loading...
ಬಿ.ಎಸ್.ಎಫ್ ಯೋಧ ತೇಜ್ ಬಹದ್ದೂರ್ ಸೈನಿಕರಿಗೆ ನೀಡೋ ಕಳಪೆ ಆಹಾರದ ಬಗ್ಗೆ ದೇಶದ ಜನರಲ್ಲಿ ತನ್ನ ನೋವನ್ನು ಹಂಚಿಕೊಂಡ ಬೆನ್ನಲ್ಲೇ ಈಗ ಮತ್ತೊಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸಿ.ಆರ್.ಪಿ.ಎಫ್ ಯೋಧನೊಬ್ಬ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ನರೇಂದ್ರ ಮೋದಿಗೆ ವೀಡಿಯೋ ಮೂಲಕ ತನ್ನ ನೋವನ್ನು ಹಂಚಿಕೊಂಡಿದ್ದಾನೆ.
ಮಥುರಾ ಮೂಲದ ಈಗ ಮೌಂಟ್ ಅಬುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಜೀತ್ ಸಿನ್ಹ ವೀಡಿಯೋ ಮಾಡಿದ ಯೋಧ. ವೀಡಿಯೋದಲ್ಲಿ ಯೋಧ ಜೀತ್ ಸಿನ್ಹ ಭಾರತೀಯ ಸೇನೆ ಹಾಗೂ ಅರೆಸೈನಿಕ ಸಿಬ್ಬಂದಿ ಮಧ್ಯೆ ಇರೋ ವೇತನ ಹಾಗೂ ಇತರ ಸೌಲಭ್ಯಗಳಲ್ಲಿ ತೋರುತ್ತಿರುವ ತಾರಮ್ಯದ ಬಗ್ಗೆ ಹೇಳಿದ್ದಾರೆ.
ಸರ್ಕಾರಿ ಶಿಕ್ಷಕರಿಗೆ ಕೈತುಂಬ ಸಂಬಳ, ಸರ್ಕಾರಿ ರಜೆ ನೀಡುವ ಸರ್ಕಾರ, ವರ್ಷ ಪೂರ್ತಿ ದಟ್ಟ ಅರಣ್ಯದಲ್ಲಿ ಚಳಿ ಗಾಳಿಗೆ ಅಂಜದೆ ಕರ್ತವ್ಯ ನಿರ್ವಹಿಸುವ ನಮಗೆ ರಜೆ ನೀಡಲು ಹಿಂದೆಮುಂದೆ ನೋಡುತ್ತಾರೆ, ನಮ್ಮ ಕರ್ತವ್ಯಕ್ಕೆ ತಕ್ಕಂತೆ ಸಂಬಳ ನೀಡುತ್ತಿಲ್ಲ. ಕರ್ತವ್ಯದಿಂದ ನಿವೃತ್ತಿಯಾದರೆ ಭಾರತೀಯ ಸೇನೆಯಲ್ಲಿ ನಿವೃತ್ತಿಯಾದ ಸೈನಿಕರಿಗೆ ನೀಡುವಂತಹ ಯಾವುದೇ ಸೌಲಭ್ಯ ಸಿ.ಆರ್.ಪಿ.ಎಫ್ ಯೋಧರಿಗೆ ನೀಡಲ್ಲ ಎಂದಿದ್ದಾರೆ.
Watch the Video here-
loading...
Post a Comment