ಬೆಳ್ತಂಗಡಿ : ಎತ್ತಿನಹೊಳೆ ಕಾಮಗಾರಿಗಾಗಿ ಪಶ್ಚಿಮಘಟ್ಟದಲ್ಲಿ ಯಾವುದೇ ಮರಗಳನ್ನು ಅನುಮತಿ ಇಲ್ಲದೆ ಕಡಿಯಬಾರದು ಎಂದು ಸುಪ್ರೀಂ ಕೋರ್ಟಿನ ಹಸಿರು ಪೀಠ ಕರ್ನಾಟಕ ನೀರಾವರಿ ನಿಗಮಕ್ಕೆ ಆದೇಶ ನೀಡಿದ್ದರೂ ಮರಗಳ ಮಾರಣಹೋಮ ಅವ್ಯಾಹತವಾಗಿ ಸಾಗಿದೆ. ಎತ್ತಿನಹೊಳೆ ಯೋಜನೆ ವಿರುದ್ಧ ಹಸಿರು ಪೀಠ ದಲ್ಲಿ ಕೇಸು ದಾಖಲಿಸಿದ್ದ ಕೆ.ಎನ್. ಸೋಮಶೇಖರ್ ಹಾಗೂ ತುಮಕೂರಿನ ಯತಿರಾಜು ನೇತೃತ್ವದ ತಂಡ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿತು. ಆಗ ಹೊರ ಬಂದ ಘೋರ ಸತ್ಯಗಳನ್ನು ಜೀರ್ಣಿಸಿಕೊಳ್ಳಲು ಅಸಾಧ್ಯ ಎಂಬಂತಿದೆ.ಹೇಳಿದ್ದು 31; ಕಡಿದದ್ದು …!:ಸಕಲೇಶ ಪುರದ ವಿವಿಧ ಭಾಗಗಳಲ್ಲಿ ಸ್ಥಳ ಸಮೀಕ್ಷೆ ನಡೆಸಲಾಯಿತು. ನ್ಯಾಯಾಲಯ ಆ. 29ರಂದು ಮಾಡಿದಆದೇಶ ಸಂದರ್ಭ ಕೇವಲ 31 ಮರಗಳನ್ನು ಕಡಿಯಲಾಗಿದೆ ಎಂದು ನಿಗಮ ಪ್ರಮಾಣ ಪತ್ರ ನೀಡಿತ್ತು. ಆದರೆ ನೂರಾರು ಮರಗಳ ಮಾರಣಹೋಮ ನಡೆದ ವಾಸ್ತವ ದೃಶ್ಯ ಕಣ್ಣಿಗೆ ರಾಚುತ್ತಿತ್ತು.ಬೆಟ್ಟ ಪ್ರದೇಶದಲ್ಲಿ, ಯಾರೂ ಹೋಗಲಾರದ ಪ್ರದೇಶದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲದ ಡೀಮ್ಡ್ ಫಾರೆಸ್ಟ್‌ನಲ್ಲಿ ರಾಜಾರೋಷವಾಗಿ ಮರಗಳನ್ನು ಧರೆಗುರುಳಿಸಿ ಕಾಮಗಾರಿ ನಡೆಸಲಾಗಿದೆ.
ಅಲ್ಲಿಗೊಂದು ನ್ಯಾಯ ಇಲ್ಲಿಗೊಂದು ನ್ಯಾಯ :
ಕಾವೇರಿ ವಿವಾದಕ್ಕೆ ಸಂಬಂಧಿಸಿ ಸುಪ್ರಿಂ ಕೋರ್ಟ್ ಹೇಳಿದ ಕೂಡಲೇ ರಾಜ್ಯ ಸರಕಾರ ನೀರು ಬಿಡುಗಡೆ ಮಾಡಿತ್ತು. ಆದರೆ ಇಲ್ಲಿ ಮರ ಕಡಿಯಬೇಡಿ ಎಂದು ಹೇಳಿದರೂ ಕ್ಯಾರೇ ಮಾಡಿಲ್ಲ. ಆದೇಶ ಪಾಲಿಸಲು ಯಾವುದೇ ಕ್ರಮ ಕೈಗೊಳ್ಳದೆ ತನಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿದೆ.ಗುತ್ತಿಗೆ ಸಂಸ್ಥೆಯ ದಂಧೆಜಿವಿಪಿಆರ್ ಎಂಜಿನಿಯರಿಂಗ್ ಲಿ. ಗುತ್ತಿಗೆದಾರ ಸಂಸ್ಥೆ ನೂರಾರು ಮರಗಳ ಮಾರಣ ಹೋಮದ ಜಾಗದಲ್ಲಿ ಕಾಮಗಾರಿ ನಡೆಸುತ್ತಿದೆ. ಈಸಂಸ್ಥೆಯ ಕಚೇರಿಗೂ ಭೇಟಿ ನೀಡಲಾಯಿತು. ಅಲುವಳ್ಳಿಯಲ್ಲಿ ಪ್ಯಾಕೇಜ್ 4ರಂತೆ ಗುತ್ತಿಗೆ ಮೂಲಕ ಅಣೆಕಟ್ಟಿನ ಕಾಮಗಾರಿ ನಡೆಯುತ್ತಿದೆ. ಅಲ್ಲಿಯೂ ಮರಗಳನ್ನು ಕಡಿದು ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ.ಅನೇಕ ಕಡೆ ಇಂತಹ ಪ್ರಕರಣ ಕಂಡುಬಂದಿವೆ. ಮರಗಳನ್ನುಕಡಿದುದಕ್ಕೆ ಪರ್ಯಾಯವಾಗಿ ಎಲ್ಲಿಯೂ ಗಿಡ ನೆಟ್ಟಿಲ್ಲ. ಬೀಟೆ, ಹೊನ್ನೆ, ನಂದಿ, ಮತ್ತಿಯಂತಹ ಮರಗಳು, ಎಳೆ ಸಸಿಗಳನ್ನು ಕಡಿದಿರುವುದು ಕಂಡುಬಂತು. ಕಡಿದ ಮರಗಳ ಸಾಗಾಟವೂ ನಡೆಯುತ್ತಿತ್ತು.ದಲ್ಲಾಳಿಗಳುಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಕೆಲವರು ರೈತರನ್ನು ಪುಸಲಾಯಿಸಿ ಕಂಪೆನಿಗೆ ಜಮೀನು ಕೊಡಿಸುವ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ ಎಂದು ರೈತರು ಆಪಾದಿಸಿದರು. ಎಂಜಿನಿಯರ್ ಮಾಹಿತಿ ಪ್ರಕಾರ ಶೇ. 5ರಷ್ಟು ಕೂಡ ಕೆಲಸ ಸಾಧ್ಯವಾಗಿಲ್ಲ. ಆದರೆ ಸರಕಾರ ಶೇ. 25ರಷ್ಟುಕೆಲಸ ಆಗಿದೆ ಎಂದು ಹೇಳುತ್ತಿತ್ತು.ಆರ್‌ಟಿಐ ಮಾಹಿತಿ ಸಿಗುತ್ತಿಲ್ಲಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಎತ್ತಿನಹೊಳೆ ಯೋಜನೆಯ ಯಾವುದೇ ಮಾಹಿತಿಗಳನ್ನು ಆರ್‌ಟಿಐ ಕಾಯ್ದೆಯಡಿ ನೀಡದಂತೆ ಅಧಿಕಾರಿಗಳಿಗೆ ಮೌಖೀಕ ಒತ್ತಡ ಬಂದಿದೆ. ಆದ್ದರಿಂದ ಇದ್ದಬದ್ದ ಹಾಗೂ ಇಲ್ಲದಕಾನೂನಿನ ನೆಪದಲ್ಲಿ ಅರ್ಜಿಗಳನ್ನು ನಿರಾಕರಿಸಲಾಗುತ್ತಿದೆ.ಕುಡಿಯುವ ನೀರಿನ ಹೆಸರಿನಲ್ಲಿ ಕರ್ನಾಟಕದಲ್ಲಿ 2.25 ಲಕ್ಷ ಕೋ.ರೂ.ಗಳ ವಂಚನೆ ನಡೆದಿದೆ. ಮಹಾರಾಷ್ಟ್ರದಲ್ಲಿ 70 ಸಾವಿರ ಕೋ.ರೂ.ಗಳ ಬೋಗಸ್ ಯೋಜನೆಯನ್ನು ಈಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ಥಗಿತಗೊಳಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಇನ್ನಷ್ಟು ಇಂತಹ ಕಾಮಗಾರಿ ನಡೆಸಿ ಎನ್ನುತ್ತಿದ್ದಾರೆ! ಕೆ.ಎನ್. ಸೋಮಶೇಖರ್ ಜತೆಗೆ ತುಮಕೂರು ಜಿಲ್ಲೆಯ ಯತಿರಾಜು, ಸಕಲೇಶಪುರದ ಪ್ರಕಾಶ್‌ಪಿಂಟೋ ಇದ್ದರು.ಭೂಸ್ವಾಧೀನ ಕಾಯ್ದೆ ಉಲ್ಲಂಘನೆಹಾಸನ ಜಿಲ್ಲೆಯಲ್ಲಿ ಎಷ್ಟು ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರೆ, ಭೂಸ್ವಾಧೀನ ಮುಖಾಂತರ ಭೂಮಿಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ. ಖಾಸಗಿಯಾಗಿ ನಾವೇ ಭೂಮಿ ಖರೀದಿಸಿ ಕಾಮಗಾರಿ ನಡೆಸುತ್ತಿದ್ದೇವೆ ಎಂದು ಗುತ್ತಿಗೆದಾರ ಸಂಸ್ಥೆಯವರು ಹೇಳುತ್ತಾರೆ. ಸರಕಾರದಿಂದ ಭೂಸ್ವಾಧೀನ ನಡೆದಿಲ್ಲ. ಆದರೂ ಕಂಪೆನಿ ಭೂಮಿಖರೀದಿಸುವ ಮೂಲಕ ಕಾಮಗಾರಿ ನಡೆಯುತ್ತಿದೆ. ಇದು ಕೇಂದ್ರ ಸರಕಾರದ ಭೂಸ್ವಾಧೀನ ಕಾಯ್ದೆಯ ಉಲ್ಲಂಘನೆ. ಪುನರ್ವ ಸತಿ, ಪರಿಹಾರ ಇತ್ಯಾದಿಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಬುಡಕಟ್ಟು ಜನರು ದಲಿತರು ಹಾಗೂ ಇತರ ವರ್ಗದವರಿದ್ದು ಕಂಪೆನಿಗಳು ಖಾಸಗಿಯಾಗಿ ಕನ್ವರ್ಷನ್ (ಭೂ ಪರಿವರ್ತನೆ) ಆಗದೇ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುವುದು ಅಥವಾ ಭೂಮಿ ಖರೀದಿ ನಡೆಸುವಂತಿಲ್ಲ.
Post a Comment