Veerakesari 08:46
loading...
 ಕಳೆದ ಕೆಲವು ಸಮಯಗಳಿಂದ ಅಮೆಜಾನ್ ಸಂಸ್ಥೆ ಭಾರತೀಯರ ಭಾವನೆಗೆ ದಕ್ಕೆಯಾಗುವಂತಹ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಇದೀಗ ಹಿಂದೂಗಳ ಪರಮದೈವ ಗಣಪತಿಯ ಭಾವಚಿತ್ರವಿರುವ ಸ್ಕೇಟಿಂಗ್ ಬೋರ್ಡ್ ಮಾರಾಟ ಮಾಡುವ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದೆ.

ಈ ಹಿಂದೆ ಭಾರತದ ಧ್ವಜ ಮಾದರಿಯ ಡೋರ್ ಮ್ಯಾಟ್, ಹಾಗೂ ರಾಷ್ಟ್ರ ಪಿತ ಗಾಂಧೀಜಿ ಭಾವಚಿತ್ರ ಇರೋ ಸ್ಯಾಂಡಲ್ ಮಾರಟ ಮಾಡಿತ್ತು. ಮೊದಲಿನಿಂದಲೂ ಅಮೆಜಾನ್ ಸಂಸ್ಥೆ ಭಾರತೀಯರ ಭಾವನೆಗಳಿಗೆ ದಕ್ಕೆಯಾಗುವಂತಹ ವಸ್ತುಗಳನ್ನು ಮಾರಾಟ ಮಾಡುತ್ತಿದೆ.

ಗಣಪತಿ ಭಾವಚಿತ್ರವಿರುವ ಸ್ಕೇಟಿಂಗ್ ಬೋರ್ಡ್ ಮಾರಾಟ ಮಾಡುತ್ತಿರುವ ಬಗ್ಗೆ ಚಂಢೀಗಡ ಮೂಲದ ವಕೀಲ ಅಜಯ್ ಜಗ್ಗು ಎಂಬುವವರು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಹಿಂದೂಗಳ ಭಾವನೆಗೆ ದಕ್ಕೆ ತಂದಿರುವ ಅಮೆಜಾನ್ ಕ್ಷಮೆಯಾಚಿಸಬೇಕು ಎಂದಿದ್ದಾರೆ. ಜೊತೆಗೆ ಹಿಂದೂಗಳ ಭಾವನೆಗೆ ದಕ್ಕೆ ತಂದಿರುವ ಅಮೆಜಾನ್ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಕೇಳಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಮೆಜಾನ್ ಸಂಸ್ಥೆ ವಿರುದ್ಧ ಜನ ತಿರುಗಿಬಿದ್ದಿದ್ದು ಅಮೆಜಾನ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲಿನಿಂದ ಅನಿನ್ಸ್ಟಾಲ್ ಮಾಡಿ ಇನ್ನು ಮುಂದೆ ಅಮೆಜಾನ್ ಸಂಸ್ಥೆಯಿಂದ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ನಿಮ್ಮ ಮೊಬೈಲ್ ನಲ್ಲಿ ಅಮೆಜಾನ್ ಅಪ್ಲಿಕೇಶನ್ ಇದ್ದರೆ ತಕ್ಷಣ ಅನ್ಇನ್ಸ್ಟಾಲ್ ಮಾಡಿ. ಇನ್ನು ಮುಂದೆ ಅಮೆಜಾನ್ ಸಂಸ್ಥೆಯಿಂದ ಯಾವುದೇ ವಸ್ತು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ. ನೀವು ಅನಿನ್ಸ್ಟಾಲ್ ಮಾಡಿದ ಸ್ಕ್ರೀನ್ ಶಾಟ್ ಅನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.
#BoycottAmazon
loading...

Post a Comment

Powered by Blogger.