Veerakesari 05:42
ಉಡುಪಿ : ಉಡುಪಿ ಜಿಲ್ಲೆಯ ಮನಿಕಲ್ಲು ನೈಲಾಡಿ ಎಂಬಲ್ಲಿ ನಿನ್ನೆ (ಅಕ್ಟೋಬರ್ 16) ಸ್ಥಳೀಯ ಮನೆ ಮನೆಗೆ ತೆರಳಿ ಆಮಿಷ ಒಡ್ಡಿ ಮತಾಂತರ ಮಾಡಲು ಯತ್ನಿಸುತ್ತಿದ್ದ 6 ಜನ ಕ್ರಿಶ್ಚಿಯನ್ ಮಿಷ_ನರಿಗಳನ್ನು ಕೋಟಾ ಪೋಲೀಸರು ಬಂದಿಸಿದ್ದಾರೆ.
ಮನೆ ಮನೆಗೆ ತೆರಳಿ ಕರಪತ್ರ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹಂಚುತ್ತಿದ್ದ ಗುಂಪಿನ ಬಗ್ಗೆ ವಿಷಯ ತಿಳಿದ ಸ್ಥಳೀಯ ಬ್ರಾಹ್ಮರಿ ಯುವಕ ಮಂಡಲ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕೋಟಾ ಪೋಲೀಸರಿಗೆ ಸುದ್ದಿ ಮುಟ್ಟಿಸಿದರು.
ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಕೋಟಾ ಪೋಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದ ಆರು ಜನ ಮಿಷ_ನರಿಗಳ ಗುಂಪನ್ನು ಬಂದಿಸಿದ್ದಾರೆ. ಸ್ಥಳೀಯ ನಿವಾಸಿಗಳು ಕ್ರಿಶ್ಚಿಯನ್ ಮಿಷನರಿಗಳ ಈ ಕೃತ್ಯವನ್ನು ನಿಂದಿಸಿದ್ದು ಸ್ಥಳೀಯ ನಿವಾಸಿಯೊಬ್ಬರು ಈ ಮಿಷನರಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಪೋಲೀಸರು ಒಂದು ಕಾರು ಮತ್ತು ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ, ಪ್ರಕರಣದ ತನಿಖೆ ನಡೆಯುತ್ತಿದೆ.
ಎಲ್ಲಾ ಕಡೆ ಹಿಂದೂಗಳು, ಹಿಂದೂ ಸಂಘಟನೆಗಳು ಹಾಗೂ ಪೋಲೀಸರು ಕಾರ್ಯಪ್ರವೃತ್ತರಾದರೆ ಕ್ರಿಶ್ಚಿಯನ್ ಮಿಷ_ನರಿಗಳನ್ನು ಭಾರತದಿಂದ ಸಂಪೂರ್ಣವಾಗಿ ಓಡಿಸಬಹುದು

Post a Comment

Powered by Blogger.