ಮಂಗಳೂರು : ಮತಾಂದ ಜಿಹಾದಿ ಟಿಪ್ಪುವಿನ ಜಯಂತಿ ವಿರೋಧ ರಾಜ್ಯದೆಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ ಟಿಪ್ಪು ಜಯಂತಿಗೆ ವಿರೋಧವಿದ್ದರು ರಾಜ್ಯದ ಜಿಹಾದಿ ಬೆಂಬಲಿತ ಸರ್ಕಾರ ಮುಸಲ್ಮಾನರ ಓಟಿಗಾಗಿ ಜಿಹಾದಿಯ ಜಯಂತಿ ಆಚರಿಸಲು ಹೊರಟಿದೆ.
ಟಿಪ್ಪು ಜಯಂತಿ ಆಚರಣೆಗೆ ರಾಜ್ಯಾದ್ಯಂತ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತ ಪಡಿಸುತ್ತಿರುವ ಬೆನ್ನಲ್ಲೆ ಹಿಂದೂ ಸಂಘಟನೆಗಳ ಜೊತೆ ಕೆಲ ಕ್ರಿಶ್ಚಿಯನ್ ಕ್ಯಾಥೊಲಿಕ್ ಸಂಘಟನೆಗಳೂ ಕೈ ಜೋಡಿಸಿವೆ.
ಹಿಂದೂ ಸಂಘಟನೆಗಳಿಗೆ ಬೆಂಬಲ ಸೂಚಿಸುತ್ತಾ ನವೆಂಬರ್-6 ರಂದು “ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್” (UCA) ಮಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿ ಹೊರಗಡೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಪ್ರತಿಭಟನೆ ಬಗ್ಗೆ ಮಾತನಾಡಿದ ಅಲ್ಬನ್ ಮೆನಿಜೆಸ್ “ಟಿಪ್ಪು ಫೆಬ್ರವರಿ 1784 ರಲ್ಲಿ ಮಿಲಾಗ್ರಿಸ್ ಚರ್ಚ್ ಮೇಲೆ ತನ್ನ ಜಿಹಾದಿ ಇಸ್ಲಾಮಿಕ್ ಸೈನ್ಯದ ಜೊತೆ ಸೇರಿ ದಾಳಿ ಮಾಡಿ ಧ್ವಂಸ ಮಾಡಿದ್ದ ಇದಲ್ಲದೆ ಆತ 60000 ಕ್ಕೂ ಅಧಿಕ ಕ್ಯಾಥೊಲಿಕ್ ರನ್ನು ಬ್ರಿಟಿಷ್ ಗೂಡಾಚಾರರೆಂಬ ನೆಪಹೇಳಿ ಬಂಧನದಲ್ಲಿ ಇರಿಸಿದ್ದ” . ಹಿಂದೆಯೂ 2013 ರಲ್ಲಿ ಶ್ರೀರಂಗಪಟ್ಟಣದಲ್ಲಿರುವ ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ಮತಾಂಧ ಟಿಪ್ಪುವಿನ ಹೆಸರು ಇಡುವುದಕ್ಕೆ UCA ಹಿಂದೂ ಸಂಘಟನೆಗಳ ಜೊತೆ ಸೇರಿ ವಿರೋಧ ವ್ಯಕ್ತ ಪಡಿಸಿತ್ತು.
ಫ್ರಾಂಕ್ಲಿನ್ ಮೊತೇರೋ ಅವರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಮಾತನಾಡುತ್ತ ” ಕರ್ನಾಟಕದ ಕಾಂಗ್ರೆಸ್ ಸರ್ಕಾರ ಒಂದು ಅಲ್ಪಸಂಖ್ಯಾತ ಸಮುದಾಯದ ಓಟಿಗಾಗಿ ಇನ್ನೊಂದು ಅಲ್ಪಸಂಖ್ಯಾತ ಸಮುದಾಯವನ್ನು ಎತ್ತಿಕಟ್ಟುತ್ತಿದೆ.ಟಿಪ್ಪುವಿನಿಂದ ಅನೇಕ ಕ್ರಿಶ್ಚಿಯನ್ ಕ್ಯಾಥೊಲಿಕರು ಬಾಧೆಗೊಳಗಾಗಿದ್ದಾರೆ.ಈ ನೆಲದಲ್ಲಿ ಮೊದಲಿಗೆ ಕೋಮುವಾದದ ಬೀಜ ಬೆತ್ತಿದ್ದು ಮತಾಂಧ ಟಿಪ್ಪು” ಎಂದರು.
ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಾಲಿನಲ್ಲಿ ಕ್ಯಾಥೊಲಿಕ್ ಸಮುದಾಯದ ಕೆಲ ಕಾಂಗ್ರೆಸ್ ಮುಖಂಡರು ಇದ್ದಾರೆ
ಕಾಂಗ್ರೆಸ್ ನ ಜೆನೆರಲ್ ಸೆಕ್ರೆಟರಿ ಆದ ಮರಿಯಮ್ಮ ತೋಮಸ್ ಪ್ರಕಾರ ” ಮತಾಂಧ ಟಿಪ್ಪು ತಾನು ಬಂಧಿಸಿದ ಕ್ಯಾತೋಲಿಕರನ್ನು ಮಂಗಳೂರಿನಿಂದ ಮೈಸೂರು ವರೆಗೆ ನಡೆಸಿಕೊಂಡೇ ಕರೆದುಕೊಂಡು ಹೋಗೋ ಮೂಲಕ 4000 ಕ್ಕೂ ಅಧಿಕ ಕ್ಯಾಥೋಲಿಕರ ಸಾವಿಗೆ ಕಾರಣನಾಗಿದ್ದಾನೆ. ಈಗಲೂ ಮಂಗಳೂರಿನ ಹಲವೆಡೆ ಇದರ ಬಗ್ಗೆ ಶೋಕಾಚರಣೆ ನಡೆಯುತ್ತೆ” ಎಂದರು.

Post a Comment