ಬುದ್ದಿಗೆಟ್ಟ ಲದ್ದಿಜೀವಿಗಳು ಗಂಜಿಸಂಪಾದನೆಗಾಗಿ ತಾವೇ ಸೃಷ್ಟಿ ಮಾಡಿದ ಕೆಲ ಪ್ರಕರಣಗಳು.
ಘಟನೆ ೧ : ಹರ್ಯಾಣದ ಫರಿದಾಬಾದಿನಲ್ಲಿ ಮೇಲ್ಜಾತಿಯವರು ಇಬ್ಬರು ದಲಿತ ಮಕ್ಕಳ ಸಜೀವ ದಹನ ಮಾಡಿದ್ದಾರೆ ಎಂದು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುದ್ದಿಯಾಗಿತ್ತು.ಘಟನೆಯನ್ನು ಖಂಡಿಸಿ ದೇಶದ ಬೇರೆ ಬೇರೆ ಕಡೆ ಪ್ರತಿಭಟನೆಗಳಾದವು.ಆ ನಂತರ ಡಿಸೆಂಬರ್ ತಿಂಗಳ ಸಮಯಕ್ಕೆ ಫಾರೆನ್ಸಿಕ್ ವರದಿಯನ್ನು ಉಲ್ಲೇಖಿಸಿದ ವರದಿಗಳು ಬೆಂಕಿಯ ಮೂಲ ಹೊರಗಿನದಲ್ಲ,ಮನೆಯ ಒಳಗಿನದು ಎಂದಿತ್ತು. ಯಾವುದೇ ಪ್ರತಿಭಟನಕಾರನೂ ತಾನೊಂದು ಸುಳ್ಳು ಸುದ್ದಿಯ ಭಾಗವಾದೇ ಎಂದು ಪಶ್ಚಾತ್ತಾಪಪಡಲಿಲ್ಲ.
ಘಟನೆ ೨ : ಫೇಸ್ಬುಕ್ ಇನ್ಬಾಕ್ಸಿನಲ್ಲಿ ತನಗೆ ಮಧುಸೂಧನ ಗೌಡ (ಈತ ಕಾಲ್ಪನಿಕ ವ್ಯಕ್ತಿಯೋ,ವಾಸ್ತವವೋ ಇದುವರೆಗೂ ಪತ್ತೆಯಾಗಿಲ್ಲ!)ಎಂಬುವನಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಒಂದು ಕಾಲದಲ್ಲಿ ಸಂಘಪರಿವಾರದ ಕ್ಯಾಂಪಿನಲ್ಲಿದ್ದು ಈಗ ಎಡಪಂಥೀಯರೊಂದಿಗೆ ಗುರುತಿಸಿಕೊಂಡಿರುವ ಚೇತನಾ ತೀರ್ಥಹಳ್ಳಿ ಹೇಳಿಕೊಂಡರು.
ಘಟನೆ ೩ : ಅದೇ ಸಮಯಕ್ಕೆ ಸರಿಯಾಗಿ,ಅದುವರೆಗೂ ಹೆಸರೇ ಕೇಳಿರದ ಯುವಲೇಖಕನೊಬ್ಬನ ಪುಸ್ತಕ ಬಿಡುಗಡೆಗೆ ನಾಲಗೆಯನ್ನು ಎಕ್ಕಡಕ್ಕಿಂತಲೂ ಕಡೆಯಾಗಿ ಬಳಸುವ ಭಗವಾನರರನ್ನು ಕರೆಸಿದ್ದಕ್ಕಾಗಿ ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸುದ್ದಿಯಾಯಿತು.
ಕಡೆಗೆ ಇವರಿಬ್ಬರಿಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕಿತು.ತಮ್ಮ ರಾಜಕೀಯ ಎದುರಾಳಿಗಳನ್ನು ಭೀಕರವಾಗಿ ಕೊಲೆಗಯ್ಯುವ ಕೇರಳದ ಕಾಮ್ರೇಡುಗಳು ಇವರನ್ನು ಕರೆಸಿ ಸನ್ಮಾನ ಮಾಡಿ,ನಾವು ಇಂಟಾಲರೆನ್ಸ್ ವಿರೋಧಿಗಳು ಎಂದು ಅರಚಿಕೊಂಡ ಹಾಸ್ಯಾಸ್ಪದ ಘಟನೆಯೂ ನಡೆದು,ತಮ್ಮ ತುತ್ತೂರಿ ಪತ್ರಿಕೆಗಳಲ್ಲಿ ಈ ಮುಖಗಳಿಗೆ ಮುಖಪುಟದ ಪ್ರಚಾರವನ್ನು ಕೊಟ್ಟಿದ್ದೂ ಆಯಿತು.
ಇನ್ನು,ಈ ಹುಚ್ಚಂಗಿಪ್ರಸಾದನೆಂಬ ಯುವ ಲೇಖಕ ತನ್ನ ಮೇಲೆ ಹಲ್ಲೆಯಾಗಿದೆ ಎಂದಿದ್ದು ಕಟ್ಟುಕತೆ ಮತ್ತು ಆತನೇ ಇದನ್ನು ಸೃಷ್ಟಿಸಿದ್ದಾನೆ ಎನ್ನಲು ಬಲವಾದ ಸಾಕ್ಷ್ಯಗಳಿವೆ ಎಂದು ಪೋಲಿಸರು ಹೇಳಿರುವುದಾಗಿ ಇಂದಿನ ಪತ್ರಿಕೆಗಳಲ್ಲಿ ವರದಿಯಾಗಿದೆ.
ಇನ್ನು,ಈ ಹುಚ್ಚಂಗಿಪ್ರಸಾದನೆಂಬ ಯುವ ಲೇಖಕ ತನ್ನ ಮೇಲೆ ಹಲ್ಲೆಯಾಗಿದೆ ಎಂದಿದ್ದು ಕಟ್ಟುಕತೆ ಮತ್ತು ಆತನೇ ಇದನ್ನು ಸೃಷ್ಟಿಸಿದ್ದಾನೆ ಎನ್ನಲು ಬಲವಾದ ಸಾಕ್ಷ್ಯಗಳಿವೆ ಎಂದು ಪೋಲಿಸರು ಹೇಳಿರುವುದಾಗಿ ಇಂದಿನ ಪತ್ರಿಕೆಗಳಲ್ಲಿ ವರದಿಯಾಗಿದೆ.
ಅಂದು ಟೌನ್ ಹಾಲ್ ಎದುರು ಸೇರಿಕೊಂಡು ಫರಿದಬಾದಿನ ಘಟನೆಯನ್ನು,ಹುಚ್ಚಂಗಿಪ್ರಸಾದನ ಮೇಲೆ ಹಲ್ಲೆಯನ್ನೂ ಖಂಡಿಸಿ ಪ್ರತಿಭಟನೆಯನ್ನು ಮಾಡಿದ ಚಿತ್ರ ಇಲ್ಲಿದೆ.ಈ ಜನರಿಗೆ ನಾ-ಮಾ-ಮ ಮತ್ತು ಆತ್ಮಸಾಕ್ಷಿ ಎನ್ನುವುದಿದ್ದರೆ ಇವತ್ತು ಕ್ಷಮೆ ಕೇಳಲಿ ನೋಡೋಣ.ಕ್ಷಮೆ ಕೇಳುವುದಷ್ಟೇ ಅಲ್ಲ ಸುಳ್ಳು ಕತೆ ಸೃಷ್ಟಿಸಿ ಸಮಾಜದಲ್ಲಿ ದ್ವೇಷಮಯ ವಾತವರಣ ಸೃಷ್ಟಿಸಲು ಹೊರಟವನಿಗೆ ಶಿಕ್ಷೆ ಕೊಡುವಂತೆ ಪ್ರತಿಭಟನೆ ಬೇಡ, ಕನಿಷ್ಟ ಒಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಿ ನೋಡೋಣ!
ಈ ವಿಷಯಗಳಲ್ಲಿ ಇವರ ಮೌನ,ಸಮಾಜದಲ್ಲಿ ಜಾತಿ-ಜಾತಿಗಳ ನಡುವೆ ಬಿರುಕು ಸೃಷ್ಟಿಸಿದರೆ ಮಾತ್ರ ನಮ್ಮ ಗಂಜಿಯ ಮೂಲ ನಡೆಯುವುದು ಎಂಬುದನ್ನು ಇವರು ಒಪ್ಪಿಕೊಂಡಂತಾಗುತ್ತದೆ ಮತ್ತು ಗಂಜಿಗಿರಾಕಿಗಳು ಎಂಬ ಬಿರುದಿಗೆ ಇವರೇ ಇನ್ನಷ್ಟು ನ್ಯಾಯ ಒದಗಿಸಿದಂತಾಗುತ್ತದೆ.
ಇಂತ ಗಂಜಿಗಿರಾಕಿಗಳ ಸುಳ್ಳಿನ ವೈಭವೀಕರಣವನ್ನೇ ಸತ್ಯವೆಂದು ನಂಬಿ ಇವರ ಹಿಂದೆ ಹೋಗಿ ಜೀವನ ಹಾಳು ಮಾಡಿಕೊಳ್ಳುವ ಯುವಕರು ಯೋಚಿಸಬೇಕಾದ ಸಮಯವಿದು.
Post a Comment