Veerakesari 10:43
loading...
ಹಿಂದುಸ್ತಾನ :  ನಾವು ಭಾರತದಲ್ಲಿ ಕಾಂಗ್ರೆಸ್ ನಡೆಸಿದ ಅದೆಷ್ಟೋ ಭ್ರಷ್ಟಾಚಾರಗಳನ್ನು, ದರೋಡೆಗಳನ್ನು, ಮೋಸ ವಂಚನೆಗಳ ಬಗ್ಗೆ ಕೇಳಿರಬಹುದು ಆದರೆ ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭಾರತದ ಮುಕುಟ ಕಾಶ್ಮೀರದ “ಸಿಯಾಚಿನ್” ಭೂ ಪ್ರದೇಶವನ್ನು ಪಾಕಿಸ್ತಾನಕ್ಕೆ ದಾನವಾಗಿ ನೀಡ ಬಯಸಿದ್ದರು, ಇದರ ಬಗ್ಗೆ ಗೊತ್ತೇ…???
ಹೌದು ಈ ಆಘಾತಕಾರಿ ಸುದ್ದಿಯನ್ನು “ವಿಕಿಲೀಕ್ಸ್” ಕೆಲವು ದಿನಗಳ ಹಿಂದೆ ಬಹಿರಂಗಪಡಿಸಿದೆ. ವರದಿ ಪ್ರಕಾರ ಮನಮೋಹನ್ ಸಿಂಗ್ ಸರ್ಕಾರವು ಕಾಶ್ಮೀರ ವಿಷಯವನ್ನು ನಿರ್ವಹಿಸುವಲ್ಲಿ ಅಸಮರ್ಥವಾಗಿತ್ತು, ಪಾಕಿಸ್ತಾನದಿಂದ ಕುಮ್ಮಕ್ಕಿನಿಂದ ಜಮ್ಮುಕಾಶ್ಮೀರದಲ್ಲಿ ಆಗುತ್ತಿದ್ದ ಗಲಭೆ ನಿಲ್ಲಿಸಲು ಸಾಧ್ಯವಾಗದೆ, ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಆದ ದಾಳಿಗಳಿಂದ ಕಂಗೆಟ್ಟು ಮನಮೋಹನ್ ಸಿಂಗ್ ಸರ್ಕಾರ ಪಾಕಿಸ್ತಾನ ಮುಂದೆ ತಲೆಬಾಗಿ ಸಿಯಾಚಿನ್ ಅನ್ನು ಅವರಿಗೆ ದಾನವಾಗಿ ಕೊಡ ಬಯಸಿದ್ದರು, ಇದೆಲ್ಲದರ ಮಾಸ್ಟರ್ ಮೈಂಡ್ ಇಟಲಿಯ ಸೋನಿಯಾ ಎಂಬುದು ಎಲ್ಲರಿಗೂ ತಿಳಿದ ವಿಷಯ.
ಸಿಯಾಚಿನ್ ದಾನ ಮಾಡಿದರೆ ಪಾಕಿಸ್ತಾನ ತನ್ನ ನರಿಬುದ್ದಿ ಬಿಡಬಹುದು, ಗಡಿರೇಖೆಯಲ್ಲಿ ದಾಳಿಗಳನ್ನು ನಿಲ್ಲಿಸಬಹುದು ಎಂಬುದು ಅವರ ಪ್ಲಾನ್ ಆಗಿತ್ತು. ಹೀಗೆ ಮುಂದೆ ತಮ್ಮದೇ ಸರ್ಕಾರ ಆಡಳಿತಕ್ಕೆ ಬರಬಹುದು ಎಂದು ತಿಳಿದಿದ್ದರು.
ಆದರೆ ಭಾರತೀಯ ಸೇನೆ ಇದಕ್ಕೆಲ್ಲ ಜಗ್ಗದೆ ಸರ್ಕಾರದ ಈ ಕ್ರಮವನ್ನು ಸಮರ್ಥವಾಗಿ ಎದುರಿಸಿ ಸಿಯಾಚಿನ್ ಭಾರತದ ಕೈ ತಪ್ಪಿ ಹೋಗುವುದರಿಂದ ತಡೆದಿತ್ತು ಇಲ್ಲವಾದರೆ ನಾವು ನೆಹರೂ ತನ್ನ ರಾಜಕೀಯ ಲಾಭಕ್ಕಾಗಿ ಅಖಂಡ ಭಾರತ ತುಂಡರಿಸಿ ಸಿಂಧ್,ಬಲುಚಿಸ್ತಾನ ಹಾಗೂ ಕಾಶ್ಮೀರದ ಅರ್ಧಭಾಗ ಕಳೆದುಕೊಂಡ ಹಾಗೇ ಸಿಯಾಚಿನ್ ಕೂಡ ಕಳೆದುಕೊಳ್ಳಬೇಕಾಗಿತ್ತು.
ಸಿಯಾಚಿನ್ ಕೊಟ್ಟರೆ ಪಾಕ್ ಸುಮ್ಮನಾಗುತ್ತಿತ್ತಾ…?
ಖಂಡಿತಾ ಇಲ್ಲ…ಪಾಕಿಸ್ತಾನ ಈಗಾಗಲೇ ಅರ್ಧ ಕಾಶ್ಮೀರವನ್ನು ಅತಿಕ್ರಮಿಸಿಕೊಂಡಿದೆ ,ಆ ಭೂಬಾಗಗಳಲ್ಲಿ ಭಯೋತ್ಪಾದಕರಿಗೆ ಭಾರತದ ವಿರುದ್ಧ ದಾಳಿ ಮಾಡಲು ನೆಲೆಗಳನ್ನು ಕಟ್ಟಿಸಿಕೊಟ್ಟಿದೆ, ಹಾಗೇನೇ ಸಿಯಾಚೀನ್ ಕೂಡ ಉಗ್ರರ ಪಾಲಾಗುತ್ತಿತ್ತು.ಇದರಿಂದ ಅವರಿಗೆ ಕಾಶ್ಮೀರದ ಮೇಲೆ ಸಂಪೂರ್ಣ ಪ್ರಾಬಲ್ಯ ಸಿಗುತ್ತಿತ್ತು. ಭಾರತಕ್ಕೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಆಗುತ್ತಿತ್ತು.
ಪಾಕಿಸ್ತಾನ ಕಾರ್ಗಿಲ್ ಮೇಲೆ ಆಕ್ರಮಣ ಮಾಡಿದಾಗ ಭಾರತ ತುಂಬಾ ಬುದ್ಧಿಶಕ್ತಿ ಉಪಯೋಗಿಸಿ ಸಿಯಾಚಿನ್ ಪ್ರದೇಶದಿಂದ ಪಾಕಿಸ್ತಾನಿ ಜಿಹಾದಿ ಸೈನಿಕರನ್ನು ಹಿಮ್ಮೆಟ್ಟಿಸಿತ್ತು , ಆದರೂ ನಮ್ಮ ಸೇನೆಯ 500 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಅದಕ್ಕಿಂತ ಮೊದಲು 1984 ರಲ್ಲಿ ಮೇಘದೂತ್ ಕಾರ್ಯಾಚರಣೆಯಲ್ಲಿ 890 ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದರು.
ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಕೇವಲ ಓಟಿಗಾಗಿ, ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳನ್ನು ಮರೆತು ಶತ್ರು ರಾಷ್ಟ್ರಕ್ಕೆ ತಲೆಬಾಗ ಹೊರಟಿದ್ದು ನಿಜವಾಗಿಯೂ ಭಾರತಕ್ಕೆ ಕಾಂಗ್ರೆಸ್ ಸರ್ಕಾರ ಮಾಡಿದ ದ್ರೋಹ. ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಭದ್ರತೆಗಾಗಿ ಖರ್ಚು ಮಾಡಿದ್ದಕ್ಕಿಂತ ಜಾಸ್ತಿ ಭ್ರಷ್ಟಾಚಾರದಲ್ಲಿಯೇ ಭದ್ರತೆಗೆ ಮೀಸಲಿಟ್ಟಿದ್ದ ಹಣಗಳನ್ನು ಗುಳುಂ ಮಾಡಿದ್ದರು. ಶತ್ರು ದೇಶದಿಂದ ಗಡಿಯಲ್ಲಿ ಅನಿರೀಕ್ಷಿತ ದಾಳಿ ಮಾಡಿದರು ನಮ್ಮ ಸೇನೆ ಪ್ರತಿ ದಾಳಿ ಮಾಡಲು ಸರ್ಕಾರದ ಆಜ್ಞೆ ಬೇಕಿತ್ತು, ಇದಲ್ಲದೆ ಸರಿಯಾದ ಸೇನಾ ಸಾಮಾಗ್ರಿಗಳು ಇಲ್ಲದ ಕಾರಣ ನಾವು ಅದೆಷ್ಟೋ ಸೈನಿಕರನ್ನು ಕಳೆದುಕೊಂಡಿದ್ದೆವು.ಇದೆಲ್ಲಾ ನಮ್ಮ ಸೈನಿಕರನ್ನು ನೈತಿಕವಾಗಿ ಮಾನಸಿಕವಾಗಿ ದುರ್ಬಲಗೊಳಿಸಿತ್ತು. 
ಆದರೆ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಆಡಳಿತಕ್ಕೆ ಬಂದ 6 – 7 ತಿಂಗಳುಗಳಲ್ಲಿಯೇ ಪ್ರಮುಖವಾದ ಎಲ್ಲಾ ಸೇನಾ ಸಾಮಾಗ್ರಿಗಳನ್ನು ಖರೀದಿಸಿತು. ಸೇನೆಗೆ ಈಗ ಪಾಕಿಸ್ತಾನದಿಂದ ಯಾವುದೇ ರೀತಿಯ ಅನಿರೀಕ್ಷಿತ ದಾಳಿಗಳಾದರೆ ಪ್ರತಿದಾಳಿ ಮಾಡಲು ರಾಜಕಾರಣಿಗಳ ಅನುಮತಿಯ ಅವಶ್ಯಕತೆ ಇಲ್ಲ.
 ಕಾಂಗ್ರೆಸ್ ಇನ್ನೂ ತನ್ನ ದೇಶ ದ್ರೋಹದ ಬುದ್ದಿ ಬಿಟ್ಟಿಲ್ಲ. ಕೇವಲ ಓಟಿಗಾಗಿ,ಅಧಿಕಾರಕ್ಕಾಗಿ ದೇಶದ ಹಲವೆಡೆ ದೇಶದ್ರೋಹಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಯುವಜನಾಂಗವನ್ನು ದೇಶದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ನ ಅನೇಕ ನಾಯಕರು ಪಾಕಿಸ್ತಾನದ ಮಾಜಿ ISI ಅಧಿಕಾರಿಗಳ ಜೊತೆ ಹಾಗೂ ಉಗ್ರಗಾಮಿಗಳ ಜೊತೆ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದಾರೆ. ಮೋದಿಯನ್ನು ತೆಗಳಲು ಹೋಗಿ ಕಾಂಗ್ರೆಸ್ ನ ಅನೇಕ ನಾಯಕರು, ಕಾಂಗ್ರೆಸ್ ನ ಮಾಧ್ಯಮಗಳು ಹಾಗೂ ಕಾಂಗ್ರೆಸ್ ನ ಬುದ್ಧಿಜೀವಿಗಳು ವಿಶ್ವಕ್ಕೆ ಭಾರತವನ್ನೇ ನಿಕೃಷ್ಟವಾಗಿ ತೋರಿಸ ಹೊರಟಿದ್ದಾರೆ ಇದಕ್ಕೆ ಇತ್ತೀಚೆಗೆ ನಡೆದ ಕೆಲ ಘಟನೆಗಳೇ ಸಾಕ್ಷಿ (ಜೆ ಎನ್ ಯು, ಊನ, ಆಮ್ನೆಷ್ಟಿ)
 ನಮ್ಮ ದೇಶದಲ್ಲಿ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಜಾಸ್ತಿಯಾಗಿದ್ದಾರೆ. ಸೇನೆ ಯಾವುದೇ ಕ್ರಮ ಕೈಗೊಂಡರು ಅಂದರೆ ಉಗ್ರನನ್ನು ಕೊಂದರೂ ಸೇನೆಯನ್ನು ಟೀಕಿಸುವ ಗುಂಪೊಂದು ಭಾರತದ ಹಲವು ಕಡೆ ಹುಟ್ಟಿಕೊಂಡಿರುವುದು ಭಾರತದ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ.ಈ ದೇಶದ್ರೋಹಿಗಳಲ್ಲಿ ಯಾರಿಗೂ ಕಾಶ್ಮೀರ ವಿಷಯ ಬಗೆಹರಿಯಬೇಕಾಗಿಲ್ಲ ಕೇವಲ ಕಾಶ್ಮೀರ ವಿಷಯ ಮುಂದಿಟ್ಟುಕೊಂಡು ಮೋದಿ ವಿರುದ್ಧ, ಸೈನಿಕರ ವಿರುದ್ಧ, ದೇಶದ ವಿರುದ್ಧ ಮಾತನಾಡಿ ಉಗ್ರ ಸಂಘಟನೆಗಳು ರಕ್ತ ಹರಿಸಿ ಸಂಪಾದಿಸಿದ ದುಡ್ಡಿಗೆ ಕೈ ಒಡ್ಡು ಹೊಟ್ಟೆ ತುಂಬಿಸಿಕೊಳ್ಳುವದೇ ಇವರ ಕಸುಬು. ಮೊದಲು ಇಂತಹಾ ದೇಶದ್ರೋಹಿಗಳನ್ನು ಹೊರಹಾಕಿ ನಂತರ ಹೊರಗಿನ ಶತ್ರುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ವಿಕಿಲೀಕ್ಸ್ ನ ವರದಿ :

Wikileaks States:  “The Indian Army has drawn a line with its political leadership. It has told the GOI that withdrawal was tantamount to ceding the area to Pakistan due to the difficulty of retaking it should Pakistan occupy it. Instead, the GOI is attempting to “soften” the issue by proposing joint military projects such as environmental clean up or trekking. There has been no Pakistani response to these suggestions”
loading...

Post a Comment

Powered by Blogger.