loading...
ಭಾರತ ಒಂದು ಕಾಲದಲ್ಲಿ ಸಂಪನ್ಮೂಲ ಭರಿತ ದೇಶವಾಗಿತ್ತು, ಕೇವಲ ದುಡ್ಡು, ಚಿನ್ನ ವಜ್ರ ವೈಡೂರ್ಯ ಅಷ್ಟೇ ಅಲ್ಲ ವಿದ್ಯೆ, ಕಲೆ, ಸಾಹಿತ್ಯ ಮುಂತಾದವುಗಳಲ್ಲಿಯೂ ಸಂಪದ್ಭರಿತವಾಗಿತ್ತು. ಆದರೆ ಪರಕೀಯರ ಆಕ್ರಮಣ ,ನಮ್ಮದೇ ಜನರ ರಾಜಕೀಯ ಷಡ್ಯಂತ್ರಗಳಿಗಿಂದ ಸಂಪದ್ಭರಿತವಾಗಿದ್ದ ಭಾರತ ದೇಶ ಇಂದು ಪರಕೀಯರ ದಾಸರಾಗಿದ್ದೇವೆ.
ಒಂದು ಕಾಲದಲ್ಲಿ ಆಲೋಚನೆ, ಸ್ವಂತಿಕೆ ,ಅನ್ವೇಷಣೆಗಳಗೆ ಭಾರತ ಹೆಸರಾಗಿತ್ತು ,ಸಾವಿರಾರು ವರ್ಷಗಳ ಹಿಂದೆಯೇ ಭೂಮಿಯ ಆಕಾರ , ಗ್ರಹಗಳ ಚಲನೆ, ಭೂಮಿಯಿಂದ ಇತರ ಗ್ರಹಗಳಿಗಿರುವ ದೂರ, ಮುಂದೆ ಗ್ರಹಣಗಳು ಸಂಭವಿಸುವ ದಿನ ಗಂಟೆ ಹೀಗೆ ಎಲ್ಲವನ್ನೂ ನಿಖರವಾಗಿ ಆಗಿನ ಗಣಿತಶಾಸ್ತ್ರಜ್ಞರೂ ಹೇಳಿದ್ದಾರೆ ಆದರೆ ಇಂದು ಭಾರತ ಸ್ವಂತಿಕೆಯನ್ನು ಕಳೆದುಕೊಂಡಿದೆ ಎಲ್ಲದಕ್ಕೂ ವಿದೇಶೀಯರನ್ನೇ ಅವಲಂಬಸಿದ್ದೇವೆ ಸಿನಿಮಾದಿಂದ ಹಿಡಿದು ತಂತ್ರಜ್ನ್ಯಾನದವರೆಗು ವಿದೇಶೀಯರೆ ನಮಗೆ ಸ್ಪೂರ್ತಿಯಾಗಿದ್ದಾರೆ.
ಪ್ರಪಂಚದಲ್ಲಿಯೇ ಅತಿಹೆಚ್ಚು ಸಾಹಿತ್ಯಗಳನ್ನು ಹೊಂದಿರುವ ನಮ್ಮ ಭಾರತದಲ್ಲಿ ಇಂದು ನಮ್ಮ ಮಕ್ಕಳು ವಿದೇಶಿ ಸಾಹಿತ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಶಿವಾಜಿ ಮಹಾರಾಜ್, ರಾಣಾಪ್ರತಾಪ ಸಿಂಹ, ಬಾಜೀರಾವ್ ಇವರ ಬಗ್ಗೆ ಅಧ್ಯಯನ ಮಾಡಬೇಕಾದವರು ಟಿಪ್ಪು, ಔರಂಗಜೇಬ, ವಾಸ್ಕೋಡಗಾಮನ ಬಗ್ಗೆ ಅಧ್ಯಯನ ಮಾಡುತ್ತಾರೆ.
ಕಾಳಿದಾಸ, ವೇದವ್ಯಾಸರ ಬಗ್ಗೆ ಅಧ್ಯಯನ ಮಾಡಬೇಕಾದವರು ಶೇಕ್ಸ್ ಫಿಯರ್ ನ ಬಗ್ಗೆ ಅಧ್ಯಯನ ಮಾಡುತ್ತಾರೆ.
ಇಂದಿಗೂ ವಾಸ್ಕೋಡಗಾಮ ಭಾರತವನ್ನು ಕಂಡುಹಿಡಿದ ಅಂತ ಹೇಳುತ್ತೇವೆಯೆ ಹೊರತು ಆತ ಇಲ್ಲಿಗೆ ಬರೋ ಸಾವಿರಾರು ವರ್ಷ ಮೊದಲೆ ಭಾರತ ಇಲ್ಲೇ ಇತ್ತು ಅದು ಕಂಡುಹಿಡಿಯಲು ವಸ್ತುವಲ್ಲ ಅದೊಂದು ಅದ್ಭುತವಾದ ಶಕ್ತಿ ಕಡಿಮೆಯಾಗದ ಸಂಪತ್ತು ಅಂತ ಯಾರೂ ಹೇಳಲ್ಲ.
ಇದನ್ನೆಲ್ಲ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಮುಂದೆ ಭಾರತ ತೊರೆದು ವಿದೇಶಗಳಲ್ಲಿ ನೆಲೆಯೂರುತ್ತಾರೆ ಭಾರತೀಯತ್ವವನ್ನೇ ಕಳೆದುಕೊಳ್ಳುವುದಲ್ಲದೆ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ.
ಈ ವೀಡಿಯೋದಲ್ಲಿ ಮಾತನಾಡಿರೋ ವ್ಯಕ್ತಿ ಭಾರತೀಯನೂ ಅಲ್ಲ ಆತನಿಗೆ ಭಾರತದ ಬಗ್ಗೆ ಅಷ್ಟೊಂದು ಕಾಳಜಿ ತೋರೋ ಅವಶ್ಯಕತೆನೂ ಇಲ್ಲ ಆದರೆ ಆತನಿಗೆ ನಶಿಸಿ ಹೋಗುತ್ತಿರುವ ಭಾರತೀಯ ಸಂಸ್ಕೃತಿ ಕಲೆ ಆಚರಣೆಗಳನ್ನು ಕಂಡು ಭಾರತದ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾನೆ. ಆತನ ಮಾತುಗಳು ನೂರಕ್ಕೆ ನೂರು ಸತ್ಯ ನಮ್ಮಲ್ಲಿ ಎಷ್ಟು ಜನ ತಮ್ಮ ಮಕ್ಕಳಿಗೆ ಭಾರತದ ಸಂಸ್ಕೃತಿಯ ಬಗ್ಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದೇವೆ, ಎಷ್ಟು ಜನ ಗುರುಕುಲಗಳಿಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಕಳಿಸುತ್ತಾರೆ. ಇನ್ನೂ ಎಷ್ಟು ಗುರುಕುಲಗಳು ಭಾರತದಲ್ಲಿ ಉಳಿದುಕೊಂಡಿದೆ.
ಒಂದು ಕಾಲದಲ್ಲಿ ಭಾರತದಲ್ಲಿ 95% ವಿದ್ಯಾರ್ಥಿಗಳು ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಈಗ ಎಲ್ಲಾ ತಮ್ಮ ಮಕ್ಕಳು ಇಂಜಿನಿಯರ್ ಆಗ್ಬೇಕು ಡಾಕ್ಟರ್ ಆಗ್ಬೇಕು ಅಂತ ಪಾಶ್ಚಾತ್ಯ ವಿದ್ಯಾಭ್ಯಾಸ ಪದ್ಧತಿಗೆ ಮಾರುಹೋಗಿದ್ದಾರೆ. ನಮ್ಮ ದೇಶದ ಮೇಲೆ ದಾಳಿ ಮಾಡಿದ ಪರಕೀಯರು ಮೊದಲು ಕೈಗೊಂಡ ಕೆಲಸ ಅಂದರೆ ಈ ಗುರುಕುಲ ಪದ್ದತಿ ಅಳಿಸಿಹೋಗಿ ಭಾರತೀಯ ಸಂಸ್ಕೃತಿ ನಾಶವಾಗುವಂತೆ ಮಾಡಿದ್ದು.ಇದರಿಂದ ಅವರಿಗೆ ತಾವು ಬಂದಿದ್ದ ಕೆಲಸ ತುಂಬಾ ಸುಲಭವಾಗಿ ಈಡೇರಿಸಲಾಯಿತು ಅಷ್ಟಕ್ಕೇ ಬಿಡದೆ ಮುಂದೆ ಒಗ್ಗಟ್ಟಾಗಿದ್ದ ಹಿಂದೂಗಳನ್ನು ಜಾತಿಯ ವಿಷಬೀಜ ಬಿತ್ತಿ ಒಡೆದರು ನಾವು ಕುರಿಗಳಾದೆವು ಇಂದಿಗೂ ಅದನ್ನೆ ನಂಬಿ ಬದುಕಿದ್ದೇವೆ. ಆದರೆ ಇಂದು ಅವರು ತಮ್ಮ ದೇಶಗಳಲ್ಲಿ ವೇದ, ಉಪನಿಶದ್ ಗಳನ್ನು ಕಲಿಸುತ್ತಿದ್ದರೆ ನಾವು ಇಲ್ಲಿ ನಮ್ಮ ಮಕ್ಕಳನ್ನು ದುಡ್ಡು ತಯಾರಿಸೋ ಯಂತ್ರಗಳಾಗಿ ಮಾರ್ಪಡಿಸುತ್ತಿದ್ದೇವೆ. ನಮ್ಮ ಸಂಸ್ಕೃತಿ ಆಚರಣೆಗಳ ಅಳಿವಿಗೆ ನಾವೇ ಕಾರಣರಾಗುತ್ತಿದ್ದೇವೆ.
ಹಾಗಾದರೆ ನಾವು ಮಾಡಬೇಕಾಗಿರುವುದು ಏನು…?
ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡಬೇಕು, ನಮ್ಮ ಸಂಸ್ಕೃತಿಯನ್ನು ಉಳಿಸಲು ಹೋರಾಡಿದ ಶಿವಾಜಿ , ಮಹಾರಾಣಾ ಪ್ರತಾಪ್ ಅಂತಹಾ ನಾಯಕರ ಬಗ್ಗೆ ಅಧ್ಯಯನ ಮಾಡಿಸಬೇಕು, ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ತಮ್ಮ ಸಾಹಿತ್ಯದ ಮೂಲಕ ಪಸರಿಸಿದ ಪ್ರಪಂಚದ ಶ್ರೇಷ್ಠ ಸಾಹಿತಿಗಳಾದ ಕಾಳಿದಾಸರಂತವರ ಸಾಹಿತ್ಯದ ಬಗ್ಗೆ ತಿಳಿಸಿಕೊಡಬೇಕು. ಅದ್ವೈತ ಸಿದ್ದಾಂತಗಳನ್ನು ,ಯೋಗ, ಪ್ರಾಣಾಯಾಮ , ವೇದ ಉಪನಿಷದ್ ಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ಕಲಿಸಿಕೊಡಬೇಕು.
ಇದಲ್ಲದೇ ಪರಕೀಯರ ದಾಳಿಗಳಿಂದ ಅತೀ ಹೆಚ್ಚು ನಷ್ಟವಾಗಿದ್ದು ಹಿಂದೂಗಳಿಗೆ, ನಮ್ಮ ಸಂಸ್ಕೃತಿ ಉಳಿವಿಗೆ ಪ್ರಾಣತ್ಯಾಗಮಾಡಿದ ಆ ಹತ್ತು ಕೋಟಿಗೂ ಅಧಿಕ ಹಿಂದೂಗಳಲ್ಲಿ ಕೆಲವರ ಬಗ್ಗೆಯಾದರೂ ನಮ್ಮ ಮಕ್ಕಳಿಗೆ ತಿಳಿದಿರಬೇಕು.
ಧರ್ಮ ಅಂದರೆ ಏನು ಕರ್ಮ ಅಂದರೆ ಏನೂ ,ಹುಟ್ಟು ಸಾವು ,ನಂಬಿಕೆ ಆಚರಣೆ ,ಪ್ರೀತಿ, ಪ್ರೇಮ, ವಾತ್ಸಲ್ಯ ,ನಂಬಿಕೆ ಹೀಗೇ ಎಲ್ಲದರ ಬಗ್ಗೆಯೂ ನಮ್ಮ ಮಕ್ಕಳಿಗೆ ತಿಳಿಯಬೇಕು. ಅದೇ ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡೋ ದೊಡ್ಡ ಕೊಡುಗೆ.ಹಾಗಾದರೆ ಮಾತ್ರ ನಾವು ಇಂಡಿಯಾವನ್ನು ಮತ್ತೆ ಭಾರತವಾಗಿಸಬಹುದು ಭಾರತವನ್ನು ಮತ್ತೆ ವಿಶ್ವಗುರುವಾಗಿಸಬಹುದು..ಏನಂತೀರ
– Veerakesari
loading...
Post a Comment