ಲಕ್ನೊ: ಕಾಂಗ್ರೆಸ್ ಉಪಾದ್ಯಕ್ಷ ಚೋಟಾಭೀಮ್ ಖ್ಯಾತಿಯ ರಾಹುಲ್ ಗಾಂಧಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಜೋಕರ್ ಆಗಿದ್ದಾರೆ.
ಉತ್ತರಪ್ರದೇಶದಲ್ಲಿ ಹಮ್ಮಿಕೊಂಡಿದ್ದ “ಕಿಸಾನ್ ಮಹಾಯಾತ್ರ” ಕಾರ್ಯಕ್ರಮದಲ್ಲಿ “ಆಲೂಗಡ್ಡೆ ಕಾರ್ಖಾನೆ” ಬಗ್ಗೆ ಕೊಟ್ಟ ಒಂದು ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಿಲಿಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ರೈತರೊಂದಿಗೆ ಮಾತನಾಡುತ್ತಾ
“ರೈತರೇ ನೀವೆಲ್ಲ ನಿಮ್ಮ ಊರುಗಳಲ್ಲಿ ಆಲುಗಡ್ಡೆ ಉತ್ಪಾದಿಸುವ ಕಾರ್ಖಾನೆ ಬೇಕೆಂದು ಬೇಡಿಕೆ ಇಡುತ್ತಿದ್ದೀರಿ. ಆದರೆ ನಿಮಗೆ ಗೊತ್ತು ನಾನು ವಿರೋಧ ಪಕ್ಷದವನೆಂದು, ನಾನು ಆಡಳಿತ ಪಕ್ಷದ ಮೇಲೆ ಒತ್ತಡ ಹಾಕಬಹುದಷ್ಟೇ ಹೊರತು ನನ್ನಿಂದ ನಿರ್ದಾರ ಕೈಗೊಳ್ಳಲು ಆಗಲ್ಲ . ನನ್ನಿಂದ ರೈತರಿಗೆ ಆಲೂಗಡ್ಡೆ ತಯಾರಿಸೋ ಕಾರ್ಖಾನೆ ತೆರೆಯಲು ಸಾದ್ಯವಿಲ್ಲ”
ರಾಹುಲ್ ಗಾಂಧಿಯವರ ಈ ಹೇಳಿಕೆ ಸಾಮಾಜಿಕ ಜಾಲತಾಣ ಫೇಸ್ಬುಕ್ ,ವಾಟ್ಸಪ್ ಮತ್ತು ಟ್ವಿಟರ್ ಗಳಲ್ಲಿ ಮಿಂಚಿನ ತರ ಹರಡಿದೆ.
ರ್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಷಣ
ಇದು ಮೊದಲನೇ ಭಾರಿಯಲ್ಲ ರಾಹುಲ್ ಇಂತಹ ಹೇಳಿಕೆ ಕೊಟ್ಟಿರೋದು. ಹಿಂದೆ ಗುಜರಾತಿನಲ್ಲಿ “ಕ್ಷೀರ ಕ್ರಾಂತಿ” ಯ ಬಗ್ಗೆ ಮಾತನಾಡುವಾಗ.
“ಗುಜರಾತನ್ನು ಒಂದು ವೇಳೆ ಯಾರಾದರು ಎದ್ದು ನಿಲ್ಲಿಸಿದ್ದರೆ, “ಅಮೂಲ್ “ಎಂಬ ಉತ್ಪನ್ನಗಳನ್ನು ಕೊಟ್ಟಿದ್ದರೆ, ಆ ಉತ್ಪನ್ನಗಳಿಗೆ ಹಾಲು ಕೊಟ್ಟಿದ್ದರೆ” ಅದು ಬೇರಾರು ಅಲ್ಲ ಎನ್ನುತ್ತಾ ಮಹಿಳೆಯರ ಕಡೆ ಕೈ ತೋರಿಸಿ ಗುಜರಾತಿನ ಮಹಿಳೆಯರು ಕೊಟ್ಟಿದ್ದು ಎಂದಿದ್ದ
ಇದಲ್ಲದೆ ಕೆಲ ಸಮಯಗಳ ಹಿಂದೆ ಲೋಕ ಸಭೆಯ ಅಧ್ಯಕ್ಷ ಪಿ ವೇಣುಗೋಪಾಲ್ ಅವರನ್ನು “ಮೇಡಮ್” ಎಂದು ಕರೆದಿದ್ದ.
Post a Comment