Veerakesari 20:58
ಅಮೇರಿಕ : ಜಮ್ಮು ಕಾಶ್ಮೀರದ ಉರಿಯಲ್ಲಿ ಭಾರತೀಯ ಸೇನೆ ಮೇಲೆ ಪಾಕಿಸ್ತಾನಿ ಉಗ್ರರ ಮೂಲಕ ದಾಳಿ ನಡೆಸಿದ್ದು ಪಾಕಿಸ್ತಾನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಭಾರತದ ಮನವಿ ಮೇರೆಗೆ ರಷ್ಯಾ , ಪಾಕಿಸ್ತಾನದ ಜೊತೆ ಹಮ್ಮಿಕೊಂಡಿದ್ದ ಜಂಟಿ ಸೇನೆ ತಾಲೀಮನ್ನು ರದ್ದುಗೊಳಿಸಿದ್ದು ಈಗ ಅಮೇರಿಕಾವು ಭಾರತದ ಪರವಾಗಿ ನಿಂತಿರುವುದು ಭಾರತಕ್ಕೆ ಲಾಭದಾಯಕವಾಗಿದೆ.
ಅಮೇರಿಕಾದ ಪ್ರಮುಖ ಸಂಸದರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕರನ್ನು ಉತ್ಪಾದಿಸುವ ರಾಷ್ಟ್ರ ಎಂದು ಘೋಷಿಸುವ ಮಸೂದೆಯನ್ನು ಮಂಡಿಸಿದ್ದು ಪಾಕಿಸ್ತಾನಕ್ಕೆ ಮುಜುಕರ ಉಂಟುಮಾಡಿದೆ.
ಪಾಕಿಸ್ತಾನ ಜಿಹಾದಿ ಭಯೋತ್ಪಾದಕರನ್ನು ಉತ್ಪಾದಿಸಿ ಜಗತ್ತಿನಾದ್ಯಂತ ರಕ್ತಪಾತಕ್ಕೆ ಕಾರಣವಾಗಿದೆ, ಹೀಗೆ ಜಾಗತಿಕ ಸಮುದಾಯಕ್ಕೆ ದ್ರೋಹ ಮಾಡಿದ್ದು ,ಪಾಕಿಸ್ತಾನಕ್ಕೆ ಅಮೇರಿಕಾ ನೀಡುತ್ತಿದ್ದ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮೇರಿಕಾದ ಭಯೋತ್ಪಾದನ ನಿಗ್ರಹ ಸಮಿತಿಯ ಅಧ್ಯಕ್ಷ ಅಮೇರಿಕನ್ ಸಂಸದ ಟೆಡ್ ಪೋ ಹೇಳಿದರು.
ಪಾಕಿಸ್ತಾನ ಅಮೇರಿಕಾದ ವಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ಮಾಡಿದ ಓಸಾಮ ಬಿನ್ ಲಾಡನ್ ಗೆ ಆಶ್ರಯ ನೀಡಿತ್ತು ಹಾಗೂ ಹಕ್ಕಾನಿ ನೆಟ್ವರ್ಕ್ ಜೊತೆ ಸಂಬಂಧ ಇಟ್ಟುಕೊಂಡಿತ್ತು ಹೀಗೆ ಪಾಕಿಸ್ತಾನ ಅಮೇರಿಕಾದ ಶತ್ರುಗಳಿಗೆ ಆಶ್ರಯ ನೀಡುವ ಮೂಲಕ ಮಿತ್ರದ್ರೋಹ ಮಾಡಿದೆ ಹೀಗೆ ವಿಶ್ವಕ್ಕೆ ಕಂಟಕವಾಗಿರುವ ಪಾಕಿಸ್ತಾನವನ್ನು ಭಯೋತ್ಪಾದನೆ ಉತ್ತೇಜಕ ರಾಷ್ಟ್ರವೆಂದು ಮಸೂದೆಯನ್ನು ಅಮೇರಿಕಾ ಸಂಸದರು ಮಂಡಿಸಿದ್ದಾರೆ ( Pakistan State sponcer of terrorism designation act HR6069 ) 
ಒಸಾಮಾ ಬಿನ್ ಲ್ಯಾಡನ್ ಗೆ ಆಶ್ರಯ ನೀಡುವುದರಿಂದ ಹಿಡಿದು, ಹಕ್ಕಾನಿ ನೆಟ್ವರ್ಕ್ ಜೊತೆಗಿನ ಸಂಬಂಧದವರೆಗೆ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾರ ಪರ ಇದೆ ಎಂಬುದು ಸ್ಪಷ್ಟವಾಗಿ ತಿಳಿಯಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಪಾಕಿಸ್ತಾನ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಅಮೆರಿಕ ಅಧ್ಯಕ್ಷರು 90 ದಿನಗಳ ಒಳಗಾಗಿ ವಿವರಣೆ ನೀಡಬೇಕೆಂದು ಮಸೂದೆಯನ್ನು ಮಂಡಿಸಿರುವ ಸಂಸದರು ಒತ್ತಾಯಿಸಿದ್ದಾರೆ.
ಇದರ ಜೊತೆ ಅಮೇರಿಕಾ ಅಧ್ಯಕ್ಷ ಒಬಾಮಾ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಜೊತೆ ಹಮ್ಮಿಕೊಂಡಿದ್ದ ಮಾತುಕತೆಯನ್ನು ರದ್ದುಗೊಳಿಸಿದ ಬಗ್ಗೆ ವರದಿಯಾಗಿದೆ.

Post a Comment

Powered by Blogger.