ಸ್ವಲ್ಪ ಸಮಯದ ಹಿಂದೆ ಕೆಲ ಸೋ ಕಾಲ್ಡ್ ಪ್ರಗತಿಪರರು ಹಾಗೂ ನೋಬಲ್ ಪ್ರಶಸ್ತಿ ಪುರಸ್ಕೃತರು ಪಾಕಿಸ್ತಾನ ತುಂಬಾ ಶಾಂತಿಯುತ ದೇಶ ,ಪ್ರೀತಿ ವಾತ್ಸಲ್ಯ ಪಾಕಿಸ್ತಾನದಲ್ಲಿ ತುಂಬಿ ತುಳುಕುತ್ತಿದೆ ಎಂದು ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಡುತ್ತಿದ್ದರು
ಆಚಾನಕ್ ಆಗಿ ಎಲ್ಲಾ ಶಾಂತಿ ಬೋಧಕರು ಕಾಣೆಯಾಗಿದ್ದಾರೆ ಮತ್ತು ಕಾಶ್ಮೀರದ ಉರಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಬಗ್ಗೆ ಒಂದೂ ಮಾತುಗಳು ಅವರ ಬಾಯಿಯಿಂದ ಹೊರಬಂದಿಲ್ಲ.
ಆಚಾನಕ್ ಆಗಿ ಎಲ್ಲಾ ಶಾಂತಿ ಬೋಧಕರು ಕಾಣೆಯಾಗಿದ್ದಾರೆ ಮತ್ತು ಕಾಶ್ಮೀರದ ಉರಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಬಗ್ಗೆ ಒಂದೂ ಮಾತುಗಳು ಅವರ ಬಾಯಿಯಿಂದ ಹೊರಬಂದಿಲ್ಲ.
ಕೆಲ ದಿನಗಳ ಹಿಂದೆ ಭಾರತೀಯ ಯೋಧರು ಜಿಹಾದಿ “ಉಗ್ರಗಾಮಿಗಳನ್ನು” ಕೊಂದು ಹಾಕಿದ್ದಕ್ಕೆ ಹಾಗೂ ಸೇನೆಯ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದವರ ಮೇಲೆ “ಪೆಲೆಟ್ ಗನ್” ಬಳಸಿದ್ದಕ್ಕೆ ತನ್ನ ಸೋಕಾಲ್ಡ್ ಶಾಂತಿ ಹೋರಾಟಕ್ಕೆ ಭಂಗವಾಯಿತೆಂದು “ಶಾಂತಿಗಾಗಿ” ನೋಬಲ್ ಪುರಸ್ಕೃತ “ಮಲಾಲ ಯೂಸುಪ್ಜೈ” ಭಾರತೀಯ ಯೋಧರ ಮೇಲೆ ಹರಿಹಾಯ್ದಿದ್ದಳು.
“ಕಾಶ್ಮೀರಿ ಜನರು ಎಲ್ಲೆಡೆ ಜನರ ಹಾಗೆ, ಅವರಿಗೂ ತಮ್ಮ ಮೂಲಭೂತ ಮಾನವ ಹಕ್ಕುಗಳು ಇವೆ .ಅವರೂ ಹೆದರಿಕೆ ಮತ್ತು ದಬ್ಬಾಳಿಕೆಯಿಂದ ಮುಕ್ತವಾಗಿ ಬದುಕುವ ಹಾಗೆ ಮಾಡಬೇಕು. ಅವರ ಮೇಲೆ ಭಾರತೀಯ ಸೇನೆ ಬಂದೂಕು, ಪೆಲೆಟ್ ಗನ್ ಪ್ರಯೋಗ ಮಾಡಬಾರದು” ಎಂದು ಉಪದೇಶಿಸಿದ್ದಳು.
ಈಗ ಆ ಶಾಂತಿಪ್ರಿಯೆಯನ್ನು ಪ್ರಶ್ನಿಸುವ ಸಮಯ ಬಂದಿದೆ. ಉರಿಯ ಸೇನೆಯ ಮುಖ್ಯ ಕಛೇರಿಗೆ ಮೇಲೆ ದಾಳಿ ಮಾಡಿ ಮಲಗಿದ್ದ ನಮ್ಮ ಸೈನಿಕರನ್ನು ನಿನ್ನ ದೇಶದ ಉಗ್ರರು ಹೇಡಿಗಳ ಕೊಂದರಲ್ಲ ಈಗ ನಿನ್ನ ಶಾಂತಿ ಹೋರಾಟಕ್ಕೆ ಭಂಗವಾಗಿಲ್ಲವಾ…??? ಯಾರು ಆ ಉಗ್ರರು…??? ಅವರಿಗೂ ಮೂಲಭೂತ ಮಾನವ ಹಕ್ಕುಗಳು ಇವೆಯ…??? ಅವರ ಮೇಲೂ ಬಂದೂಕು ಪ್ರಯೋಗ ಮಾಡಬಾರದ…???
ಇನ್ನೂ ಎಳೆ ಕೂಸು ಈ “ಮಲಾಲ” ಯಾವ ಆದಾರ ಇಟ್ಕೊಂಡು ಇಂತಹ ಬೇಜಾವಾಬ್ದಾರಿ ಹೇಳಿಕೆಗಳನ್ನು ನಮ್ಮ ಸೇನೆಯ ಮೇಲೆ ನೀಡ್ತಾಳೆ. ಭಾರತದ ಮೇಲೆ ದಾಳಿ ಮಾಡೋ ಉಗ್ರರು ಅಮಾಯಕರ…??? ಸೇನೆಯ ಮೇಲೆ ಗ್ರೆನೇಡ್ ಎಸೆಯೋರು ಅಮಾಯಕರ…??? ಭಾರತದ ಕಿರೀಟ ಕಾಶ್ಮೀರದಲ್ಲಿ ಯಾವಾಗಲೂ ದೊಂಬಿ, ಗಲಭೆ ಎಬ್ಬಿಸೋರು ಅಮಾಯಕರೇ…??? ಯಾವ ರೀತಿಯ ಮಾನವ ಹಕ್ಕಿನ ಉಲ್ಲಂಘನೆ ಬಗ್ಗೆ ಆಕೆ ಮಾತನಾಡುತ್ತಿರುವದು. ಅವಳಿಗೆ ಗೊತ್ತಿದೆಯಲ್ಲ ಅವಳದೇ ಪಾಪಿಸ್ತಾನದಲ್ಲಿ ಲಕ್ಷಾಂತರ ಬಲೋಚ್ ಗಳನ್ನು ಪಾಪಿಸ್ತಾನ ಸೇನೆ ಕೊಂದು ಹಾಕಿರೋ ಬಗ್ಗೆ…??? ಅವಳಿಗೆ ಗೊತ್ತಿದೆಯೇ ಅವಳಿಗಿಂತ ಸಣ್ಣ ಪ್ರಾಯದ ಹುಡುಗಿಯರನ್ನು ಪಾಪಿಸ್ತಾನ ಸೇನೆ ಅತ್ಯಾಚಾರ ಮಾಡ್ತಿದೆ ಎಂದು…??? ಅವಳಿಗೆ ಗೊತ್ತಿದೆಯೇ ಪಾಕಿಸ್ತಾನಿ ಸೇನೆ ಮಹಿಳೆಯರನ್ನು ಲೈಂಗಿಕ ವಸ್ತುಗಳ ತರ ಬಳಸುತ್ತಿದೆ ಎಂದು…??
ಈ ಹುಡುಗಿ ಪಾಪಿಸ್ತಾನವನ್ನು ಶಾಂತಿಪ್ರಿಯ ದೇಶವೆಂದು ಕರೆಯುತ್ತಾಳೆ ಆದರೆ ನಿಮಗೆ ಗೊತ್ತೇ ಆಕೆಯೇ ಪಾಕಿಸ್ತಾನದ ಭಯೋತ್ಪಾದಕರ ಜೀವ ಬೆದರಿಕೆಗೆ ಹೆದರಿ ಪಾಪಿಸ್ತಾನ ತೊರೆದು ಆರಾಮಾಗಿ ಬ್ರಿಟನ್ ನಲ್ಲಿ ನೆಲೆಸಿದ್ದಾಳೆ. ಮುಂದಿನ ಬಾರಿ ಈಕೆ ಭಾರತದ ಬಗ್ಗೆ ಇಲ್ಲಿಯ ಸೈನಿಕರ ಬಗ್ಗೆ ಮಾತನಾಡುವ ಮೊದಲು ತನ್ನ ಪಾಪಿಸ್ತಾನದ ಸ್ಥಿತಿಗತಿಯ ಬಗ್ಗೆ ಮೊದಲು ನೋಡ್ಕೊಂಡು ಸರಿಮಾಡ್ಕೊಳ್ಳಲಿ. ಈಕೆ ಯಾವ ತರಹದ ಶಾಂತಿ ಕೆಲಸಗಳನ್ನು ಮಾಡಿದ್ಲು ಎಂದು ವಿಶ್ವಸಂಸ್ಥೆ ಈಕೆಗೆ “ನೊಬೆಲ್” ಪ್ರಶಸ್ತಿ ನೀಡ್ತೂ ಎಂಬುದು ಯಕ್ಷಪ್ರಶ್ನೆ.
ಈಗ ನಮ್ಮ ಕರುನಾಡ ಚಿತ್ರನಟಿ ,ಪಾಪಿಸ್ತಾನದಲ್ಲಿ ಸ್ವರ್ಗ ಸುಖ ಅನುಭವಿಸಿ ಬಂದ ನಾಯಕಿ “ರಮ್ಯ” ಅವರ ವಿಷಯಕ್ಕೆ ಬರೋಣ. ಆಕೆಗೆ ಪಾಪಿಸ್ತಾನದಲ್ಲಿ ಯಾವ ಕಾರಣಕ್ಕೆ ಸ್ವರ್ಗ ಕಾಣಿಸಿತು. ಭಾರತೀಯ ಸೇನೆ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ದಾಳಿ ಮಾಡಿದ್ದಾರೆ, ನಮ್ಮ 17 ಸೈನಿಕರು ಹುತಾತ್ಮರಾಗಿದ್ದಾರೆ.ಈಗಲು ನಿಮಗೆ ಅಲ್ಲಿ ಸ್ವರ್ಗ ಕಾಣಿಸುತ್ತಿದೆಯ…???
ಈ ನಾಲಾಯಕ್ ಗಳು ಕಾಶ್ಮೀರ ಗಲಭೆಯ ನಂತರ ಪಾಪಿಸ್ತಾನಕ್ಕೆ ಬೆಂಬಲವಾಗಿ ನಿಂತರು ಆದರೆ ಈಗ ಪಾಪಿಸ್ತಾನಿ ಸರ್ಕಾರ ಬೆಂಬಲಿತ ಉಗ್ರರು “ಉರಿ”ಯಲ್ಲಿ ನಡೆಸಿದ ದಾಳಿ ಬಗ್ಗೆ ಮಾತನಾಡಲು ಇವರಿಗೆ ಬಾಯಿ ಹೊರಳುತ್ತಿಲ್ಲ.ದಾಳಿಯನ್ನು ಖಂಡಿಸಿ ಒಂದೇ ಒಂದು ಹೇಳಿಕೆ ಇವರು ಕೊಟ್ಟಿಲ್ಲ. ಇವರ ಪ್ರಕಾರ ಇದೂ ಕೂಡ ಶಾಂತಿಗಾಗಿ ನಡೆದ ದಾಳಿ ಇರಬಹುದು.ಇದು ಈ ಲಿಬರಲ್ಸ್ ಹಾಗೂ ಕಪಟ ವೇಷಧಾರಿಗಳು ನೈಜ ಮುಖ.
ಓ ರಮ್ಯ ಇನ್ನೊಮ್ಮೆ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುವ ಮೊದಲು ಸಾವಿರ ಬಾರಿ ಯೋಚಿಸು. ಕೇವಲ ನಿನ್ನ ರಾಜಕೀಯ ದೊಂಬರಾಟಕ್ಕಾಗಿ ನಿನ್ನ ಕಾಂಗಿ ಬಾಸ್ಗಳನ್ನು ಖುಷಿಪಡಿಸಲು ಅಸಂಬದ್ಧ ಹೇಳಿಕೆ ನೀಡಬೇಡ. ಎಂದಿಗೂ ದೇಶ ಮೊದಲು . ಕಾಶ್ಮೀರದಲ್ಲಿ ಗಲಭೆಗ ನಡೆಯಲು ಮುಖ್ಯಕಾರಣ ಕಾಂಗ್ರೆಸ್ ಅನ್ನೋದು ಮರೀಬೇಡ.
ತಂಗಿ ಮಲಾಲ, ನಿನಗೆ “ನೋಬೆಲ್ ಪ್ರಶಸ್ತಿ” ಸಿಕ್ಕಿದ್ದು ಆಕಸ್ಮಿಕವಾಗಿ ಗುಂಡು ತಗುಲಿದ ಕಾರಣ, ಅಂದರೆ ಪ್ರಪಂಚದಲ್ಲಿ ಶಾಂತಿಗಾಗಿ ನಿನ್ನ ಕೊಡುಗೆ ದೊಡ್ಡ “೦” . ಭಾರತದಲ್ಲಿಯೇ ಅದೆಷ್ಟೋ ಧೈರ್ಯವಂತ ಯುವತಿಯರು ಕೇವಲ 16ನೇ ವಯಸ್ಸಿನಲ್ಲಿ ಗುಂಡಿಗೆ ಎದೆ ಒಡ್ಡಿದ್ದಾರೆ, ಅದೂ ಆಕಸ್ಮಿಕವಾಗಿ ಅಲ್ಲ ಧೈರ್ಯವಾಗಿ ಮತ್ತು ತಮ್ಮ ಪ್ರಾಣವನ್ನು ಈ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಅವರು ನಮ್ಮ ಹೆಮ್ಮೆ.
ಇನ್ನೂ ನಿಮ್ಮ ಪಾಪಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ ನಮ್ಮ ದೇಶಕ್ಕೆ ಸೇರಿದ್ದು, ಅದನ್ನೂ ಆದಷ್ಟು ಬೇಗ ಅದನ್ನೂ ಹಿಂಪಡೆಯುತ್ತೇವೆ..ನಿನ್ನಿಂದ ನಿನ್ನ ದೇಶದ ಉಗ್ರಗಾಮಿಗಳಿಂದ..ನಿನ್ನ ದೇಶದ ಷಂಡ ಸೈನಿಕರಿಂದ ತಡೆಯಲು ಸಾದ್ಯವಾದರೆ ತಡೆಯಿರಿ ನೋಡೋಣ.
– Veera Kesari

Post a Comment