Veerakesari 07:27
ನಾಗ್ಪುರ : ಇಂದು ನಾಗ್ಪುರದಲ್ಲಿ 91ನೇ ಆರ್‌ಎಸ್‌ಎಸ್ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಿಓಕೆಯಲ್ಲಿ ಈಚೆಗೆ ನಡೆಸಲಾಗಿರುವ ಸರ್ಜಿಕಲ್ ದಾಳಿಯಲ್ಲಿ ಪಾಲ್ಗೊಂಡ ಭಾರತೀಯ ಸೈನಿಕರನ್ನು ಹಾಗೂ ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿಯನ್ನು  ಕೊಂಡಾಡಿದ್ದಾರೆ.
ಪಾಕಿಸ್ತಾನ ಆಕ್ರಮಿಸಿ ಕೊಂಡಿರುವ ಪಿಒಕೆ ಜೊತೆ ಗಿಲ್ಗಿಟ್, ಬಾಲ್ಟಿಸ್ಥಾನವೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಸಂಸ್ಥಾಪನ ದಿನ ಹಾಗೂ ದಸರೆ ಸಂದರ್ಭದಲ್ಲಿನ ತಮ್ಮ ವಾರ್ಷಿಕ ಭಾಷಣದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಅವರು ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಮುಡುಪಾಗಿಟ್ಟ ಪಂಡಿತ ದೀನದಯಾಳ್ ಉಪಾಧ್ಯಾಯ ಹಾಗೂ ಸಿಖ್ಖರ ಗುರು ಗುರುಗೋಬಿಂದ್ ಸಿಂಗ್ ರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಅವರು ಗೋರಕ್ಷಕರಿಗೆ ಕಿವಿಮಾತುಗಳನ್ನು ಹೇಳಿದರು. ಗೋರಕ್ಷಕರು ಕಾನೂನಿನ ಚೌಕಟ್ಟಿನಲ್ಲೇ ಗೋಮಾತೆಯ ರಕ್ಷಣೆಯ ಹೊಣೆ ಹೊರಬೇಕು ಎಂಬ ಸಂದೇಶ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ ಎಂದರು.ಇದನ್ನು ಪ್ರಪಂಚದ ಕೆಲವು ರಾಷ್ಟ್ರದ ಜನರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪಾಕಿಸ್ತಾನ ಹಾಗೂ ಚೀನಾದ ಬಗ್ಗೆ ಟೀಕಿಸಿದರು.
ವೀರಕೇಸರಿ ಟಾಂಗ್ :
ಸರ್ಜಿಕಲ್ ಸ್ಟ್ರೈಕ್ ನಂತರ ದೇಶದ್ರೋಹಿಗಳಿಗೆ “ರಕ್ತದ ದಲ್ಲಾಳಿತನ” ಕಂಡರೆ,  ದೇಶಪ್ರೇಮಿಗಳಿಗೆ ಕಂಡಿದ್ದು ಮೋದಿಯ “ಸಮರ್ಥ ನಾಯಕತ್ವ” 

Post a Comment

Powered by Blogger.