Veerakesari 21:16
ಜಮ್ಮು ಕಾಶ್ಮೀರ : ಕಾಶ್ಮೀರದ ಉರಿಯಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ಪಾಪಿಸ್ತಾನಿ ಉಗ್ರರು ನಡೆಸಿದ ದಾಳಿ ನಂತರ ಭಾರತೀಯ ಯೋಧರು ಪದ್ಯದ ಮೂಲಕ ಪಾಕಿಸ್ತಾನಕ್ಕೆ ಭಾರತದ ತಂಟೆಗೆ ಬರದಂತೆ ತಿರುಗೇಟು ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೋದಲ್ಲಿ ಸಾಧ್ವಿ ಬಾಲಿಕಾ ಸರಸ್ವತಿ ಅವರು ಹಾಡಿರುವ ಗೀತೆಯೊಂದನ್ನು ಭಾರತದ ಸೈನಿಕರೊಬ್ಬರು  ಹಾಡುವ ಮೂಲಕ ಪಾಕ್ ಗೆ ಭಾರತವನ್ನು ,ಭಾರತೀಯ ಸೈನಿಕರನ್ನು ಕೆಣಕದಂತೆ ಎಚ್ಚರಿಕೆ ನೀಡಿದ್ದಾರೆ. 
ಪಾಕಿಸ್ತಾನೀಯರೆ  ಕಿವಿಕೊಟ್ಟು  ಕೇಳಿ, ಭಾರತವನ್ನು ,ಭಾರತೀಯ ಸೈನಿಕರನ್ನು ಕೆಣಕುವ ಪ್ರಯತ್ನ ಮಾಡಬೇಡಿ. ಕಣ್ಮರೆಯಾಗಿ ಹೋಗುತ್ತೀರ. ಭಾರತದ ಮುಕುಟ ಕಾಶ್ಮೀರ ಹೀಗೇ ಇರುತ್ತೆ , ಆದರೆ ಪಾಕಿಸ್ತಾನ ಇರಲ್ಲ ಎಂದು ಹಾಡಿದ್ದಾರೆ.

ಯಾರು ಏನೇ ಮಾಡಿದರೂ ನಮ್ಮ ಭಾರತೀಯ ಸೈನಿಕರ ಶಕ್ತಿಗುಂದಿಸಲು ಸಾಧ್ಯವಿಲ್ಲ. ಜೈ ಭಾರತೀಯ ಸೇನೆ

Post a Comment

Powered by Blogger.