ಮಂಗಳೂರು : ಬಿಜೆಪಿ ಕಾರ್ಯಕರ್ತರ ಸುಖಾನಂದ ಶೆಟ್ಟಿ ಹಾಗೂ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಮೋಹನ್ ರಾನ್ಯ ಕೊಲೆ ಆರೋಪದಲ್ಲಿ ಪೋಲೀಸರಿಗೆ ಬೇಕಾಗಿದ್ದ ಮಂಗಳೂರು ಮೂಲದ ಅಲ್ತಾಫ್ ಹುಸೇನ್ ನನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲೀಸರು ಗುರವಾರ ಬಂದಿಸಿದ್ದಾರೆ.
ತೈವಾನ್ ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಈತನನ್ನು ಪೋಲೀಸರು ವಿಚಾರಣೆ ನಡೆಸಿದಾಗ ಆತ ಏಳು ವರ್ಷಗಳಿಂದ ಪೋಲೀಸರಿಗೆ ಬೇಕಾಗಿದ್ದ ಆರೋಪಿಯೆನ್ನುವುದು ಖಚಿತವಾಗಿದೆ.
2006 ರಲ್ಲಿ ಭೀಕರ ಕೊಲೆ : ಮಂಗಳೂರಿನಲ್ಲಿ ಬಿಜೆಪಿಯ ನಾಯಕನಾಗಿ ಬೆಳೆಯುತ್ತಿದ್ದ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುಖಾನಂದ ಶೆಟ್ಟಿ ಅವರನ್ನು 2006 ರ ಡಿಸೆಂಬರ್ 1 ರಂದು ಮಂಗಳೂರಿನ ಕುಳಾಯಿ ಹೊನ್ನಕಟ್ಟೆಯಲ್ಲಿ ಸುಖಾನಂದ ಶೆಟ್ಟಿಗೆ ಸೇರಿದ ಮಾರ್ಬಲ್ ಗ್ರಾನೈಟ್ ಅಂಗಡಿಯ ಆವರಣದಲ್ಲಿ ಮತಾಂದರ ಗ್ಯಾಂಗ್ ಬರ್ಬರವಾಗಿ ಹತ್ಯೆಗೈದಿತ್ತು.
ಈ ಪ್ರಕರಣದಲ್ಲಿ ಮಂಗಳೂರು ಪೋಲೀಸರು ಅನೇಕ ಆರೋಪಿಗಳನ್ನು ಬಂದಿಸಿದ್ದರು. ಆರೋಪಿಗಳಲ್ಲಿ ಇಬ್ಬರು ಪೋಲೀಸರ ಎನ್ಕೌಂಟರ್ ಗೆ ಹೆಣವಾಗಿದ್ದರು ಆದರೆ ಅಲ್ತಾಫ್ ಹುಸೇನ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.
ಜಾಮೀನಿನ ಮೇಲೆ ಹೊರಬಂದ ನಂತರ ಈತನ ಹೆಸರು ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಹತ್ಯೆಯಲ್ಲಿ ಕೇಳಿಬಂದಿತ್ತು ಆದರೆ ಈತನ ಪತ್ತೆಯಾಗಿರಲಿಲ್ಲ.ಹತ್ಯೆ ನಂತರ ಆರೋಪಿ ದುಬೈ ಗೆ ಹೋಗಿ ತಲೆಮರೆಸಿಕೊಂಡಿದ್ದ ನಂತರ ಅದು ಹೇಗೋ ಮಂಗಳೂರಿಗೆ ವಾಪಾಸಾಗಿದ್ದ ಈತ ಇಲ್ಲೂ ಪೋಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ್ದ
ಏಳು ವರ್ಷಗಳಿಂದ ನಿರಂತರವಾಗಿ ತಲೆಮರೆಸಿಕೊಂಡಿದ್ದ ಈತನ ಪತ್ತೆ ಹಚ್ಚಲು ಪೋಲೀಸರು ಎಲ್ಲಾ ವಿಮಾನ ನಿಲ್ದಾಣಗಳಿಗೂ ಮಾಹಿತಿ ರವಾನಿಸಿದ್ದರು ಈಗ ತೈವಾನ್ ಗೆ ತೆರಳಲು ರೆಡಿಯಾಗಿದ್ದ ಆರೋಪಿ ಪೋಲೀಸರ ಬಲೆಗೆ ಬಿದ್ದಿದ್ದಾನೆ.
Post a Comment