Veerakesari 13:32
loading...
ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾ.ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).

ಮಕರ ಸಂಕ್ರಾಂತಿಯ ಮಹತ್ವ ಮಕರ ಸಂಕ್ರಾಂತಿಯ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿದೆ!
ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗಿನ ಕಾಲವನ್ನು ‘ದಕ್ಷಿಣಾಯಣ’ ಎನ್ನುತ್ತಾರೆ. ಸೂರ್ಯನ ದಕ್ಷಿಣಾಯಣ ಆರಂಭವಾಗುವುದಕ್ಕೆ ಬ್ರಹ್ಮಾಂಡದ ಸೂರ್ಯನಾಡಿ ಕಾರ್ಯನಿರತವಾಗುವುದು ಎಂದು ಹೇಳುತ್ತಾರೆ. ಬ್ರಹ್ಮಾಂಡದ ಸೂರ್ಯನಾಡಿಯು ಕಾರ್ಯನಿರತವಾಗುವುದರಿಂದ (ಸೂರ್ಯನ ದಕ್ಷಿಣಾಯಣದಲ್ಲಿ) ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ.

ಮಕರ ಸಂಕ್ರಾಂತಿಯ ದಿನ ಸೂರ್ಯನ ಉತ್ತರಾಯಣವು ಆರಂಭವಾಗುತ್ತದೆ. ಸೂರ್ಯನ ಉತ್ತರಾಯಣ ಆರಂಭವಾಗುವುದನ್ನೇ ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದೆಂದು ಹೇಳುತ್ತಾರೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದರಿಂದ ಸೂರ್ಯನ ಉತ್ತರಾಯಣದಲ್ಲಿ, ಬ್ರಹ್ಮಾಂಡದಲ್ಲಿ ರಜ-ಸತ್ತ್ವಾತ್ಮಕ ಲಹರಿಗಳ ಪ್ರಮಾಣವು ಅಧಿಕ ವಾಗಿರುತ್ತದೆ. ಆದುದರಿಂದ ಈ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿರುತ್ತದೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗಿರುವುದರಿಂದ ಈ ಕಾಲದಲ್ಲಿ ವಾತಾವರಣವು ಕೂಡ ಎಂದಿಗಿಂತಲೂ ಹೆಚ್ಚು ಶೀತಲವಾಗಿರುತ್ತದೆ. ಈ ಕಾಲದಲ್ಲಿ ಎಳ್ಳನ್ನು ತಿನ್ನುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಎಳ್ಳೆಣ್ಣೆಯಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಕ್ಷಮತೆಯು ಅಧಿಕವಾಗಿರುತ್ತದೆ, ಅಲ್ಲದೆ ಎಳ್ಳನ್ನು ತಿನ್ನುವುದರಿಂದ ಶರೀರದಲ್ಲಿನ ಚಂದ್ರನಾಡಿಯು ಕಾರ್ಯನಿರತವಾಗುತ್ತದೆ.

ಇದರಿಂದಾಗಿ ಜೀವವು ವಾತಾವರಣದೊಂದಿಗೆ ಬೇಗನೆ ಹೊಂದಿಕೊಳ್ಳುತ್ತದೆ; ಏಕೆಂದರೆ ಈ ಸಮಯದಲ್ಲಿ ಬ್ರಹ್ಮಾಂಡದ ಚಂದ್ರನಾಡಿಯೇ ಕಾರ್ಯನಿರತವಾಗಿರುತ್ತದೆ. ಜೀವದ ಶರೀರದಲ್ಲಿನ ವಾತಾವರಣ ಮತ್ತು ಬ್ರಹ್ಮಾಂಡದಲ್ಲಿನ ವಾತಾವರಣ ಒಂದಾಗುವುದರಿಂದ ಸಾಧನೆ ಮಾಡುವಾಗ ಜೀವಕ್ಕೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ಕೃಪೆ - Watsapp
loading...

Post a Comment

Powered by Blogger.