಸಾಕಷ್ಟು ಮನನೊಂದ ವೀರ ತಮ್ಮ 83ನೇ ವಯಸ್ಸಿನಲ್ಲಿ 1966ರ ಫ಼ೆಬ್ರವರಿ 1ರಂದು ಆಮರಣಾಂತ ಉಪಾವಾಸ ಕೈಗೊಂಡು ಫೆ. 26ನೇ ದಿನಾಂಕ ಬೆಳಗ್ಗೆ 10.30ಕ್ಕೆ ದೇಹತ್ಯಾಗ ಮಾಡಿ ಅಮರರಾಗಿದ್ದು ಇತಿಹಾಸ. ಸಮವಸ್ತ್ರ ಧರಿಸಿದ 2500 ಸ್ವಯಂಸೇವಕರಿಂದ ಗೌರವ ಪಡೆದ ಏಕೈಕ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಬರೆದ ಕೊನೆಯ ಕವಿತೆಯ ಸಾಲೊಂದು ಹೇಳುತ್ತೆ “ಘಳಿಗೆಯಲಿ ಕ್ಷಣವೊಂದು ಕಳೆದು ಹೋದಂತೆ, ಓ ಗೆಳೆಯಾ, ಒಮ್ಮೆ ಕಳೆದದ್ದು ಮತ್ತೆಂದೂ ಬಾರದಂತೆ.
ದೇಶಕ್ಕಾಗಿ ತನ್ನ ಜೀವನಪೂರ್ತಿ ಕಷ್ಟಪಟ್ಟು ಹಗಲಿರುಳೂ ಕಷ್ಟಗಳ ನೆರಳಿನಲ್ಲಿ ಬದುಕಿದ ಈ ಸ್ವಾತಂತ್ರ್ಯ ಹೋರಾಟಗಾರರ ಚೇತನಕ್ಕೆ ನಮ್ಮ ನಮನ.
ಆ ಮಹಾನ್ ನಾಯಕನನ್ನು ಈ ದೇಶ, ಇಲ್ಲಿನ ಸರಕಾರ ನಡೆಸಿಕೊಂಡ ರೀತಿ ಮಾತ್ರ ಅತ್ಯಂತ ಹೇಯ. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. ಮುಂದೆ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಘೋಷಿಸಿತು. 1950 ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್‌ರನ್ನು ಬಂಧಿಸಿ ಸರ್ಕಾರ ಬೆಳಗಾವಿ ಜೈಲಿಗೆ ಕಳಿಸಿತು. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ನೆಹರೂ ಸರ್ಕಾರ ತೋರಲಿಲ್ಲ. ಸಾವರ್ಕರ್ ಬಿಡುಗಡೆಗೆ ಆಗ್ರಹಿಸಿ ಸಹಿ ಸಂಗ್ರಹ ಮಾಡಿ ತಂದಾಗ ನೆಹರು ಅದನ್ನು ಹರಿದೆಸೆದಿದ್ದರು. ಸಾವರ್ಕರ್ ಗೌರವಾರ್ಥ ಅವರ ಅಭಿಮಾನಿಗಳು ‘ಮೃತ್ಯುಂಜಯ ದಿವಸ’ ಆಚರಿಸಿದಾಗ ಅದರ ವರದಿಯನ್ನು ಆಕಾಶವಾಣಿ ಬಿತ್ತರಿಸದಂತೆ ನೆಹರೂ ನೋಡಿಕೊಂಡರು. ಕೊನೆಗೆ ಸಾವರ್ಕರ್ ನಿಧನರಾದಾಗಲೂ ಅವರ ಪಾರ್ಥಿವವನ್ನು ಹೊತ್ತೊಯ್ಯಲು ಗನ್-ಕ್ಯಾರೇಜ್ ಸಿಗದಂತೆ ಮಾಡಲಾಯಿತು. ಸಂಸತ್ತಿನಲ್ಲಿ ಕನಿಷ್ಠ ಶ್ರದ್ಧಾಂಜಲಿಯನ್ನೂ ಅರ್ಪಿಸಲಿಲ್ಲ. ಅವರು ಸಂಸತ್ತಿನ ಸದಸ್ಯರಲ್ಲ ಎಂಬ ಪೊಳ್ಳು ನೆಪ ನೀಡಿದ್ದರು ನೆಹರು. ಆದರೆ ರಷ್ಯಾದ ಸ್ಟಾಲಿನ್ ಸತ್ತಾಗ ಸಂಸತ್ತು ಕಂಬನಿ ಮಿಡಿದಿತ್ತು. 3 ವರ್ಷಗಳ ಹಿಂದೆ ಅಂಡಮಾನಿನ ಜೈಲಿನಲ್ಲಿ ಸಾವರ್ಕರ್ ಸ್ಮರಣೆಗಾಗಿ ಹಾಕಿದ್ದ ಫಲಕವನ್ನು ಕಿತ್ತೆಸೆಯುವ ನೀಚ ಕಾರ್ಯಕ್ಕೂ ನೆಹರು ವಂಶದ ಸರ್ಕಾರ ಮುಂದಾಯಿತು.ಇಂತಹ ನಿರಭಿಮಾನಿಗಳ ದೇಶದಲ್ಲಿ ಹುಟ್ಟಿದ್ದೇ ಸಾವರ್ಕರ್ ಮಾಡಿದ ತಪ್ಪೇನೋ?
ದೇಶಕ್ಕಾಗಿ ತನ್ನ ಜೀವನಪೂರ್ತಿ ಕಷ್ಟಪಟ್ಟು ಹಗಲಿರುಳೂ ಕಷ್ಟಗಳ ನೆರಳಿನಲ್ಲಿ ಬದುಕಿದ ಈ ಸ್ವಾತಂತ್ರ್ಯ ಹೋರಾಟಗಾರರ ಚೇತನಕ್ಕೆ ನಮ್ಮ ನಮನ.
ನನ್ನಲ್ಲಿ ದೇಶ ಭಕ್ತಿಯ ಮತ್ತು ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸಿದ ಹೆಮ್ಮಯ ಭಾರತಾಂಬೆಯ ಪುತ್ರ...ದೇಶಕ್ಕಾಗಿ ತನ್ನ ಜೀವನಪೂರ್ತಿ ಕಷ್ಟಪಟ್ಟು ಹಗಲಿರುಳೂ ಕಷ್ಟಗಳ ನೆರಳಿನಲ್ಲಿ ಬದುಕಿದ ಈ ಸ್ವಾತಂತ್ರ್ಯ ಹೋರಾಟಗಾರರ ಚೇತನಕ್ಕೆ ನಮ್ಮ ನಮನ.

​ಸಾವರಕರರ ಬಗ್ಗೆ ಮತ್ತೊಂದಿಷ್ಟು :
ಯುದ್ಧವಿಲ್ಲದೇ ಸ್ವಾತಂತ್ರ್ಯ ದಕ್ಕದು ಗೆಳೆಯಾ! 
ಸ್ವರಾಜ್ಯ ಬೇಕಿದ್ದರೆ, ತಗೋ ಕತ್ತಿ ತೋರು ಕೆಚ್ಚೆದೆಯಾ! !
-ಸ್ವಾತಂತ್ರ್ಯ ವೀರ ಸಾವರ್ಕರ್
ದೇಶವನ್ನು ಬಡಿದೆಚ್ಚರಿಸುವ ಸಾಹಿತ್ಯ ಬರಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಗೆಳೆಯರೊಂದಿಗೆ ನೇಣು ಸ್ವೀಕರಿಸುತ್ತೇನೆ , ಕಾಲಾಪಾನಿಯಾದರೂ ಸಹಿಸುತ್ತೇನೆ.  ನಾನೇ ಮುಂದೆ ನಿಲ್ಲುವುದರಿಂದ ಜನರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ದೊರೆಯುತ್ತದೆ. ಕ್ರಾಂತಿ ಇನ್ನೂ ಬೇಗ ಸಾಧ್ಯವಾಗುತ್ತದೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ನಿನ್ನ ಕತ್ತಿ ಶತ್ರುವಿನ ಕತ್ತಿಗಿಂತ ಕಿರಿದಾಗಿದ್ದರೆ, ನೀನು ಒಂದು ಹೆಜ್ಜೆ ಮುಂದೆ ಹೋಗಿ ನಿಲ್ಲಬೇಕು  ,ಆಗ ನಿನ್ನ ಕತ್ತಿ ಶತ್ರುವಿನ ರುಂಡ ಹಾರಿಸಬಲ್ಲದು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಿಂಧುವಿಲ್ಲದ ಹಿಂದುವಿಲ್ಲ ! ಅಖಂಡವಾಗಿಲ್ಲದಿದ್ದರೆ ಅದು ಹಿಂದುಸ್ಥಾನವೇ ಅಲ್ಲ!
-ಸ್ವಾತಂತ್ರ್ಯ ವೀರ ಸಾವರ್ಕರ್
ಸತ್ಯಾಗ್ರಹ – ಅಸಹಕಾರಗಳು ಸ್ವಾತಂತ್ರ್ಯದ ಮಾರ್ಗವಲ್ಲ . ಚರಖಾದಿಂದ ನೂಲಷ್ಟೇ ಬಂದೀತು. ಸ್ವಾತಂತ್ರ್ಯವಲ್ಲ.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಘರ್ ವಾಪ್ಸಿ (ಮರಳಿ ಮಾತೃ ಧರ್ಮದ) ಕಾರ್ಯ ಮಾಡುತ್ತಿರುವಾಗ , ಒಬ್ಬ ಮುಸ್ಲಿಂ ನಾಯಕ ಶೌಕತ್ ಅಲಿ ವಿರೋಧ ಮಾಡ್ತಾನೆ. ಅವರಿಬ್ಬರ ನಡುವಿನ ಸಂವಾದ ಹೀಗಿದೆ,
ಶೌಕತ್ ಅಲಿ : ನಿಮ್ಮ ಹಿಂದು ಸಂಘಟನೆ, ಶುದ್ಧಿ ಚಳುವಳಿಗಳಿಂದ ನಾವೆಲ್ಲ ಕೋಪಗೊಂಡಿದ್ದೇವೆ. ಈಗಲೇ ತಿದ್ದಿಕೊಳ್ಳದಿದ್ದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ.
ಸಾವರ್ಕರ್ : ಬಿಡಿ ಬಿಡಿ.  ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಬೆದರಲಿಲ್ಲ, ಇನ್ನು ಮುಸ್ಲಿಂ ಗೂಂಡಾಗಳ ಚಾಕು-ಚೂರಿಗಳಿಗೆ ಹೆದರಬೇಕೆ? ಎಂದು ನಕ್ಕರು.
ಶೌಕತ್ ಅಲಿ: ನಮ್ಮ ರಕ್ಷಣೆಗೆ ಬೇಕಾದಷ್ಟು ರಾಷ್ಟ್ರಗಳಿವೆ .  ನಾವು ಇಲ್ಲಿ ಸರಿಯಾಗಲಿಲ್ಲವೆಂದರೇ ಹೊರಟುಬಿಡುತ್ತೇವೆ. 
ಸಾವರ್ಕರ್ : ನಮ್ಮ ತಡೆಯಿಲ್ಲ, ದಿನನಿತ್ಯವೂ ಫ್ರಾಂಟಿಯರ್ ರೈಲ್ ಅತ್ತಕಡೆಗೆ ಓಡುತ್ತದೆ ಹೋಗಿ ಹೋಗಿ ಎಂದರು ವ್ಯಂಗ್ಯಭರಿತ ದನಿಯಲ್ಲಿ.
ಶೌಕತ್ ಅಲಿ : ನಿಮ್ಮಂಥ ಕುಳ್ಳನನ್ನು ನಾನು ಒಂದೇ ಹೊಡೆತಕ್ಕೆ ಮುಗಿಸಬಲ್ಲೆ.
ಸಾವರ್ಕರ್ : ಅಫ್ಜಲ್ ಖಾನನ ಮುಂದೆ ಶಿವಾಜಿಯೂ ಕುಳ್ಳನೇ, ಅವರಿಬ್ಬರ ಭೇಟಿಯ ಫಲಶ್ರುತಿ ನಿಮಗೆ ಗೊತ್ತೇ ಇದೆ. ನಾನು ನಿಮ್ಮ ಸವಾಲನ್ನು ತಿರಸ್ಕರಿಸಲಾರೆ,  ಬನ್ನಿ ಎಂದರು.
ತಾಯಿ ಭಾರತೀಯೂ ಮುಕ್ತಿಗಾಗಿ ಯಾರೂ ಮೂಸದ ನಮ್ಮ ಮನೆಯಂಗಳದ ಹೂಗಳನ್ನು ಕಿತ್ತು ಭಗವಂತನ ಚರಣಗಳಿಗೆ ಅರ್ಪಿಸುತ್ತಿದ್ದಾಳೆ. ಆಕೆ ಪದೇ-ಪದೇ ನಮ್ಮ ತೋಟಕ್ಕೆ ಬರಲಿ, ಹೂ ಕಿತ್ತು ಅರ್ಪಣೆಗೈಯ್ಯಲಿ. ನವರಾತ್ರಿಯ ಪರ್ವವನ್ನು ಆಕೆ ಹೆಮ್ಮೆಯಿಂದ ಆಚರಿಸಲಿ . ಪ್ರತಿ ದಿನ ಹೊಸದೊಂದು ಹೂ ಅರ್ಪಿಸಲಿ. ಅದು ನಮಗೆ ಹೆಮ್ಮೆಯ ವಿಚಾರ.
-ಸ್ವಾತಂತ್ರ್ಯ ವೀರ ಸಾವರ್ಕರ್ ( ಮಗ ತೀರಿಕೊಂಡಾಗ ಹೇಳಿದ ಮಾತು)
ಅಖಂಡವಾಗದೆ ಮಣ್ಗೂಡಿದರೂ ಚಿಂತೆಯಿಲ್ಲ . ನಿನ್ನ ಸೇವೆಗೈಯ್ಯುತ್ತೇವೆಂಬ ಶಪಥವನ್ನು ನಾವು ಪೂರ್ಣಗೊಳಿಸಿದ್ದೇವೆ . ಅದೇ ಹೆಮ್ಮೆ.  ನಾವು ಆಲೋಚಿಸಿ ಈ ಹಾದಿ ಹಿಡಿದಿದ್ದೇವೆ.  ಎಲ್ಲದರ ಅರಿವಿದ್ದೆ ವೀರಕಂಕಣ ತೊಟ್ಟಿದ್ದೇವೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಿಂಧೂ ಉಗಮಸ್ಥಾನದಿಂದ ಹಿಡಿದು ದಕ್ಷಿಣದ ಸಾಗರದವರೆಗಿನ ಭಾರತ ಭೂಮಿಯನ್ನು ಪಿತೃಭೂಮಿ ಹಾಗೂ ಪುಣ್ಯಭೂಮಿ ಎಂದು ಕಾಣುವವನೇ “#ಹಿಂದುತ್ವ#
 -ಸ್ವಾತಂತ್ರ್ಯ ವೀರ ಸಾವರ್ಕರ್
ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯವೊಂದರ ಹಾಸ್ಟೆಲ್ಲಿನಿಂದ ಹೊರದಬ್ಬಲ್ಪಟ್ಟ ಮೊದಲ ವಿದ್ಯಾರ್ಥಿ #ಸಾವರ್ಕರ್.
ಹುಳುಗಳಂತೆ ಹುಟ್ಟುತ್ತಾರೆ, ಬದುಕಲಿಕ್ಕಾಗಿ ಬದುಕುತ್ತಾರೆ.
ಯಾರು ದೇಶಕ್ಕಾಗಿ ಸಾಯುತ್ತಾರೋ ಅವರು ಮಹಾಪುರುಷರ ಸಾಲಿಗೇರುತ್ತಾರೆ.
-ಸ್ವಾತಂತ್ರ್ಯ ವೀರ ಸಾವರ್ಕರ್
ರಾಜಕಾರಣ ಹಿಂದುತ್ವ ಪ್ರೇರಿತವಾಗಬೇಕು, ಹಿಂದು ಸಮಾಜದ ಸೈನಿಕೀಕರಣವಾಗಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸ್ವಾತಂತ್ರ್ಯಾ ನಂತರ ಕ್ರಾಂತಿಕಾರಿಗಳ ನೆನಪೇ ಉಳಿಬಾರದೆಂದು ಬಯಸಿದ ಆ ದೇಶದ್ರೋಹಿ ನೆಹರೂವಿನ ಸರ್ಕಾರ ಅಂಡಮಾನಿನ ಸೆಲ್ಯುಲಾರ್ ಜೈಲನ್ನು ನಿರ್ನಾಮ ಮಾಡಬೇಕೆಂದು ಕೊಂಡಿತ್ತು.
ಅಂದಹಾಗೆ ಆ ಅಂಡಮಾನ್ ಸೆಲ್ಯುಲಾರ್ ಜೈಲ್ ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಜೈಲು. ಭಾರತೀಯರ ಶ್ರದ್ಧಾಕೇಂದ್ರ.
ಆದ ಕಾರಣವೇ ನೆಹರೂ ಅದನ್ನು ನಿರ್ನಾಮ ಮಾಡಲು ಬಯಸಿದ್ದ.
“ದೇಶಭಕ್ತಿಯ ಈ ವ್ರತವನ್ನು ನಾವು ಕಣ್ಣುಜ್ಜಿ ಸ್ವೀಕರಿಸಿಲ್ಲ.  ಇತಿಹಾಸದ ಪ್ರಖರ ಬೆಳಕಿನಲ್ಲಿ ಈ ಮಾರ್ಗವನ್ನು ಪರೀಕ್ಷಿಸಿದ್ದೇವೆ. ದೃಢಪ್ರತಿಜ್ಞೆಯೊಂದಿಗೆ ಈ ದಿವ್ಯಾಗ್ನಿಯಲ್ಲಿ ಭಸ್ಮಗೊಳ್ಳುವ ನಿಶ್ಚಯ ಮಾಡಿದ್ದೇವೆ. ಆತ್ಮ ಬಲಿದಾನದ ವ್ರತವನ್ನು ನಾವು ಸ್ವೀಕರಿದ್ದೇವೆ.”
-ಸ್ವಾತಂತ್ರ್ಯ ವೀರ ಸಾವರ್ಕರ್
ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವಾತಂತ್ರ್ಯ ಬಂದಿಲ್ಲ, ಬರುವುದೂ ಇಲ್ಲ.  ಬಂದೂಕಿನಿಂದ ಯೋಜನೆ ಮಂಡಿಸಿದಾಗ ಮಾತ್ರ ನೀವು ಸ್ವಾತಂತ್ರ್ಯ ಪಡೆಯಬಲ್ಲಿರಿ.
-ಸ್ವಾತಂತ್ರ್ಯ ವೀರ ಸಾವರ್ಕರ್
ಎರಡೆರಡು ಆಜನ್ಮ ಶಿಕ್ಷೆ ಪಡೆದಿರುವ ಜಗತ್ತಿನ ಮೊದಲ ಕೈದಿ #ಸಾವರ್ಕರ್.
ಸಾವರ್ಕರ್ ನಿಧನರಾದಾಗ ಲೋಕಸಭೆ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಅದನ್ನು ಆಗಿನ ದೇಶದ್ರೋಹಿ ನೆಹರು ಪೋಷಿತ ಸಭಾಧ್ಯಕ್ಷರು ತಿರಸ್ಕರಿಸಿದರು. ಸಾವರ್ಕರ್ ಈ ಸಂಸತ್ತಿನ ಸದಸ್ಯರಾಗಿತಲಿಲ್ಲ ಎಂಬ ಕಾರಣ ನೀಡಿ. ಆದರೇ ಅದೇ ಸಂಸತ್ತು ಸದಸ್ಯರಲ್ಲದ ಗಾಂಧೀಜಿಗು, ಈ ದೇಶದವನೇ ಅಲ್ಲದ ಸ್ಟಾಲಿನ್ನನಿಗೂ ಗೌರವಾರ್ಪಣೆ ಮಾಡಿತ್ತು.
ಪ್ರಚ್ಛನ್ನ ಸಮರ ಸಾಕು, ಪ್ರತ್ಯಕ್ಷ ಯುದ್ಧದತ್ತ ಹೆಜ್ಜೆ ಹಾಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ನಮ್ಮ ದೇಶ ದಾಸ್ಯದ ಕೂಪದಲ್ಲಿ ನರಳುತ್ತಿದೆವ. ನಾನು ಹೊರದೇಶಕ್ಕೆ ಹೋಗುತ್ತಿರುವ ಉದ್ದೇಶ ಒಂದೇ, ಹಿಂದುಸ್ಥಾನದ ಋಣ ತೀರಿಸಲು.
-ಸ್ವಾತಂತ್ರ್ಯ ವೀರ ಸಾವರ್ಕರ್
ನಾವು ರಾಮಾಯಣ, ಭಾಗವತಗಳನ್ನು ಪಾರಾಯಣ ಮಾಡುವಂತೆ , ಸ್ವಾತಂತ್ರ್ಯ ಲಕ್ಷ್ಮಿಯ ಇತಿಹಾಸವನ್ನು ಪಾರಾಯಣ ಮಾಡಬೇಕು.
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಅನುಭವಿಸಿದಷ್ಟು ಕಷ್ಟ, ಕೋಟಲೆಗಳನ್ನು, ದೀರ್ಘಕಾಲದ ಕಠಿಣ ಕಾರಾಗೃಹವನ್ನು ಅನುಭವಿಸಿದವರು ಭಾರತದಲ್ಲಿರಲಿ ,ಜಗತ್ತಿನಲ್ಲಿಯೇ ವಿರಳ. ಎಲ್ಲವೂ ದೇಶಕ್ಕಾಗೇ.
ಯಾವಾಗ ಕಣ್ಣು ತೆರೆಯುತ್ತೋ ಆಗ ಭೂಮಿ ಹಿಂದೂಸ್ಥಾನದಾಗಿರಲಿ
ಯಾವಗ ಕಣ್ಣು ಮುಚ್ಚುತ್ತೋ.. ಆಗ ವಿಚಾರ ಹಿಂದೂಸ್ಥಾನದಾಗಿರಲಿ
ನಾನು ಸತ್ತೋದರು ಚಿಂತಯಿಲ್ಲ  ಆದರೆ ಸಾಯೋವಾಗಲು ಮಣ್ಣು  ಹಿಂದೂಸ್ಥಾನದಾಗಿರಲಿ. ….
-ಸ್ವಾತಂತ್ರ್ಯ ವೀರ ಸಾವರ್ಕರ್
ಸಾವರ್ಕರ್ ಅವರ ಹಿತೈಷಿಗಳು ಕಾಂಗ್ರೆಸ್ಸನ್ನು ಸೇರುವಂತೆ ಕೇಳಿಕೊಂಡಾಗ ಸಾವರ್ಕರ್ ಹೇಳ್ತಾರೆ.
ನಾನು ಕಾಂಗ್ರೆಸ್ಸಿನ ಅನುಯಾಯಿಗಲು ಒಪ್ಪಿದರೆ ಆತ್ಮ ದ್ರೋಹಿಯು, ರಾಷ್ಟ್ರದ್ರೋಹಿಯು ಆಗಿರುತ್ತಿದ್ದೆ.
ನಿಮಗೆಲ್ಲ ಶತ್ರು ಯಾರೆಂದು ಗೊತ್ತಿದೆ. ಈಗ ನೇರವಾಗಿ ಸೈನ್ಯಕ್ಕೆ ಸೇರಿ. ಸರಿಯಾದ ಸಮಯಕ್ಕೆ ಆಯುಧಗಳನ್ನು ಶತ್ರುವಿನಡೆಗೆ ತಿರುಗಿಸಿ ಅಷ್ಟೇ !!
ಒಪ್ಪಂದಗಳ ಬಗ್ಗೆ ಚಿಂತಿಸಬೇಡಿ. ಆ ಒಪ್ಪಂದಗಳನ್ನು ತಿರುಗಿಸಿದರೆ ಅದು ಬರಿಯ ಹಾಳೆ. ಅಲ್ಲಿ ಹೊಸದೊಂದು ಒಪ್ಪಂದ ಬರೆದರಾಯಿತು!
ಜಗತ್ತಿನಲ್ಲಿ ಎಲ್ಲೂ ಹಾಳೆಯ ಮೇಲೆ ಸ್ವತಂತ್ರ ಬಂದಿಲ್ಲ, ಬರುವುದೂ ಇಲ್ಲ.
( ಭಾರತೀಯರಿಗೆ ಸೈನ್ಯಕ್ಕೆ ಸೇರಲು ಸಾವರ್ಕರ್ ಪ್ರೇರೆಪಿಸುತ್ತಿದ್ದ ಮಾತುಗಳು )
ಸಾವರ್ಕರ್ ಸಿಕ್ಕ ಸಿಕ್ಕಲ್ಲಿ ಗುಂಡು ಹೊಡೆದು ಅದನ್ನೆ ಕ್ರಾಂತಿ ಎನ್ನುತ್ತಿರಲಿಲ್ಲ. ,
ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮರ ಲೇಖಕರನ್ನು ಮೀರಿಸುವಷ್ಟು ಪ್ರತಿಭಾವಂತ,  ಪಿಸ್ತೂಲು ಹಿಡಿದರೆ ಎದುರಾಳಿಗಳ ರಕ್ತವೇ ತಣ್ಣಗಾಗುತ್ತಿತ್ತು,  ಮಾತಿಗೆ ನಿಂತರೆ ಮೈಯೆಲ್ಲಾ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ.

“ಎಲೈ ಮೃತ್ಯುವೇ, ಬರುವುದಿದ್ದರೆ ನೀನೊಬ್ಬನೇ ಬಾ, ನಿನ್ನೊಂದಿಗೆ ರೋಗದ ಸೇನೆಯನ್ನು ಕರೆತಂದು ನನ್ನನ್ನು ನಿಷ್ಕ್ರಿಯನನ್ನಾಗಿ ಮಾಡದಿರು! ನಾನು ಉಸಿರಾಡುವ ಒಂದೊಂದು ಕ್ಷಣವೂ ಮಾತೃಭೂಮಿಯ ಶ್ರೇಯಸ್ಸಿಗಾಗಿಯೇ ಮುಡಿಪು. ಧ್ಯೇಯವಿಲ್ಲದ, ತ್ಯಾಗವಿಲ್ಲದ, ಬಲಿದಾನವಿಲ್ಲದ ರೋಗಕೂಪದಿಂದ ದೊರಕುವ ಯಕಃಶ್ಚಿತ್ ಸಾವು ನನಗೆ ಬೇಡ.”
– ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್
Mahesh Hiremath

Post a Comment

Powered by Blogger.