Veerakesari 21:08

ರಾಯ್‌ಪುರ್‌: ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿ ಬಾಲಕಿಯ ಮೇಲೆ ಪದೇ ಪದೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿ ಒಂದು ವಾರದ ಹಿಂದೆ ಕಾಂಕರ್‌ ಜಿಲ್ಲೆಯ ಮದರಸಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಮಗುವನ್ನು ತ್ಯಜಿಸಲು ನಿರ್ಧರಿಸಿದ್ದಾಳೆ. ಈ ಸುದ್ದಿಯನ್ನು ಕೆಲ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಕಾಂಕರ್‌ ಪೊಲೀಸರು ದಾಖಲಿಸಿದ್ದ ಎಫ್‌ಆರ್‌ಐ ಅನ್ನು ರಾಯ್ಪುರ್‌ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ಎಸ್‌ಪಿ ಶುಕ್ಲಾ ತಿಳಿಸಿದ್ದಾರೆ.
ಬಾಲಕಿ ಮದರಸಾದಲ್ಲಿ ಓದುತ್ತಿದ್ದಳು. 2015 ಆಗಸ್ಟ್‌ 20 ರಿಂದ 28ರವರೆಗೆ ಫಾರೂಖಿ ಎಂಬಾತ ಬಾಲಕಿಯನ್ನು ಬೆದರಿಸಿ ಆಕೆ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿ ಹಬ್ಬಕ್ಕೆಂದು ಮನೆಗೆ ತೆರಳಿದ್ದಳು. ಮರಳಿ ಮದರಸಾಗೆ ತೆರಳಲು ಆಕೆ ನಿರಾಕರಿಸಿದ್ದರಿಂದ ಪೋಷಕರಿಗೆ ಮಾಹಿತಿ ತಿಳಿದು ಬಂದಿದೆ. ನಂತರ ಮದರಸಾದ ಗುಲ್ಶನ್ ಇ ಜಹಾರಾ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಾಲಕಿಗೆ ಜೀವ ಬೆದರಿಕೆಯೊಡ್ಡಿ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಬಾಲಕಿಯ ಪೋಷಕರು ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಯನ್ನು ಸೆಕ್ಷನ್‌ 376 (ರೇಪ್‌) ಮತ್ತು ಪೋಕ್ಸೊ ಕಾಯ್ದೆ ಅಡಿ ಬಂಧಿಸಿ, ವಿಚಾರಣೆ ಕೈಗೊಂಡಿಡಿದ್ದಾರೆ.

Post a Comment

Powered by Blogger.