loading...
ಭಾರತದ ತ್ರಿವರ್ಣ ಧ್ವಜವನ್ನು ಹೋಲುವ ಡೋರ್ ಮ್ಯಾಟ್ ಮಾರಾಟಕ್ಕೆ ಇಟ್ಟು ವಿವಾದ ಹುಟ್ಟುಹಾಕಿದ್ದ ಅಮೆಜಾನ್ ಈಗ ಸುಷ್ಮಾ ಸ್ವರಾಜ್ ಎಚ್ಚರಿಕೆ ನಂತರ ಭಾರತೀಯರಲ್ಲಿ ಭೇಷರತ್ ಕ್ಷಮೆ ಕೇಳಿದೆ.
ಸುಷ್ಮಾ ಎಚ್ಚರಿಕೆ ನಂತರ ಎಚ್ಚೆತ್ತಿಕೊಂಡ ಅಮೆಜಾನ್ ತಕ್ಷಣ ತನ್ನ ಕೆನಡಾ ಮಾರುಕಟ್ಟೆಯಿಂದ ಡೋರ್ ಮ್ಯಾಟ್ ತೆರವುಗೊಳಿಸಿತ್ತು. ಈ ಬಗ್ಗೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಅಮಿತ್ ಅಗರ್ವಾಲ್ " ಅಮೆಜಾನ್ ಸಂಸ್ಥೆ ಭಾರತೀಯ ಕಾನೂನು ಮತ್ತು ಭಾವನೆಗಳನ್ನು ಗೌರವಿಸುತ್ತೇ, ಆ ಡೋರ್ ಮ್ಯಾಟ್ ಗಳು ಅಮೆಜಾನ್ ಸಂಸ್ಥೆಯದ್ದಲ್ಲ. ಮೂರನೇ ಮಾರಟಗಾರರಿಂದ ಮಾರುಕಟ್ಟೆಗೆ ಹಾಕಲ್ಪಟ್ಟಿದೆ.
ನಮ್ಮಿಂದ ತಪ್ಪಾಗಿದೆ ಹಾಗಾಗಿ ಬೇಷರತ್ ಕ್ಷಮೆ ಕೋರುತ್ತಿದ್ದೇವೆ. ಆ ಡೋರ್ ಮ್ಯಾಟ್ ಗಳನ್ನು ಕೆನಡಾ ಮಾರುಕಟ್ಟೆಯಿಂದ ತೆರವುಗೊಳಿಸಲಾಗಿದ್ದು ಇತರ ಮಾರುಕಟ್ಟೆಗಳಲ್ಲಿಯೂ ಮಾರದಂತೆ ಎಚ್ಚರಿಸಿದ್ದೇವೆ" ಎಂದು ಹೇಳಿದ್ದಾರೆ.
loading...
Post a Comment