Veerakesari 06:43
ಕೇರಳ : ಕೇರಳದಲ್ಲಿ ಜಿಹಾದಿ ಮತಾಂಧರ ಒಡೆತನದ ಶಾಲೆಗಳ ಕರಾಳಮುಖ ಮತ್ತೊಮ್ಮೆ ಬಯಲಾಗಿದೆ. ಕೇರಳದ ಮುಸಲ್ಮಾನ ಉದ್ಯಮಿ ಮತ್ತು ಜಿಹಾದಿ ಐಸಿಸ್ ಬೆಂಬಲಿಗ ಝಾಕೀರ್ ನಾಯ್ಕ್ ಒಡೆತನದ ಪೀಸ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಜಿಹಾದ್ ಶಿಕ್ಷಣ ಕೊಡುತ್ತಿರುವ ಮಾಹಿತಿ ಸಾಕ್ಷಿ ಸಮೇತ ಪತ್ತೆಯಾಗಿದೆ.
ದೇವರ ನಾಡು ಎಂದು ಪ್ರಸಿದ್ಧಿ ಪಡೆದಿರುವ,  ಪ್ರವಾಸಿಗಳ ಅಚ್ಚುಮೆಚ್ಚಿನ ತಾಣವಾದ ಕೇರಳ ಇಂದು ಇಸ್ಲಾಮಿಕ್ ಉಗ್ರರ ಕರಿ ನೆರಳಿನಿಂದ ಕಂಗೆಟ್ಟಿದೆ. ಒಂದು ಕಡೆ ಭಾರತ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದರೆ ಇನ್ನೊಂದೆಡೆ ನಮ್ಮದೇ ದೇಶದ ಒಳಗೆ ಸಣ್ಣ ಸಣ್ಣ ಮಕ್ಕಳಿಗೆ ಇಸ್ಲಾಮಿಕ್ ಭಯೋತ್ಪಾದನೆ ಕುರಿತ ಪಾಠ ಹೇಳಿಕೊಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆರು ಜನ ಶಂಕಿತ ಉಗ್ರರನ್ನು ರಾಷ್ರೀಯ ತನಿಖಾ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದ್ದ, ಈವೇಳೆ ಅನೇಕ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿತ್ತು.
ಘಟನೆ ನಡೆದಿದ್ದು ಕೇರಳದ ಪೀಸ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ.  ಶಾಲೆಯ ಮೇಲೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಕೇರಳದ ಪೋಲೀಸರಿಗೆ ಅಲ್ಲಿನ ಶಿಕ್ಷಕರು ಒಂದರಿಂದ ಎಂಟನೇ ತರಗತಿಯ ಎಲ್ಲಾ ಮಕ್ಕಳಿಗೆ ಇಸ್ಲಾಮಿಕ್ ಜಿಹಾದ್ ಬಗ್ಗೆ ಅಭ್ಯಾಸ ಮಾಡಿಸುತ್ತಿರುವುದು ಕಂಡುಬಂದಿದೆ.
Like our page VeeraKesarihttp://m.facebook.com/veerakesari.in
ದಾಳಿ ಮಾಡಿದ ಪೋಲೀಸರು ಅಲ್ಲಿದ್ದ ಪಠ್ಯ ಪುಸ್ತಕ ವಶಪಡಿಸಿಕೊಂಡು ತನಿಖೆ ನಡೆಸಿದಾಗ ಅದರಲ್ಲಿ ಪುಟ್ಟ ಮಕ್ಕಳಿಗೆ ” ನೀವು ಇಸ್ಲಾಂಗಾಗಿ ನಿಮ್ಮ ಜೀವವನ್ನು ಅರ್ಪಿಸುತ್ತೀರ” , “ಮುಸ್ಲಿಂ ಅಲ್ಲದ ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ” ಎಂಬ ಜಿಹಾದ್ ವಿಷಯಗಳ ಕುರಿತ ಪ್ರಶ್ನೆಗಳನ್ನು ಕೇಳಲಾಗಿತ್ತು.ಇಲ್ಲಿ ಮಕ್ಕಳಿಗೆ ಇಸ್ಲಾಂ ಕುರಿತು ಬೋಧಿಸಲು ಬಿಹಾರದಿಂದ 11 ಶಿಕ್ಷಕರನ್ನು ಕರೆಸಿದ್ದಾರೆ,  ದಾಳಿ ನಡೆಸಿದ ಅಧಿಕಾರಿಗಳು  ತನಿಖೆಗಾಗಿ ಮ್ಯಾಪ್, ಕಂಪ್ಯೂಟರ್ ಹಾಗೂ ಇನ್ನಿತರೆ ಅಗತ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
ಎರಡನೇ ತರಗತಿ ಪಠ್ಯ ಪುಸ್ತಕದ ಒಂದು ತುಣುಕು
ಕನ್ನಡಕ್ಕೆ ಅನುವಾದ :
ನಿಮ್ಮ ಗೆಳೆಯ ಗೆಳತಿಯರಲ್ಲಿ ಯಾರಾದರೂ ಮುಸಲ್ಮಾನರಾಗ ಬಯಸಿದರೆ ನೀವು ಈ ಕೆಳಗಿನ ಆಯ್ಕೆಗಳಲ್ಲಿ ಯಾವುದನ್ನು ಅವರಿಗೆ ಮಾಡಲು ಸೂಚಿಸುತ್ತೀರ…???
a) ಅವಳು/ಅವ ತಕ್ಷಣ ತನ್ನ ಹೆಸರನ್ನು ಮುಸಲ್ಮಾನರ ಹೆಸರಿಗೆ ಬದಲಾಯಿಸಲು ಸೂಚಿಸುತ್ತೇನೆ.
b) ಅವಳು/ಅವ ತನ್ನ ಕುತ್ತಿಗೆ , ಕೈಗೆ ಹಾಕಿರುವ ದೇವರ ವಿಗ್ರಹವಿರುವ ಚೈನ್ ತೆಗೆಯುವಂತೆ ಸೂಚಿಸುತ್ತೇನೆ.
c) ಶಹಾದ ಕಲಿಯುವಂತೆ ಹೇಳುತ್ತೇನೆ
d) ತಂದೆ ತಾಯಿ ಮುಸಲ್ಮಾನರಲ್ಲದ ಕಾರಣ ಮನೆಯಿಂದ ಓಡಿಹೋಗುವಂತೆ ಹೇಳುತ್ತೇನೆ
e) ಹಲಾಲ್ ಪದ್ಧತಿಯಿಂದ ಮಾಡಿರುವ ಮಾಂಸಾಹಾರ ಸೇವಿಸುವಂತೆ ಹೇಳುತ್ತೇನೆ
ಇದು ಎರಡನೇ ತರಗತಿಯ ಪಠ್ಯ ಪುಸ್ತಕದ ಪರಿಸ್ಥಿತಿ ಇನ್ನೂ ಒಂಬತ್ತು, ಹತ್ತನೇ ತರಗತಿ ಪುಸ್ತಕದಲ್ಲಿ ಏನೇನು ಇದೆಯೋ.
ಕೇರಳದಿಂದ ಕಣ್ಮರೆಯಾಗಿ ಐಸಿಸ್ ಸೇರಿದ ಅನೇಕ ಮುಸಲ್ಮಾನರು ಈ ಶಾಲೆಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಪರ್ಕ ಹೊಂದಿದ್ದರು ಇದಲ್ಲದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಐಸಿಸ್ ಸೇರಲು ತಯಾರಿ ನಡೆಸುತ್ತಿದ್ದರು ಎಂಬ ಆಘಾತಕಾರಿ ಸಂಗತಿಯನ್ನೂ ಪೋಲೀಸರು ಹೊರಹಾಕಿದ್ದಾರೆ.
ಭಾರತದಲ್ಲಿ ಇನ್ನೆಷ್ಟು ಶಾಂತಿದೂತರ ಇಂತಹ “ಪೀಸ್ ಇಂಟರ್ ನ್ಯಾಶನಲ್” ಶಾಲೆಗಳು ತಲೆ ಎತ್ತಿದೆಯೋ ಏನೋ. “ಪೀಸ್” ನ ಅರ್ಥ ಗೊತ್ತಿಲ್ಲದ “ಪಿಶಾಚಿಗಳು”
#veerakesari

Post a Comment

Powered by Blogger.