
ಸೇನೆಯ ಎರಡು ತುಕಡಿಗಳ ಒಟ್ಟು 20 ಭಾರತೀಯ ಸೈನಿಕರು ಉರಿ ಸೆಕ್ಟರ್ ನಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ಗಡಿ ದಾಟಿ ಈ ಕಾರ್ಯಾಚರಣೆ ಮಾಡಿದ್ದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಮೂರು ನೆಲೆಗಳನ್ನು ನಾಶ ಮಾಡುವ ಮೂಲಕ 20 ಕ್ಕೂ ಅಧಿಕ ಉಗ್ರರನ್ನು ಕೊಲ್ಲಲಾಗಿದೆ ಹಾಗೂ ಗಾಯಗೊಂಡವರ ಸಂಖ್ಯೆ 200 ದಾಟಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಗೆ ಭಾರತೀಯ ಸೇನೆಯ ಹೆಲಿಕಾಪ್ಟರ್ ಬಳಸಿದ್ದನ್ನು ಸ್ವತಃ ಸೇನೆಯ ಮೂಲಗಳೇ ಖಚಿತ ಪಡಿಸಿದೆ ಎಂದು ಖಾಸಗಿ ವೆಬ್ ಸೈಟ್ ಒಂದು ವರದಿ ಮಾಡಿದೆ. ಈ ಕಾರ್ಯಾಚರಣೆ ನಂತರ ಪಾಕಿಸ್ತಾನ ಪಿಓಕೆ ಯ ಗಿಲ್ಗಿಟ್-ಬಲ್ಟಿಸ್ತಾನ ಹಾಗೂ ಕೈಬರ್ ಬಳಿ ಎಲ್ಲಾ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಿದೆ.20 ಸೆಪ್ಟೆಂಬರ್ ಹಾಗೂ 21 ಸೆಪ್ಟೆಂಬರ್ ನ ಮಧ್ಯೆ ಭಾರತೀಯ ಸೇನೆ ಈ ದಾಳಿ ಮಾಡಿದೆ.ಆದರೆ ಈ ವರದಿ ಬಗ್ಗೆ ಭಾರತೀಯ ಸೇನೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
Source – Quint
Post a Comment