ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಬಿರ್ಭುಮ್ ನ ಗ್ರಾಮವೊಂದರ 300 ಹಿಂದೂ ಕುಟುಂಬಗಳಿಗೆ 4 ವರ್ಷಗಳಿಂದ ದುರ್ಗಾ ಪೂಜೆ ಆಚರಣೆಗೆ ಅನುಮತಿ ಸಿಗುತ್ತಿಲ್ಲ. ಅನುಮತಿ ಪಡೆಯಲು 300 ಹಿಂದೂ ಕುಟುಂಬಗಳು ಸ್ಥಳೀಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಓಡಾಡುತ್ತಿದ್ದಾರೆ. ಆ ಗ್ರಾಮದಲ್ಲಿರುವ 25 ಮುಸ್ಲಿಂ ಕುಟುಂಬಗಳ ವಿರೋಧದಿಂದಾಗಿ ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿ ದುರ್ಗಾ ಪೂಜೆ ಮಾಡಲು ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ.
ಈ ಗ್ರಾಮದಲ್ಲಿ ಹಿಂದೂಗಳು ಬಹುಸಂಖ್ಯಾತರಾದರೂ ಇಲ್ಲಿ ಕೆಲ ಮುಸಲ್ಮಾನ ಕುಟುಂಬಗಳೂ ನೆಲೆಸಿವೆ.ಈ ವರ್ಷವೂ ಗ್ರಾಮದ 300 ಹಿಂದೂಗಳು ದುರ್ಗಾ ಪೂಜೆ ಸಲ್ಲಿಸಲು ಅನುಮತಿಗಾಗಿ ಅಧಿಕಾರಿಗಳ ಬಳಿ ಓಡಾಡುತ್ತಿದ್ದಾರೆ.
ಸ್ಥಳೀಯ ಸುದ್ದಿ ಮಾಧ್ಯಮದ ವರದಿ ಪ್ರಕಾರ ಕಂಗಾಲಪಹಾಡಿ ದುರ್ಗಾ ಮಂದಿರ ಕಮೆಟಿಯವರು ಜಿಲ್ಲೆಯಲ್ಲಿ ಆಡಳಿತದಲ್ಲಿರುವ ವಿವಿಧ ಅಧಿಕಾರಿಗಳ ಬಳಿ ಅನುಮತಿಗಾಗಿ ಕೇಳಿದ್ದಾರೆ ಆದರೆ ಮುಸಲ್ಮಾನರ ಆಕ್ಷೇಪಣೆಯಿಂದಾಗಿ ಅವರಿಗೆ ಅನುಮತಿ ಕೊಡಲು ನಿರಾಕರಿಸಿದ್ದಾರೆ .ಮಂದಿರ ಕಮಿಟಿ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಹೊರತುಪಡಿಸಿ ಉಳಿದ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ ಆದರೆ ಯಾವುದೇ ಉತ್ತರ ಇನ್ನೂ ಸಿಕ್ಕಿಲ್ಲ. ಜಿಲ್ಲೆಯ ಎಸ್ ಪಿ ಸುದೀರ್ ಕುಮಾರ್ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರಕರಣದಿಂದ ಜಾರಿಕೊಂಡಿದ್ದಾರೆ.
ಇದು ಬಹುಸಂಖ್ಯಾತ ದೇಶದಲ್ಲಿ ಹಿಂದೂಗಳ ಪರಿಸ್ಥಿತಿ.ಹಲವು ವರದಿಗಳು ಇನ್ನು 100 ವರ್ಷಗಳಲ್ಲಿ ಸನಾತನ ಧರ್ಮ ನಶಿಸಬಹುದು ಎಂದಿದ್ದಾರೆ ಆದರೆ ಅದರ ಪ್ರಾರಂಭ ಈಗಲೇ ಆಗಿದೆ . ಆದರೆ ಹಿಂದುಗಳ ಉದ್ದಾರದ ಮಾತುಗಳನ್ನಾಡಿ ಬಂದ ಸರ್ಕಾರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೇ ಹೊರತು ಹಿಂದೂಗಳ ಪರ ಧ್ವನಿ ಎತ್ತುವಷ್ಟು ತಾಕತ್ತು ಇಲ್ಲ.
ಎಚ್ಚರ ಹಿಂದು ಎಚ್ಚರ
Post a Comment