Veerakesari 23:13
loading...
ಕೇರಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಸರಣಿಕೊಲೆಗಳು ಮುಂದುವರೆದಿದೆ. ಕೇರಳದ ಕಣ್ಣೂರಿನಲ್ಲಿ ಸಿಪಿಎಮ್ ಉಗ್ರರಿಂದ ಆರ್.ಎಸ್.ಎಸ್ ಸ್ವಯಂ ಸೇವಕನ ಬರ್ಬರ ಹತ್ಯೆಯಾಗಿದೆ. ಇನ್ನೊಂದು ಧಾಳಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಸಿಪಿಎಮ್ ಉಗ್ರರ ಧಾಳಿಗೆ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಿಪಿಎಮ್ ಉಗ್ರ ಗುಂಪಿನ ದಾಳಿಗೆ ಗಂಭೀರ ಗಾಯಗೊಂಡಿದ್ದ ಆರ್.ಎಸ್.ಎಸ್ ಸ್ವಯಂಸೇವಕ ಸಂತೋಷ್ (52) ಇಂದಿರಾಗಾಂಧಿ ಕೋ-ಓಪರೇಟಿವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಬುಧವಾರ (ನಿನ್ನೆ) ರಾತ್ರಿ ಮನೆಯ ಬಳಿ ನಿಂತಿದ್ದ ಸಂತೋಷ ಮೇಲೆ ಸಿಪಿಎಮ್  ಗೂಂಡಾಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಈ ಘಟನೆ ಕೇರಳ ಮುಖ್ಯಮಂತ್ರಿ ಮತ ಕ್ಷೇತ್ರ ಧರ್ಮದಮ್ ನಲ್ಲೇ ನಡೆದಿದ್ದು ಕೇರಳದ ಕಾನೂನು ಎಷ್ಟೊಂದು ಹದಗೆಟ್ಟಿದೆ ಎಂಬುದು ಇದರಲ್ಲೇ ಗೊತ್ತಾಗುತ್ತೆ. ಸಿಪಿಎಮ್ ಗೂಂಡಾಗಳ ಧಾಳಿಗೆ ಗಂಭಿರ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ರೆಂಜಿತ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ (ಇಂದು) ಬೆಳಗ್ಗೆ ತಲಿಪರಂಬ ಎಂಬಲ್ಲಿನ ಆರ್.ಎಸ್.ಎಸ್ ಕಾರ್ಯಾಲಯದ ಮೇಲೆ ಬಾಂಬ್ ಎಸೆಯಲಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೋಲೀಸರು ಖಚಿತಪಡಿಸಿದ್ದಾರೆ.
loading...

Post a Comment

Powered by Blogger.