loading...
ದೇಶದ್ರೋಹಿ ಹಾಗೂ ಅತ್ಯಾಚಾರ ಪ್ರಕರಣಗಳ ಮೂಲಕ ವಿಶ್ವಪ್ರಖ್ಯಾತಿ ಪಡೆದಿರುವ ಜೆ.ಎನ್.ಯು ನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಜೆ.ಎನ್.ಯು ನಲ್ಲಿ ಎರಡನೇ ವರ್ಷದ ಬಿ.ಎ ಪದವಿ ಮಾಡುತ್ತಿರುವ 21ವರ್ಷದ ವಿಧ್ಯಾರ್ಥಿನಿ ಮೇಲೆ ತನ್ನ ಗೆಳೆಯರಿಬ್ಬರು ಸಾಮೂಹಿಕ ಅತ್ಯಾಚಾರ ಮಾಡಿದ್ದು ಆರೋಪಿಗಳಿಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ತನ್ನ ಇಬ್ಬರು ಗೆಳೆಯರೊಂದಿಗೆ ಪಬ್ ವೊಂದಕ್ಕೆ ಹೋಗಿದ್ದಾಳೆ. ನಂತರ ಅಲ್ಲಿಂದ ತನ್ನ ಗೆಳೆಯ ಸಲೀಂ ಎಂಬಾತನ ಜೊತೆ ಆತನ ಮನೆಗೆ ಹೋಗಿ ತನ್ನ ಇತರ ಗೆಳೆಯರಾದ ಸುಲೈಮನ್, ಸಿದ್ಧಾಂತ್ ಮತ್ತು ಪ್ರತ್ಯೂಷಾ ಜೊತೆ ಪಾರ್ಟಿ ಮಾಡಿದ್ದಾರೆ. ನಂತರ ಆಕೆಯನ್ನು ಗೆಳೆಯನೊಬ್ಬ ಜೆ.ಎನ್.ಯು ಮುಂಬಾಗ ಬಿಟ್ಟು ಬಂದಿದ್ದಾನೆ.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಆಕೆ ಸಲೀಂ ಮನೆಗೆ ತೆರಳಿ ಅಲ್ಲಿ ಸಲೀಂ ಮತ್ತು ಆತನ ಗೆಳೆಯ ಸುಲೈಮಾನ್ ಜೊತೆ ಕಂಟಪೂರ್ತಿ ಮದ್ಯಪಾನ ಮಾಡಿದ್ದಾಳೆ. ಮದ್ಯಪಾನ ಮಾಡಿ ಪ್ರಜ್ಞಾಹೀನಳಾದ ಆಕೆಯ ಮೇಲೆ ಸಲೀಂ ಮತ್ತು ಸುಲೈಮಾನ್ ಸಾಮೂಹಿಕ ಅತ್ಯಾಚಾರ ಮಾಡಿದ್ದು, ಮರುದಿನ ಬೆಳಗ್ಗೆ ಪ್ರಜ್ಞೆ ಬಂದ ನಂತರ ರಾತ್ರಿ ನಡೆದ ದುಷ್ಕೃತ್ಯದ ಬಗ್ಗೆ ನೆನಪಾಗಿದೆ.ತನ್ನ ಸಹಪಾಠಿ ಗೆಳತಿಯರೊಂದಿಗೆ ಈ ನಡೆದ ಘಟನೆ ವಿವರಿಸಿದ ವಿದ್ಯಾರ್ಥಿನಿ ನಂತರ ಅವರ ಸಹಾಯದೊಂದಿಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ವಿದ್ಯಾರ್ಥಿನಿಯನ್ನು ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಸಲೀಮ್ ಮತ್ತು ಸುಲೈಮನ್ ನ್ನು ಬಂಧಿಸಲಾಗಿದೆ. ವಿದ್ಯಾಭ್ಯಾಸ ಮಾಡೋ ಸಮಯದಲ್ಲಿ ಕುಡಿತ, ಪಬ್, ಮೋಜು, ಮಸ್ತಿ ಮಾಡಿ ತಮ್ಮ ಭವಿಷ್ಯವನ್ನೇ ಹಾಳು ಮಾಡುತ್ತಿರುವ ವಿದ್ಯಾರ್ಥಿಗಳು ಮುಂದಾದರು ಇಂತಹಾ ಘಟನೆಗಳಿಂದ ಎಚ್ಚೆತ್ತುಕೊಂಡು ಜೀವನ ರೂಪಿಸುವತ್ತ ಗಮನ ಹರಿಸಿದರೆ ಉತ್ತಮ.
loading...

Post a Comment