Veerakesari 22:08
ಜಮ್ಮುಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ‘ಉರಿ’ ಯಲ್ಲಿ ಉಗ್ರರ ದಾಳಿ ನಡೆದು 17 ಭಾರತೀಯ ಸೈನಿಕರು ಹುತಾತ್ಮರಾದ ಸೇನಾ ನೆಲೆಗೆ ಭೇಟಿ ನೀಡಿದ ರಕ್ಷಾ ಮಂತ್ರಿ ಮನೋಹರ್ ಪಾರಿಕರ್.
ಭಾರತೀಯ ಸೇನೆಯ ಸೈನಿಕರ ಮೇಲೆ ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಪಾಕಿಸ್ತಾನಿ ಜೈಶ್ ಇ ಮಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರರಿಂದ ದಾಳಿ ನಡೆದು,ಡ್ಯೂಟಿ ಮಾಡಿ ಮಲಗಿದ್ದ 17 ಸೈನಿಕರು ಹುತಾತ್ಮರಾಗಿದ್ದರು ಹಾಗೂ 23 ಸೈನಿಕರು ಗಾಯಗೊಂಡಿದ್ದರು.ದಾಳಿ ಮಾಡಿದ ಎಲ್ಲಾ ಉಗ್ರರನ್ನು ಸೇನೆ ಕೊಂದುಹಾಕಿತ್ತು.
ಮನೋಹರ್ ಪಾರಿಕರ್ ಭೇಟಿ ಮಾಡಿದ ಸಂದರ್ಭದಲ್ಲಿ ಅಲ್ಲೇ ಇದ್ದ ಸೈನಿಕರು ದುಃಖತಪ್ತರಾಗಿದ್ದರು ಕೆಲವರಿಗೆ ಅಳು ತಡೆಯಲು ಆಗದೆ ಕಣ್ಣೀರು ಸುರಿಸಿದರು.ಇದನ್ನೆಲ್ಲ ನೋಡಿದ ಪಾರಿಕ್ಕರ್ ಕೆಲವು ಕ್ಷಣ ಸ್ತಬ್ಧವಾದರು.
ಮನೋಹರ್ ಪಾರಿಕ್ಕರ್ ಜೊತೆಗಿದ್ದ ಸೇನೆಯ ಪ್ರಮುಖ ದಲ್ಬೀರ್ ಸುಹಾಗ್ ಅವರು ಘಟನೆಯನ್ನು ರಕ್ಷಾಮಂತ್ರಿಗೆ ವಿವರಿಸುತ್ತಾ .. ಈ ಘಟನೆಯಿಂದ ಭಾರತೀಯ ಸೈನಿಕರಿಗೆ ತುಂಬಾ ನೋವಾಗಿದ್ದು ತಮಗೆ ಈ ತರ ಸಾಯಲು ಮನಸ್ಸಿಲ್ಲ, ಪಾಕಿಸ್ತಾನೀ ಉಗ್ರರೊಂದಿಗೆ ನೇರವಾಗಿ ಹೋರಾಡಲು ಅನುಮತಿ ನೀಡಿ, ಹೋರಾಡಿ ಹುತಾತ್ಮರಾಗಲು ಬಯಸುತ್ತೇವೆ. ನಮ್ಮ ಗೆಳೆಯರು ಹೊಸದಾಗಿ ಸೇನೆಗೆ ಸೇರಿದ್ದರು, ಕೆಲಸ ಮಾಡಿ ರಾತ್ರಿ ಮಲಗಿದ್ದರು ಅವರನ್ನು ರಾತ್ರೋರಾತ್ರಿ ಕೊಲ್ಲಲಾಯಿತು ಅವರಿಗೂ ಪರಿವಾರವಿದೆ.
ಕಾಶ್ಮೀರದಲ್ಲಿ ಕೆಲಸಮಾಡುವುದು ತುಂಬಾ ಕಷ್ಟಕರ, ಇಲ್ಲಿ ನಮ್ಮ ಕಣ್ಣ ಮುಂದೆಯೇ ನಮ್ಮವರಿಗೆ ಹೊಡೆಯಲಾಗುತ್ತೇ, ಕೊಲ್ಲಲಾಗುತ್ತೇ ಆದರೆ ನಾವು ಏನೂ ಮಾಡುವ ಹಾಗಿಲ್ಲ.
ಗೆಳೆಯರ ಸಾವನ್ನು ಕಣ್ಣಾರೆ ಕಂಡ ಹಲವು ಸೈನಿಕರು ಬೆಳಗ್ಗೆಯಿಂದ ಏನೂ ತಿಂದಿಲ್ಲ, ನಾವು ಸೈನಿಕರು ಇರಬಹುದು ಆದರೆ ನಮಗೂ ಭಾವನೆಗಳು ಇದೆ, ನಮ್ಮಲ್ಲೂ ಪ್ರೀತಿ ವಾತ್ಸಲ್ಯ ಇದೆ ನಮ್ಮ ಗೆಳೆಯರ ಸಾವಿಗೆ ಪ್ರತೀಕಾರ ತೀರಿಸುವುದೇ ನಾವು ನಮ್ಮ ಗೆಳೆಯರಿಗೆ ನೀಡುವ ಶ್ರದ್ದಾಂಜಲಿ. ನಮಗೆ ಪಾಕಿಸ್ತಾನಿ ಉಗ್ರರೊಂದಿಗೆ ನೇರವಾಗಿ ಹೋರಾಡಲು ಅನುಮತಿ ನೀಡಿ ಎಂದು ಸೈನಿಕರು ಕೇಳಿಕೊಂಡಿದ್ದಾರೆ

Post a Comment

Powered by Blogger.