loading...
ಜಮ್ಮುಕಾಶ್ಮೀರದ ಬಂಡಿಪೊರದಲ್ಲಿ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಗೆ ಲಷ್ಕರ್ ಇ ತೊಯ್ಬಾ ಸಂಘಟನೆ ಉಗ್ರ ಹತನಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಪೋಲೀಸ್ ಒಬ್ಬರಿಗೆ ಗಾಯವಾಗಿದೆ.
ಉತ್ತರ ಕಾಶ್ಮೀರದ ಬಂಡೀಪುರ ಜಿಲ್ಲೆಯ ಹಜಿನ್ ಎಂಬಲ್ಲಿ ಲಷ್ಕರ್ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಆದರಿಸಿ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಅಲ್ಲೇ ಅಡಗಿದ್ದ ಉಗ್ರರು ಸೇನೆಯ ಮೇಲೆ ಗುಂಡಿನ ಧಾಳಿ ಮಾಡಿದ್ದರೆ, ಪ್ರತಿಧಾಳಿ ಮಾಡಿದ ಸೇನೆಯ ಗುಂಡಿಗೆ ಲಷ್ಕರ್ ಕಮಾಂಡರ್ ಅಬು ಮುಸೈಬ್ ಹತನಾಗಿದ್ದಾನೆ.
ಈ ಕಾರ್ಯಾಚರಣೆಯಲ್ಲಿ ಪೋಲೀಸ್ ಪೇದೆಯೊಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳೀಯರು ಸೇನೆಯ ಜವಾನರ ಮೇಲೆ ಕಲ್ಲು ಎಸೆಯುವ ಮೂಲಕ ಕಾರ್ಯಾಚರಣೆಗೆ ಅಡ್ಡಿ ಪಡಿಸಿರೋ ಬಗ್ಗೆ ವರದಿಯಾಗಿದೆ

Post a Comment