Veerakesari 03:12
loading...
ಪತ್ರಿಕೆ ಎಂದರೆ ಜನರಿಗೆ ಉತ್ತಮ ಸಂದೇಶ, ಪ್ರಪಂಚದಲ್ಲಿ ಆಗುತ್ತಿರುವ ಪ್ರಸಕ್ತ ವಿದ್ಯಮಾನಗಳನ್ನು ತಿಳಿಸುವ ಒಂದು ಮಾದ್ಯಮವಾಗಬೇಕು. ಅಂತಹ ಕೆಲಸವನ್ನು ಹಲವಾರು ಪತ್ರಕೆಗಳು ಮಾಡುತ್ತಿವೆಯು ಕೂಡ. ಆದರೆ ನಮ್ಮ ಸುಳ್ಯ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿಬಿಡುಗಡೆ ಎಂಬ ಪತ್ರಿಕೆಯೊಂದು (ಪತ್ರಿಕೆ ಎನ್ನಲು ಅನರ್ಹ) ಇದೆಲ್ಲಾ ಬಿಟ್ಟು ತಮ್ಮ ಪತ್ರಿಕೆಯನ್ನು ತಮಗಾಗದವರ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಈ ಪತ್ರಿಕೆ ಹೆಸರಿಗೆ ತಕ್ಕಂತೆ ಕಾರ್ಯ ನಿರ್ವಹಿಸಿದ್ದರೆ ಯಾರೂ ಏನೂ ಮಾತನಾಡುತ್ತಿರಲಿಲ್ಲ ಆದರೆ ಅದೆಲ್ಲ ಬಿಟ್ಟು ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟೋಕೆ ಯತ್ನಿಸಿತ್ತು, ಹಿಂದೂ ಸಂಘಟನೆಗಳ ಮಧ್ಯೆ ವಿಷಬೀಜ ಬಿತ್ತಿ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸಿತ್ತು. ಆದರೆ ಹಿಂದೂ ಸಮಾಜ ಇದಕ್ಕೆ ಸರಿಯಾದ ರೀತಿಯಲ್ಲೇ ಪ್ರತ್ಯುತ್ತರವನ್ನೂ ನೀಡಿತ್ತು. ಆದರೆ ಇಷ್ಟಕ್ಕೇ ನಿಲ್ಲದ ಪತ್ರಿಕೆ ಈಗ ಸ್ಥಳೀಯ ಹಿಂದೂ ಯುವಕರ ಮನೆಗೆ ಗೂಂಡಾಗಳನ್ನು ಕಳಿಸಿ ಬೆದರಿಕೆ ಹಾಕೋ ಮಟ್ಟಿಗೆ ಬೆಳೆದಿದೆ.

ಯುವ ತೇಜಸ್ಸು ಎಂಬ ಯುವ ಸಂಘಟನೆಯನ್ನು ಬೆಳೆಸಿ ರಕ್ತದಾನ ಹಾಗೂ ಇತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಪಂಜ ಸಮೀಪದ ಕೂತ್ಕುಂಜ ನಿವಾಸಿ ಅಶಿತ್ ಕಲ್ಲಾಜೆ ಎಂಬ ಯುವಕನಿಗೆ ಇದೇ ಪತ್ರಿಕೆಯ ಸಂಪಾದಕ ಗೂಂಡಗಳನ್ನು ಕಳಿಸಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಆತನ ತಾಯಿ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಶಿತ್ ತಾಯಿ ಸಂಪಾದಕನ ವಿರುದ್ದ ನೀಡಿರೋ ದೂರು
ಕಳೆದ ಜನವರಿ 8ನೇ ತಾರೀಕಿನಂದು ರಾತ್ರಿ 8ಗಂಟೆ ಹೊತ್ತಿಗೆ ಅಶಿತ್ ಕಲ್ಲಾಜೆ ಇಲ್ಲದ ಸಂದರ್ಭದಲ್ಲಿ ಮನೆಗೆ ಆಗಮಿಸಿದ ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರರಾದ ಈಶ್ವರ ವಾರಣಾಸಿ ಮತ್ತು ವಿಶ್ವನಾಥ ಎಂಬಿಬ್ಬರು ಆಶಿತ್ ತಾಯಿಯಲ್ಲಿ "ನಮ್ಮನ್ನು ಪತ್ರಿಕೆ ಸಂಪಾದಕ ಶಿವಾನಂದರು ಕಳಿಸಿದ್ದು ನಿಮ್ಮ ಮಗ ಪತ್ರಿಕೆ ವಿರುದ್ಧ ತುಂಬಾ ಮಾತನಾಡುತ್ತಿದ್ದಾನೆ. ನಿಮ್ಮ ಮಗ ಇದೇ ರೀತಿ ಮುಂದುವರೆದರೆ ಕೊಲೆ ಮಾಡೋದಾಗಿ" ಬೆದರಿಕೆ ಒಡ್ಡಿದ್ದಾರೆ.

ನಿಮ್ಮ ಮಗನನ್ನು ಪೋಲೀಸರು ಹುಡುಕುತ್ತಿದ್ದಾರೆ, ನಿಮ್ಮ ಮಗ ಏನಾದರು ಪಂಜಕ್ಕೆ ಬಂದರೆ ಆತನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ. ಅಲ್ಲದೇ ನಮಗೂ ಆತನಿಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ , ನಾವು ಸಂಪಾದಕ ಶಿವಾನಂದ ಅವರ ಕೈಕೆಳಗೆ ಕೆಲಸ ಮಾಡೋ ಜನ ಹಾಗಾಗಿ ಅವರ ಆಜ್ಞೆಯಂತೆ ಇಲ್ಲಿ ಬಂದಿದ್ದೇವೆ ಎಂದಿದ್ದಾರೆ.

ಈ ಎಲ್ಲಾ ಘಟನೆಗಳಿಂದ ಭೀತಿಗೊಳಗಾಗಿರುವ ಅಶಿತ್ ಅವರ ತಾಯಿ ಸುದ್ದಿ ಪತ್ರಿಕೆ ಸಂಪಾದಕ ಶಿವಾನಂದ್ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಮಗೆ ಸೂಕ್ತ ಭದ್ರತೆ ನೀಡಿ ಎಂದು ಪೋಲೀಸರಲ್ಲಿ ವಿನಂತಿಸಿದ್ದಾರೆ.

ಇನ್ನಾದರು ಸ್ಥಳೀಯ ಹಿಂದೂ ಸಮಾಜ ಇಂತಹ ಗೂಂಡಾ ಪತ್ರಿಕೆ ವಿರುದ್ಧ ತೊಡೆತಟ್ಟಿ ನಿಲ್ಲೋ ಅವಶ್ಯಕತೆ ಇದೆ. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಇಂತಹ ನೂರು ಪತ್ರಿಕೆ ಹುಟ್ಟಿಕೊಂಡರೂ ಮುಚ್ಚಿಸೋ ಶಕ್ತಿ ನಮ್ಮಲ್ಲಿ ಇದೆ. ನಾವು ಬೆಳೆಸಿದ ಪತ್ರಿಕೆ ನಮಗೇ ಕಂಟಕವಾಗುತ್ತಿರುವುದು ವಿಪರ್ಯಾಸ.
loading...

Post a Comment

Powered by Blogger.