loading...
೧೯ ಜನವರಿ ೧೯೯೦ ಈ ದಿನ ಇಡೀ ಹಿಂದೂ ಸಮಾಜಕ್ಕೆ ಕರಾಳದಿನ. ಕಾಶ್ಮೀರದ ಮಸೀದಿಗಳ ಮೈಕ್ ಗಳಲ್ಲಿ ಅಂದು ಆಜಾನ್ ಮೊಳಗುವ ಬದಲು ಮಸೀದಿಗಳ ಮೌಲ್ವಿಗಳು ಕಾಶ್ಮೀರಿ ಪಂಡಿತರಿಗೆ ಕಾಶ್ಮೀರ ಬಿಟ್ಟು ತೆರಳುವಂತೆ ಆದೇಶ ನೀಡಿದ್ದರು. ಇದನ್ನು ಕೇಳಿ ಅಲ್ಲಿದ್ದ ಹಿಂದುಗಳಿಗೆ ಅಚ್ಚರಿಯಾಗಿತ್ತು, ತಮ್ಮೊಂದಿಗೇ ಬಾಯಿ ಬಹನ್ ಅಂತ ಮಾತನಾಡುತ್ತಿದ್ದ ಮುಸಲ್ಮಾನ ಬಾಂಧವರು ಈ ರೀತಿ ಹೇಳಲು ಸಾಧ್ಯವಿಲ್ಲ ಎಂದು ಹಲವರು ಅಂದುಕೊಂಡವರು. ಆದರೆ ಕ್ಷಣಮಾತ್ರದಲ್ಲಿ ಇಡೀ ಕಾಶ್ಮೀರದ ಪರಿಸ್ಥಿತಿ ಬದಲಾಗಿತ್ತು ಪತ್ರಿಕೆಗಳು, ಪೋಸ್ಟರ್ ಗಳಲ್ಲಿ ಕೂಡ ಕಾಶ್ಮೀರದಿಂದ ಹಿಂದೂಗಳು ಹೊರಟುಹೋಗುವಂತೆ ಜಾಹಿರಾತುಗಳು ರಾರಾಜಿಸತೊಡಗಿದವು.
ಅಲ್ಲಿದ್ದ ಹಿಂದೂಗಳಿಗೆ ಶಾಂತಿಧೂತರು ನೀಡಿದ ಮೂರು ಆಯ್ಕೆಗಳು ರಲಿವ್, ಚಲಿವ್ ಅಥವಾ ಗಲಿವ್ ಅಂದರೆ ಒಂದಾ ಧರ್ಮಾಂತರವಾಗಿ ಮುಸಲ್ಮಾನ ಧರ್ಮಕ್ಕೆ ಮತಾಂತರವಾಗಿ, ಎರಡನೆಯ ಆಯ್ಕೆ ಕಾಶ್ಮೀರ ತೊರೆದು ಹೊರಟುಹೋಗಿ ಮತ್ತು ಕೊನೆಯ ಆಯ್ಕೆ ಮುಸಲ್ಮಾನರ ಖಡ್ಗಕ್ಕೆ ಬಲಿಯಾಗಲು ಸಿದ್ದರಾಗಿ. ಈ ಮಾತು ಕೇಳಿದ ಕಾಶ್ಮೀರಿ ಪಂಡಿತರಿಗೆ ದಿಕ್ಕೇ ತೋಚದಂತಾಯಿತು. ಕೆಲವರು ಮುಸಲ್ಮಾನ ಜಿಹಾದಿಗಳ ಖಡ್ಗಕ್ಕೆ ಹೆದರಿ ಮತಾಂತರವಾದರು, ಇನ್ನೂ ಹಲವರು ಧರ್ಮಾತರವಾಗಲು ಇಚ್ಛೆಯಿಲ್ಲದೆ ತಮ್ಮ ಮನೆ ಮಠ ತೊರೆದು ಕಾಶ್ಮೀರ ತೊರೆದರು ಆದರೆ ಇನ್ನೊಂದು ಗುಂಪು ಧರ್ಮಾಂತರವೂ ಆಗಲು ಇಷ್ಟವಿಲ್ಲದೆ, ಹುಟ್ಟಿ ಬೆಳೆದ ಊರನ್ನೂ ಬಿಡಲಾಗದೆ ಮುಸಲ್ಮಾನ ಜಿಹಾದಿಗಳ ಬೆದರಿಕೆಗೆ ಜಗ್ಗದೆ ಅಲ್ಲೇ ಉಳಿದು ಬಿಟ್ಟರು.
ಆಗ ನಡೆದಿದ್ದೇ ರಕ್ತಪಾತ, ಮುಸಲ್ಮಾನ ಜಿಹಾದಿಗಳು ಕಾಶ್ಮೀರಿ ಪಂಡಿತರ ಮನೆಮನೆಗೆ ನುಗ್ಗಿ ಸಿಕ್ಕಸಿಕ್ಕವರನ್ನೆಲ್ಲ ಹತ್ಯೆಗೈದರು, ಮಹಿಳೆಯರು ಪುಟ್ಟ ಹೆಣ್ಣು ಮಕ್ಕಳೆಂದೂ ನೋಡದೆ ಅತ್ಯಾಚಾರ ಗೈದರು. ಅಂದೂ ಮುಸಲ್ಮಾನ ಜಿಹಾದಿಗಳು ನಡೆಸಿದ ನರಸಂಹಾರಕ್ಕೆ ಇಡಿಯ ಕಾಶ್ಮೀರವೇ ಅಮಾಯಕ ಹಿಂದೂಗಳ ರಕ್ತದಿಂದ ತೋಯ್ದು ಹೋಗಿತ್ತು.
ಈ ಘಟನೆ ಜರುಗಿ 27ವರ್ಷಗಳೇ ಕಳೆದಿದೆ ಆದರೆ ತಮ್ಮದೇ ದೇಶದಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಂಡು ತಾವೇ ನಿರಾಶ್ರಿತರಂತೆ ಬಾಳುತ್ತಿರುವ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಕ್ಕಿದೆಯೇ...??? ಇಲ್ಲಾ ಅಂದು ಮನೆ ಮಠ ತೊರೆದು ದೇಶಾಂತರ ಹೋದ ಕಾಶ್ಮೀರಿ ಪಂಡಿತರು ಇಂದು ಅಲ್ಲಲ್ಲಿ ನಿರಾಶ್ರಿತರಂತೆ ವಾಸಿಸುತ್ತಿದ್ದಾರೆ. ಘಟನೆ ನಡೆದು 27 ವರ್ಷಗಳು ಉರುಳಿದರೂ ನಾಲ್ಕೈದು ಸರ್ಕಾರಗಳು ಉರುಳಿದರೂ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಮರೀಚಿಕೆಯಾಗಿದೆ. ಬಹುಶಃ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಇದೊಂದು ಕಪ್ಪು ಚುಕ್ಕೆಯೇ ಸರಿ.
ಹಿಂದೂ ಸಮಾಜ ಈ ಎಲ್ಲಾ ಘಟನೆಗಳಿಂದ ಕಲಿಯಬೇಕಾಗಿರೋದು ತುಂಬಾ ಇದೆ. ಹಿಂದೂಗಳೇ ಬಹುಸಂಖ್ಯಾತರಾಗಿರುವ ಹಿಂದೂಸ್ತಾನದಲ್ಲಿ ಹಿಂದೂಗಳಿಗೆ ಇಂತಹುದೊಂದು ಪ್ರಸಂಗ ಎದುರಾಗುತ್ತೇ ಅದಕ್ಕೆ ಉಳಿದ ಹಿಂದೂಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ ಎಂದರೆ ಈ ಎಲ್ಲಾ ಘಟನೆಗಳಿಗೆ ಇಡಿಯ ಹಿಂದೂ ಸಮಾಜವೇ ಹೊಣೆ. ಹಿಂದೂಗಳು ಎಂದು ಜಾತಿ, ಪಂಗಡ, ಮೇಲು, ಕೀಳು ಎಂಬ ಕಟ್ಟುಪಾಡುಗಳಿಂದ ಹೊರಬರಲ್ವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತೆ.
ಲೇಖನ - ವೀರಕೇಸರಿ : ಇದು ನಿಮ್ಮ ಧ್ವನಿ
loading...



Post a Comment