ಜಿಹಾದಿ ಭಯೋತ್ಪಾದಕನ ಜಯಂತಿ ಆಚರಿಸುತ್ತಿರುವವರಿಗೆ ಟಿಪ್ಪು ಸುಲ್ತಾನನ ಋಣಾತ್ಮಕ ಅಂಶ ಗಳು :
ಟಿಪ್ಪು ತನ್ನ ಶ್ರೀರಂಗಪಟ್ಟಣ ಕೋಟೆಯ ಪ್ರವೇಶದ್ವಾರದ ಆಂಜನೇಯ ದೇವಾಲಯವನ್ನು ಕೆಡವಿ ನಿರ್ಮಿಸಿದ ಮಸೀದಿಯ ಶಾಸನ ಹಾಗು ಶ್ರೀರಂಗಪಟ್ಟಣದ ಹಲವು ಪರ್ಷಿಯನ್ ಶಾಸನಗಳಲ್ಲಿ ಹಲವೆಡೆ ಮುಸ್ಲಿಮೇತರರನ್ನು ಕೊಲ್ಲಬೇಕು ಎಂಬರ್ಥದ ಬರಹಗಳಿವೆ.
ಅಂತಹ ಬರಹಗಳಲ್ಲಿ ಒಂದು ಬರಹ ಹೀಗಿದೆ ಪ್ರವಾದಿಗಳು ಹೇಗೆ ಯುದ್ಧವನ್ನು ಮಾಡಿ ಕಾಫಿರರನ್ನು ಕೊಂದರೋ ಹಾಗೆಯೇ ನೀವುಗಳು ಕೂಡ ಕಾಫಿರರನ್ನು ಕೊಲ್ಲಲು ಯುದ್ಧ ಸಲಕರಣೆಗಳನ್ನು ಹೊಂದಿರಿ. ಅವನು ಕಿತ್ತುಹಾಕಿಸಿದ ಆಂಜನೇಯನ ವಿಗ್ರಹವನ್ನು ಊರ ಒಳಗೆ ಹೊಸ ದೇವಾಲಯ ಕಟ್ಟಿಸಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಟಿಪ್ಪು ಕಟ್ಟಿಸಿದ ಮಸೀದಿಯ ಕೆಳಭಾಗದಲ್ಲಿ ಇಂದಿಗೂ ಹಿಂದೂ ದೇವಾಲಯದ ಕುರುಹುಗಳು ಸ್ಪಷ್ಟವಾಗಿವೆ.
ಇತ್ತೀಚೆಗೆ ವಿಜಯ್ ಮಲ್ಯ ಭಾರತಕ್ಕೆ ವಾಪಾಸು ತಂದ ಟಿಪ್ಪುವಿನ ಖಡ್ಗದ ಮೇಲಿನ ಪರ್ಷಿಯನ್ ಭಾಷೆಯ ಶಾಸನವು ಈ ರೀತಿ ಇದೆ ನನ್ನ ವಿಜಯ ಖಡ್ಗ ಎಲ್ಲಾ ಕಾಫಿರರನ್ನು ಕೊಂದು ಪ್ರಕಾಶಿಸುತ್ತದೆ.

14.12.1788 ರಂದು ಟಿಪ್ಪು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಪತ್ರ ನೀನು ಮೀರ್ ಹುಸೇನ್ ಆಲಿ ಜತೆಗೂಡಿ ಅಲ್ಲಾಹುವಿನಲ್ಲಿ ನಂಬಿಕೆ ಇಲ್ಲದ ಎಲ್ಲ ಕಾಫಿರರನ್ನು ಕೊಲ್ಲಬೇಕು.
ಟಿಪ್ಪು 18.01.1790 ರಂದು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಮತ್ತೊಂದು ಪತ್ರದ ಸಾರಾಂಶ ಪ್ರವಾದಿ ಮಹಮ್ಮದರ ಕೃಪೆಯಿಂದ ಮತ್ತು ಅಲ್ಲಾಹುವಿನ ದಯೆಯಿಂದ ನಾವು ಕಲ್ಲಿಕೋಟೆಯ (ಈಗಿನ ಕ್ಯಾಲಿಕಟ್) 75 ಶೇಕಡಾ ಕಾಫಿರರನ್ನು ಮತಾಂತರಿಸಿದ್ದೇವೆ.
ಟಿಪ್ಪು 18.01.1790 ರಂದು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಮತ್ತೊಂದು ಪತ್ರದ ಸಾರಾಂಶ ಪ್ರವಾದಿ ಮಹಮ್ಮದರ ಕೃಪೆಯಿಂದ ಮತ್ತು ಅಲ್ಲಾಹುವಿನ ದಯೆಯಿಂದ ನಾವು ಕಲ್ಲಿಕೋಟೆಯ (ಈಗಿನ ಕ್ಯಾಲಿಕಟ್) 75 ಶೇಕಡಾ ಕಾಫಿರರನ್ನು ಮತಾಂತರಿಸಿದ್ದೇವೆ.
22.3.1789 ರಲ್ಲಿ ಕೊಡೆಂಗೇರಿ ಅಬ್ದುಲ್ ಖಾದಿಗೆ ಬರೆದ ಪತ್ರದ ಒಕ್ಕಣೆ ನಾನು 1200 ಕಾಫಿರರನ್ನು ಮತಾಂತರಿಸಿದ್ದೇನೆ. ನೀನು ಎಲ್ಲಾ ನಂಬೂದಿರಿ (ಕೇರಳದ ಬ್ರಾಹ್ಮಣರು) ಮತ್ತು ಇತರರನ್ನು ಮತಾಂತರಿಸು.
ಪ್ರಾರಂಭದಲ್ಲಿ ಟಿಪ್ಪು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದರೂ ನಂತರದಲ್ಲಿ ಪರ್ಷಿಯನ್ ಭಾಷೆಯನ್ನೂ ಆಡಳಿತ ಭಾಷೆಯನ್ನಾಗಿ ತರಲು ಭಾರೀ ಶ್ರಮ ಪಟ್ಟಿದ್ದ. ಆದರೆ ಅದು ಯಶಸ್ವಿಯಾಗದೆ ಹೋದದ್ದು ಕನ್ನಡಿಗರ ಅದೃಷ್ಟ. ಅಂತೆಯೇ ಟಿಪ್ಪುವಿನ ಎಲ್ಲಾ ಶಾಸನಗಳು ಪರ್ಷಿಯನ್ ಭಾಷೆಯಲ್ಲಿಯೇ ಇವೆ.ಯಶಸ್ವಿಯಾಗಿದ್ದರೆ ಇವತ್ತಿಗೆ ಮೈಸೂರು -ನಜರಾಬಾದ್ ಆಗಿರುತಿತ್ತು. ಐ.ಮಾ ಮುತ್ತಣ್ಣ ಅವರ Tipu Sultan X-rayed ಪುಸ್ತಕದಲ್ಲಿ ಇನ್ನು ೪೦ ಪರ್ಶಿಯನ್ ಹೆಸರುಗಳಿವೆ.
ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿಯನ್ನು ಚಿಕ್ಕ ಮನೆಯೊಂದರಲ್ಲಿ ಕೂಡಿಹಾಕಿ ಸರಿಯಾಗಿ ಊಟ ನೀಡದೆ ಸೆರೆಯಿರಿಸಿದ್ದನ್ನು ಶ್ರೀನಿವಾಸ್ ಆಚಾರ್ ನಾರಾಯಣ ಅಯ್ಯಂಗಾರ್ ಅವರುಗಳು ತಮ್ಮ ‘ಮೈಸೂರು ಪ್ರಧಾನ’ ಪುಸ್ತಕದಲ್ಲಿ ವಿವರಿಸಿದ್ದಾರೆ. ರಾಣಿಯು ತನ್ನ ಮದ್ರಾಸಿನ ಪ್ರತಿನಿಧಿ ತಿರುಮಲರಾವ್ ಗೆ ಬರೆದ ಟಿಪ್ಪಣಿಯನ್ನೂ ಈ ಕೃತಿಯಲ್ಲಿ ನೀಡಲಾಗಿದೆ. ಆ ಟಿಪ್ಪಣಿ ಹೀಗಿದೆ
ಟಿಪ್ಪು ಯಾವ ಕ್ಷಣದಲ್ಲಿ ಬೇಕಾದರೂ ನನ್ನನ್ನು ಕೊಲ್ಲಬಹುದು, ಈಗಾಗಲೇ ಶ್ರೀರಂಗಪಟ್ಟಣದ 700 ಹಿಂದೂ ಕುಟುಂಬಗಳನ್ನು ಹತ್ಯೆ ಮಾಡಿದ್ದಾನೆ.
ಇಂತಹಾ ದರ್ಮಾಂಧ, ಜಿಹಾದಿಯ ಜಯಂತಿಯನ್ನು ಖಾನ್ ಗ್ರೇಸ್ ಆಚರಿಸುತ್ತಿರುವುದು ಹಿಂದುಸ್ಥಾನಕ್ಕೆ ಮಾಡುವ ದ್ರೋಹವೇ ಸರಿ
Post a Comment