ಕೊಡಗು : ಕನ್ನಡ ನಾಡಿನ ಜೀವನದಿ, ಕೊಡವರ ಕುಲದೇವಿ ಕಾವೇರಿ ಮಾತೆ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಶುಭಸಮಯದಲ್ಲಿ ಇಂದು (ಅಕ್ಟೋಬರ್ 17) ಬೆಳಿಗ್ಗೆ ಸರಿಯಾಗಿ 6.29ಕ್ಕೆ ಕೊಡಗಿನ ಭಾಗಮಂಡಲದ ಬ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಸಹಸ್ರಾರು ಭಕ್ತರಿಗೆ ದರ್ಶನ ನೀಡಿದ್ದಾಳೆ.
ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಹಾಗೂ ದೇಶದ ವಿವಿಧ ಕಡೆಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಜೊತೆಗೆ ಕಾವೇರಿ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾದರು.
ಇಂದು ಮುಂಜಾನೆ ಸರಿಯಾಗಿ 6.29ಕ್ಕೆ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವವಾಗುತ್ತಿದ್ದಂತೆ, ಮಂತ್ರಘೋಷಗಳ ನಡುವೆ ಅಲ್ಲಿ ನೆರೆದವರಿಗೆ ತೀರ್ಥಪ್ರೋಕ್ಷಣೆ ಮಾಡಲಾಯಿತು. ಕೊಡಗಳ ಮೂಲಕ ಪುಣ್ಯ ಸ್ನಾನ ಮಾಡಿ ಭಕ್ತಾದಿಗಳು ಪುನೀತರಾದರು.
Post a Comment