Veerakesari 07:30
ಯುಎಇ :  ಅರಬ್ ದೇಶಗಳೊಂದಿಗೆ ಭಾರತದ ಭಾಂದವ್ಯ ದಿನಕಳೆದಂತೆ ವೃದ್ದಿಸುತ್ತಿದೆ.ಮುಖ್ಯವಾಗಿ ಮುಂದಿನ ಗಣರಾಜ್ಯೋತ್ಸವಕ್ಕೆ ಯುಎಇ (ಯುನೈಟೆಡ್ ಅರಬ್ ಇಮಿರೇಟ್ಸ್) ದೊರೆ ಶೇಕ್ ಮಹಮ್ಮದ್ ಭಾರತಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು. 
     ಇದಲ್ಲದೆ ಮುಸ್ಲಿಂ ದೇಶ ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ತಲೆ ಎತ್ತಲಿದೆ. ದೇವಾಲಯದ ಅಡಿಪಾಯ ಹಾಕುವ ಕಾರ್ಯಕ್ರಮ ಶೇಕ್ ಮಹಮ್ಮದ್ ಭಾರತಕ್ಕೆ ಹೊರಡುವ ಮುನ್ನವೇ ನಡೆಯಲಿದೆ ಎಂದು ಭಾರತೀಯ ಉದ್ಯಮಿ ಬಿ ಆರ್ ಶೆಟ್ಟಿಯವರು ಹೇಳಿದ್ದಾರೆ.
     ಮುಂದಿನ ಒಂದು ವರ್ಷದ ಒಳಗೆ ದೇವಸ್ಥಾನದ ನಿರ್ಮಾಣ ಕಾರ್ಯ ಮುಗಿಯಲಿದ್ದು ಕೃಷ್ಣ, ಶಿವ ,ಅಯ್ಯಪ್ಪ ಮತ್ತು ಇನ್ನೂ ಹಲವು ಹಿಂದೂ ದೇವರುಗಳ ವಿಗ್ರಹಗಳ ಪ್ರತಿಷ್ಟಾಪನೆ ನಡೆಯಲಿದೆ. ಈ ದೇವಾಲಯನ್ನು ಹಿಂದೂ ಆರಾದ್ಯ ದೇವತೆಗಳಾದ ಶಿವ ಹಾಗೂ ಶ್ರೀಕೃಷ್ಣನಿಗೆ ಅರ್ಪಿಸುವುದಾಗಿ ಅವರು ಹೇಳಿದರು. ದೇವಾಲಯದ ನೀಲನಕ್ಷೆ ತಯಾರಿಸಲಾಗಿದ್ದು ದೇವಾಲಯದ ಸುತ್ತಮುತ್ತ ಉದ್ಯಾನವನ ,ಬೃಂದಾವನ ಹಾಗೂ ಕಾರಂಜಿಗಳು ಇರಲಿದೆ. 
      ಹಿಂದಿನ ವರ್ಷದ ಆಗಸ್ಟ್ ನಲ್ಲಿ ಮೋದಿ ಅಬುದಾಬಿಗೆ ಬೇಟಿಕೊಟ್ಟಿದ್ದಾಗ ಅಲ್ಲಿನ ಸರ್ಕಾರ ಮೋದಿಯವರ ಬಳಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಸ್ಥಳ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಕೊಟ್ಟ ಭರವಸೆಯಂತೆ ನಿನ್ನೆ (10 ಅಕ್ಟೋಬರ್) ಅಬುದಾಬಿ ಸರ್ಕಾರ ದೇವಾಲಯ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡುವುದರ ಜೊತೆ 4.95 ಎಕರೆ ಜಾಗವನ್ನು ನೀಡಿದೆ.  
       ಈಗಾಗಲೆ ದುಬೈಯಲ್ಲಿ ಎರಡು ಹಿಂದೂ ದೇವಾಲಯ ಹಾಗೂ ಒಂದು ಸಿಖ್ಖರ ಗುರುದ್ವಾರವಿದೆ . ದೇವಾಲಯ ನಿರ್ಮಾಣದ ಎಲ್ಲಾ ವ್ಯವಸ್ಥೆಯನ್ನು ಅಬುದಾಬಿ ಸರ್ಕಾರ ನೋಡಿಕೊಳ್ಳುವ ಹೊಣೆ ಹೊತ್ತಿದೆ.

Post a Comment

Powered by Blogger.