೧೯೪೪ ಆಗಸ್ಟ್. ಅದು ನಾಜಿಗಳು ಕೊಬ್ಬಿದ ದಿನಗಳು. ಪೋಲೆಂಡ್ ರಾಜಧಾನಿ ವಾರ್ಸಾ ಮತ್ತು ಪಕ್ಕದ ವೋಲಾ ಜಿಲ್ಲೆಯ ಮನೆಮನೆಗೆ ನುಗ್ಗಿದ ಜರ್ಮನ್ನರು ಹಿಟ್ಲರನ ಆದೇಶದಂತೆ ಮನಬಂದಂತೆ ಗುಂಡುಹಾರಿಸಿದರು. ನಾಜಿ ಪಡೆಗಳು ವಾರ್ಸಾವನ್ನು ಸ್ಮಶಾನವನ್ನಾಗಿ ಪರಿವರ್ತನೆ ಮಾಡಿದವು. ಇತಿಹಾಸಕಾರರ ಪ್ರಕಾರ ಆ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ೪೦ ದಿಂದ ೫೦ ಸಾವಿರ. ಈ ಹತ್ಯಾಕಾಂಡದ ಸ್ಮಾರಕ ಇಂದಿಗೂ ವಾರ್ಸಾದಲ್ಲಿದೆ. ವಿಶ್ವಸಂಸ್ಥೆ ಈ ಹತ್ಯಾಕಾಂಡವನ್ನು ಜಗತ್ತಿನ ಕರಾಳ ಇತಿಹಾಸದ ಪಟ್ಟಿಯಲ್ಲಿ ಸೇರಿಸಿದೆ.
೧೯೪೧ರ ಸೆಪ್ಟಂಬರ್. ಉಕ್ರೇನಿನ ಕೀವ್‌ನಲ್ಲಿ ೩೩,೭೭೧ ಯಹೂದಿಗಳು ನಾಜಿಗಳಿಂದ ನಿರ್ಧಯವಾಗಿ ಕೊಲ್ಲಲ್ಪಟ್ಟರು. ಅಷ್ಟೂ ಜನರನ್ನು ದೊಡ್ಡ ಕಂದಕವೊಂದರ ಬದಿಯಲ್ಲಿ ನಿಲ್ಲಿಸಿ ಜರ್ಮನ್ ಪಡೆಗಳು ಗುಂಡು ಹೊಡೆದು ಕಂದಕದೊಳಗೆ ಉರುಳಿಸಿ ಮಣ್ಣು ಮುಚ್ಚಿದ್ದರು. ಈ ಹತ್ಯಾಕಾಂಡ ‘ಬಾಬಿ ಯಾರ್ ಹತ್ಯಾಕಾಂಡ’ ಎಂದೇ ಹೆಸರಾಯಿತು. ವಿಶ್ವಸಂಸ್ಥೆ ಈ ಹತ್ಯಾಕಾಂಡವನ್ನು largest single massacre in the history of the Holocaust ಎಂದು ಘೋಷಿಸಿತು. ಅಂದು ನಾಜಿಗಳು ಕಂದಕ ತೋಡಿದ್ದ ಜಾಗದಲ್ಲಿಂದು ಸ್ಮಾರಕ ತಲೆ ಎತ್ತಿದೆ.
೧೯೩೭ರ ಡಿಸೆಂಬರ್. ಎರಡನೆಯ ಚೀನಾ-ಜಪಾನ್ ಯುದ್ಧ ತಾರಕಕ್ಕೇರಿತ್ತು. ಚೀನಾದ ಹಳೇ ರಾಜಧಾನಿ ನಂಜಿಂಗ್‌ಗೆ ನುಗ್ಗಿದ ಜಪಾನಿ ಪಡೆಗಳು ಕ್ರೌರ್ಯವನ್ನು ಮೆರೆದವು. ಲೂಟಿ ಮತ್ತು ಅತ್ಯಾಚಾರಗಳನ್ನು ನಡೆಸಿತು. ಸಾವಿರಾರು ಸೈನಿಕರು ಮತ್ತು ನಾಗರಿಕರ ಹತ್ಯೆಯನ್ನು ನಡೆಸಿತು. ಚೀನಾ ಇತಿಹಾಸಕಾರರ ಪ್ರಕಾರ ಆ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ಎರಡೂವರೆ ಲಕ್ಷದಿಂದ ಮೂರು ಲಕ್ಷ! ಚೀನಾ ಈ ಹತ್ಯಾಕಾಂಡವನ್ನು ‘ದೇಶ ಮರೆಯದ ಘಟನೆ’ ಎಂದು ಘೋಷಿಸಿತು. ವಿಶ್ವಸಂಸ್ಥೆ ಕೂಡ ನಂಜಿಂಗ್ ಹತ್ಯಾಕಾಂಡವನ್ನು ಕರಾಳ ಇತಿಹಾಸ ಎಂದು ಘೋಷಣೆ ಮಾಡಿತು.
೧೯೪೦ ಮಾರ್ಚ್ ೫. ಜೋಸೆಫ್ ಸ್ಟಾಲಿನನ್ನ ಸೂಚನೆಯ ಮೇರೆಗೆ ಸೋವಿಯಟ್ ಪಾಲಿಟ್ ಬ್ಯೂರೋ ಪೋಲಿಶ್ ಖೈದಿಗಳನ್ನು, ಅಧಿಕಾರಿಗಳನ್ನು, ಸಾವಿರಾರು ಪೋಲಿಶ್ ಯೋ‘ರನ್ನು, ನಾಗರಿಕರನ್ನು ದಟ್ಟ ಕಾಟಿನ್ ಅರಣ್ಯದೊಳಗೆ ಕರೆದೊಯ್ದು ನಿರ್ಧಯವಾಗಿ ಹತ್ಯೆ ಮಾಡಿತು. ಎರಡನೆಯ ಮಹಾಯುದ್ಧದ ನಂತರ ಪೊಲಿಶ್ ಸರ್ಕಾರ ಆ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ೨೨ ಸಾವಿರ ಎಂದು ಘೋಷಣೆ ಮಾಡಿತು. ವಿಶ್ವಸಂಸ್ಥೆ ಈ ಹತ್ಯಾಕಾಂಡವನ್ನು ಜಗತ್ತಿನ ಕ್ರೂರ ಹತ್ಯಾಕಾಂಡದಲ್ಲೊಂದು ಎಂದು ಕರೆಯಿತು.
೧೮೭೬ ಎಪ್ರಿಲ್. ಎಂಟು ಸಾವಿರ ಸೈನಿಕರ ಒಟ್ಟೊಮನ್ ಟರ್ಕರ ಪಡೆ ಸುಮಾರು ೧೫ ಸಾವಿರ ಬಲ್ಗೇರಿಯನ್ನರನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿತು. ಸತ್ತವರಲ್ಲಿ ಬಹುತೇಕರು ಹೆಂಗಸರು ಮತ್ತು ಮಕ್ಕಳಾಗಿದ್ದರು. ಈ ಹತ್ಯಾಕಾಂಡವನ್ನು ಇಂದಿಗೂ ‘೧೯ ನೇ ಶತಮಾನದ ಅತೀ ಕ್ರೂರ ಕ್ರತ್ಯ’ ಎಂದು ಕರೆಯಲಾಗುತ್ತದೆ.
ಶತಮಾನಗಳ ಹಿಂದೆ ನಡೆದ ಈ ಹತ್ಯಾಕಾಂಡಗಳಿಂದ ಆಯಾಯ ದೇಶಗಳು ಇನ್ನೂ ಹೊರಗೆ ಬಂದಿಲ್ಲ. ಏಕೆಂದರೆ ಪ್ರತೀ ಹತ್ಯಾಕಾಂಡವೂ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರವನ್ನು ಆಯಾಯ ದೇಶಗಳಲ್ಲಿ, ಜನಾಂಗಗಳಲ್ಲಿ ಉಂಟು ಮಾಡಿತ್ತು. ಕೆಲವು ಹತ್ಯಾಕಾಂಡಗಳು ಕೆಲವು ಸಂಸ್ಕೃತಿ ಮತ್ತು ಜನಾಂಗಗಳನ್ನೇ ಸಮಾ ಮಾಡಿತ್ತು. ಭೂಪಟವನ್ನು ಬದಲು ಮಾಡಿತ್ತು. ಗಡಿಗಳನ್ನು ಅಳಿಸಿಹಾಕಿತ್ತು. ಮಾನಸಿಕತೆಯನ್ನೇ ಬದಲಿಸಿಹಾಕಿತ್ತು. ಸುಟ್ಟವರು ಮರೆತರೂ ಸುಡಿಸಿಕೊಂಡವರಾರೂ ಮರೆಯಲಾರರು ಎಂಬಂತೆ ಪ್ರತೀ ಹತ್ಯಾಕಾಂಡದ ಕುರುಹುಗಳು ಎಲ್ಲೆಲ್ಲೂ ಕಂಡುಬರುತ್ತಿದೆ. ಎಲ್ಲಾ ದೇಶಗಳೂ ಅದರ ಕುರುಹುಗಳನ್ನು ಉಳಿಸಿಕೊಂಡಿವೆ.
ಮೇಲಿನ ಹೆಸರಾಂತ ಹತ್ಯಾಕಾಂಡಗಳಷ್ಟೇ ಅಲ್ಲ.
೧೯೭೮ರ ಇಥಿಯೋಪಿಯಾದ ರೆಡ್ ಟೆರರ್ ಹತ್ಯಾಕಾಂಡದಲ್ಲಿ ಸತ್ತ ೩೦೦೦೦ ಜನರ ಸ್ಮಾರಕ, ೧೯೪೧ರಲ್ಲಿ ಕ್ರೊಯೇಶಿಯಾದ ಉಸ್ತಶಾ ನರಮೇಧದಲ್ಲಿ ಸತ್ತ ೭೮ ಸಾವಿರ ಜನರ ಸ್ಮಾರಕ, ೧೯೪೩ರಲ್ಲಿ ಪೋಲೆಂಡಿನ ವೋಲಿನ್ಯಾ ಹತ್ಯಾಕಾಂಡದಲ್ಲಿ ಸತ್ತ ೬೦ ಸಾವಿರ ಜನರ ಸ್ಮಾರಕ, ೧೯೭೨ರಲ್ಲಿ ಬುರುಂಡಿ ಹುಟೂಸ್ ನರಮೇಧದ ಸ್ಮಾರಕ, ೧೯೭೯ರ ಈಕ್ವಟೋರಿಯಲ್ ಗಿನಿಯಾದಲ್ಲಿ ನಡೆದ ರಾಜಕೀಯ ಹತ್ಯಾಕಾಂಡದಲ್ಲಿ ‘ರುಣವಾಗಿ ಸತ್ತ ೮೦ ಸಾವಿರ ಜನರ ಸ್ಮಾರಕ . ೯೫ರ ಬೋಸ್ನಿಯಾ ಹತ್ಯಾಕಾಂಡದಲ್ಲಿ ಸತ್ತ ೯ ಸಾವಿರ ಜನರ ಸ್ಮಾರಕ ಎಲ್ಲವೂ ತಮ್ಮ ನೆನಪನ್ನು ಉಳಿಸಿಕೊಂಡಿವೆ. ನೆನಪಿನಿಂದಲೇ ಆ ದೇಶಗಳು ಹೊಸ ಪೀಳಿಗೆಗಳನ್ನು ರೂಪಿಸುವ ಕೆಲಸಕ್ಕೆಇಳಿದಿವೆ.
ವಿಶ್ವ ಸಂಸ್ಥೆ ಕೂಡ ನಡೆದುಹೋದ ನರಮೇಧಗಳ ಬಗ್ಗೆ ಹೀಗೆ ಹೇಳುತ್ತದೆ:
“ಮಾನವೇತಿಹಾಸದಲ್ಲಿ ನಡೆದ ನರಮೇ‘ಗಳೆಲ್ಲವೂ ಜಗತ್ತು ಮರೆಯದ ಐತಿಹಾಸಿಕ ಘಟನೆಗಳು. ಜಗತ್ತಿನಲ್ಲಿ ನಡೆದ ಹಲವು ಮತೀಯ, ರಾಜಕೀಯ, ವರ್ಣಬೇ‘ದ ಹತ್ಯೆಗಳಿಂದ ಜಗತ್ತಿನ ಹಲವು ಜನಾಂಗಗಳು ಹಿಂಸೆಗೆ ಒಳಗಾಗಿವೆ. ಹಲವು ಸಂಸ್ಕೃತಿಗಳು ನಶಿಸಿಹೋಗಿವೆ. ಇಂಥ ಹತ್ಯಾಕಾಂಡಗಳು ಇತಿಹಾಸದ ಕಪ್ಪು ಚುಕ್ಕೆಗಳು. ಅದೆಂದೂ ಮರುಕಳಿಸಬಾರದೆಂದು ವಿಶ್ವಸಂಸ್ಥೆಯು ನಿಲುವಳಿಯನ್ನು ಜಾರಿ ಮಾಡಿದೆ (A/RES/60/7). ಇದರ ಉದ್ದೇಶ ಒಂದೇ ಆಗಿದ್ದು, ಹಳೆಯ ಕ್ರೌರ್ಯವನ್ನು ನೆನೆದು ಭವಿಷ್ಯವನ್ನು ಕಟ್ಟುವುದು ಮಾತ್ರ”
ವಿಶ್ವಸಂಸ್ಥೆಯ ಹಲವು ಕಾರ್ಯಕ್ರಮಗಳಲ್ಲಿ ಈ ನಿಲುವಳಿಯೂ ಒಂದು. ಕೆಲವು ಹತ್ಯಾಕಾಂಡಗಳ ಸ್ಮಾರಕಗಳನ್ನು ವಿಶ್ವಸಂಸ್ಥೆ ಪಾರಂಪರಿಕ ತಾಣಗಳನ್ನಾಗಿಯೂ ಗುರುತಿಸಿದೆ.
ಅಂಥ ನರಮೇಧಗಳ ಸಾಲಿನಲ್ಲಿ ಬರುವ ಅತಿ ಘೋರ ಹತ್ಯಾಕಾಂಡವೊಂದು ಕರ್ನಾಟಕದಲ್ಲಿರುವುದು ಬಹುತೇಕರಿಗೆ ತಿಳಿದಿಲ್ಲ. ತಿಳಿದಿದ್ದರೂ ನಕಲಿ ಜಾತ್ಯತೀತತೆಯಡಿಯಲ್ಲಿ ಅದು ಸುಲ‘ವಾಗಿ ಮುಚ್ಚಿಹೋಗಿದೆ. ಆ ಹತ್ಯಾಕಾಂಡ ಒಂದು ಜನಾಂಗದ ದುರಂತದ ಕಥೆಯನ್ನು ಹೊತ್ತರೂ, ಸಂಸ್ಕೃತಿಗೆ ಮಾರಣಾಂತಿಕ ಹೊಡೆತವನ್ನು ಕೊಟ್ಟರೂ ರಾಜ್ಯದ ಸಾಮಾಜಿಕ ಚಿತ್ರಣವನ್ನು ಬದಲಿಸಿದರೂ ಆ ಹತ್ಯಾಕಾಂಡ ‘ಮಹಾನ್ ಇತಿಹಾಸಕಾರರಿಗೆ’ ಗೋಚರಿಸಲಿಲ್ಲ. ಬದಲಿಗೆ ಅದನ್ನು ಮುಚ್ಚಿಹಾಕುವ ವ್ಯವಸ್ಥಿತ ಪ್ರಯತ್ನಗಳು ನಡೆದಿವೆ. ಇತಿಹಾಸದ ಆ ಹತ್ಯಾಕಾಂಡವೂ ‘ವಿಷ್ಯದ ಪೀಳಿಗೆಗಳಿಗೆ ಇತಿಹಾಸ ಮೋಸ ಮಾಡಿದೆ.
ಅದೇ ೧೭೮೬ರ ‘ದೇವಟ್ಟಿಪರಂಬು ಹತ್ಯಾಕಾಂಡ’. ಸುಮಾರು ೩೫ ಸಾವಿರ ಹಿಂದುಗಳ ಕಗ್ಗೊಲೆ. ವಿಶ್ವಸಂಸ್ಥೆಯ ಕರಾಳ ದಿನಗಳ ಪಟ್ಟಿಯಲ್ಲಿ ಬಿಡಿ. ರಾಜ್ಯ ಸರ್ಕಾರದ ಪಠ್ಯಗಳಲ್ಲೂ ಅದು ದಾಖಲಾಗಲಿಲ್ಲ. ಏಕೆಂದರೆ ಹತ್ಯಾಕಾಂಡ ನಡೆಸಿದವರು ಯಾರೋ ನಾಜಿಗಳಾಗಿರಲಿಲ್ಲ, ಸೋವಿಯತ್ ಕಮ್ಯುನಿಷ್ಟರಾಗಿರಲಿಲ್ಲ. ಒಟ್ಟೋಮನ್ ಟರ್ಕರೂ ಆಗಿರಲಿಲ್ಲ. ಆತ ಇಂದು ಹಜರತ್ ಟಿಪ್ಪುಸುಲ್ತಾನ್ ಮಹಾಸ್ವಾಮಿಗಳು ಎಂದು ಕರೆಯಲ್ಪಡುವ ಪುಂಡ, ನಕಲಿ ಹುಲಿ ಆಗಿದ್ದ. ನರಮೇ‘ ನಡೆಸಿದವರು ಮುಸಲ್ಮಾನರಾಗಿದ್ದರು. ಇನ್ನೆಲ್ಲಿಯ ಸ್ಮಾರಕ? ಇನ್ನೆಲ್ಲಿಯ ದಾಖಲೆ?
ಮಂಗಳೂರು ಮತ್ತು ಮಲಾಬಾರ್ ತೀರಕ್ಕೆ ಸಂಪರ್ಕ ಸಾಸಲು ಹೈದರಾಲಿಗೆ ಇದ್ದ ಅಡೆತಡೆ ಎಂದರೆ ಕೊಡಗು. ಅದಕ್ಕಾಗಿ ಆತ ಬದುಕಿದ್ದಷ್ಟು ದಿನವೂ ಪ್ರಯತ್ನ ಪಡುತ್ತಲೇ ಇದ್ದ. ಕೆಲವು ಕಳ್ಳದಾರಿಗಳಿದ್ದರೂ ಅದು ಸುಲಭ ಸಂಪರ್ಕ ಸಾಧನವಾಗಿರಲಿಲ್ಲ. ಆದ್ದರಿಂದ ಆತ ಕೊಡಗನ್ನು ವಶಪಡಿಸಿಕೊಳ್ಳಲು ಸೈನಿಕ ಶಕ್ತಿಯ ಮೊರೆ ಹೋದ. ಪಿರಿಯಾಪಟ್ಟಣ ಮೂಲಕ ಮುಳ್ಳುಸೋಗೆಯ ಮೇಲೆ ಆಕ್ರಮಣ ಮಾಡಿದ ಹೈದರಾಲಿ ಅಲ್ಲೂ ಪೆಟ್ಟು ತಿಂದು ಶ್ರೀರಂಗಪಟ್ಟಣಕ್ಕೆ ಮರಳಿದ. ಮತ್ತೊಮ್ಮೆ ದಕ್ಷಿಣ ಕೊಡಗಿನ ಮೂಲಕ ನುಗ್ಗಲು ಪ್ರಯತ್ನ ಪಟ್ಟ ಹೈದರ ಅಲ್ಲೂ ಮಾರಣಾಂತಿಕವಾಗಿ ಪೆಟ್ಟು ತಿಂದು ಪಲಾಯನ ಮಾಡಿದ. ಈ ಯುದ್ಧದಲ್ಲಿ ಹೈದರ ತನ್ನ ಇಬ್ಬರು ಸರದಾರರನ್ನು ಕೂಡ ಕಳೆದುಕೊಂಡಿದ್ದ. ಮೂರನೇ ಬಾರಿ ಮೋಸದಿಂದ ಮಡಿಕೇರಿಯವರೆಗೆ ಬಂದನಾದರೂ ಆತ ಕೇವಲ ರಾಜನನ್ನು ಮಾತ್ರ ಬಂಧಿಸಲು ಸಾಧ್ಯವಾಯಿತೇ ಹೊರತು ಸಂಪೂರ್ಣ ಕೊಡಗು ಆತನ ಕೈವಶವಾಗಲೇ ಇಲ್ಲ. ಕೊಡಗಿನ ಜನ ಆತನಿಗೆ ತೆರಿಗೆ ಒಪ್ಪಿಸದೆ ಹೋರಾಟ ಮುಂದುವರೆಸಿದರು. ಕೊನೆಗೊಂದು ದಿನ ಕೊಡಗಿನ ಆಸೆಯನ್ನು ಹೊತ್ತುಕೊಂಡೇ ಹೈದರ್ ಸತ್ತ. ತಂದೆ ಸತ್ತ ಅನಂತರ ಮಗ ಟಿಪ್ಪು ಕೊಡಗನ್ನು ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಕೊಡಗಿನತ್ತ ಧಾವಿಸಿದ. ಆತ ಕೂಡಾ ಹಲವು ಬಾರಿ ಪೆಟ್ಟು ತಿಂದು ಹಿಂದಿರುಗಿದ. ಮಡಿಕೇರಿ ಮತ್ತು ಮುಳ್ಳುಸೋಗೆ(ಕುಶಾಲನಗರ) ಬಿಟ್ಟರೆ ಟಿಪ್ಪುವಿನ ಸಂಪೂರ್ಣ ಕೊಡಗಿನ ಆಸೆ ಈಡೇರಲೇ ಇಲ್ಲ. ಮಡಿಕೇರಿ ಕೋಟೆಗೆ ತನ್ನ ಸೇನಾನಿ ಜಾಫರ್ ಕೂಲಿ ಬೇಗನನ್ನು ಕಿಲ್ಲೇದಾರನನ್ನಾಗಿ ನೇಮಕ ಮಾಡಿದ ಟಿಪ್ಪು ಮಡಿಕೇರಿಯನ್ನು ಜಾಫರಾಬಾದ್‌ಎಂದು ನಾಮಕರಣ ಮಾಡಿದ. ಅಷ್ಟು ಮಾಡಿದರೂ ಕೊಡಗಿನ ಪ್ರತಿಕ್ರಿಯೆಯನ್ನು ಅಡಗಿಸಿದಂತಾಗುವುದಿಲ್ಲ ಎಂಬುದು ಟಿಪ್ಪುವಿಗೂ ಗೊತ್ತಿತ್ತು. ಹಾಗಾಗಿ ಆತ ತನ್ನ ಕ್ರೌರ್ಯವನ್ನು ಕೊಡಗಿನ ಜನಕ್ಕೆ ಪರಿಚಯಿಸಲು ಯೋಜಿಸಿದ. ಒಂದು ದಿನ ಭಾಗಮಂಡಲಕ್ಕೆ ತನ್ನ ಸೈನ್ಯದೊಡನೆ ಧಾವಿಸಿ ಅರ್ಚಕರನ್ನು ಕೊಂದು ಭಗಂಡೇಶ್ವರ ದೇವಸ್ಥಾನದ ಎರಡು ಕಲ್ಲಿನ ಆನೆಗಳನ್ನು ಮುರಿಸಿದ. ದೇವಸ್ಥಾನ ಅಪವಿತ್ರಗೊಳ್ಳಲು ಇಷ್ಟು ಸಾಕೆಂದು ಅದಾಗಲೇ ಸಾಕಷ್ಟು ದೇವಸ್ಥಾನಗಳಿಗೆ ದಾಳಿ ಮಾಡಿದ್ದ ಟಿಪ್ಪುವಿಗೆ ಗೊತ್ತಿತ್ತು. ಅಲ್ಲದೆ ತನ್ನ ವಿರುದ್ಧ ಪಿತೂರಿ ಮಾಡಿದ್ದ ಜನರು ಭಾಗಮಂಡಲದ ಆಸುಪಾಸಿನ ನಾಲ್ಕು ನಾಡು ಮತ್ತು ಬೇಂಗ್ ನಾಡಿನಲ್ಲಿರುತ್ತಾರೆ ಎಂಬುದೂ ಆತನಿಗೆ ತಿಳಿದಿತ್ತು. ಆದ್ದರಿಂದ ಟಿಪ್ಪುಭಾಗಮಂಡಲದಲ್ಲೇ ಠಿಕಾಣಿ ಹೂಡಿದ. ಭಗಂಡೇಶ್ವರನ ದೇವಸ್ಥಾನದಲ್ಲಿ ಸೇನೆಯನ್ನು ಜಮೆ ಮಾಡಿದ. ಕೊಡಗಿನ ಜನರು ಭಗಂಡೇಶ್ವರನನ್ನು ಆರಾಸುತ್ತಾರೆಂದೇ ಭಾಗಮಂಡಲವನ್ನು ‘ಅಬ್ಜಲಾಬಾದ್’ ಎಂದು ಮರುನಾಮಕರಣ ಮಾಡಿದ. ಆದರೂ ಕೊಡಗಿನ ಯೋಧರು ಹೋರಾಟಕ್ಕಿಳಿಯದೆ ಸತಾಯಿಸುತ್ತಲೇ ಇದ್ದರು. ಮಳೆಗಾಲವನ್ನು ಕಾಯುತ್ತಿದ್ದರು. ಇನ್ನೊಂದೆಡೆ ಮಡಿಕೇರಿ ಮತ್ತು ಭಾಗಮಂಡಲದ ಸಂಪರ್ಕವನ್ನೂ ಹಿಂದೂ ಯೋಧರು ಕಡಿದು ಹಾಕಿದರು. ಟಿಪ್ಪುವಿನ ಸೇನೆ ಕೈಕಾಲು ಚೆಲ್ಲತೊಡಗಿತು. ಆದರೆ ಧೂರ್ತ ಟಿಪ್ಪು ಬೇರೆಯೇ ಒಂದನ್ನು ಯೋಚನೆ ಮಾಡಿದ್ದ. ನಾಲ್ಕುನಾಡಿಗೆ ಕರಣಿಕ ಸುಬ್ಬರಸಯ್ಯನನ್ನು ಕಳುಹಿಸಿ ಕೊಡವರು ತನ್ನ ಶತ್ರುಗಳಲ್ಲವೆಂದೂ, ತನ್ನ ಅಸಲೀ ಶತ್ರುಗಳು ಬ್ರಿಟೀಷರು ಮತ್ತು ಮರಾಠರೆಂದೂ ಅವರ ವಿರುದ್ಧ ಹೋರಾಟಕ್ಕೆ ಕೊಡವರ ಸಹಕಾರ ತನಗೆ ಬೇಕೆಂದೂ ಊರ ಮುಖ್ಯಸ್ಥರಿಗೆ ವರ್ತಮಾನವನ್ನು ಮುಟ್ಟಿಸಿದ. ಸ್ನೇಹದ ಕುರುಹಾಗಿ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ದೇವಟ್ಟಿಪರಂಬು ಮೈದಾನದಲ್ಲಿ ಕೊಡವರಿಗಾಗಿ ಔತಣಕೂಟವನ್ನು ಏರ್ಪಡಿಸಲಾಗಿದೆಯೆಂದೂ ಶಸ್ತ್ರಗಳಿಲ್ಲದೆ ನಾವಿಬ್ಬರೂ ಮುಖಾಮುಖಿಯಾಗಿ ಗೆಳೆತನವನ್ನು ಪ್ರದರ್ಶಿಸೋಣವೆಂದೂ ನಾಟಕವಾಡಿದ. ಸತತ ಯುದ್ಧದಿಂದ ಹೈರಾಣಾಗಿದ್ದ ಸ್ನೇಹಜೀವಿ ಕೊಡವರು ಟಿಪ್ಪುವಿನ ಬಣ್ಣದ ಮಾತುಗಳಿಗೆ ಮರುಳಾದರು. ಅಯ್ಯಂಗೇರಿ ಗ್ರಾಮದ ದೇವಟ್ಟಿಪರಂಬು ಮೈದಾನಕ್ಕೆ ಬಂದು ಸೇರಿದರು. ಎರಡು ನಾಡುಗಳ ಗ್ರಾಮಸ್ಥರ ಜೊತೆಗೆ ದಕ್ಷಿಣ ಕೊಡಗಿನಿಂದ ಹೋರಾಟಕ್ಕೆ ಬಂದಿದ್ದ ಯೋಧರೆಲ್ಲರೂ ಸೇರಿ ಸುಮಾರು ೭೦ಸಾವಿರ ಕೊಡವರು ದೇವಟ್ಟಿಪರಂಬು ಮೈದಾನಕ್ಕೆ ಬಂದು ಸೇರಿದರು. ಮೈದಾನದ ಒಂದು ಬದಿಯಲ್ಲಿ ಕಾವೇರಿ ಹರಿಯುತ್ತಿದ್ದಳು. ಉಳಿದೆಡೆ ಮೈದಾನ ಕಾಡುಗಳಿಂದಾವ್ರತವಾಗಿತ್ತು. ಇತಿಹಾಸಕಾರ ಮಾರ್ಕ್ ವಿಲ್ಕ್ಸ್ ಪ್ರಕಾರ ಅಂದು ದೇವಟ್ಟಿಪರಂಬುನಲ್ಲಿ ಸೇರಿದ್ದ ಜನರು ಒಂದು ಲಕ್ಷಕ್ಕೂ ಅಕ! ಹೆಂಗಸರು ಮಕ್ಕಳಾಯಾಗಿ ಸೇರಿದ್ದ ಕೊಡವರನ್ನು ಅದಾಗಲೇ ಕಾಡುಗಳಲ್ಲಿ ಅವಿತು ಕುಳಿತಿದ್ದ ಟಿಪ್ಪು ಸೇನೆ ಸುತ್ತುವರಿಯಿತು. ಮುಂದೆ ನಡೆದಿದ್ದು ಕರ್ನಾಟಕದ ಇತಿಹಾಸ ಎಂದೂ ಕಾಣದ ಭೀಕರ ನರಮೇಧ. ಹೆಂಗಸರು- ಮಕ್ಕಳ ಚೀತ್ಕಾರ, ಉರುಳಿದ ತಲೆಗಳು. ನಿರಾಯುಧರ ಮೇಲೆ ‘ಹುಲಿ’ ದಾಳಿ ಮಾಡಿತ್ತು. ಅಂದು ಸತ್ತ ಕೊಡವರ ಸಂಖ್ಯೆ ಅಂದಾಜು ೩೫ ಸಾವಿರ! ಮೈದಾನದಲ್ಲಿ ಹರಿದ ರಕ್ತದ ಕೋಡಿ ಕಾವೇರಿ ಸೇರಿತು. ಎಷ್ಟೋ ದಿನಗಳವರೆಗೆ ಕಾವೇರಿ ಕೆಂಪಾಗಿ ಹರಿಯುತ್ತಿದ್ದಳು ಎಂಬ ಜನಪದ ಹಾಡೊಂದೂ ಕೂಡ ಕೊಡವ ಭಾಷೆಯಲ್ಲಿದೆ. ಇನ್ನುಳಿದ ೩೦ ರಿಂದ ೪೦ ಸಾವಿರ ಜನರನ್ನು ಟಿಪ್ಪು ಶ್ರೀರಂಗಪಟ್ಟಣದ ಗಂಜಾಂಗೆ ಎಳೆದೊಯ್ದ. ಅವರಲ್ಲಿ ಹಲವರು ಮತಾಂತರವಾದರು. ಮತಾಂತರಕ್ಕೆ ಒಪ್ಪದವರನ್ನು ಚಿತ್ರಹಿಂಸೆ ಮಾಡಿ ಕೊಲ್ಲಿಸಿದ. ಹಲವರನ್ನು ಹುಲಿಯ ಬೋನಿಗೆ ಹಾಕಿ ಕೊಲ್ಲಲಾಯಿತು.
ಮುಂದೆ ಕೊಡಗಿನ ಇತಿಹಾಸವೇ ಬದಲಾಯಿತು. ಅಂದು ೧೫೦೦ರಷ್ಟಿದ್ದ ಕೊಡವ ಕುಟುಂಬಗಳು ೮೪೦ಕ್ಕೆ ಇಳಿಯಿತು. ಕೆಲವು ಊರುಗಳಲ್ಲಿ ಜನರೇ ಖಾಲಿಯಾದರು. ಮುಂದೆ ಬ್ರಿಟೀಷರು ಟಿಪ್ಪುವನ್ನು ಕೊಂದು ಕೋಡಗಿನಲ್ಲಿ ಆಡಳಿತ ವ್ಯವಸ್ಥೆ ರೂಪಿಸುವ ಹೊತ್ತಿನಲ್ಲಿ ಕೂಡ ಹತ್ಯಾಕಾಂಡದ ಪರಿಣಾಮವನ್ನು ಅವರು ಎದುರಿಸಬೇಕಾಯಿತು. ಜನಸಂಖ್ಯಾ ಏರುಪೇರನ್ನು ನಿಯಂತ್ರಿಸಲು ಸುಳ್ಯದಿಂದ ಜನರನ್ನು ಕರೆತಂದು ಕೊಡಗಿನಲ್ಲಿ ಜಮೆ ಮಾಡಲಾಯಿತು. ಹಲವು ದೇವಸ್ಥಾನಗಳು ವೊಕ್ತೇಸರಿಲ್ಲದೆ ಹಾಳುಬಿದ್ದವು. ಹಲವು ಕೊಡವ ಕುಟುಂಬಗಳು ನಶಿಸಿಹೋದ ಕುಟುಂಬದ ‘ಮಿಯಲ್ಲಿ ನೆಲೆನಿಂತವು. ಬ್ರಿಟೀಷರು ಕಂದಾಯಪದ್ದತಿಯನ್ನು ಮರುಪರಿಶೀಲನೆ ಮಾಡಬೇಕಾಯಿತು. ಆದರೆ ಈ ಹತ್ಯಾಕಾಂಡವನ್ನು ಬ್ರಿಟೀಷ್ ಇತಿಹಾಸಕಾರರ ಹೊರತಾಗಿ ಯಾರೂ ಉಲ್ಲೇಖಿಸಲಿಲ್ಲ.
ದೇವಟ್ಟಿಪರಂಬು ಮೈದಾನ ಇತಿಹಾಸದ ಕರಾಳತೆಯನ್ನು ಹೊತ್ತು ಇಂದಿಗೂ ಮೌನವಾಗಿದೆ. ಪಕ್ಕದಲ್ಲೇ ಕಾವೇರಿ ಹರಿಯುತ್ತಿದ್ದಾಳೆ. ರಕ್ತದ ಕಲೆಯನ್ನು ಆಕೆ ತೊಳೆದಿದ್ದಾಳೇನೋ ನಿಜ ಆದರೆ ಕೊಡವರ ನೋವು…? ಅಂದು ಸುಮಾರು ನೂರೈವತ್ತು ಎಕರೆ ವಿಸ್ತೀರ್ಣದ ದೇವಟ್ಟಿಪರಂಬು ಮೈದಾನ ಇಂದು ಒತ್ತುವರಿಯಾಗಿ ಐವತ್ತು ಎಕರೆಗೆ ಸೀಮಿತವಾಗಿದೆ. ೧೭೮೬ರ ಯಾವ ಕುರುಹುಗಳೂ, ಸ್ಮಾರಕಗಳೂ ಇಂದು ದೇವಟ್ಟಿಪರಂಬುವಿನಲ್ಲಿ ಇಲ್ಲ. ಒಂದೆಡೆ ಟಿಪ್ಪು ವೈಭಕರಣ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದರ ನಡುವೆ ’ಕೊಡವ ನ್ಯಾಷನಲ್ ಕೌನ್ಸಿಲ್’ ಸಂಘಟನೆಯ ಎನ್. ಯು. ನಾಚಪ್ಪನವರು ದೇವಟ್ಟಿಪರಂಬು ಹತ್ಯಾಕಾಂಡ ಸ್ಮಾರಕದ ಹೋರಾಟ ಕೈಗೆತ್ತಿಕೊಂಡಿದ್ದಾರೆ. “ಕೊಡವರ ಬಲಿದಾನಕ್ಕೆ ಗೌರವ ಸಿಗಬೇಕು. ಸ್ಮಾರಕ ನಿರ್ಮಾಣವಾಗಬೇಕು, ಇದು ನಮ್ಮ ನಾಡಿನಲ್ಲಿ ನಡೆದ ಅನಾಗರಿಕ ನರಮೇಧ. ಅದನ್ನು ನಾವು ಮರೆಯುದಿಲ್ಲ” ಎನ್ನುವ ನಾಚಪ್ಪವರ ಧ್ವನಿಗೆ ಬೆಂಬಲ ವ್ಯಕ್ತವಾಗುತ್ತಿದೆ. ವಿಶ್ವಸಂಸ್ಥೆಗೆ ಅಹವಾಲು ಸಲ್ಲಿಸಲಾಗಿದೆ. ಪ್ರತಿ ಕನ್ನಡಿಗನೂ ನೋಡಬೇಕಾದ ದೇವಟ್ಟಿಪರಂಬು ಕರ್ನಾಟಕದ ಭೀಕರ ನರಮೇಧದ ಸಾಕ್ಷಿ ಎನ್ನುವುದನ್ನು ಮುಸಲ್ಮಾನರ ವಿರೋಧದ ನಡುವೆಯೂ ಸಾರುತ್ತಿದ್ದಾರೆ. ಹಲವು ಹಿಂದೂಪರ ಸಂಘಟನೆಗಳು ನಾಚಪ್ಪನವರ ಹೋರಾಟಕ್ಕೆ ಬೆಂಬಲ ನೀಡಿವೆ.
ಶ್ರೀರಂಗಪಟ್ಟಣದಲ್ಲಿ ಹಂತಕನ ಹೆಸರಿನ ವಿಶ್ವವಿದ್ಯಾಲಯ ನಿರ್ಮಾಣವಾಗಬಹುದಾದರೆ, ಆತನ ಹುಟ್ಟಿದ ದಿನಕ್ಕೂ ಸತ್ತ ದಿನಕ್ಕೂ ಸಮಾರಂಭ ಮಾಡಬಹುದಾದರೆ ಧಾರುಣವಾಗಿ ಸತ್ತ ಕೊಡವರಿಗಾಗಿ ಸ್ಮಾರಕವನ್ನೇಕೆ ಸರ್ಕಾರ ನಿರ್ಮಾಣ ಮಾಡಬಾರದು?
Article Link ( http://wp.me/p30GH9-83 )
Post a Comment