ಕೇರಳ : ದೇವರ ನಾಡು ಎಂದು ಪ್ರಸಿದ್ಧಿ ಪಡೆದಿರುವ ಕೇರಳದಲ್ಲಿ ಕಮ್ಯುನಿಸ್ಟ್ ಕೆಂಪು ಉಗ್ರರ ರಕ್ತದಾಹಕ್ಕೆ ಮತ್ತೆ ಬೆಚ್ಚಿಬಿದ್ದಿದೆ . ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.
ಪ್ರಸ್ತುತ ಕೇರಳದಲ್ಲಿ ಕಮ್ಯನಿಷ್ಟು ಸರ್ಕಾರ ಆಡಳಿತದಲ್ಲಿರುವುದು ಕೆಂಪು ಉಗ್ರರಿಗೆ ಬಲ ತಂದಿದೆ ಈ ವಾರದಲ್ಲೇ ಬಿಜೆಪಿ ಯುವಮೋರ್ಚಾದ ಇಬ್ಬರು ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜಕೀಯ ವೈಶಮ್ಯಕ್ಕೆ ಸಾಲು ಸಾಲು ಕೊಲೆಗಳು ನಡೆಯುತ್ತಿದೆ.

ನಿನ್ನೆ ಕಣ್ಣೂರಿನ ಪಿನರಾಯಿಯಲ್ಲಿ ಬಿಜೆಪಿ ಕಾರ್ಯಕರ್ತ ರಮಿತ್ ಎಂಬಾತನನ್ನು ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಲಾಗಿದೆ. ಮುಖ, ಕೈಗಳನ್ನು ಗುರುತು ಸಿಗದಂತೆ ಕೊಚ್ಚಿಹಾಕಿದ್ದಾರೆ.
ಆದರೆ ಮತ್ತೂ ದುಃಖದ ವಿಷಯವೆಂದರೆ ಇದಕ್ಕೂ 14 ವರ್ಷಗಳ ಹಿಂದೆ 22 ಮೇ 2002 ರಂದು ಈತನ ತಂದೆ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದ ಉತ್ತಮನ್ ಅವರನ್ನು ತಾವು ಹೋಗುತ್ತಿದ್ದ ಬಸ್ಸಿನಿಂದ ಇಳಿಸಿ ಬರ್ಬರವಾಗಿ ಹತ್ಯೆಗೈದಿದ್ದರು.ಈಗ ಮಗನೂ ಅದೇ ಕೆಂಪು ಉಗ್ರರ ರಕ್ತದಾಹಕ್ಕೆ ಬಲಿಯಾಗಿದ್ದಾನೆ.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತರ ಸಾಲು ಸಾಲು ಕೊಲೆಗಳಾಗುತ್ತಿದ್ದರೂ ಕೇವಲ ಸಂತಾಪ ಸೂಚಿಸುವುದರಲ್ಲಿಯೇ ನಿರತವಾಗಿದೆ.ಆದರೆ ಮೆಚ್ಚಬೇಕಾದ ವಿಷಯ ಏನೆಂದರೇ ಕೇರಳದ ಆರ್ ಎಸ್ ಎಸ್ ಕಾರ್ಯಕರ್ತರ ಉತ್ಸಾಹವನ್ನು, ಇಷ್ಟೊಂದು ಕಾರ್ಯಕರ್ತರ ಕೊಲೆಗಳಾಗುತ್ತಿದ್ದರೂ ತಮ್ಮ ದೇಶಭಕ್ತಿ, ಸಂಘದ ಮೇಲಿನ ನಿಷ್ಠೆ, ದೇವರನಾಡನ್ನು ಉಗ್ರ ಕಪಿಮುಷ್ಟಿಯಿಂದ ರಕ್ಷಿಸುವ ಛಲ ಬತ್ತಿಲ್ಲ.
ನಮಸ್ತೇ ಸದಾ ವತ್ಸಲೇ ಮಾತೃಭೂಮೆ ಪುಣ್ಯ ಭೂಮೆ
#ಜೈRSS #ಜೈಹಿಂದೂರಾಷ್ಟ್ರ
#veerakesari
Post a Comment