ಭಗತ್ ಸಿಂಗ್ ಹುಟ್ಟುಹಬ್ಬ : ಇಂದು ನಾವು ಸುಖಮಯ ಜೀವನ ನಡೆಸುತ್ತಿರುವ ಹಿಂದೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಅವರ ಹಗಲಿರುಳ ಅಪಾರವಾದ ಶ್ರಮ ಅಡಗಿದೆ, ಈ ಪುಣ್ಯ ಭೂಮಿ ಭಾರತಾಂಬೆಯ ಭವ್ಯ ನೆಲವನ್ನು ಬ್ರಿಟಿಷರಿಂದ ರಕ್ಷಿಸಿಕೊಳ್ಳಲು ಅಂದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು.
ತಮ್ಮ ಇಡೀ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟು ಬ್ರಿಟಿಷರ ವಿರುದ್ದ ರಣರಂಗಕ್ಕೆ ಧುಮಿಕಿ ಹೋರಾಟ ನಡೆಸಿದ ಪರಿಣಾಮ ಭಾರತ ದೇಶಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿ ಸ್ವತಂತ್ರ ರಾಷ್ಟ್ರವಾಗಿ ರೂಪಾಂತರಗೊಂಡಿತು ಹಾಗೂ ನಾವೆಲ್ಲರು ಸ್ವತಂತ್ರ್ಯವಾಗಿ ಜೀವಿಸಲು ಸಾಧ್ಯವಾಯಿತು ಎಂಬುವುದರಲ್ಲಿ ಎರಡು ಮಾತಿಲ್ಲ.
ನಮ್ಮ ದೇಶದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಸ್ವಲ್ಪ ಭಿನ್ನವಾಗಿ ಕಾಣುವ ವ್ಯಕ್ತಿ ಎಂದರೆ ಭಗತ್ ಸಿಂಗ್, ಭಗತ್ ಸಿಂಗ್ ಬದುಕಿದ್ದು ಕೇವಲ 24 ವರ್ಷಗಳು ಮಾತ್ರ, ಆದರು ಅವರು ಮಾಡಿದ ಸಾಧನೆ ಮಾತ್ರ ಅಪಾರ, ಚಕ್ ಬಂಗಾ ಎಂಬ ಸಣ್ಣ ಗ್ರಾಮದಲ್ಲಿ ವಾಸವಾಗಿದ್ದ ಕಿಶನ್ ಸಿಂಗ್ ಹಾಗೂ ವಿದ್ಯಾವತಿ ದಂಪತಿಯ ಮಗನಾಗಿ ಜನ್ಮ ತಾಳಿದ ಭಗತ್ ಸಿಂಗ್ ಜಲಿಯನ್ ವಾಲಾಬಾಗ್ ನಲ್ಲಿ ನಡೆದ ಹತ್ಯಾಕಾಂಡದಿಂದ ನೂರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಬೇಕಾಯಿತು.
ಈ ಘಟನೆಯಿಂದ ಸಿಡಿದೆದ್ದ ಭಗತ್ ಸಿಂಗ್ ತನ್ನ 13ನೇ ವರ್ಷದ ವಯಸ್ಸಿನಲ್ಲೇ ದೇಶ ಸೇವೆ ಮಾಡಲು ನಿರ್ಧರಿಸಿ ಸ್ವಾತಂತ್ರ್ಯ ಹೋರಾಟಗಳ ಚಳುವಳಿಗಳಲ್ಲಿ ಸಕ್ರಿಯ ಭಾಗವಹಿಸಿ ದೇಶಕ್ಕಾಗಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕೊಟ್ಟ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಅವರ ಕುಟುಂಬದ ಇತರೆ ಸದಸ್ಯರು ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
ಅವರ ಪ್ರೇರಣೆಯಿಂದಲೇ ಭಗತ್ ಸಿಂಗ್ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಮೂಲ ಕಾರಣ, ಭಗತ್ ಸಿಂಗ್ ರಂತಹ ಸ್ವಾತಂತ್ರ್ಯ ಹೋರಾಟಗಾರರು ಭಾರತದಲ್ಲಿ ಜನ್ಮ ತಾಳದೇ ಹೋಗಿದ್ದರೆ ನಾವು ಇನ್ನು ಕೂಡ ಪರಕಿಯರಾದ ಬ್ರಿಟಿಷರ ಆಡಳಿತದಲ್ಲೇ ಬದುಕಬೇಕಾಗಿತ್ತು.
ಹೌದು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಈ ದೇಶ ಕಂಡ ವೀರ ಸ್ವಾತಂತ್ರ್ಯ ಹೋರಾಟಗಾರ,ದೇಶಕ್ಕಾಗಿ ಇಡೀ ತಮ್ಮ ಜೀವನವನ್ನೇ ಅರ್ಪಿಸಿದ ತ್ಯಾಗಮಯಿ, ಭಗತ್ ಸಿಂಗ್ ನಮ್ಮನ್ನೆಲ್ಲ ಅಗಲಿರಬಹುದು, ಆದರು ಅವರು ಎಂದೆಂದಿಗೂ ಭಾರತೀಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.
ಭಗತ್ ಸಿಂಗ್ ಅಂದು ಭಾರತ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು, ಭಾರತವನ್ನು ಆಕ್ರಮಿಸಿಕೊಂಡು ಅಧಿಕಾರ ಚಲಾಯಿಸುತ್ತಿದ್ದ ಬ್ರಿಟಿಷರನ್ನು ಭಾರತದಿಂದ ಹೊರದೊಡಿಸಲು ಹಗಲಿರುಳು ಎನ್ನದೇ ದುಡಿದರು, ಅದೆಷ್ಟೋ ದಿನ ಒಂದೊತ್ತು ಊಟ ಸಿಗದೆ ಕಷ್ಟ ಪಟ್ಟರು.
ಭಾರತ ದೇಶಕ್ಕೆ ಮತ್ತು ಭಾರತೀಯರಿಗೆ ಮಾರಕವಾಗುವ ಎರಡು ಮಸೂದೆಗಳನ್ನು ಮಂಡಿಸಲು ಆಗಿನ ಬ್ರಿಟಿಷ್ ಸರ್ಕಾರ ನಿರ್ಧರಿಸಿದಾಗ ಅದನ್ನು ವಿರೋಧಿಸಿ ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಬಾಂಬ್ ಎಸೆದು ಬ್ರಿಟಿಷ್ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ರವಾನಿಸಿದ್ದರು.
ಭಗತ್ ಸಿಂಗ್ ರ ಪರಾಕ್ರಮವನ್ನು ಕಟ್ಟಿ ಹಾಕಲು ಬ್ರಿಟಿಷ್ ಸರ್ಕಾರ ಭಗತ್ ಸಿಂಗ್ ರವರಿಗೆ ನೇಣು ಹಾಕಲು ನಿರ್ಧರಿಸಿ ಭಗತ್ ಸಿಂಗ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದಂತಹ ರಾಜಗುರು, ಸುಖದೇವ್ ಈ ಮೂವರನ್ನು 1931 ಮಾರ್ಚ್ 24 ರಂದು ನೇಣಿಗೆ ಹಾಕುತ್ತಾರೆ.
ಆ ಮೂಲಕ ಈ ಮೂವರು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.
ಆ ಮೂಲಕ ಈ ಮೂವರು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.
ಆಶ್ಚರ್ಯ ಎಂದರೆ ಇನ್ನೇನು ಬ್ರಿಟಿಷರು ನೇಣುಗಂಬಕ್ಕೆ ಏರಿಸುತ್ತಾರೆಂಬ ವಿಷಯ ಗೊತ್ತಾದರು ಕೂಡ ಭಗತ್ ಸಿಂಗ್ ಚಿಂತಿಸದೆ ಪ್ರಾಣ ಕೊಡುತ್ತಿರುವುದು ನಮ್ಮ ಭಾರತ ದೇಶಕ್ಕಾಗಿ ತಾನೇ ಎಂದು ನೇಣಿಗೆ ತಲೆ ಕೊಟ್ಟ ವೀರ ಸ್ವಾತಂತ್ರ್ಯ ಹೋರಾಟಗಾರ, ಅದರಲ್ಲೂ ಪ್ರಮುಖವಾಗಿ ನೇಣುಗಂಬಕ್ಕೆ ಏರುವ ಹಿಂದಿನ ದಿನ ಭಗತ್ ಸಿಂಗ್ ತಮ್ಮ ತಾಯಿಗೆ ಬರೆದ ಪತ್ರವನ್ನು ಓದಿದರೆ ಅರಿವಾಗುತ್ತದೆ ಅವರೆಷ್ಟು ದೊಡ್ಡ ದೇಶ ಭಕ್ತ ಎಂದು…. ಪತ್ರದಲ್ಲಿನ ಸಾರಾಂಶ ಹೀಗಿತ್ತು ಅಮ್ಮ ನಿನ್ನ ಮಗ ಸಾಯುತ್ತನೆಂದು ದುಃಖಿಸಬೇಡ, ಚಿಂತಿಸಬೇಡ ಯಾಕೆಂದರೆ ದೇಶಕ್ಕಾಗಿ ಪ್ರಾಣ ಕೊಡುವ ಅವಕಾಶ ಎಷ್ಟು ಜನರಿಗೆ ತಾನೇ ಬರುತ್ತದೆ ನೀನೆ ಹೇಳು…? ಅಂತಹ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಯಾವ ಜನ್ಮದ ಪುಣ್ಯವೋ.
ಈ ಜನ್ಮದಲ್ಲಿ ನನಗೆ ದೇಶಕ್ಕಾಗಿ ಪ್ರಾಣ ಕೊಡುವ ಅವಕಾಶ ದಕ್ಕಿದೆ, ಅಷ್ಟಕ್ಕು ನಾನು ಪ್ರಾಣ ಕೊಡುತ್ತಿರುವುದು ನನ್ನ ಭಾರತ ದೇಶಕ್ಕಾಗಿ ಅಲ್ಲವೇ, ಆದ್ದರಿಂದ ನೀನು ಅಳಬಾರದು, ನೊಂದುಕೊಳ್ಳಬಾರದು ನಾನು ಇಲ್ಲದ್ದಿದ್ದರೆನಂತೆ ಭಾರತೀಯರೆಲ್ಲ ನಿನ್ನ ಮಕ್ಕಳಲ್ಲವೇ…..ಎಂದು ಭಗತ್ ಸಿಂಗ್ ತಮ್ಮ ತಾಯಿಗೆ ಪತ್ರ ಬರೆದಿದ್ದರು.
ಸಾವು ಹತ್ತಿರ ಬರುತ್ತಿದ್ದಂತೆ ಯಾರು ತಾನೇ ಸಂತೋಷದಿಂದ ಇರುತ್ತಾರೆ, ಪ್ರತಿಕ್ಷಣವು ಕೊರಗುತ್ತ, ದುಃಖಿಸುತ್ತ ಕಾಲ ಕಳೆಯುತ್ತಾರೆ, ಆದರೆ ಭಗತ್ ಸಿಂಗ್ ಇದಕ್ಕೆ ತದ್ವಿರುದ್ದ ಸಾವು ಸಮೀಪ ಸುಳಿದಾಗಲು ಕೂಡ ಕೇರ್ ಮಾಡದ ಮಹಾನ್ ವ್ಯಕ್ತಿ, ದೇಶಕ್ಕಾಗಿ ಪ್ರಾಣ ಕೊಡುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ನಾನ್ಯಾಕೆ ಕೊರಗಲಿ ಎಂಬುವುದು ಭಗತ್ ಸಿಂಗ್ ರವರ ಅಭಿಪ್ರಾಯವಾಗಿತ್ತು.
ಹಿಂದೆ ಎಲ್ಲರ ರಕ್ತದಲ್ಲೂ ದೇಶಭಕ್ತಿ ತುಂಬಿತ್ತು, ದೇಶಕ್ಕಾಗಿ ಪ್ರಾಣ ಕೊಡಲು ಹಿಂಜರಿಯುತ್ತಿರಿಲಿಲ್ಲ ಆದರೆ ಇಂದು ಹಾಗಲ್ಲ, ಕಾಲ ಬದಲಾದಂತೆ ಎಲ್ಲವು ಬದಲಾಗಿ ತದ್ವಿರುದ್ದವಾಗಿದೆ ಸದಾ ದುರಾಸೆಯಿಂದ ಆಲೋಚಿಸುವ ಜನ ಪ್ರತಿನಿಧಿಗಳು, ಕ್ಷಣ ಕ್ಷಣಕ್ಕೂ ಹಣ ಕೊಳ್ಳೆ ಹೊಡೆಯುವ ಕಡೆ ಚಿಂತಿಸುವ ಜನ ನಾಯಕರು ಇಂದು ಕಾಣ ಸಿಗುತ್ತಾರೆ.
ಇಂತಹ ಅಯೋಗ್ಯರು ಆಡಳಿತ ನಡೆಸಿದರೆ ನಮ್ಮ ಭವ್ಯ ಭಾರತ ಹಾಗೂ ಅದರಲ್ಲಿ ವಾಸಿಸುವ ಜನಸಾಮಾನ್ಯರು ಹೇಗೆ ಉದ್ದಾರ ಆಗುತ್ತಾರೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಸಿದ್ದಾಂತಗಳನ್ನು ನಮ್ಮ ಜನಪ್ರತಿನಿಧಿಗಳು ಅಳವಡಿಸಿಕೊಳ್ಳ ಬೇಕು, ಸ್ವಾತಂತ್ರ್ಯ ಹೋರಾಟಗಾರರ ಹಾದಿಯಲ್ಲಿ ನಡೆಯುತ್ತ ದೇಶವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕಡೆ ಶ್ರಮಿಸಬೇಕು.
ಇನ್ನು ನಾವು ಸ್ವಾತಂತ್ರ್ಯ ಹೋರಾಟಗಾರರ ಚಿಂತನೆ ತತ್ವ, ಸಿದ್ದಾಂತ, ಆದರ್ಶಗಳನ್ನು ಪಾಲಿಸುವುದು ಒಂದು ಕಡೆ ಇರಲಿ ಕನಿಷ್ಟ ಅವರನ್ನು ನೆನಪಿಸಿಕೊಳ್ಳುವ ಪುರುಸೊತ್ತು ಕೂಡು ನಮಗೆ ಇಲ್ಲದಾಗಿದೆ.
ಭಗತ್ ಸಿಂಗ್ ರವರ ಜನ್ಮ ದಿನದಂದು ಕೂಡ ಬಹುತೇಕರಿಗೆ ಅವರು ನೆನಪಾಗುವುದಿಲ್ಲ, ಸ್ವಾತಂತ್ರ್ಯ ಹೋರಾಟಗಾರರು ಅಂದು ನಮಗಾಗಿ ತಮ್ಮ ಪ್ರಾಣವನ್ನು ಕೊಡದೆ ಹೋಗಿದ್ದರೆ ಇಂದು ನಾವು ಜೀವಿಸಲು ಸಾಧ್ಯವಾಗುತ್ತಿತ್ತೇ…. ಖಂಡಿತಾ ಸಾಧ್ಯವಾಗುತ್ತಿರಲಿಲ್ಲ….?
ಸ್ವಾತಂತ್ರ್ಯ ಹೋರಾಟಗಾರರು ಅಂದು ನಮಗ್ಯಾಕೆ ದೇಶವನ್ನು ರಕ್ಷಿಸುವ ಕೆಲಸ ಎಂದು ಭಾವಿಸಿ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸದೆ ಸುಮ್ಮನೆ ಇದ್ದಿದ್ದರೆ, ಬ್ರಿಟಿಷರು ಇನ್ನು ಕೂಡ ಭಾರತದಲ್ಲಿ ತಮ್ಮ ಅಧಿಪತ್ಯ ಸಾಧಿಸಿ ಆಡಳಿತ ನಡೆಸುತ್ತಿದ್ದರು, ಅವರ ದಬ್ಬಾಳಿಕೆಯನ್ನು ಸಹಿಸಿಕೊಳ್ಳುತ್ತ ಅವರು ಕೊಡುವ ಚಿತ್ರ ಹಿಂಸೆಯನ್ನು ಅನುಭವಿಸುತ್ತ ನಾವೆಲ್ಲರು ಜೀವಿಸ ಬೇಕಾಗಿತ್ತು ಎಂಬುವುದನ್ನು ಯಾರು ಮರೆಯಬಾರದು.
ಪ್ರತಿಯೊಬ್ಬರು ಕೂಡ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ,ತ್ಯಾಗ, ಅವರ ಸಾಧನೆಗಳನ್ನು ಯಾರು ಮರೆಯಬಾರದು, ಅವರ ಚಿಂತನೆಗಳನ್ನು ಅರಿತು ಪಾಲಿಸಬೇಕಾದ ಅನಿವಾರ್ಯತೆ ಇದೆ.
” ಇಂಕ್ವಿಲಾಬ್ ಜಿಂದಾಬಾದ್ “
Post a Comment