Veerakesari 22:23
ಮಂಗಳೂರು : ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಿ ಆರೋಪಿ ಕೆ ಜೆ ಜಾರ್ಜ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದಕ್ಕೆ ಸಂಬಂಧಪಟ್ಟಂತೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ
ಆರೋಪಿಗಳ ರಕ್ಷಣೆಗಾಗಿ ಸಿಐಡಿ ತನಿಖೆ ನಡೆಸಲಾಗಿದೆ. ಹೀಗಾಗಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಲೋ ಮುಂಚೆ ಕೊಟ್ಟ ಹೇಳಿಕೆ ಪರಿಗಣಿಸಿ,  ಸುಪ್ರೀಂಕೋರ್ಟ್​ ಮೂಲಕ ಸರಿಯಾದ ತನಿಖೆ ನಡೆಸಬೇಕು ಎಂದು ಪೂಜಾರಿ ಹೇಳಿದ್ದಾರೆ.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್​ಗೆ ಕ್ಲೀನ್​ಚಿಟ್​​  ಸಿಕ್ಕಿದೆ, ಇನ್ನು ಜಾರ್ಜ್‌ ಮತ್ತೆ ಸಂಪುಟಕ್ಕೆ ಸೇರಿದರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಸದ್ಯದಲ್ಲೇ ಆಗಲಿದೆ ಎಂದು ಪೂಜಾರಿ ಭವಿಷ್ಯ ನುಡಿದಿದ್ದಾರೆ.

Post a Comment

Powered by Blogger.