Veerakesari 08:19
ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖು, ಕಳಶ, ಶೀಪ ಆಕಾರದ ಗೆರೆಗಳು ಕಂಡುಬರುತ್ತವೆ. ಪುರುಷರಿಗೆ ಬಲಹಸ್ತವನ್ನು, ಸ್ತ್ತ್ರೀಯರಿಗೆ ಎಡಹಸ್ತವನ್ನು ನೋಡಬೇಕು. ಚಕ್ರ, ಶಂಖು, ಕಳಶ, ಶೀಪವನ್ನು ಎರಡೂ ಕೈಬೆರಳುಗಳಲ್ಲಿ ನೋಡಬೇಕು. ಈ ಹಿಂದೆ ಚಕ್ರದ ಮಹತ್ವದ ಕುರಿತು ಇಲ್ಲಿ ಮಾಹಿತಿ ನೀಡಲಾಗಿತ್ತು.
ಈಗ ಶಂಖು ಮತ್ತು ಶೀಪದ ಮಹತ್ವ ತಿಳಿದುಕೊಳ್ಳೋಣ :
ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದು ಶಂಖವಿದ್ದರೆ ಸಂತೋಷ ಜೀವನ. ಎರಡು ಶಂಖುಗಳಿದ್ದರೆ ಬಡತನ, ಮೂರು ಶಂಖುಗಳಿದ್ದರೆ ಕೆಟ್ಟ ಗುಣ, ನಾಲ್ಕು ಶಂಖುಗಳಿದ್ದರೆ ಉತ್ತಮ ಗುಣ, ಐದು ಶಂಖುಗಳಿದ್ದರೆ ಬಡತನ ಕಂಡುಬರುತ್ತದೆ. ಆರು ಶಂಖುಗಳನ್ನು ಹೊಂದಿರುವ ವ್ಯಕ್ತಿಯು ಅತ್ಯಂತ ಸಮರ್ಥನಾಗಿರುತ್ತಾರೆ. ಏಳರಿಂದ ಹತ್ತು ಶಂಖುಗಳನ್ನು ಪಡೆದಿರುವ ವ್ಯಕ್ತಿಯು ರಾಜಯೋಗ ಅನುಭವಿಸುತ್ತಾರೆ.
ವ್ಯಕ್ತಿಯ ಬೆರಳುಗಳಲ್ಲಿ ಒಂದು ಶೀಪ (ಕಳಶ) ಮಾತ್ರವಿದ್ದರೆ. ಆತನು ಗುಣವಂತನಾಗುವನು. ಎರಡು ಶೀಪಗಳಿದ್ದರೆ ವಾಗ್ಮಿಯೂ, ಮೂರು ಶೀಪಗಳಿದ್ದರೆ ಹಣವಂತನೂ, ನಾಲ್ಕು ಶೀಪಗಳಿದ್ದರೆ ಗುಣವಂತನೂ, ಐದರಿಂದ ಹತ್ತು ಶೀಪಗಳಿದ್ದರೆ ಶ್ರೀಮಂತನೂ ಆಗಿರುತ್ತಾರೆ. 
Source - webdunia.com

Post a Comment

Powered by Blogger.