Showing posts with label Karnataka. Show all posts

Veerakesari 22:13
veerakesari.in
​ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಮುಸ್ಲಿಂ ಯುವಕರೊಬ್ಬರು ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡುವುದಕ್ಕೆ ಮುಂದಾಗಿದ್ದಾರೆ.
ಯುವಕ ಶಂಸುದ್ದೀನ್ ನದಾಫ್ ಎಂಬುವರೇ ಸಿಮೆಂಟ್ ನೀಡಲು ಮುಂದಾಗಿದ್ದು, ಈ ಕುರಿತು ಬುಧವಾರ ಮಾತನಾಡಿ, ಭಾವೈಕ್ಯತೆ ಮೆರೆಯುವ ಕಾರಣಕ್ಕಾಗಿ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಚೀಲ ಸಿಮೆಂಟ್ ನೀಡಲಾಗುವುದು. ಏ. 27 ರಂದು ಬೆಳಗ್ಗೆ ತಿರುಪತಿ ಎಕ್ಸ್‍ಪ್ರೆಸ್ ರೈಲಿಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿಂದ ಲಖನೌಗೆ ತೆರಳಲಾಗುವುದು ಎಂದು ತಿಳಿಸಿದ್ದಾರೆ.
ಏ. 29 ರಂದು ಅಯೋಧ್ಯೆ ತಲುಪಲಾಗುವುದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ಸಿಮೆಂಟ್ ಚೀಲದ ಮೊತ್ತದ ಹಣ ಪಾವತಿಸಿ ರಸೀದಿ ಪಡೆಯಲಾಗುವುದು. ಸಿಮೆಂಟ್ ನೀಡುವುದಕ್ಕೆ ಯಾರ ಒತ್ತಡವೂ ಇಲ್ಲ. ಸ್ವಯಂ ಪ್ರೇರಣೆಯಿಂದ ನೀಡಲಾಗುತ್ತಿದೆ. ತಮ್ಮ ಈ ಸೇವೆಗೆ ಕುಟುಂಬದ ಸಹಕಾರವೂ ಇದೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದರು ಎಂದು ನದಾಫ್‌ ತಿಳಿಸಿದ್ದಾರೆ.
ಚಿತ್ರನಟರೂ ಆಗಿರುವ ನದಾಫ್ ಈಗಾಗಲೇ ಧೂಳಿಪಟ ಸೇರಿದಂತೆ ಮೂರು ಚಿತ್ರಗಳಲ್ಲಿ ಸಹಕಲಾವಿದನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಲಾವಿದನಾಗಿ ಭಾವೈಕ್ಯತೆ ಮೆರೆಯಬೇಕಾಗಿದ್ದು ತಮ್ಮ ಕರ್ತವ್ಯ ಎಂದ ಅವರು, ನಗರದ ಗವಿಮಠಕ್ಕೆ ಸ್ನೇಹಿತರೊಂದಿಗೆ ಆಗಮಿಸಿ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
Source - Vijaya Karnataka
loading...

Veerakesari 22:06
veerakesari.in
​RSS ಕಾರ್ಯಕರ್ತ ರುದ್ರೇಶ್ ಹತ್ಯೆ ಸಂಬಂಧ ಎನ್ ಐ ಎ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿದ್ದು  ಜೆಹಾದಿ ಉಗ್ರರ ಅಟ್ಟಹಾಸ ಬಯಲಾಗಿದೆ.ಈ ಸಂಬಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (pfi) ಬೆಂಗಳೂರು ನಗರ ಜಿಲ್ಲಾದ್ಯಕ್ಷನ ಸಹಿತ ಐವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
RSS​ ಮುಖಂಡ ರುದ್ರೇಶ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಎನ್ ಐ ಎ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಆಜಿಮ್​ ಷರೀಫ್​, ಮೊಹಮದ್​ ಮುಜೀಬುಲ್ಲಾ​, ಮೊಹಮದ್​ ಮಜರ್​, ವಾಸಿಮ್​ ಅಹಮದ್ ಮತ್ತು ಇರ್ಫಾನ್​ ಪಾಷ ವಿರುದ್ಧ ಚಾರ್ಜ್​ಶೀಟ್​ ಅನ್ನು ಶಕ್ರವಾರ ಎನ್ ಐ ಎ  ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ .ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಚಾರ್ಜ್ ಶೀಟ್ ನಲ್ಲಿ ಏನಿದೆ.?
ತನಿಖೆಯ ಪ್ರಕಾರ ಇದೊಂದು ಭಯೋತ್ಪಾದನಾ ಕೃತ್ಯ. ಹಿಂದೂಗಳಲ್ಲಿ  ಭಯ ಬಿತ್ತಲು ಈ ಕೃತ್ಯ ಎಸಗಲಾಗಿದೆ. ಕೊಲೆಗೂ ಮುನ್ನ ಬೆಂಗಳೂರಿನ ಚೋಟಾ ಚಾರ್ ಮಿನಾರ್ ಪಕ್ಕದ ಅಕ್ಸಾ ಮಸೀದಿಯಲ್ಲಿ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಎನ್ಐಎ ಹೇಳಿದೆ. ಆರ್.ಎಸ್.ಎಸ್ ಯೂನಿಫಾರ್ಮ್ ನಲ್ಲಿರುವ ಕನಿಷ್ಠ ಇಬ್ಬರನ್ನು ಕೊಲ್ಲಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಈ ಮೂಲಕ ಇಸ್ಲಾಂ ಮತ್ತು ಜಿಹಾದ್ ನ ಗುರಿಯನ್ನು ನಾವು ಸಾಧಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ನಾವು ಈ ಕೃತ್ಯ ಎಸಗಿದ್ದಾಗಿ ಆರೋಪಿಗಳುಹೇಳಿದ್ದಾರೆ ಎಂದೂ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಆರೋಪಿತರು ಎಸ್ ಡಿ ಪಿ ಐ /ಪಿ ಎಫ್ ಐ ಸಂಘಟನೆಗೆ ಸೇರಿದ ಕಾರ್ಯಕರ್ತರಾಗಿದ್ದು ,ಹೊಸದಾಗಿ rssಗೆ  ಸೇರಲು ಬಯಸುವವರಲ್ಲಿ ಭಯ ಹುಟ್ಟಿಸಲು ರುದ್ರೇಶ್ ರನ್ನು ಹತ್ಯೆ ಮಾಡಿದ್ದಾರೆಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ಶಿವಾಜಿನಗರದಲ್ಲಿ ರುದ್ರೇಶ್ ಹತ್ಯೆ ಮಾಡಿದ್ದ ಆರೋಪಿಗಳು, ಜೆಸಿ ನಗರದಲ್ಲಿ ಫಣೀಂದ್ರ, ಸಂಜಯನಗರದ ವೆಂಕಟೇಶ್​ ಬಾಬು, ಸೇರಿದಂತೆ ಒಟ್ಟು 17 ಕಡೆ ಇಂಥಾ ದಾಳಿ ಮಾಡಿದ್ದಾಗಿ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.ಅದೇನೇ ಇರಲಿ ರುದ್ರೇಶ್ ಹತ್ಯೆಗೆ ನೈಜ ಕಾರಣವೇನು ಎನ್ನುವುದು ಚಾರ್ಜ್ ಶೀಟ್'ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದ್ದು ಆರೋಪಿಗಳಿಗೆ ಯಾವ ಶಿಕ್ಷೆ ಕಾದಿದೆ ಎನ್ನುವುದೇ ಸದ್ಯಕ್ಕೆ ಉಳಿದಿರುವ ಪ್ರಶ್ನೆಯಾಗಿದೆ.
Source - TNWnews
loading...

Veerakesari 22:01
veerakesari.in
​ನಡೆದಾಡುವ ದೇವರು "ಡಾ ಶಿವಕುಮಾರ ಸ್ವಾಮಿಜೀಗೆ"ಜನುಮ ದಿನದ ಶುಭಾಶಯಗಳು
ಕರ್ನಾಟಕ ರತ್ನ ಡಾ|| ಶ್ರೀ.ಶಿವಕುಮಾರ ಸ್ವಾಮಿಗಳು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು.೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು "ನಿತ್ಯ ದಾಸೋಹ" ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಶ್ರೀಗಳು. ಮಾರ್ಚ್ 3 1930ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿರುವರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ.
ಶ್ರೀಗಳ ಜೀವನ :
ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನಪ್ಪ ಮತ್ತುತಾಯಿ ಗಂಗಮ್ಮನವರಿಗೆ ಎಪ್ರಿಲ್ 1, 1908ರಲ್ಲಿ 13ನೇ ಮಗು ಶಿವಣ್ಣನವರಾಗಿ ಜನಿಸಿದರು. 1913ರಲ್ಲಿ ಪ್ರಾಥಮಿಕ ಮತ್ತು 1921ರಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ನಾಗವಲ್ಲಿಯಲ್ಲಿ ಮುಗಿಸಿ 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟವಾಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು.
ಬೆಂಗಳೂರಿನಲ್ಲಿ 'ಧರ್ಮಪ್ರವರ್ತ ರಾವ್ ಬಹದ್ದೂರ್ ಶ್ರೀ ಗುಬ್ಬಿ ತೊಂಟದಪ್ಪ ಧರ್ಮ ಛತ್ರ' ದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಶಿವಣ್ಣನವರು ಶಿಸ್ತುಬದ್ಧವಾದ ಕಟ್ಟುನಿಟ್ಟಾದ ವಿದ್ಯಾರ್ಥಿ ಜೀವನ ನಡೆಸಿದರು.ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟವಂತೂ ಮುಂದುವರೆದೇ ಇತ್ತು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗೂ ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಬಂದು ಹೋಗಿ ಮಾಡುತ್ತಿದ್ದರು, ಎಷ್ಟರ ಮಟ್ಟಿಗೆ ಎಂದರೆ ಇಡೀ ತುಮಕೂರು ಜಿಲ್ಲೆ ಒಮ್ಮೆ ಭೀಕರ ಪ್ಲೇಗ್ ರೋಗಕ್ಕೆ ತತ್ತರಿಸಿತು ಹಾಗಿದ್ದಾಗ್ಯೂ ಶಿವಣ್ಣನವರ ಹಾಗೂ ಮಠದ ಒಡನಾಟ ಎಂದಿನತೆಯೇ ಇತ್ತು.
ಮಠಾಧಿಪತಿಯಾಗಿ ಪಟ್ಟಾಧಿಕಾರ :
ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ 1941 ರಲ್ಲಿ ಬರ ಸಿಡಿಲು ಬಡಿದಂತಹ ಒಂದು ಘಟನೆ ನಡೆಯುತ್ತದೆ. ಅದೇನೆಂದರೆ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನವರ ಕಡೆ ಉದ್ಧಾನ ಸ್ವಾಮಿಜಿಗಳ ದೃಷ್ಟಿ ಹರಿಯುತ್ತದೆ. ಅಷ್ಟರಲ್ಲಾಗಲೇ ಶಿವಣ್ಣನವರ ಹಿನ್ನೆಲೆಯ ಅರಿವಿದ್ದ ಉದ್ಧಾನ ಶ್ರೀಗಳು ಯಾರ ಹೇಳಿಕೆಗೂ ಕಾಯದೆ ಎಲ್ಲರ ಸಮ್ಮುಖದಲ್ಲಿ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಬಿಡುತ್ತಾರೆ. ಎಲ್ಲರಂತೆ ಸಾಮಾನ್ಯರಾಗಿ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣನವರು ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ 'ಶ್ರೀ ಶಿವಕುಮಾರ ಸ್ವಾಮಿಜಿ'ಗಳಾಗಿ ಹಿಂದಿರುಗುತ್ತಾರೆ ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ. 
ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಮತ್ತೆ ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸುತ್ತಲೂ ಹಾಗು ಶಿಸ್ತುಬದ್ಧ ವಿದ್ಯಾರ್ಥಿಯಾಗಿಯೂ ತಮ್ಮ ಒಡನಾಡಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.ವಿದ್ಯಾಭ್ಯಾಸ ಮುಗಿದು ಸ್ವಾಮಿಜಿಯವರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿ, ಅಂದಿನಿಂದ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ಇದಾಗಿ ಮುಂದೆ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತವೂ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ.
ಮಠಾಧಿಕಾರದ ಆರಂಭದ ದಿನಗಳು :
ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು.
ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ 'ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ' ಎಂಬ ಆಡು ನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗು ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ.
ಅಷ್ಟರಲ್ಲಾಗಲೇ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ಅಡಿಯಿಡುತ್ತಿದ್ದ ಭಾರತ ಶಿಕ್ಷಣದ ಮಹತ್ವವನ್ನು ದೇಶದೆಲ್ಲೆಡೆ ಪಸರಿಸಲು ಹಾಗು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಲು ಸರ್ಕಾರವೂ ಸೇರಿದಂತೆ ಅನೇಕ ಮಹನೀಯರು ಮೊದಲಾದರು. ಆದರೆ ಸಿದ್ದಗಂಗೆಯಲ್ಲಿ ಅದಾಗಲೇ ಅವೆಲ್ಲವೂ ಕಾರ್ಯರೂಪಕ್ಕೆ ಬಂದಾಗಿತ್ತು. ಸಾಲದ್ದಕ್ಕೆ ಅಲ್ಲಿ ಕಲಿಯುತ್ತಿದ್ದ ಬಹುಪಾಲು ಎಲ್ಲರೂ ಗ್ರಾಮೀಣ ಮಕ್ಕಳೇ. ಈ ಕಾರ್ಯ ರಾಷ್ಟ್ರ ಮಟ್ಟದಲ್ಲೂ ಬಹಳ ಶ್ಲಾಘನೆಗೆ ಒಳಗಾಗಿ, ಸಿದ್ದಗಂಗೆಯ ಕೀರ್ತಿ ಎಲ್ಲೆಡೆ ಹರಡಲು ಪ್ರಾರಂಭವಾಯಿತು.ಸಿದ್ದಗಂಗೆಯ ಕೀರ್ತಿ ಪಸರಿಸಿದಂತೆ ಅಲ್ಲಿನ ಭಕ್ತ ವರ್ಗವೂ, ವಿಧ್ಯಾರ್ಥಿ ಸಂಕುಲವೂ ಕಾಲಕ್ರಮೇಣ ಹೆಚ್ಚುತ್ತಾ ಹೋಯಿತು. ಇದು ಸ್ವಾಮೀಜಿಯವರ ದೂರದರ್ಶಿತ್ವಕ್ಕೆ ಒಂದು ಉದಾಹರಣೆ.
ಶ್ರೀಗಳ ದಿನಚರಿ : 
ಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಾರೆ. ನಂತರ ಆಹಾರ ಸೇವನೆ, ಮುಂಜಾನೆ ಆರೂವರೆ ಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, 'ಸಿಹಿ' ಹಾಗೂ 'ಖಾರ ಚಟ್ನಿ' ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, 'ಬೇವಿನ-ಚಕ್ಕೆ ಕಷಾಯ' ಸೇವನೆಯಾಗುತ್ತದೆ.
ಪ್ರಾರ್ಥನೆ : 
ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಗೊಳ್ಳುತ್ತಾರೆ. ಪ್ರಾರ್ಥನೆಯ ನಂತರ, ಕಚೇರಿಗೆ ಧಾವಿಸಿ ಅಲ್ಲಿ,ಪತ್ರಿಕೆಗಳ ವಾಚನವಾಗುತ್ತದೆ. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆದರ್ಶನ ನೀಡುತ್ತಾರೆ. ಮಳೆ-ಬೆಳೆ, ಕುಶಲೋಪರಿ ವಿಚಾರ,ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಾರಲ್ಲದೆ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ "ಕಾಯಕವೇ ಕೈಲಾಸ" ಎಂದು ನುಡಿಯಲ್ಲಿ ಮಾತ್ರ ಹೇಳದೆಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ.
ಮಠದ ಪ್ರಸಾದ ನಿಲಯದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಾರೆ.ಭಕ್ತರ ಕಷ್ಟ-ಸುಖಕ್ಕೆ ಸ್ಪಂದನ, ಮಧ್ಯಾನ್ಹ ಮೂರು ಗಂಟೆಯವರೆವಿಗೆ ನಿರಂತರವಾಗಿ ಸಾಗುತ್ತದೆ. ಇದರ ಬಳಿಕ ಶ್ರೀಗಳು,ನೇರವಾಗಿಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಾರೆ.ಇದರ ಬಳಿಕ, ಒಂದು ಎಳ್ಳಿಕಾಯಿ ಗಾತ್ರದಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ ಊಟಮಾಡುತ್ತಾರೆ. ಸಂಜೆ 4 ಗಂಟೆಯ ನಂತರ ಪುನಃಭಕ್ತಗಣದ ಬೇಟಿ. ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ. ದಾಸೋಹದ ಮಾಹಿತಿ, ಸುಮಾರು ರಾತ್ರಿ 9 ಗಂಟೆಯವರೆಗೂ ನಡೆಯುತ್ತದೆ.
ಶ್ರೀಗಳ ದಿನಚರಿ ಮುಗಿಯುವುದು ರಾತ್ರಿ 11 ಗಂಟೆಗೆ ಹಳೆಯ ಮಠದಲ್ಲಿ ರಾತ್ರಿಯ ಕಾರ್ಯಕ್ರಮ. ಸ್ನಾನ, ಪೂಜೆ, ಮತ್ತು, ಪ್ರಸಾದ. ಒಂದು ಚಪಾತಿ ಇಲ್ಲವೇ ಒಂದು ದೋಸೆ. ಅದರ ಜೊತೆಗೆ ಚಟ್ಣಿ ಅಥವಾ ಪಲ್ಯ. ಇದಿಲ್ಲದೇ ಹೋದರೆ,ಉಪ್ಪಿಟ್ಟು, ನಂತರ ಹಣ್ಣಿನ ಸೇವನೆ. ಹತ್ತು ಗಂಟೆಗೆ ಸ್ವಾಮಿಗಳು ಸಭಾಂಗಣದಲ್ಲಿ ಹಾಜರಾಗುತ್ತಾರೆ. 'ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ' ದ ಒಂದು ದೃಶ್ಯವನ್ನು ನೋಡಿದ ಬಳಿಕ ಅಂದಿನ ದಿನದ ಕಾಯಕಕ್ಕೆ ವಿರಾಮ.
ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದಾರೆ. ಇದು ಕನಿಷ್ಠ ಅರ್ಧತಾಸಾದರೂ ನದೆಯುತ್ತದೆ. ಹನ್ನೊಂದು ಗಂಟೆಗೆ ಮಲಗುತ್ತಾರೆ. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತದೆ. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಾರೆ.ದೂರದ ಊರುಗಳಿಗೂ ಓಡಾಡುತ್ತಾರೆ. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಾರೆ. ಬಾಕೀ ಸಂದರ್ಭದಲ್ಲಿ ಏನನ್ನೂ ಸೇವಿಸುವುದಿಲ್ಲ.ಕಳೆದ 8 ದಶಕಗಳ ಜೀವನ ಇದೇ ರೀತಿ ಸಾಗಿದೆ. ಶ್ರೀಗಳ ಆರೋಗ್ಯವೂ ಚೆನ್ನಾಗಿಯೇ ಇದೆ. ಶ್ರೀಗಳವರ ಮೇಲೆ ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ.
ಪ್ರಶಸ್ತಿಗಳು ಮತ್ತು ಸನ್ಮಾನಗಳು :
ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪೂಜ್ಯ ಸ್ವಾಮೀಜಿಯವರ 100ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ.2015ರಲ್ಲಿ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
110 ನೆಯ ಹುಟ್ಟುಹಬ್ಬ :
2017ಏಪ್ರಿಲ್ 1 ರಂದು ಶ್ರೀ ಶಿವಮೂರ್ತಿ ಯತಿಗಳು 110 ನೆಯ ವರ್ಷಕ್ಕೆ ಕಾಲಿಡುತ್ತಾರೆ..ಇಂತಹ ಮಹಾನ್ ವ್ಯಕ್ತಿಗೆ,ನಡೆದಾಡುವಂತಹ ದೇವರಿಗೆ ನನ್ನದೊಂದು ಭಕ್ತಿಪೂರ್ವಕ ನಮಸ್ಕಾರಗಳು.
loading...

Veerakesari 02:44
ರಾಯಚೂರಿನಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಳ್ಳು ದಾಖಲೆಗಳನ್ನ ಸೃಷ್ಠಿಸಿ ಅಪ್ರಾಪ್ತ ಹಿಂದೂ ಹುಡುಗಿಯನ್ನ ಮುಸ್ಲಿಂ ಹುಡುಗ ಮದುವೆಯಾಗಲು ಮುಂದಾಗಿರುವುದು ಬಯಲಾಗಿದೆ. ಸಂಬಂಧವೇ ಇಲ್ಲದ ಗ್ರಾಮದ ಸುಳ್ಳು ದಾಖಲೆಗಳನ್ನ ಸೃಷ್ಠಿಸಿರುವ ಈ ದೊಡ್ಡ ಜಾಲದ ಬಗ್ಗೆ ಅನುಮಾನ ಮೂಡಿಸಿದೆ. ಸದ್ಯ ಹುಡುಗನ ವಿರುದ್ದ ಹುಡುಗಿ ಪೋಷಕರು ಬೀದರ್‍ನಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

 ಯುವತಿ ನಾಪತ್ತೆಯಾದ ದಿನವೇ ಸೃಷ್ಠಿಯಾದ ಈ ಸುಳ್ಳು ದಾಖಲೆಗಳಿಂದ ಯುವತಿಗೆ 19 ವರ್ಷಗಳಾಗಿವೆ ಅಂತ ಮದುವೆಗೆ ಅರ್ಜಿ ಸಲ್ಲಿಸಲಾಗಿದೆ. ಬೀದರ್‍ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಶೇಖ್ ಜಮೀಲ್ ಅಪ್ರಾಪ್ತೆಯನ್ನ ಮದುವೆಯಾಗಲು ಮುಂದಾಗಿದ್ದಾನೆ. ಸುಳ್ಳು ದಾಖಲೆ ಸೃಷ್ಠಿಸಿ ಬಡ ಯುವತಿಯ ಮನ ಪರಿವರ್ತಿಸಿ ಲವ್ ಜಿಹಾದ್ ನಡೆದಿದೆ ಅಂತ ಗ್ರಾಮಸ್ಥರು, ಯುವತಿ ಪೋಷಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.

ನಮಗೆ ಅರಿವಿಲ್ಲದೆ ಸುಳ್ಳು ದಾಖಲೆಯನ್ನ ಪಡೆದಿದ್ದಾರೆ ಅಂತ ಮೆದಕಿನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಬಿಲ್ ಕಲೆಕ್ಟರ್ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಚ್ 2 ರಂದು ನಕಲಿ ವಾಸಸ್ಥಳ ಪ್ರಮಾಣ ಪತ್ರ ಪಡೆದಿದ್ದು ಮೆದಕಿನಾಳ ಗ್ರಾ.ಪಂ.ನ ಸಿಸಿಟಿವಿ ಕ್ಯಾಮೆರಾದ ಅಂದಿನ ದೃಶ್ಯಾವಳಿಗಳನ್ನ ಅಳಿಸಿ ಹಾಕಲಾಗಿದೆ. ಇದೊಂದು ವ್ಯವಸ್ಥಿತ ಜಾಲದ ಕೆಲಸವೇನೋ ಅನ್ನೋ ಅನುಮಾನ ಮೂಡಿವೆ. ಬೀದರ್‍ನ ಮಹಿಳಾ ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತೆಯನ್ನ ಪೀಡಿಸುತ್ತಿದ್ದ ಶೇಖ್ ಜಮೀಲ್ ಮಾರ್ಚ್ 2 ರಂದು ಅವಳನ್ನ ಅಪಹರಿಸಿದ್ದಾನೆ ಅಂತ ಯುವತಿಯ ಪೋಷಕರು ಬೀದರ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಟ್ಟಿನಲ್ಲಿ, ಇಷ್ಟವಿಲ್ಲದಿದ್ದರೂ ಬಡ ಯುವತಿಯ ಮನವೊಲಿಸಿ ಅಥವಾ ಒತ್ತಾಯಪೂರ್ವಕವಾಗಿ ಶೇಖ್ ಜಮೀಲ್ ಲವ್ ಜಿಹಾದ್‍ಗೆ ಮುಂದಾಗಿದ್ದಾನೆ ಅಂತ ಆರೋಪ ಕೇಳಿಬಂದಿವೆ. ಸುಳ್ಳುದಾಖಲೆಗಳ ಸೃಷ್ಠಿ ಹಾಗೂ ಒಟ್ಟಾರೆ ಪ್ರಕರಣವನ್ನ ನೋಡಿದಾಗ ನಿಜಕ್ಕೂ ಲವ್ ಜಿಹಾದ್ ಜಾಲ ರಾಯಚೂರು ಹಾಗೂ ಬೀದರ್‍ನಲ್ಲಿ ಕೆಲಸ ಮಾಡುತ್ತಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿ ಮೂಡಿವೆ.

ಕೃಪೆ :ಪಬ್ಲಿಕ್ ಟಿವಿ

Veerakesari 23:07
ಬೆಂಗಳೂರು :  ದಲಿತ ಮುಖಂಡ ವಾಸು ಅವರ ಮೇಲೆ ಕಿರಾತಕರು ಮಾರಣಾಂತಿಕ ವಾಗಿ ಹಲ್ಲೆ ನಡೆಸಿ, ಕೊಲೆಗೈದಿದ್ದಾರೆ.

ಆನೇಕಲ್ ತಾಲೂಕಿನ ಬೊಮ್ಮಸಂದ್ರ ಪುರಸಭೆಯ ಬಿಜೆಪಿ ಸದಸ್ಯ ಕಿತ್ತಗಾನಹಳ್ಳಿ ವಾಸು ಕೊಲೆಯಾದ ದುರದೈವಿ.

ಇಂದು ಬೆಳಿಗ್ಗೆ ಸುಮಾರು 5 ಘಂಟೆಯ ಅಸುಪಾಸಿನಲ್ಲಿ ಹೊಸೂರು ಮುಖ್ಯ ರಸ್ತೆಯ ಬಿಟಿಎಲ್ ಕಾಲೇಜು ಹತ್ತಿರ ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಮಾರಕಾಸ್ರಗಳಿಂದ ಕಡಿದು ಕೊಂದಿದ್ದಾರೆ

ಕೊಲೆಯಾದ ವಾಸು ಆನೇಕಲ್ ತಾಲೂಕಿನ ಬಿಜೆಪಿ ಮುಖಂಡ, ಪುರಸಭೆ ಸದಸ್ಯ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯೆ ಪತಿ ಎಂದು ತಿಳಿದು ಬಂದಿದೆ.

Veerakesari 01:40
veerakesari.in
​ಬೆಂಗಳೂರಿನಲ್ಲಿ ನಡೆದ ಆರ್‌ ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಕೊಲೆ ಪ್ರಕರಣದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಆಲ್‌ ಉಮರ್‌ ಮತ್ತು ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಗಳ ಕೈವಾಡವಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
ಕೊಲೆ ಪ್ರಕರಣದಲ್ಲಿ ಆರೋಪಿ, ಪಿಎಫ್‌ಐ ನ ನಾಯಕ ಅಸೀಂ ಷರೀಫ್‌, ವಾಸೀಂ ಅಹಮದ್‌, ಮುಜೀಬ್‌, ಸಿದ್ದಿಕಿ, ಇರ್ಫಾನ್‌ ಪಾಷಾ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ಅವರಿದ್ದ ಏಕಸದಸ್ಯಪೀಠದ ಮುಂದೆ ಎಸ್‌ಪಿಪಿ-2 ಸಂದೇಶ್‌ ಜೆ.ಚೌಟ ಗುರುವಾರ ಈ ವಿಷಯ ತಿಳಿಸಿದರು.
''ನೆರೆಯ ತಮಿಳುನಾಡು ನಿಷೇಧಿಸಿರುವ ಆಲ್‌ ಉಮರ್‌ ಸಂಘಟನೆಗೆ ಸೇರಿದ ಆರೋಪಿಗಳು,ಭಯೋತ್ಪಾದಕ ಸಂಘಟನೆ ಇಂಡಿಯನ್‌ ಮುಜಾಹಿದ್ದೀನ್‌ ನಾಯಕರ ಜೊತೆ ಸತತ ಸಂಪರ್ಕದಲ್ಲಿದ್ದರು. ಅದಕ್ಕೆ ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲ್‌ ಸಂಭಾಷಣೆಯ ವಿವರಗಳಿವೆ''ಎಂದು ವಿವರಿಸಿದರು.
''ಬಂಧಿತ ಆರೋಪಿಗಳೇ ನೀಡಿರುವ ಸ್ವಯಂ ಹೇಳಿಕೆಯಂತೆ ಅವರೆಲ್ಲಾ ವ್ಯವಸ್ಥಿತ ಸಂಚು ಅಥವಾ ಪಿತೂರಿ ರೂಪಿಸಿ ಈ ಕೊಲೆ ಮಾಡಿದ್ದಾರೆ.ಒಂದೇ ಸಮುದಾಯದ ಅಥವಾ ಸಂಘಟನೆಯ ನಾಯಕರನ್ನು ಮುಗಿಸುವ ಸಲುವಾಗಿಯೇ ಅವರಿಗೆ ವಿಶೇಷ ತರಬೇತಿ ನೀಡಲಾಗಿತ್ತು.ಅದರಲ್ಲೂ ವಿಶೇಷವಾಗಿ ಒಂದೇ ಎಟಿಗೆ ಕುತ್ತಿಗೆಗೆ ಹೊಡೆದು ಕೊಲ್ಲುವುದಕ್ಕೆ ಹಿಂದಿನ ಕೃತ್ಯಗಳ ವಿಡಿಯೋ ದೃಶ್ಯಾವಳಿ ತೋರಿಸಿ ಅವರಿಗೆ ತರಬೇತಿ ಕೊಡಲಾಗಿತ್ತು. ಕುತ್ತಿಗೆಗೆ ಒಂದೇ ಬಲವಾದ ಹೊಡೆತ ನೀಡುವುದರಿಂದ ಮೆದುಳಿಗೆ ರಕ್ತ ಸಂಚಲನೆ ನಿಂತು ಹೋಗಿ ವ್ಯಕ್ತಿ ಸಾವನ್ನಪುತ್ತಾನೆ. ಅದೇ ಮಾದರಿಯನ್ನು ರುದ್ರೇಶ್‌ ಕೊಲ್ಲಲು ಬಳಕೆ ಮಾಡಲಾಗಿದೆ''ಎಂದು ಸಂದೇಶ್‌ ಚೌಟ ಹೇಳಿದರು.
ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು.
ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ನಾವಡಗಿ,'' ಈ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರದ ಭದ್ರತೆ ಹಾಗೂ ಏಕತೆಯ ದೃಷ್ಟಿಯಿಂದ ಎನ್‌ಐಎ ತನಿಖೆ ಕೈಗೆತ್ತಿಕೊಂಡಿದೆ. ನ್ಯಾಯಾಲಯ ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದರು.
ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ :
2016ರ ಅಕ್ಟೋಬರ್ ತಿಂಗಳಿನಲ್ಲಿ ಶಿವಾಜಿನಗರದಲ್ಲಿರುವ ಕಾಮರಾಜ ರಸ್ತೆ ಬಳಿ ಬೈಕ್ ನಲ್ಲಿ ಬಂದ ಕೆಲ ದುಷ್ಕರ್ಮಿಗಳು ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರನೇ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ. 
Source - Udayavani
​
loading...

Veerakesari 00:39
veerakesari.in
​ರಿಯಾಲಿಟಿ ಶೋನಲ್ಲಿ ಹಿಂದೂ ದೇವರನಾಮ ಹಾಡಿದ್ದಕ್ಕೆ ಮುಸ್ಲಿಂ ಯುವತಿ ಸುಹಾನ ಸಯೀದ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ಹಾಗೂ ಮೌಲ್ವಿಗಳು ಸುಹಾನ ಪರ ನಿಂತಿದ್ದಾರೆ.
ಬುಧವಾರದಂದು ಸುಹಾನ ವಿಚಾರದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದ ಮೌಲ್ವಿಗಳು ಹಾಗೂ ಮುಸ್ಲಿಂ ಮುಖಂಡರು, ಸುಹಾನಗೆ ಪತ್ರ ಬರೆದು ನೈತಿಕ ಬೆಂಬಲ ನೀಡಲು ನಿರ್ಧರಿಸಿದ್ದಾರೆ.
ಸುಹಾನ ತಪ್ಪು ಕೆಲಸ ಮಾಡಿಲ್ಲ. ಆಕೆಯನ್ನು ಒಬ್ಬ ಸ್ಫರ್ಧಿಯಾಗಿ ನೋಡಿ. ಆಕೆಯನ್ನು ಧರ್ಮದ ಚೌಕಟ್ಟಿನಲ್ಲಿ ಇಡಬಾರದು. ಆಕೆ ವಿರುದ್ಧ ಅಶ್ಲೀಲ ಪದ ಪ್ರಯೋಗ ಮಾಡಿದವರನ್ನು ಧರ್ಮದಿಂದ ಹೊರಗಟ್ಟುತ್ತೇವೆ. ಬುರ್ಖಾ ಹಾಕಿಕೊಂಡು ಭಕ್ತಿ ಗೀತೆ ಹಾಡಿದರೆ ಅದು ತಪ್ಪಲ್ಲ. ನಮ್ಮ ಧರ್ಮ ಇತರೆ ಧರ್ಮಗಳನ್ನು ಗೌರವಿಸುತ್ತೆ ಅಂತಾ ಹೇಳಿಕೆ ನೀಡಿದ್ದಾರೆ.
ಸುಹಾನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಸಂದೇಶ ಹರಿಯಬಿಟ್ಟವರ ವಿರುದ್ಧ ಸೈಬರ್ ಕ್ರೈಂ ಗೆ ದೂರು ನೀಡಲು ಮುಸ್ಲಿಂ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ನಿರ್ಧರಿಸಿದ್ದಾರೆ.
Source - Public Tv
loading...

Veerakesari 04:20

 ಕೆಲವು ದಿನದಿಂದ ಸಮಾಜಿಕ ಜಾಲತಾಣದಲ್ಲಿ ಧರ್ಮದ ಪರವಾದ ನಿಂದನ್ಮಾಕ ಹೇಳಿಕೆಗಳು ಹರಿದಾಡುತ್ತಾ ಇದ್ದು ಇದಕ್ಕೆ ಕಾರಣ ಮುಸ್ಲಿಂ ಸಮುದಾಯದ ಯುವತಿ ಸುಹಾನ ಸಾಗರ್ ಪ್ರತಿಷ್ಠಿತ ರಿಯಾಲಿಟಿ ಶೋ ಸರಿಗಮಪ ಸೀಸನ್ 13 ರ ಸ್ಪರ್ಧಿ .

 ವಿಚಿತ್ರ ಅಂದರೆ ಈ ಶೋ ಆರಂಭಕ್ಕೂ ಮುನಾ ಇದೀಗ ಬಾರಿ ಸುದ್ದಿಯಲ್ಲಿ ಇದೆ ಕಾರಣ ಅರ್ಹತಾ ಸುತ್ತಿನಲ್ಲಿ ಶಿವಮೊಗ್ಗ ಮೂಲದ ಸಾಗರ ತಾಲೂಕಿನ ಸುಹಾನ ಅನುವ ಮುಸ್ಲಿಂ ಹೆಣ್ಣು ಮಗಳು ಇದರಲ್ಲಿ ಭಾಗವಹಿಸಿ ಇಡೀ ದೇಶದ ಗಮನ ಸೇಳೆದಿದ್ದಾಳೆ . ಆದರೆ ಇವಳ ಹಾಡುಗಾರಿಕೆಯನ್ನ ತಮ್ಮದೆ ಧರ್ಮದ ಕೆಲವು ಮುಖ್ಯಸ್ಥರು ವಿರೋಧ ವ್ಯಕ್ತಪಡಿಸಿದರು .
ಇಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆಲವು ಕಿಡಿಗೆಡಿಗಳು ಸುಹಾನರಿಗೆ ಮಂಗಳೂರು ಮುಸ್ಲಿಂ ಪೇಸ್ಬುಕ್ ಪೇಜ್ ಮುಖೆನಾ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಇದೀಗ ಆ ಬೆದರಿಕೆ ಇಡೀ ದೇಶದಾದ್ಯಂತ ಸಂಚಲನ ಉಂಟು ಮಾಡಿದು ಹಲವಾರು ಸಂಘಟನೆಗಳು ಸುಹಾನರಿಗೆ ಬೆಂಬಲ ಘೊಷಿಸಿದ ಬೆನ್ನಲೆ ರಾಜ್ಯ ಸರಕಾರ ಎಚ್ಚೆತ್ತು ಕೊಂಡು ಬೆದರಿಕೆ ಹಾಕಿದ ಪೇಜ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವ ಯುಟಿ ಖಾದರ್ ಸೂಚಿಸಿದ್ದಾರೆ .
ಈ ಹಿಂದೆಯೂ ಹಲವಾರು ಕೋಮು ಭಾವನೆಗೆ ಧಕ್ಕೆ ,ಕೊಲೆ ಬೆದರಿಕೆ ದರೋಡೆಗೆ ಪ್ರೇರಣೆ ಮುಂತಾದ ಪ್ರಕರಣಗಳು ಮಂಗಳೂರು ಮುಸ್ಲಿಂ  ಪುಟದ ಮೇಲೆ ಇದ್ದರೂ ಇದುವರೆಗೂ ಅದರ ನಿರ್ವಾಹಕನ ಬಂದನ ಮಾಡದೆ ಇದದ್ದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದು ಜನ ಆಕ್ರೋಶಕ್ಕೆ ತುತ್ತಾಗಿದೆ .

ಪೊಲೀಸ್ ಇಲಾಖೆ ಆದಷ್ಟು ಬೇಗ ಎಚ್ಚೆತ್ತು ಕೊಂಡು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಒತ್ತಾಯಿಸಿದಾರೆ

Veerakesari 00:17
veerakesari.in
​
​ಕಳೆದ ಫೆ.21 ರಂದು ಬಳ್ಳಾರಿ ಜಿಲ್ಲೆ ಹುಬ್ಬಳ್ಳಿ ತಾಲೂಕು ಕೊಟ್ಟೂರು ಜಾತ್ರಾ ಮಹೋತ್ಸವದಲ್ಲಿ ಭಾರೀ ಪ್ರಮಾಣದ ರಥ ಮಗುಚಿ ಬಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದಕ್ಕೆ ಕಾಮಧೇನುವೊಂದು ಕಾರಣವೇ? ಹಾಗೆಂದು ಅಲ್ಲಿನ ಭಕ್ತ ಸಮೂಹ ಮಾತನಾಡಿಕೊಳ್ಳುತ್ತಿದೆ. ಸುಮಾರು 60 ಅಡಿ ಎತ್ತರದ ಭಾರೀ ಗಾತ್ರದ ರಥ ಎಳೆಯುವ ಸಂದರ್ಭದಲ್ಲಿ ಪಕ್ಕಕ್ಕೆ ವಾಲಿ ಉರುಳಿಬಿತ್ತಾದರೂ ಸಹಸ್ರಾರು ಭಕ್ತರಿದ್ದರೂ ಯಾವುದೇ ಪ್ರಾಣಾಪಾಯವಾಗಲಿ, ಗಾಯಗಳಾಗಲಿ, ಕಾಲ್ತುಳಿತವಾಗಲಿ ಸಂಭವಿಸಿಲ್ಲ. ಇದಕ್ಕೆ ಕಾರಣ ಆ ಊರಿನ ಬಸವ. ರಥ ಬೀಳುವ ಐದು ನಿಮಿಷಗಳ ಮುಂಚೆ ಏಕಾಏಕಿ ನುಗ್ಗಿದ ಬಸವ ಅಲ್ಲಿನ ಭಕ್ತರನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದ ಎಂದು ಹೇಳಲಾಗುತ್ತಿದೆ.
ಲಕ್ಷಾಂತರ ಜನ ಸೇರುವ ಈ ಜಾತ್ರೆಯಲ್ಲಿ ಕೊಟ್ಟೂರೇಶ್ವರನ ರಥವನ್ನು ಎಳೆಯಲಾಗುತ್ತದೆ. ಒಮ್ಮೆಲೆ ಸಾವಿರಾರು ಜನ ಸೇರಿ ರಥವನ್ನು ಎಳೆಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅದೆಲ್ಲಿತ್ತೋ ಏನೋ ಬಸವವೊಂದು ಬಂದು ರಥ ಬೀಳುವ ಭಾಗದಲ್ಲಿ ಅಡ್ಡಾದಿಡ್ಡಿ ನುಗ್ಗಿ ಓಡಾಡಿದೆ. ಆಗ ಭಕ್ತರು ಚೆಲ್ಲಾಪಿಲ್ಲಿಯಾಗಿದ್ದಾರೆ. ಇದಾದ ಎರಡು ನಿಮಿಷಗಳ ನಂತರ ರಥ ಉರುಳಿಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾರಿಗೂ ಏನೂ ಆಗಿಲ್ಲ. ಇದು ಪವಾಡವೋ, ಕಾಕತಾಳಿಯವೋ, ದೇವರ ಕೃಪೆಯೋ ಅಥವಾ ದೇವರ ರೂಪದಲ್ಲಿ ಬಸವನೇ ಬಂದು ಭಕ್ತರನ್ನು ಕಾಪಾಡಿದನೋ. ಒಟ್ಟಿನಲ್ಲಿ ಆಗಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಲು ಈ ಬಸವ ಕಾರಣವಾಗಿರುವುದಕ್ಕೆ ಕೊಟ್ಟೂರಿನಲ್ಲೀಗ ಬಸವನ ಆರಾಧನೆ ನಡೆಯುತ್ತಿದೆ.
ಈ ಬಸವ ಇಲ್ಲದಿದ್ದರೆ ಅಂದು ಏನಾಗುತ್ತಿತ್ತೋ ಏನೋ ಊಹಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ. 60 ಅಡಿ ಎತ್ತರದ ಭಾರೀ ಗಾತ್ರದ ರಥ ಅಚ್ಚು ಮುರಿದು ಬಿದ್ದ ಪರಿಣಾಮಕ್ಕೆ ಅದೆಷ್ಟು ಮಂದಿ ಸಾಯಬೇಕಾಗಿತ್ತು. ಗಾಬರಿಯಿಂದ ಕಾಲ್ತುಳಿತದಿಂದ ಮತ್ತಷ್ಟು ಅನಾಹುತ ಸಂಭವಿಸಬೇಕಿತ್ತು. ಆದರೆ ಈ ಬಸವ ನೀಡಿದ ಮುನ್ಸೂಚನೆಯಿಂದ ದುರಂತ ತಪ್ಪಿದಂತಾಗಿದೆ.
loading...

Veerakesari 05:59
veerakesari.in
​
​ಅಮೆರಿಕಾದ ಜೋಡಿಯೊಂದು ಭಾರತೀಯ ಸಂಪ್ರದಾಯಕ್ಕೆ ಮನಸೋತು, ಮೈಸೂರಿನಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮತ್ತೆ ತಮ್ಮ ದೇಶಕ್ಕೆ ತೆರಳಿದ್ದಾರೆ.
ಅಮೆರಿಕದ ಇಂಕಾ ರಾಜ ಮನೆತನದ ಸದಸ್ಯರಲ್ಲೊಬ್ಬರಾದ ಕಲ್ಕಿ ಹೆನ್ರಿಕ್ ಹಾಗೂ ಅಮೆರಿಕಾದ ಎಸ್ಸಾ ಜೆಸ್ನಿಯಾ ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿ ವೇದಗಳ ಅಧ್ಯಯನ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದರು.
ಈ ಜೋಡಿ ಇಲ್ಲಿನ ಭಾರತೀಯ ಸಂಪ್ರದಾಯಗಳ ಅಧ್ಯಯನ ಮಾಡುವ ವೇಳೆ ರಾಜ ಮನೆತನಗಳಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ, ವಿವಾಹ ಹಾಗೂ ಪುರೋಹಿತರ ಸಮ್ಮುಖದಲ್ಲಿ ನಡೆಯುತ್ತಿದ್ದ ಶಾಸ್ತ್ರಗಳ ಬಗ್ಗೆ ಅರಿತು ಕೊಂಡಿದ್ದರು. ಈ ಎಲ್ಲ ಸಂಪ್ರದಾಯಕ್ಕೆ ಮಾರುಹೋಗಿ ಇಲ್ಲಿಯೇ ನಿಶ್ಚತಾರ್ಥ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿದ್ದರು.
ಆ ಪ್ರಕಾರ ಇತ್ತೀಚೆಗೆ ಮೈಸೂರಿನ ಶೆಲ್ವಪಿಳ್ಳೆ ಅಯ್ಯಂಗಾರ್ ಅವರ ನಿವಾಸದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಶಾಸ್ತ್ರವನ್ನು ಮಾಡಿಕೊಂಡು, ಇಬ್ಬರೂ ಅಮೆರಿಕಕ್ಕೆ ತೆರಳಿದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಅಮೆರಿಕ, ಜರ್ಮನಿ, ಬಲ್ಗೇರಿಯಾ, ಸ್ಫೇನ್, ಆಸ್ಟ್ರೇಲಿಯಾ ಪ್ರಜೆಗಳು ಪಾಲ್ಗೊಂಡಿದ್ದರು.
Source : Kannada Prabha
loading...

Veerakesari 00:46
veerakesari.in
​
​ಹುಣಸೂರು ಪಟ್ಟಣದಲ್ಲಿರುವ ಸಾಯಿಬಾಬಾ ಮಂದಿರದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾದ ವಿಸ್ಮಯ ಮೂಡಿಸುವ ದೃಶ್ಯವೊಂದು ಭಕ್ತರನ್ನು ಅಚ್ಚರಿಗೆ ತಳ್ಳಿದೆ. ಇಲ್ಲಿನ ಹಳೇ ಬಿಎಂ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ, ಶಿರಡಿ ಸಾಯಿ ಅವರು ಬೆಳಕಿನ ರೂಪದಲ್ಲಿ ಗೋಚರಿಸಿರುವ ಆಕೃತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ!
ಈ ದೃಶ್ಯ ಕೇವಲ 15 ಸೆಕೆಂಡ್ ಗಳ ಇದ್ದು, ಸಾಯಿ ಬೆಳಕಿನ ರೂಪದಲ್ಲಿ ಗೋಚರಿಸಿದ್ದು ಯಾವ ಭಕ್ತರಿಗೂ ಕಾಣಿಸಿಲ್ಲ. ಆದರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಾಯಿ ಪವಾಡ ಎಂದು ಸುದ್ದಿ ಹರಿದಾಡತೊಡಗಿದೆ. ಸಾಯಿ ಪವಾಡದ ಈ ದೃಶ್ಯವೀಗ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಿದಾಡುತ್ತಿದೆ. ಇದು ಸ್ವತಃ ಸಾಯಿಬಾಬಾ ಅವರ ಪವಾಡ ಎಂದೇ ಭಕ್ತರ ಅಭಿಪ್ರಾಯ.ವಿಷಯ ತಿಳಿದು ಸಾವಿರಾರು ಸಾಯಿ ಭಕ್ತರ ದಂಡೇ ದೇವಾಲಯಕ್ಕೆ ಹರಿದು ಬರುತ್ತಿದೆ.
loading...

Veerakesari 08:04
loading...
​
​​ಖಾಸಗಿ ಚಾನಲ್ ನಲ್ಲಿ ಪ್ರಸಾರವಾದ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ವಿಜೇತ ಪ್ರಥಮ್ ಹುತಾತ್ಮ ಯೋಧ ಸಂದೀಪ್ ಮನೆಗೆ ಭೇಟಿ ಮಾಡಿ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ವೀರಯೋಧ ಸಂದೀಪ್ ಹುಟ್ಟೂರು ಹಾಸನದ ದೇವಿಹಳ್ಳಿಗೆ ಆಗಮಿಸಿದ ಪ್ರಥಮ್, ಸಂದೀಪ್ ತಂದೆ ಪುಟ್ಟರಾಜು ಹಾಗೂ ತಾಯಿ ಗಂಗಮ್ಮನವರಿಗೆ ಸಾಂತ್ವನ ಹೇಳಿದರು.
ವೀರ ಯೋಧ ಸಂದೀಪ್ ಕುಟುಂಬದ ಜೊತೆ ಪ್ರಥಮ್ - ಫೋಟೋ: ಈ ನಾಡು ಕನ್ನಡ
ಇದೇ ಸಂದರ್ಭದಲ್ಲಿ ತನ್ನ ಕೈಯಿಂದ 50ಸಾವಿರ ರೂಪಾಯಿ ಹಣವನ್ನು ಸಂದೀಪ್ ಕುಟುಂಬಕ್ಕೆ ನೀಡಿದರು. ಬಿಗ್ ಬಾಸ್ ನಲ್ಲಿ ಗೆದ್ದ ಹಣ ಇನ್ನೂ ಕೈ ಸೇರಿಲ್ಲವಾದರೂ ತಮ್ಮ ಕೈಯಲ್ಲಿದ್ದ ಹಣವನ್ನು ಪ್ರಥಮ್ ನೀಡಿದ್ದಾರೆ. ಈ ಮೂಲಕ ಬಿಗ್ ಬಾಸ್ ವೇದಿಕೆಯಲ್ಲಿ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಹುತಾತ್ಮ ಯೋಧ ಸಂದೀಪ್
ಇನ್ನು ಮುಂದೆ ಕೂಡ ತನ್ನ ಕೈಲಾದ ಮಟ್ಟಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದ ಪ್ರಥಮ್ ತನಗೂ ಚಿಕ್ಕವನಾಗಿದ್ದಾಗ ಯೋಧನಾಗುವ ಆಸೆಯಿತ್ತು ಆದರೆ ಕೈಗೂಡಲಿಲ್ಲ ಎಂದರು. ಪ್ರಥಮ್ ಬಿಗ್ ಬಾಸ್ ವೇದಿಕೆಯಲ್ಲಿ ತಾನು ಗೆದ್ದ ಹಣವನ್ನು ಸಮಾಜ ಸೇವೆಗಳಲ್ಲಿ ಬಳಸಿಕೊಳ್ಳುವುದಾಗಿ ಎಂದಾಗ ಸಾಮಜಿಕ ಜಾಲತಾಣಗಳಲ್ಲಿ ಹಲವರು ಠೀಕಿಸಿದ್ದರು. ಈಗ ಪ್ರಥಮ್ ತಮ್ಮ ಭರವಸೆಯ ಮೊದಲ ಹೆಜ್ಜೆ ಇಟ್ಟಿದ್ದಾರೆ. ಜಯವಾಗಲಿ.
loading...

Veerakesari 07:37
loading...
​
ಹಿಂದೂಸ್ತಾನದಲ್ಲಿ ರಾಷ್ಟ್ರದ್ವಜಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅದರಷ್ಟೇ ಭಗವಾಧ್ವಜಕ್ಕೂ ಪ್ರಮುಖ್ಯತೆ ಇದೆ. ಹಿಂದೂ ದೇವದೇವತೆಗಳ ಕಾಲದಿಂದಲೂ ಹಿಂದೂಸ್ತಾನದ ನೆಲದಲ್ಲಿ ಹಾರಾಡುತ್ತಿರುವ ಭಗವಾಧ್ವಜವನ್ನು ಜಿಹಾದಿಯೊಬ್ಬ ಸುಟ್ಟ ಬಗ್ಗೆ ತಿಳಿದುಬಂದಿದೆ.
ಶ್ರೀ ರಂಗಾಪುರ ಜಾತ್ರೆಯ ನಿಮಿತ್ತ ಭಗವಾಧ್ವಜವನ್ನು ಹಾಕಲಾಗಿದ್ದು, ತಿಪಟೂರು ನಗರಸಭೆಯ 24ನೇ ವಾರ್ಡ ಸದಸ್ಯ ರೋಷನ್ ಖಾನ್ ರವರ ಪುತ್ರ ಯಾಸೀಸ್ ಎಂಬಾತ ಅದನ್ನು ಸುಟ್ಟು ತನ್ನ ವಿಕೃತ ಜಿಹಾದಿ ಮನಸ್ಥಿತಿಯನ್ನು ಹೊರಹಾಕಿದ್ದಾನೆ.
ಈತನನ್ನು ಪೋಲೀಸರು ಈಗಾಗಲೇ ಬಂಧಿಸಿರುವ ಬಗ್ಗೆ ಮಾಹಿತಿಯಿದ್ದು ಈ ಜಿಹಾದಿ ನಾಯಿಗೆ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಕ್ಕೆ ಕಠಿಣ ಕೇಸು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು. ಈ ಜಿಹಾದಿ ನಾಯಿಗಳೆ ಶಾಂತವಾಗಿರುವ ಕರ್ನಾಟಕದಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಸಲು ಕಾರಣ. 
#ಎಚ್ಚೆತ್ತುಕೊಳ್ಳಿ_ಹಿಂದು #ಜಿಹಾದಿಗಳು_ಮನೆಪಕ್ಕನೇ_ಇದ್ದಾರೆ
loading...

Veerakesari 04:14
loading...
​
ಆಸ್ಟ್ರೇಲಿಯಾ ಮೂಲದ ಮಹಿಳೆಯೊಬ್ಬರು ಲಿಂಗ ದೀಕ್ಷೆ ಪಡೆಯುವ ಮೂಲಕ ಸನಾತನ ಧರ್ಮವನ್ನು ಸ್ವೀಕಾರ ಮಾಡಿದ್ದಾರೆ. ಆಸ್ಟ್ರೇಲಿಯಾದ ಕರಿಯಾನ್ ಎಂಬ ಮಹಿಳೆ ರಾಧಾಕೃಷ್ಣ ನಗರದ ಬಸವರಾಜ್ ಹಡಗಲಿ ಎಂಬುವವರ ಮನೆಯಲ್ಲಿ ಲಿಂಗ ದೀಕ್ಷೆ ಪಡೆಯುವ ಮೂಲಕ ಸನಾತನ ಧರ್ಮ ಸ್ವೀಕರಿಸಿದರು. 
ಕಾಶಿ ಜಗದ್ಗುರುಗಳ ನೇತೃತ್ವದಲ್ಲಿ ಅವರು ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಕಾಶಿ ಜಗದ್ಗುರುಗಳ ಸಲಹೆಯಂತೆ ತಮ್ಮ ಹೆಸರನ್ನು ಗಂಗಾ ಎಂದೂ ಮರುನಾಮಕರಣ ಮಾಡಿದರು.
ಪತಿಯಿಂದ ದೂರವಾಗಿರುವ ಗಂಗಾ (ಕರಿಯಾನ್) ಸದ್ಯ ತಮ್ಮ ಮಕ್ಕಳೊಂದಿಗೆ ಹಾಲೆಂಡ್ ನಲ್ಲಿ ವಾಸವಾಗಿದ್ದಾರೆ. ಈಗ ಮಾಂಸಹಾರ ತ್ಯಜಿಸಿ ಸಸ್ಯಾಹಾರಿಯಾಗಿ ಬದಲಾಗಿರೋದಾಗಿ ಹೇಳಿದರು.
ಸರ್ವೇ ಜನಃ ಸುಖಿನೋಭವಂತು
loading...

Veerakesari 05:09
loading...
​
ನಾವು ತಿಳಿದ ಹಾಗೆ ಜನರು ವಿದ್ಯೆ ಕಲಿತಷ್ಟು, ತಂತ್ರಜ್ಞಾನ ಬೆಳೆದಷ್ಟು ಅಂಧಕಾರದಿಂದ ಹೊರಬರುತ್ತಾರೆ, ಬುದ್ದಿವಂತರಾಗುತ್ತಾರೆ ಆದರೆ ಇಲ್ಲೊಬ್ಬ ಆಸಾಮಿ ವಿದ್ಯೆ ಕಲಿತು ಬ್ಯಾಂಕ್ ಮ್ಯಾನೇಜರ್ ಎಂಬ ಉನ್ನತ ಹುದ್ದೆಯಲ್ಲಿದ್ದರೂ ತನ್ನ ತಲೆಯಿಂದ ಜಾತಿ ಬೇಧ, ದಲಿತ ಬಲ್ಲಿದ ಎಂಬ ಅನಿಷ್ಟವನ್ನು ಹೊರಹಾಕಿಲ್ಲ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಐಡಿಹಳ್ಳಿಯ ಎಸ್’ಬಿ’ಎಮ್ ಬ್ಯಾಂಕ್ ನ ಮ್ಯಾನೇಜರ್ ಆಗಿರುವ ರಂಜಿತ್ ಎಂಬಾತ ಬ್ಯಾಂಕ್ ಗೆ ಬರುವ ಸ್ಥಳೀಯ ಜನರನ್ನು ದಲಿತರೆಂಬ ಕಾರಣವೊಡ್ಡಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಬ್ಯಾಂಕಿಗೆ ಬರುವ ಸ್ಥಳೀಯರ ಪಾಸ್ ಬುಕ್ ಕೈಯಲ್ಲಿ ಮುಟ್ಟದೆ ಅದಕ್ಕೆ ಪ್ರತ್ಯೇಕವಾದ ಪೆನ್ ಪೇಪರ್ ಬಳಸಿ ಪರಿಶೀಲಿಸುತ್ತಾನೆ, ಈ ಬಗ್ಗೆ ವಿಚಾರಿಸಿದರೆ ನೀವೆಲ್ಲ ಸರಿಇಲ್ಲ ಅಸಹ್ಯ ಎಂದು ಅಸಭ್ಯವಾಗಿ ವರ್ತಿಸುತ್ತಾನೆ. ಈ ಬಗ್ಗೆ ಗ್ರಾಹಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರಂಜಿತ್ ನ ಕಪಿಚೇಷ್ಟೆಯನ್ನು ಸೆರೆಹಿಡಿದಿದ್ದಾರೆ.
ಜನರ ಮಧ್ಯೆ ದಲಿತ ಬಲ್ಲಿದ ಎಂಬ ವಿಷಕಾರೋ ಇಂತಹ ನಾಲಾಯಕ್ ಗಳು ಆ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ. ಆದಷ್ಟು ಬೇಗ ಕರ್ನಾಟಕ ಸರ್ಕಾರ ಆತನನ್ನು ಮ್ಯಾನೇಜರ್ ಹುದ್ದೆಯಿಂದ ಕೆಳಗಿಳಿಸಿ ಆ ಜಾಗಕ್ಕೆ ಜನರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸುವ ಅಧಿಕಾರಿಯನ್ನು ನೇಮಿಸಬೇಕು ಎಂಬುದು ನಮ್ಮ ಆಶಯ.
ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪೋವರೆಗೆ ಶೇರ್ ಮಾಡಿ.
loading...

Veerakesari 22:39
loading...
​
​ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ (ಕಾರ್ಯಪ್ಪ) (ಜನವರಿ 28, 1899 — ಮೇ 15, 1993) ಇವರು ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲಿಗರು.
ಬಾಲ್ಯ ಮತ್ತು ವಿದ್ಯಾಭ್ಯಾಸ :
ಕೊಡಂದೆರ ಮಾದಪ್ಪ ಕಾರಿಯಪ್ಪ 26ನೆಯ ಜನವರಿ, 1899ರಂದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು. (ಆದರೆ ಸೈನ್ಯದ ದಾಖಲೆಗಳ ಪ್ರಕಾರ ಅವರು ಹುಟ್ಟಿದ ವರ್ಷ 1900 ಎಂದಿದೆ.) ಇವರು ಕೊಡವ ಜನಾಂಗದವರಾಗಿದ್ದು, ಕೊಡಂದೆರ ಮನೆತನಕ್ಕೆ ಸೇರಿದವರು.ತಂದೆ ಮಾದಪ್ಪನವರು ಕಂದಾಯ ಇಲಾಖೆ ಯಲ್ಲಿದ್ದರು. ಕಟ್ಟುನಿಟ್ಟಾಗಿ ಶಿಸ್ತನ್ನು ಪಾಲಿಸುವವರು. ತಾಯಿ ಕಾವೇರಿ. ಕಾರ್ಯಪ್ಪನವರು ತಮ್ಮ ಕೊನೆಯುಸಿರಿನವರೆಗೂ ಇವರಿಬ್ಬರನ್ನೂ ದೇವರಂತೆ ಪೂಜಿಸಿದರು. ಸಂಬಂಧಿಗಳಿಗೆಲ್ಲ ‘ಚಿಮ್ಮ’ನಾಗಿದ್ದ ಕಾರಿಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು.ಕಾಲೆಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರಿಯಪ್ಪನವರನ್ನು ಒಂದೇ ರೀತಿಯಿಂದ ಆಕರ್ಷಿಸಿದವು. ಇವರು ಸಕ್ರಿಯ ಕ್ರೀಡಾಪಟುವಾಗಿದ್ದು, ಹಾಕಿ ಮತ್ತು ಟೆನ್ನಿಸ್‌ನಂಥ ಆಟಗಳನ್ನು ಹುರುಪಿನಿಂದ ಮತ್ತು ಜಾಣತನದಿಂದ ಆಡುತ್ತಿದ್ದರು. ಇದರ ಜೊತೆಗೆ ಸಂಗೀತವನ್ನು ಮೆಚ್ಚುತ್ತಿದ್ದರು ಮತ್ತು ಕೈ ಚಳಕ ತೋರಿಸುವ ಜಾದುವಿನ ಬಗ್ಗೆಯೂ ಇವರಿಗೆ ಒಲವಿತ್ತು.
ಸೇನೆ ಸೇರಿಕೆ ಮತ್ತು ಮೊದಲಿನ ಕೆಲವು ವರ್ಷಗಳು :
1918ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ರಾಜನ ಸೈನ್ಯದಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಇದರ ನಂತರ ನಡೆದ ಕಠಿಣ ಪರೀಕ್ಷೆಗಳ ನಂತರ ಆಯ್ಕೆಯಾದ ಕೆಲವೇ ಭಾಗ್ಯಶಾಲಿಗಳಲ್ಲಿ ಕಾರಿಯಪ್ಪನವರೂ ಕೂಡ ಒಬ್ಬರಾಗಿದ್ದರು, ನಂತರ ಸೇನೆಯ ನಿಯುಕ್ತಿಯ ಮುಂಚಿನ ಕಠಿಣತರವಾದ ತರಬೇತಿಯನ್ನು ಪಡೆದರು.
ಇಂದೂರಿನ ಡ್ಯಾಲಿ ಕೆಡೆಟ್ ಕಾಲೇಜ್‌(The Daly College)ನಲ್ಲಿ ಬ್ರಿಟಿಶ್ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ [KCIOs (King’s Commissioned Indian Officers)] ಮೊದಲ ವರ್ಗಕ್ಕೆ ಸೇರಿಕೊಂಡರು. ನಂತರ 1ನೇ ಡಿಸೆಂಬರ್ 1919ರಲ್ಲಿ ಮುಂಬಯಿಯಲ್ಲಿದ್ದ 2ನೇ ಬೆಟ್ಯಾಲಿಯನ್ ೮೮ನೇ ಕಾರ್ನಾಟಿಕ್ (ಕೊಡಗು) ಪದಾತಿ ದಳಕ್ಕೆ ನಿಯುಕ್ತರಾದರು.ಮೂರು ತಿಂಗಳ ನಂತರ 2/125ನೇಪಿಯರ್ ರೈಫ್‌ಲ್ಸ್ (ಸ್ವಾತಂತ್ರ್ಯಾನಂತರ 5ನೇ ರಜಪುತಾನ ರೈಫ್‌ಲ್ಸ್)ಗೆ ವರ್ಗಾವಣೆಯಾಗಿ, ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿ ನೇಮಕಗೊಂಡರು. ಅಲ್ಲಿ ಇದ್ದ ಎರಡು ವರ್ಷಗಳಲ್ಲಿ ಬಂಡುಗೋರರನ್ನು ಹತೋಟಿಗೆ ತರುವುದರಲ್ಲಿ ಸಫಲರಾದರು.ತದ ನಂತರ ಭಾರತಕ್ಕೆ ಮರಳಿ ಬಂದು, ವಾಯವ್ಯ ಗಡಿ ಪ್ರದೇಶ(North-west Frontier Province)ದ ಅಫಘಾನಿಸ್ಥಾನದ ಸರಹದ್ದಿನ ವಜೀರಿಸ್ತಾನದಲ್ಲಿದ್ದ (ಈಗ ಪಾಕಿಸ್ತಾನದಲ್ಲಿದೆ) ವೇಲ್ಸ್ ರಾಜಕುಮಾರನ ಸ್ವಂತ 7ನೇ ಡೊಗ್ರಾ ದಳದಲ್ಲಿ ಸೈನ್ಯದ ಸಕ್ರಿಯ ಸೇವೆಯನ್ನು ಮುಂದುವರೆಸಿದರು.ಮರುಭೂಮಿಯಂಥ ವಿಪರೀತ ಹವಾಮಾನವಿರುವ ಆ ಪ್ರದೇಶದಲ್ಲಿ ಲೆಫ್ಟಿನೆಂಟ್ ಕಾರ್ಯಪ್ಪನವರು, ದೂರದರ್ಶಕ ಯಂತ್ರವಿಲ್ಲದಿರುವ ಕೋವಿ(non-telescopic rifles)ಗಳಿಂದ ಶತ್ರುವಿನ ಎರಡೂ ಕಣ್ಣುಗಳ ಮಧ್ಯಕ್ಕೆ ಗುಂಡು ಹೊಡೆಯುವ ನೈಪುಣ್ಯವಿರುವ ಪಠಾಣರ ವಿರುದ್ಧ ಹೋರಾಡಿ ಜಯಶೀಲರಾದರು. ಅತೀವ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಕಾರ್ಯಪ್ಪನವರು ಗಳಿಸಿದ ವಿಜಯಶ್ರೀ ಬ್ರಿಟಿಶ್ ಸೈನ್ಯದ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯಿತು.ಇದು ಸೈನ್ಯದಲ್ಲಿ ಅವರ ಏಳಿಗೆಗೆ ಪ್ರೋತ್ಸಾಹದಾಯಕವಾಯಿತು. ಅಲ್ಲಿಂದ ಇವರನ್ನು 1/7ನೇ ರಜಪೂತ ರೆಜಿಮೆಂಟ್‌ಗೆ (ವಿಕ್ಟೊರಿಯಾ ರಾಣಿಯ ಸ್ವಂತ ಲಘು ಪದಾತಿದಳಕ್ಕೆ) ವರ್ಗಾಯಿಸಲಾಯಿತು. ಈ ದಳವೇ ಇವರು ಸೈನ್ಯದಿಂದ ನಿವೃತ್ತಿಯಾಗುವವರೆಗೆ ಇವರ ಮೂಲ ನೆಲೆಯಾಯಿತು. ಇರಾಕ್ ಮತ್ತು ವಜೀರಿಸ್ತಾನದಲ್ಲಿ ನಡೆಸಿದ ಸೈನ್ಯ ಕಾರ್ಯಾಚರಣೆಯ ಅನುಭವವು ಇವರ ಮುಂದಿನ ಜೀವನದ ಶೌರ್ಯ-ಸಾಹಸಗಳಿಗೆ ಅಡಿಪಾಯವನ್ನು ರಚಿಸಿತು.ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬ್ಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿಯಾಗಿದ್ದರು. ಮುಂದೆ 1946ರಲ್ಲಿ ಇವರಿಗೆ ಫ್ರಂಟೀಯರ ಬ್ರಿಗೆಡ್ ಗುಂಪಿನ ಬ್ರಿಗೆಡಿಯರರಾಗಿ ಬಡ್ತಿ ಕೊಡಲಾಯಿತು. ಇದೇ ಅವಧಿಯಲ್ಲಿ ಕರ್ನಲ್ ಅಯೂಬ್ ಖಾನ್ (ಮುಂದೆ ಇವರು ಪಾಕಿಸ್ತಾನದ ಸೈನ್ಯದ ಫೀಲ್ಡ ಮಾರ್ಷಲ್ ಮತ್ತು 1962ರಿಂದ 1969ರವರೆಗೆ ರಾಷ್ಟ್ರಪತಿಯಾಗಿದ್ದರು) ಕಾರ್ಯಪ್ಪನವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ವಿದೇಶಗಳಲ್ಲಿ ಸೇವೆ :
1941-42ರ ಅವಧಿಯಲ್ಲಿ ಕಾರಿಯಪ್ಪನವರು ಇರಾಕ್, ಸಿರಿಯಾ ಮತ್ತು ಇರಾನ್ ದೇಶಗಳಲ್ಲಿ ಮತ್ತು 1943-44ರಲ್ಲಿ ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. 1942ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅಂತಹ ಅಧಿಕಾರ ದೊರಕಿದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದರು.ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ 26ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿ ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ (Order of the British Empire (OBE)) ಪ್ರಶಸ್ತಿಯನ್ನು 1944ರಲ್ಲಿ ಕೊಡಲಾಯಿತು.1946ರಲ್ಲಿ ಕಾರ್ಯಪ್ಪನವರಿಗೆ ಬ್ರಿಗೇಡಿಯರನ್ನಾಗಿ ಬಡ್ತಿಯನ್ನು ನೀಡಿ, ನಾಲ್ಕನೆಯ ಬಾರಿಗೆ ವಾಯವ್ಯ ಗಡಿ ಪ್ರದೇಶದಲ್ಲಿ ನೇಮಿಸಲಾಯಿತು. ಈ ಬಾರಿಗೆ ಬನ್ನು ಬ್ರಿಗೇಡಿನ ನಾಯಕತ್ವವನ್ನು ಕೊಡಲಾಯಿತು.1947ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು, ಇಂತಹ ತರಬೇತಿಯನ್ನು ಪಡೆದ ಮೊದಲ ಭಾರತೀಯರು ಕಾರಿಯಪ್ಪನವರು.ಹೃದಯವಿದ್ರಾವಕವಾದ ವಿಭಜನೆಯ ಸಮಯದಲ್ಲಿ ಕಾರಿಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು, ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಸಂಯಮತೆಯಿಂದ ಮತ್ತೂ ಎರಡೂ ಪಕ್ಷಗಳಿಗೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಇವರು ಈ ನಿರ್ಗಮನದ ಕಾರ್ಯದ ಭಾರತದ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದರು.
ಸ್ವಾತಂತ್ರ್ಯಾನಂತರ ಸೇವೆ :
ಸ್ವಾತಂತ್ರ್ಯಾನಂತರ ಕಾರ್ಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು. ಬಳಿಕ ಲೆಫ್ಟಿನೆಂಟ್ ಜನರಲ್ ಎಂದು ಪದೋನ್ನತಿ ಮಾಡಿದಾಗ ಇವರು ಪೂರ್ವ ಸೈನ್ಯದ ಕಮಾಂಡರ್(Eastern Army Commander) ಆದರು.
1947ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂತಿರುಗಿ ಪಡೆಯುವದಕ್ಕೆ ಸೈನ್ಯಕ್ಕೆ ಕಾರ್ಯಪ್ಪನವರು ಮಾರ್ಗದರ್ಶನ ಮಾಡಿದರು. ಅಲ್ಲದೆ, ಲೆಹ್‌ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟರು.1949ರ ಜನವರಿ 15ರಂದು ಜನರಲ್ ಆಗಿ ಬಡ್ತಿಯನ್ನು ಪಡೆದ ಕಾರ್ಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕ(Commander-in-Chief)ರಾದರು.
ಸೈನ್ಯದಿಂದ ನಿವೃತ್ತಿಯ ಬಳಿಕ :
ಭಾರತೀಯ ಸೈನ್ಯದಲ್ಲಿ ಕಾರ್ಯಪ್ಪನವರ ಸೇವೆ ಅಖಂಡವಾಗಿ 29ವರ್ಷಗಳವರೆಗೆ ನಡೆಯಿತು. 1953ನೇ ಇಸವಿಯಲ್ಲಿ ಅವರು ಸೈನ್ಯದಿಂದ ನಿವೃತ್ತರಾದರು. ಆ ಬಳಿಕ 1956ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂ ಜೀಲ್ಯಾಂಡ್‌ ದೇಶಗಳ ಹೈ ಕಮಿಶನರ್ ಆಗಿದ್ದರು. ಅವರು ಬಹಳ ದೇಶಗಳ ಸೈನ್ಯಗಳ ಪುನಾರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಪ್ರಪಂಚವನ್ನೆಲ್ಲಾ ಸುತ್ತಿ ಬಂದ ಅನುಭವಿ. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಹ್ಯಾರಿ ಟ್ರುಮನ್ ಇವರಿಗೆ ‘Order of the Chief Commander of the Legion of Merit’ ಬಿರುದನ್ನಿತ್ತರು. ನಮ್ಮ ಭಾರತ ಸರ್ಕಾರ 1986ನೇ ಇಸವಿ ಜನವರಿ 14ರಂದು ಫೀಲ್ಡ್ ಮಾರ್ಶಲ್ ಪದವಿಯನ್ನು ಕೊಟ್ಟಾಗ ಅವರಿಗೆ 87 ವರ್ಷ ಪ್ರಾಯವಾಗಿತ್ತು.
ವ್ಯಕ್ತಿತ್ವ :
ಮೊದಲ ವಿಶ್ವ ಯುದ್ಧದ ನಂತರದ ದಿನಗಳಲ್ಲಿ ಸೈನ್ಯವನ್ನೂ ಸೇರಿಸಿ, ದೇಶದ ಎಷ್ಟೆಲ್ಲೋ ಸಂಸ್ಥೆಗಳಿಗೆ ಭಾರತೀಯರಿಗೆ ಪ್ರವೇಶವಿರುತ್ತಿರಲಿಲ್ಲ. ಅಂತಹ ಕಡೆಗಳಲೆಲ್ಲಾ ಛಲದಿಂದ ಮತ್ತು ದೃಢ ಪ್ರಯತ್ನದಿಂದ ಕಾರ್ಯಪ್ಪನವರು ಪ್ರವೇಶವನ್ನು ಪಡೆದ ಮೊದಲ ಭಾರತೀಯರಾಗಿದ್ದರು. ಹೀಗೆ ಭಾರತೀಯ ಬ್ರಿಟಿಶ್ ಸೈನ್ಯವನ್ನು ಸೇರಿದ ಬಳಿಕ ಕಾರ್ಯಪ್ಪನವರು ಆಂಗ್ಲ ಸೈನ್ಯಾಧಿಕಾರಿಗಳು ಮತ್ತವರ ಕುಟುಂಬಗಳೊಡನೆಯೂ ಬಹು ಆಪ್ತರಾಗಿದ್ದು, ಆ ವಲಯಗಳಲ್ಲಿ “ಕಿಪ್ಪರ್” (Kipper) ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದರು.ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹ್ರೂ, ಅವರ ಸೋದರಿ ವಿಜಯಲಕ್ಷ್ಮಿ ಪಂಡಿತ್ ಹಾಗೂ ಪುತ್ರಿ ಪ್ರಧಾನಿ ಇಂದಿರಾ ಗಾಂಧಿಯವರೂ ಕಾರ್ಯಪ್ಪನವರನ್ನು ಕಿಪ್ಪರ್ ಎಂದೇ ಕರೆಯುವಷ್ಟು ಆತ್ಮೀಯರಾಗಿದ್ದರು. ತಮ್ಮ ಕುಟುಂಬದವರಿಗೆ ಚಿಮ್ಮನಾಗಿದ್ದ ಇವರು ಗೆಳೆಯರಿಗೆ “ಕ್ಯಾರಿ” (Cary) ಆಗಿದ್ದರು. ಅತ್ಯಂತ ಮಾನವೀಯ ಹೃದಯದ ಮತ್ತು ಸರಳತೆಯ ಪ್ರತೀಕವಾಗಿದ್ದ ಇವರು ಕೊಡಗಿನವರಿಗೆ ಪ್ರೀತಿಯ “ಕಾರ್ಯಪ್ಪಜ್ಜ” ಆಗಿದ್ದರು.ಕಾರ್ಯಪ್ಪನವರು ತಮ್ಮನ್ನು ಸೈನಿಕನೆಂದೇ ಗುರುತಿಸಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಭಾರತೀಯ ಸೈನಿಕನೊಬ್ಬನ ಸಣ್ಣ ಮೂರ್ತಿಯೊಂದಿತ್ತು. ನಿವೃತ್ತರಾದ ನಂತರವೂ 1965 ಮತ್ತು 1971ರ ಪಾಕಿಸ್ತಾನದ ವಿರುದ್ಧ ಯುದ್ಧವಾದ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಹೋಗಿ ಸೈನಿಕರೊಂದಿಗೆ ಮಾತುಕತೆ ನಡೆಸಿ,ಅವರ ಮನಃಸ್ಥೈರ್ಯವನ್ನು ಉತ್ತುಂಗಕ್ಕೆ ತರಲು ಸಹಾಯ ಮಾಡಿದರು.
ಕಾರ್ಯಪ್ಪನವರು ಯುದ್ಧ ನಿಪುಣರಾಗಿದ್ದರು. ಹಾಗಿದ್ದರೂ ಶತ್ರುಗಳಲ್ಲೂ ಮಾನವೀಯತೆಯನ್ನು ತೋರಿಸುತ್ತಿದ್ದರು. 1946ರಲ್ಲಿ ಪಠಾಣ್ – ಅಫ್‌ಘನ್ ಬುಡಕಟ್ಟು ಜನಾಂಗದವರ ನಿರಂತರ ಗೆರಿಲ್ಲಾ ದಾಳಿಯು ಬನ್ನು ಎಂಬ ಪ್ರದೇಶಕ್ಕೆ “ಬ್ರಿಟಿಶರ ಶ್ಮಶಾನ” ಎಂಬ ಅನ್ವರ್ಥ ನಾಮ ವನ್ನಿತ್ತಿತ್ತು. ಹಾಜಿ ಮಿರ್ಜಾ ಖಾನ್ ಎಂಬ ಫಕೀರನು ಬ್ರಿಟಿಶ್ ಕಾಫಿರರ ವಿರುದ್ಧ ಜಿಹಾದನ್ನು ಘೋಷಿಸಿದ್ದನು. ಗೆರಿಲ್ಲಾ ದಾಳಿಗೆ ತತ್ತರಿಸಿದ ಭಾರತೀಯ-ಬ್ರಿಟಿಶ್ ಸೈನ್ಯವು ಅಪಾರ ಸಾವು-ನೋವನ್ನುಂಡರೂ ಸೋಲೊಪ್ಪಲಿಲ್ಲ.ಬ್ರಿಗೆಡಿಯರಾಗಿದ್ದ ಕಾರ್ಯಪ್ಪನವರಿಗೆ ಈ ಯುದ್ಧದ ನೇತೃತ್ವ ದೊರಕಿದಾಗ ಇಬ್ಬಗೆಯ ಸೂತ್ರವನ್ನು ಬಳಸಿದರು. ಹಗಲು-ರಾತ್ರಿಗಳೆರಡರಲ್ಲೂ ಅವರ ಸೈನ್ಯವೂ ಗೆರಿಲ್ಲಾ ದಾಳಿಯಿಂದ ಸೇರಿಗೆ ಸವ್ವಾಸೇರಿನ ಉತ್ತರವೀಯಲಾರಂಭಿಸಿತು. ಜತೆಗೆ ಕಾರ್ಯಪ್ಪನವರು ಮಿರ್ಜಾ ಖಾನನೊಡನೆ ಸಮರಸ ಸಂಬಂಧವನ್ನು ಬೆಳೆಸಿದರು. ಈ ನಡುವೆ ಕಾರ್ಯಪ್ಪನವರಿಗೊಂದು ಸುವರ್ಣಾವಕಾಶ ತಾನಾಗಿಯೇ ಎದುರಾಯಿತು. ಅವಕಾಶಗಳನ್ನೇ ನಿರ್ಮಿಸಿಕೊಳ್ಳುವ ಚಾತುರ್ಯ ಮತ್ತು ನೈಪುಣ್ಯವಿದ್ದ ಅವರು ತಾನಾಗಿಯೇ ಬಂದದನ್ನು ಬಿಟ್ಟಾರೆಯೆ?ಒಮ್ಮೆ ಅವರಿಗೆ ತಾವು ಹೋಗುತ್ತಿದ್ದ ಮಾರ್ಗದ ಬದಿಯಲ್ಲಿ ಉದ್ದಕ್ಕೂ ಪಠಾಣ ಹೆಂಗುಸರು ನೀರಿನ ಬಿಂದಿಗೆಗಳನ್ನಿರಿಸಿಕೊಂಡು ನಿಂತಿರುವದು ಕಾಣಿಸಿತು. ಏನೆಂದು ವಿಚಾರಿಸಿದಾಗ, ಹತ್ತಾರು ಮೈಲುಗಟ್ಟಲೆ ದೂರದಿಂದ ಆ ಸ್ತ್ರೀಯರು ತಮ್ಮ ಮನೆಗಳಿಗೆ ನೀರು ತರುತ್ತಿದ್ದಾರೆಂದು ಗೊತ್ತಾಯಿತು. ಮನಕರಗಿದ ಕಾರ್ಯಪ್ಪನವರು ತಮ್ಮ ಠಾಣ್ಯಕ್ಕೆ ಮರಳಿ, ತಮ್ಮ ಸೈನಿಕರನ್ನೊಪ್ಪಿಸಿ, ಆ ಬುಡಕಟ್ಟು ಜನರ ಊರಿನ ಸಮೀಪದಲ್ಲೇ ಬಾವಿಯೊಂದನ್ನು ಸಂಜೆಯಾಗುವದರೊಳಗೆ ತೋಡಿಸಿಕೊಟ್ಟರು.ಕೆಲವೇ ದಿನಗಳಲ್ಲಿ ಆ ಫಕೀರನಿಗೆ ಈ ಸುದ್ಧಿ ಗೊತ್ತಾಗಿ, ತನ್ನ ಸಶಸ್ತ್ರ ಗುಂಪಿನೊಡನೆ ಕಾರ್ಯಪ್ಪನವರ ಬಳಿ ಬಂದು, ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು, “ಖಲೀಫಾ!” ಎಂದು ಉದ್ಘೋಷಿಸಿದ!ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿ ತಾವೂ ಇದ್ದು ಸೈನಿಕರಲ್ಲಿ ಮನಃಸ್ಥೈರ್ಯವನ್ನು ತುಂಬಿಸುತ್ತಿದ್ದರು. ಯುದ್ಧವೆಂದರೆ ಏನೆಂದು ಸೈನಿಕರು ತಿಳಿದಿರುತ್ತಾರೆಯೇ ಹೊರತು ಯುದ್ಧವನ್ನು ನಿರ್ಮಿಸುವ ರಾಜಕಾರಿಣಿಗಳಲ್ಲ, ಎಂದೆನ್ನುತ್ತಿದ್ದರು, ಕಾರ್ಯಪ್ಪನವರು. “ಆಧುನಿಕ ಯುದ್ಧನೀತಿಯಲ್ಲಿ ದೊಡ್ಡ ಸೈನ್ಯಬಲವಲ್ಲ; ಔದ್ಯೋಗಿಕ ಶಕ್ತಿಯ ಬೆಂಬಲ ಮುಖ್ಯವಾದದ್ದು. ಮುಂಚೂಣಿಯಲ್ಲಿ ಸೈನ್ಯ ಇದ್ದಾಗ, ಅದರ ಬೆನ್ನಲ್ಲೇ ಕೈಗಾರಿಕೋದ್ಯಮದ ಆಧಾರ ಅತ್ಯವಶ್ಯ”ಎಂದು ಕಾರ್ಯಪ್ಪನವರ ಪ್ರತಿಪಾದನೆ. “ನಮ್ಮ ಸೈನ್ಯಕ್ಕೆ ಯುದ್ಧಕಾಲದಲ್ಲಿದ್ದ ಶಾಂತಿಯು ಶಾಂತಿಸಮಯದಲ್ಲಿ ಇಲ್ಲವಾಗಿರುವದಕ್ಕೆ ನಮಗೆ ನಾಚಿಕೆಯಾಗಬೇಕು”, ಎನ್ನುವದು ಅವರ ಕಳಕಳಿ ತುಂಬಿದ ವಿಡಂಬನೆ! ಪ್ರಾಣವನ್ನು ಮುಡಿಪಾಗಿಟ್ಟು ದೇಶ ಸೇವೆ ಮಾಡುವ ಸೈನಿಕರ ಸೇವೆಯನ್ನು ಸರಕಾರ ಮಾಡಬೇಕು. ಅದಾಗದಿರುವದು ನಮ್ಮ ರಾಜಕೀಯ ದುರಂತ.
ಸಾರ್ವಜನಿಕ ಸೇವೆ :
ಕಾರ್ಯಪ್ಪನವರು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಬಹಳಷ್ಟು ದುಡಿದರು. 1964ರಲ್ಲಿ ‘ಭಾರತೀಯ ಭೂತಪೂರ್ವ ಸೈನಿಕ ಸಂಘ’ವನ್ನು (Indian Ex-services League) ಜನರಲ್ ತಿಮ್ಮಯ್ಯನವರೊಡನೆ ಸ್ಥಾಪಿಸಿದರು. “ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ,” ಎಂಬ ಕಾರ್ಯಪ್ಪನವರ ಮಾತು ಎಷ್ಟೊಂದು ಅರ್ಥಗರ್ಭಿತ!‘ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ’ ಎಂಬ ಭರವಸೆ ಸೈನಿಕನಿಗೆ ಬರಬೇಕು. ಆಸ್ಟ್ರೇಲಿಯಾದಲ್ಲಿ ನಿವೃತ್ತ ಸೈನಿಕರಿಗೆ ಅಲ್ಲಿನ ಸರ್ಕಾರವು ರೂಪಿಸಿದ್ದ ಯಶಸ್ವೀ ಯೋಜನೆಯನ್ನು ನಮ್ಮ ದೇಶವು ಅನುಸರಿಸುವಂತೆ ಕಾರ್ಯಪ್ಪನವರು ಸರ್ಕಾರದ ಮನವೊಲಿಸಲು ಯತ್ನಿಸಿದರು.ತಮ್ಮ ಸ್ನೇಹಿತರ ನೆರವಿನಿಂದ ಧನಸಂಗ್ರಹಿಸಿದರು. ಪಾಟಿಯಾಲದ ಮಹಾರಾಜರು ದಾನವಿತ್ತ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದರು. ಸಿಯೆಟ್ ಕಂಪೆನಿಯವರು ಬೆಂಗಳೂರಿನಲ್ಲಿ ‘ಜನರಲ್ ಕಾರ್ಯಪ್ಪ ಭವನ’ವೆಂಬ ದೊಡ್ಡ ಕಟ್ಟಡವನ್ನು ಕಟ್ಟಿಸಿಕೊಟ್ಟರು.
ಅಂತಿಮ ವರ್ಷಗಳು :
ಸಾರ್ವಜನಿಕ ಸೇವೆಯಿಂದ ನಿವೃತ್ತರಾದ ಮೇಲೆ ಕಾರ್ಯಪ್ಪನವರು ಮಡಿಕೇರಿಯಲ್ಲಿ ತಮ್ಮ ಸ್ವಂತ ಮನೆ ‘ರೋಶನಾರಾ’ದಲ್ಲಿ ಇದ್ದರು. ಆರೋಗ್ಯ ಕಮ್ಮಿಯಾದಾಗ ಚಿಕಿತ್ಸೆಗೆಂದು ಬೆಂಗಳೂರಿನಲ್ಲಿ ಕಮಾಂಡೋ ಆಸ್ಪತ್ರೆಗೆ ಹೋಗುತ್ತಿದ್ದರು. ಕೊನೆಗೆ ಬೆಂಗಳೂರಿನಲ್ಲಿಯೇ ಉಳಿದರು. 1993ನೇ ಇಸವಿ ಮೇ 15ನೇ ದಿನಾಂಕ ಬೆಳಿಗ್ಗೆ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರು ಸ್ವರ್ಗಸ್ಥರಾದರು.
Source : wikipedia
loading...

Veerakesari 06:56
loading...
​
'ಶ್ರೀ ಮದ್ಬಗವದ್ಗೀತೆಯ' ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೆ.ಎಸ್.ಭಗವಾನ ಇವರಿಗೆ ಕುವೆಂಪು ವಿಶ್ವವಿದ್ಯಾಲಯವು 'ಡಾಕ್ಟರೇಟ' ಪದವಿ ನೀಡಿ ಪುರಸ್ಕರಿಸುವ ನಿರ್ಣಯವನ್ನು ರದ್ದುಗೊಳಿಸಬೇಕೆಂದು ರಾಷ್ಟ್ರೀಯ ಹಿಂದೂ ಆಂದೋಲನವನ್ನು ಆಯೋಜಿಸಲಾಗಿದ್ದು ಎಲ್ಲ ಹಿಂದುತ್ವನಿಷ್ಠರು ಬರಬೇಕಾಗಿ ವಿನಂತಿ.
ಅರ್ಹರಿಗೆ ಡಾಕ್ಟರೇಟ್ ಪದವಿ ನೀಡುವ ಬದಲು ಷಂಡರಿಗೆ ನೀಡಿ ಆ ಪದವಿಯ ಮಾನ ತೆಗೆಯಬೇಡಿ. ಪದೇಪದೇ ಹಿಂದುತ್ವದ, ದೇವದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡೋ ಷಂಡನಿಗೆ ಯಾವ ಪುರುಷಾರ್ಥಕ್ಕೆ ಡಾಕ್ಟರೇಟ್ ನೀಡಬೇಕು. ಅದರ ಬದಲು ರಸ್ತೆಯಲ್ಲಿ ತೆರಳೋ ಹುಚ್ಚರಿಗೆ ನೀಡಿ ಯಾರೂ ಪ್ರತಿಭಟಿಸೋಲ್ಲ.
ನಾಳೆಯ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಿ.
ವಿಷಯ: 'ಶ್ರೀ ಮದ್ಬಗವದ್ಗೀತೆಯ' ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೆ.ಎಸ್.ಭಗವಾನ ಇವರಿಗೆ ಕುವೆಂಪು ವಿಶ್ವವಿದ್ಯಾಲಯವು 'ಡಾಕ್ಟರೇಟ' ಪದವಿ ನೀಡಿ ಪುರಸ್ಕರಿಸುವ ನಿರ್ಣಯವನ್ನು ರದ್ದುಗೊಳಿಸಬೇಕೆಂದು
ಸ್ಥಳ: ಹಾವಳಿ ಹನುಮಂತ ದೇವಸ್ಥಾನದ ಎದುರಿಗೆ, ಲಕ್ಷ್ಮೇಶ್ವರ
ದಿನಾಂಕ : ಶನಿವಾರ 28/1/2107
ಸಮಯ : ಬೆಳಿಗ್ಗೆ 11.00 ಗಂಟೆಗೆ
ಎಲ್ಲ ಹಿಂದುತ್ವನಿಷ್ಠರು ಬರಬೇಕಾಗಿ ವಿನಂತಿ
Via : ಸನಾತನ ಸಂಸ್ಥೆ
loading...

Veerakesari 23:38
loading...
​
ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತಕ್ಕೆ ಹಾಸನದ ಯೋಧ ಹುತಾತ್ಮರಾಗಿದ್ದಾರೆ. ಜಮ್ಮುಕಾಶ್ಮೀರದ ಗುರೆಜ್ ಸೆಕ್ಟರ್ನಲ್ಲಿ ಗುರುವಾರ ಹಿಮಕುಸಿತ ಸಂಭವಿಸಿದ್ದು.  ಹಿಮದ ಅಡಿಯಲ್ಲಿ ಸಿಲುಕಿ ಯೋಧ ಸಂದೀಪ್ ಶೆಟ್ಟಿ ಹುತಾತ್ಮರಾಗಿದ್ದಾರೆ.
ಹಾಸನದ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿಯ ವೀರ ಯೋಧ ಸಂದೀಪ್ ಶೆಟ್ಟಿ (24) ಸೇರಿ ಭಾರತೀಯ ಸೇನೆಯ 14 ಯೋಧರು ಹಿಮಕುಸಿತದಿಂದ ಹುತಾತ್ಮರಾಗಿದ್ದಾರೆ. ದುರ್ದೈವ ಎಂದರೆ ಯೋಧ ಸಂದೀಪ್ ಶೆಟ್ಟಿ ಅವರ ಮದುವೆ ಇದೇ ಫೆ.22ರಂದು ನಡೆಯಬೇಕಿತ್ತು. ಈಗ ಯೋಧ ಸಂದೀಪ್ ಶೆಟ್ಟಿ ಅವರ ಮರಣದಿಂದಾಗಿ ಇಡೀ ಗ್ರಾಮ ಶೋಕದಲ್ಲಿ ಮಡುಗಟ್ಟಿದೆ.
ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಹಿಮಪಾತದ ಮುನ್ನೆಚ್ಚರಿಕೆ ನೀಡಲಾಗಿತ್ತು. ಭಾರೀ ಹಿಮಪಾತದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಮುಚ್ಚಿಹೋಗಿದೆ. ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಡಬೇಕಾದ ಎಲ್ಲ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿಕನ್ನಡಿಗ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್‌ ಸೇರಿದಂತೆ 19 ಮದ್ರಾಸ್‌ ರೆಜಿಮೆಂಟ್‌ಗೆ ಸೇರಿದ 10 ಯೋಧರು ಮೃತಪಟ್ಟಿದ್ದರು. ಹನುಮಂತಪ್ಪ ಕೊಪ್ಪದ್‌ ಎಂಟು ದಿನಗಳ ಕಾಲ ಹಿಮದಡಿಯಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ಹೊರತೆಗೆಯುವಾಗ ಜೀವಂತವಾಗಿದ್ದರೂ ನಂತರ ಮೃತಪಟ್ಟಿದ್ದರು.
loading...

Veerakesari 20:23
loading...
​
​1857ರ ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ಮುನ್ನ ಕರ್ನಾಟಕ ರಾಜ್ಯದ ಕಿತ್ತೂರಿನಲ್ಲಿ ಸುಮಾರು 30 ವರ್ಷಗಳ ಮುನ್ನವೇ ಹೋರಾಟದ ಪ್ರಥಮ ಸ್ವಾತಂತ್ರ ಜ್ಯೋತಿ ಬೆಳಗಿತ್ತು. ಕಿತ್ತೂರು ರಾಣಿ ಚೆನ್ನಮ್ಮಳ ಅಂಗರಕ್ಷಕ ಪಡೆಯ ದೇಶಪ್ರೇಮಿಗಳ ಹೋರಾಟದ ಸ್ವರೂಪ ಮತ್ತು ಅವರ ಬದ್ಧತೆ ಮುಂದಿನ ದಿನಗಳಲ್ಲಿ ಸ್ವಾತಂತ್ರ ಚಳವಳಿಗೆ ಬುನಾದಿಯಾಯಿತು. ಕರ್ನಾಟಕದಲ್ಲಿ ಕ್ರಾಂತಿಕಾರಿ ಚಳವಳಿಯ ಚರಿತ್ರೆ ಆರಂಭವಾಗುವುದೇ ಸಂಗೊಳ್ಳಿ ರಾಯಣ್ಣನಿಂದ. 1931ರಲ್ಲಿ ಭಗತ್ ಸಿಂಗ್ ಮತ್ತು ಇತರರನ್ನು ಅಂದಿನ ಬ್ರಿಟಿಷ್ ಸರಕಾರ ಗಲ್ಲಿಗೇರಿಸುವ ನೂರು ವರ್ಷಗಳ ಮೊದಲೇ ಸ್ವಾತಂತ್ರದ ಹೋರಾಟಕ್ಕಾಗಿ ಸಂಗೊಳ್ಳಿ ರಾಯಣ್ಣ ನೇಣುಗಂಬವನ್ನೇರಿದ್ದರು.
ಸಂಗೊಳ್ಳಿ ರಾಯಣ್ಣನೂ ಒಬ್ಬ, ಅಪ್ರತಿಮ ದೇಶಭಕ್ತ. ವಿಶೇಷ ಅಂದರೆ ರಾಯಣ್ಣನ ಜನ್ಮದಿನಾಂಕ(ಆ.15)ದಂದೇ ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲ್ಪಡುತ್ತಿದೆ. ಅದೇ ರೀತಿ, ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ದಿನ(ಜ.26)ವೇ ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ.
ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ
ಮಲಪ್ರಭೆಯ ಮಡಿಲಲ್ಲಿರುವ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣನ ಹುಟ್ಟೂರು. ಮೂಲ ಹೆಸರು ರಾಯಪ್ಪ. ಪೂರ್ಣ ಹೆಸರು ರಾಯಣ್ಣ ಭರಮಣ್ಣ ರೋಗಣ್ಣವರ(ಕೆಂಚವ್ವನ ಮಗ). ಈ ದಂಪತಿಗೆ ಮೂವರು ಗಂಡು ಮಕ್ಕಳು. ಕೊನೆಯ ಮಗನೇ ರಾಯಣ್ಣ. ಈತ ಹುಟ್ಟಿದ್ದು 1798ರಲ್ಲಿ. ಇವರದ್ದು ಕೃಷಿ ನಿರತ ಹಾಲುಮತಕ್ಕೆ ಸೇರಿದ ಕುಟುಂಬ. ಹುಟ್ಟೂರಲ್ಲೇ ಬೆಳೆದ ರಾಯಣ್ಣ ಗೆರಿಲ್ಲಾ ಯುದ್ಧ ಪರಿಣತಿ ಹೊಂದಿದ್ದ.
ಕಿತ್ತೂರು ಚೆನ್ನಮ್ಮ ಕಟ್ಟಿದ್ದ ಸೇನೆಯ ಅಧಿಪತಿಯಾಗಿದ್ದ. ರಾಯಣ್ಣನ ಒಂದು ಗುಟುರಿಗೆ ದೇಶಭಕ್ತರ ಒಂದು ದಂಡೇ ಯುದ್ಧಕ್ಕೆ ಸನ್ನದ್ಧವಾಗಿ ನಿಲ್ಲುತ್ತಿತ್ತು. ಕೇವಲ 32 ವರ್ಷಗಳ ಕಾಲ ಬದುಕಿದ ವೀರಾಧಿವೀರನ ಹೋರಾಟದ ಮತ್ತು ದುರಂತ ಕಥೆ ಎಂಥವರನ್ನೂ ಕಿಚ್ಚಿನಿಂದ ರೊಚ್ಚಿಗೇಳುವಂತೆ ಮಾಡುತ್ತದೆ.
ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಸಮರ ಸಾರಿದ. ಸಾಮ್ರಾಜ್ಯಷಾಹಿ ಬ್ರಿಟಿಷರು ಬಡವರಿಂದ ದೋಚಿದ್ದ ಅಪಾರ ಸಂಪತ್ತನ್ನು ಕಸಿದುಕೊಂಡಿದ್ದು ಮಾತ್ರವಲ್ಲದೇ, ಸರ್ಕಾರಕ್ಕೆ ಸೇರಿದ್ದ ಹತ್ತು ಹಲವು ಕಡತಗಳು, ಮಹತ್ವದ ದಾಖಲೆಗಳನ್ನು ಸುಟ್ಟು ಕರಕಲು ಮಾಡಿದ. ಬಡಜನರನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷ್ ಸರ್ಕಾರಕ್ಕೆ ಅಪಾರ ಹಾನಿ ಮಾಡುವ ಜತೆಗೆ, ಸಿಂಹಸ್ಪಪ್ನವಾಗಿ ಕಾಡಿದ್ದ. ಅಕ್ಷರಶಃ ಕ್ರಾಂತಿಕಾರಿ ಎನಿಸಿಕೊಂಡಿದ್ದ.
ಕಿತ್ತೂರು ಸಾಮ್ರಾಜ್ಯ ಎಲ್ಲ ಪ್ರಾಂತ್ಯಗಳಿಗಿಂತ ಶ್ರೀಮಂತವಾಗಿತ್ತು. ಆ ಆಸ್ಥಾನದಲ್ಲಿದ್ದು ಬಂಗಾರ, ದವಸ ಧಾನ್ಯಗಳು ಇರುವುದು ಬ್ರಿಟಿಷರ ಕಣ್ಣಿಗೆ ಬಿತ್ತು. ಇಂತಹ ರಾಜ್ಯವನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಅನೇಕ ತಂತ್ರಗಳನ್ನು ಹೂಡಿ ಅಂತಿಮವಾಗಿ ಹೋರಾಟಕ್ಕೆ ದುಮುಕಿದರು. ಚೆನ್ನಮ್ಮಳ ಆದೇಶದಂತೆ ರಾಯಣ್ಣ ಸಂಗೊಳ್ಳಿಯಿಂದ ಅನೇಕ ಯುವಕರನ್ನು ಸೈನ್ಯಕ್ಕೆ ಸೇರಿಸಿಕೊಂಡ. ಅಕ್ಟೋಬರ್ 21, 1824ರಂದು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸೈನ್ಯದೊಂದಿಗೆ ಕಿತ್ತೂರಿಗೆ ಲಗ್ಗೆ ಹಾಕಿದ. ರಾಣಿ ಚೆನ್ನಮ್ಮ ಇವನನ್ನು ಕೋಟೆ ಒಳಗೆ ಬಿಡಲಿಲ್ಲ.
ಇದರಿಂದ ಅವಮಾನಗೊಂಡ ಇವನು ಮತ್ತೆ ಮತ್ತಷ್ಟು ಸೈನ್ಯದೊಂದಿಗೆ ಕೋಟೆಯನ್ನು ಮುತ್ತಿಗೆ ಹಾಕಿದ. ರಾಯಣ್ಣ ಗುಂಪು ಇಂತಹ ಅವಕಾಶಕ್ಕಾಗಿ ಕಾಯುತ್ತಿತ್ತು. ಅಂತಿಮವಾಗಿ ಬ್ರಿಟಿಷ್ ಅಧಿಕಾರಿಯನ್ನು ಕೊಂದು ವಿಜಯ ಪತಾಕೆಯನ್ನು ಹಾರಿಸಿದರು.
ಈ ಯುದ್ಧ ಪರಿಣಾಮ ಆರಂಭದಲ್ಲಿ ಕಿತ್ತೂರಿನಲ್ಲಿ ಸಂಭ್ರಮ ನೆಲೆಸಿತ್ತಾದರೂ, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಕ್ಕೆ ಸಂಬಂಧಿಸಿದ ಹಲವು ಮುನ್ಸೂಚನೆಗಳು ಸಿಕ್ಕಿದ್ದವು. ಈ ಸೋಲಿನಿಂದ ಮುಖಭಂಗಕ್ಕೊಳಗಾದ ಬ್ರಿಟಿಷರಲ್ಲಿ ಕಿತ್ತೂರಿನ ಬಗೆಗೆ ಅಸಮಾಧಾನ, ಆಕ್ರೋಶ ಹೆಚ್ಚಾಯಿತು. ಕಿತ್ತೂರಿನ ಸೇನೆಯನ್ನು ನೇರ ಸೋಲಿಸಲಾಗದು ಎಂಬುದನ್ನು ಮನಗಂಡ ಬ್ರಿಟಿಷರು, ಹತ್ತಾರು ಆಸೆ-ಆಮಿಷಗಳನ್ನು ತೋರಿಸಿ, ಕಿತ್ತೂರಿನ ಅರಮನೆಯ ಪ್ರಮುಖರನ್ನು ಬುಟ್ಟಿಗೆ ಬೀಳಿಸಿಕೊಂಡರು. ಮೋಸದಿಂದ ಚನ್ನಮ್ಮನನ್ನು ಬೆನ್ನಟ್ಟಿ ಬಂಧಿಸಿದರು. ಆದರೆ, ಆ ಸಂದರ್ಭದಲ್ಲಿ ರಾಯಣ್ಣ ಬ್ರಿಟಿಷರಿಂದ ತಪ್ಪಿಸಿಕೊಂಡಿದ್ದ.
ಚೆನ್ನಮ್ಮಳನ್ನು ಕಾಪಾಡಬೇಕೆಂದು ಹೊರಟ ರಾಯಣ್ಣನ ಸಂಗಡಿಗರನ್ನು ಬ್ರಿಟಿಷರ ಸೈನ್ಯ ಬಂಧಿಸಿ, ಧಾರವಾಡದ ಸೆರೆಮನೆಗೆ ತಳ್ಳಿತು. ಅಂತಿಮವಾಗಿ ತಮ್ಮದೇನಿದ್ದರೂ ರಾಜ ಮನೆತನದ ಮೇಲೆ ದ್ವೇಷವೇ ಹೊರತು ಜನಸಾಮಾನ್ಯರ ಮೇಲಲ್ಲ ಎಂಬ ಕಾರಣಕ್ಕಾಗಿ ರಾಜಮನೆತನದವರನ್ನು ಹೊರತುಪಡಿಸಿ ಎಲ್ಲರನ್ನೂ ಜೈಲಿನಿಂದ ಬಿಡುಗಡೆಗೊಳಿಸಿದರು
ರಾಯಣ್ಣನಿಗೆ ಹೇಗಾದರೂ ಮಾಡಿ ಮತ್ತೆ ಕಿತ್ತೂರನ್ನು ಬ್ರಿಟಿಷರಿಂದ ವಶಪಡಿಸಿಕೊಂಡು ರಾಣಿ ಚೆನ್ನಮ್ಮಳನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿ ಕೊಡಬೇಕೆಂಬ ಮಹಾನ್ ಉದ್ದೇಶದಿಂದ ಮತ್ತಷ್ಟು ಜನರನ್ನು ಸಂಘಟಿಸಿ, ಸೈನ್ಯವನ್ನು ಕಟ್ಟುವಂತಹ ಕೆಲಸಕ್ಕೆ ಕೈಯಿಟ್ಟ. ಇವುಗಳಿಗೆ ಬೇಕಾದ ಸಂಪನ್ಮೂಲವನ್ನು ಕ್ರೋಡೀಕರಿಸುವ ಸಾಹಸದ ಕೆಲಸಕ್ಕೆ ಕೈಯಿಟ್ಟ. ಸಂಗೊಳ್ಳಿಗೆ ಹೋದಂತಹ ರಾಯಣ್ಣ ಇನ್ನೂ ಯುವಕನಾಗಿದ್ದ್ದ ಕಾರಣ ಹೋರಾಟ ಮಾಡಲು ಛಲ ಉತ್ಸಾಹವಿತ್ತು.ತನ್ನ ಎಲ್ಲ ಹೋರಾಟಕ್ಕೆ ಹಣದ ಆವಶ್ಯಕತೆ ಇತ್ತು. ಇದಕ್ಕಾಗಿ ಇವನು ಬಿಚ್ಚುಗತ್ತಿ ಚನ್ನಬಸವಣ್ಣ, ಗುರಿಕಾರ ಬಾಳಣ್ಣ, ವಡ್ಡರ ಯಲ್ಲಣ್ಣ ಅವರೊಡನೆ ಚರ್ಚಿಸಿದ. ಯಲ್ಲಣ್ಣ ಇದರಲ್ಲಿ ಬುದ್ಧಿವಂತನಾಗಿದ್ದ. ಭರಮಣ್ಣ ನಿರ್ವಹಿಸುತ್ತಿದ್ದ ತಳವಾರಿಕೆಯ ಕೆಲಸವನ್ನು ಇಷ್ಟವಿಲ್ಲದಿದ್ದರೂ ಮಾಡುವಂತೆ ರಾಯಣ್ಣನಿಗೆ ಪ್ರೇರೇಪಿಸಿದ. ಇದರಿಂದಾಗಿ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಸ್ನೇಹಿತರ ಅಭಿಲಾಷೆಯಾಗಿತ್ತು.
ರಾಯಣ್ಣನಿಗೆ ಕಿತ್ತೂರನ್ನು ದಾಸ್ಯದಿಂದ ಬಿಡುಗಡೆಗೊಳಿಸುವ ಚಿಂತೆಯೊಂದು ಕಾಡುತ್ತಿತ್ತು. ಇದಕ್ಕಾಗಿ ಗುಪ್ತ ಸಂಘಟನೆಯ ಚಟುವಟಿಕೆಯನ್ನು ಮಾಡಲು ಆರಂಭಿಸಿದ. ಹೇಗಾದರೂ ಮಾಡಿ ಸೆರೆಮನೆಯಲ್ಲಿರುವ ರಾಣಿಯನ್ನು ಭೇಟಿ ಮಾಡಿ ತಮ್ಮ ಕ್ರಾಂತಿಯ ವಿಷಯವನ್ನು ತಿಳಿಸಿ ಕಿತ್ತೂರು ಚೆನ್ನಮ್ಮಳ ಆಶೀರ್ವಾದವನ್ನು ಪಡೆಯಬೇಕೆಂದು ನಿರ್ಧರಿಸಿ ಜಂಗಮನ ವೇಷದಲ್ಲಿ ಭೇಟಿಯನ್ನು ಮಾಡಿದ. ಮೊದಲು ಇವನು ಯಾರು ಎಂದು ಅರಿವಾಗದೇ, ಇವನು ನಿಜವಾದ ಜಂಗಮನೆಂದು ರಾಣಿ ಅಂದುಕೊಂಡಳು. ಆದರೆ, ನಂತರ ಇವನು ರಾಯಣ್ಣನೆಂದು ತಿಳಿದು ಸಂತಸಗೊಂಡಳು.ನಾನು ಮತ್ತೆ ಕಿತ್ತೂರನ್ನು ನಿಮ್ಮ ವಶಕ್ಕೆ ತಂದುಕೊಡುವುದಾಗಿ ಪ್ರತಿಜ್ಞೆಯನ್ನು ಮಾಡಿದ. ಇದರಿಂದ ಆನಂದಗೊಂಡ ಚೆನ್ನಮ್ಮ ಕ್ರಾಂತಿಯ ಚಟುವಟಿಕೆಗಳಿಗೆ ತನ್ನಲ್ಲಿದ್ದ ಎಲ್ಲ ಒಡವೆಗಳನ್ನು ಇವನ ಕೈಗೆ ನೀಡಿ ಗೆದ್ದು ಬರುವಂತೆ ಆಶೀರ್ವಾದ ಮಾಡಿದಳು.
ಬ್ರಿಟಿಷರ ವಿರುದ್ಧದ ಹೋರಾಟವನ್ನು ರಾಯಣ್ಣ ಮುಂದುವರಿಸಿದ. ಸಂಗ್ರಾಮದ ನೊಗ ಹೊತ್ತ ಚನ್ನಮ್ಮನ ಬಲಗೈ ಬಂಟನನ್ನು ಬಲೆಗೆ ಬೀಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಅವಶ್ಯವಿರುವ ಎಲ್ಲ ತಂತ್ರಗಳನ್ನು ರೂಪಿಸಿತ್ತು. ಆದರೆ, ಆರಂಭಿಕ ಹಂತದ ಯಾವ ಪ್ರಯತ್ನವೂ ಫಲಪ್ರದವಾಗಲಿಲ್ಲ. ಆಗ ಬ್ರಿಟಿಷರ ನೆರವಿಗೆ ಬಂದದ್ದು ರಾಯಣ್ಣನ ಮಾವ. ಸ್ವತಃ ಮಾವನಿಂದಲೇ ಮೋಸಕ್ಕೊಳಗಾದ ರಾಯಣ್ಣ ಬ್ರಿಟಿಷರ ಬಲೆಗೆ ಬಿದ್ದ. ಗಲ್ಲಿಗೇರಿಸುವ ಮೊದಲು, ‘ನಿನ್ನ ಕೊನೆ ಆಸೆ ಏನು’ ಎಂದು ಬ್ರಿಟಿಷರು ರಾಯಣ್ಣನನ್ನು ಕೇಳಿದ್ದರು. ಅದಕ್ಕೆ ರಾಯಣ್ಣನು, ‘ನಮ್ಮ ದೇಶದಲ್ಲಿ ಮನೆ, ಮನೆಗೊಬ್ಬರಂತೆ ಸಾವಿರಾರು ದೇಶಭಕ್ತರು ಹುಟ್ಟಿಬರುತ್ತಾರೆ. ನಿಮ್ಮನ್ನು ಈ ದೇಶದಿಂದ ಒದ್ದೋಡಿಸುತ್ತಾರೆ ನೋಡಿ’ ಎಂದು ಹೇಳಿ ಎಚ್ಚರಿಸಿದ್ದು ಈಗ ಇತಿಹಾಸ. 1831ರ ಜ.26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಆತನನ್ನು ಗಲ್ಲಿಗೇರಿಸಲಾಯಿತು
ಬದುಕಿನ ಪ್ರತಿಯೊಂದು ಕ್ಷಣವನ್ನು ಕಿತ್ತೂರು ರಾಣಿ ಚೆನ್ನಮ್ಮನವರ ಹಿತಕ್ಕಾಗಿ, ಆ ಸಂಸ್ಥಾನದ ಸ್ವಾಭಿಮಾನವನ್ನು ಕಾಯುವ ಸಲುವಾಗಿ ಹೋರಾಟ ನಡೆಸಿದ ಕ್ರಾಂತಿಕಾರಿ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಬದುಕು ಕನ್ನಡ ನಾಡಿನ ಜನತೆಗೆ ಸ್ಫೂರ್ತಿದಾಯಕ.
JAI HIND
​ಲೇಖಕರು - ಮಹೇಶ್ ಹಿರೇಮಠ 
Facebook link : https://m.facebook.com/maheshhiremathh
Twitter : https://twitter.com/MahiHiremath?s=08
Instagram: https://instagram.com/download/?r=3742706804(nationalist_mahi)
loading...
Powered by Blogger.