Veerakesari 22:47
loading...
ಮಕರ ಸಂಕ್ರಾಂತಿಯಂದು ಕೊಲ್ಕತ್ತಾದಲ್ಲಿ ಜರುಗಿದ ಆರ್.ಎಸ್.ಎಸ್ ಸಮಾವೇಶ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ ನೆರೆದಿದ್ದ ಹಿಂದೂ ಭಾಂದವರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ(ಆರ್ ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಆರ್ ಎಸ್ಎಸ್ ಯಾರ ವಿರುದ್ಧವೂ ಇಲ್ಲ. ಹಿಂದೂ ಸಮುದಾಯದ ಬಲವರ್ಧನೆಗಾಗಿ ಕೆಲಸ ಮಾಡುತ್ತಿರುವ ಸಂಘಟನೆಯಷ್ಟೇ ಎಂದು ಹೇಳಿದ್ದಾರೆ.
ಹಿಂದೂಗಳಿಗೆ ಹಿಂದೂಸ್ತಾನದಲ್ಲಿಯೇ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಮುಕ್ತವಾಗಿ ನೆರವೇರಿಸಲು ಅವಕಾಶಗಳಿಲ್ಲ, ಇನ್ನು ನಾವು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತೇವೆ. ಈ ಎಲ್ಲಾ ಸ್ಥಿತಿಗಳಿಗೆ ಹಿಂದೂಗಳೇ ಕಾರಣ. ಹಿಂದೂಗಳಲ್ಲಿ ಒಗ್ಗಟ್ಟಿನ ಕೊರತೆ ಇರುವುದರಿಂದ ಈ ಎಲ್ಲ ಸನ್ನಿವೇಶಗಳನ್ನು ನಾವು ಎದುರಿಸಬೇಕಾಗಿದೆ. ಹಾಗಾಗಿ ನಾವು ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಆರ್.ಎಸ್.ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಪ್ರಾರಂಭಿಸುವಾಗ ಅನೇಕ ಅಡೆತಡೆಗಳು ಎದುರಾಗಿದ್ದವು, ಆದರೆ ಅವರು ಎಲ್ಲಾ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಹಿಂದೂಗಳ ಒಗ್ಗಟ್ಟಿಗಾಗಿ ಪ್ರಬಲ ಸಂಘಟನೆಯನ್ನು ಹುಟ್ಟುಹಾಕಿದರು. ಅದು ಇಂದಿಗೂ ಗಟ್ಟಿಯಾಗಿ ಉಳಿದುಕೊಂಡಿದೆ.ಆರ್.ಎಸ್.ಎಸ್ ನ ಪ್ರತಿಯೊಬ್ಬ ಕಾರ್ಯಕರ್ತನೂ ಹಿಂದೂ ಸಮಾಜದ ಅಭಿವೃದ್ಧಿ ಏಳಿಗೆಗಾಗಿ ಶ್ರಮಿಸಬೇಕಿದೆ.
ಹಿಂದೂಗಳ ಒಗ್ಗಟ್ಟಿಗಾಗಿ ಕೆಲಸ ಮಾಡುತ್ತಿರುವ ನಮ್ಮನ್ನು ಯಾರಿಂದಾದರೂ ತಡೆಯಲು ಸಾಧ್ಯವೆ? ಖಂಡಿತ ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ನಾವು ನಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಕ್ರಿಯಾಶೀಲತೆಯನ್ನು ಹೆಚ್ಚಿಸಿ, ಆಗ ಉಪದೇಶಗಳು ಹೆಚ್ಚುವುದಕ್ಕೆ ಸಾಧ್ಯವಿಲ್ಲ ಎಂದು ಮೋಹನ್ ಭಾಗವತ್ ಮಕರ ಸಂಕ್ರಾಂತಿಯ ಸಂದೇಶದಲ್ಲಿ ಕರೆ ನೀಡಿದ್ದಾರೆ. 
ಕೋಲ್ಕತಾದಲ್ಲಿ ಆರ್.ಎಸ್.ಎಸ್ ಹಿಂದೂ ಸಮಾವೇಶ ನಡೆಯುವುದನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ವಿರೋಧಿಸಿತ್ತು. ಆದರೆ ಅಲ್ಲಿನ ಹೈಕೋರ್ಟ್ ಆರ್.ಎಸ್.ಎಸ್ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಿತ್ತು.
loading...

Post a Comment

Powered by Blogger.